Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, March 22, 2016

1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 70/2016 ಕಲಂ: 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿ:21-03--16 ರಂದು ಬೆಳಿಗ್ಗೆ  8-30 .ಎಮ್. ಸುಮಾರಿಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಯಿಂದ ವಾಹನ ಅಪಘಾತದಲ್ಲಿ ಮೃತಪಟ್ಟ ಬಗ್ಗೆ ಎಮ್.ಎಲ್ ಸಿ ಮಾಹಿತಿ ಬಂದ ಕೂಡಲೇ ನಾನು ಮತ್ತು ನಮ್ಮ ಠಾಣೆಯ .ಎಸ್. ಮೋನಯ್ಯ ಮತ್ತು ಪಿ.ಸಿ 76 ರವರನ್ನು ಕರೆದುಕೊಂಡು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಹೋಗಿ ಅಲ್ಲಿ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದವರ ಪೈಕಿ ವಿಚಾರಿಸಿ ಹಾಜರಿದ್ದ ಮೃತಳ ಮಗನಾದ ರಮೇಶ ತಂದಿ ಹನುಮಂತ ಹಣಗಿ ವಯಾ-24 ವರ್ಷ ಜಾ, ನಾಯಕಕೂಲಿ ಕೆಲಸ ಸಾ. ಹಂಚಿನಾಳ ಕ್ಯಾಂಪ್ ಕೆ. (ಶಾಂತಿ ನಗರ ) ತಾ. ಸಿಂಧನೂರು ರವರಿಗೆ ವಿಚಾರ ಮಾಡಿದ್ದು ಅವರ ಒಂದು ಲಿಖಿತ ದೂರುನ್ನು ಬರೆಯಿಸಿಕೊಟ್ಟಿದ್ದು ಅದರ ಸಾರಾಂಶದವೆನಂದರೆ ಕಾರಟಗಿಯಲ್ಲಿರುವ ನಮ್ಮ ಸಂಭಂದಿಕರಾದ ಹನುಮಂತಪ್ಪ ತಂದಿ ಭೀಮಪ್ಪ ಇವರ ತಾಯಿಯವರಿಗೆ ಮೈಯಲ್ಲಿ ಉಸಾರಿಲ್ಲದ ಕಾರಣ ನಾನು ಮತ್ತು ನಮ್ಮ ತಾಯಿ ಹನುಮಮ್ಮ ಇಬ್ಬರು ಕೂಡಿ ಹನುಮಂತಪ್ಪ ಇವರ ತಾಯಿಗೆ ಮಾತನಾಡಿಸಿಕೊಂಡು ಬರಲೆಂದು ನಾನು ಕೆಲಸ ಮಾಡುವ ನಮ್ಮ ಧನಿಗಳಾದ ರಾಘವೇಂದ್ರ ಇವರ ಡಿಸ್ಕವರಿ ಮೋಟಾರ್ ಸೈಕಲ್ ನಂ ಕೆ.-36.ಎಫ್-6965 ನೆದ್ದನ್ನು ತೆಗೆದುಕೊಂಡು ನಿನ್ನೆ ದಿನಾಂಕ-20-03-2016 ರಂದು ಕಾರಟಗಿಗೆ ಹೋಗಲೆಂದು ನಾನು ನಮ್ಮ ತಾಯಿಗೆ ಮೋಟಾರ್ ಸೈಕಲ್ ಮೇಲೆ ಕಾರಟಗಿ ಸಿಂಧನೂರು ರಸ್ತೆಯ ಮೇಲೆ ಕಾರಟಗಿ ಕಡೆಗೆ ಹೋಗಲೆಂದು ಸಾಯಂಕಲಾ 5-30 ಗಂಟೆಯಿಂದ 6-00 ಗಂಟೆಯ ಅವಧಿಯಲ್ಲಿ ಧನಲಕ್ಷ್ಮೀ  ರೈಸ್ ಮೀಲ್ ಹತ್ತಿರ ಹೋರಟಿದ್ದಾಗ್ಗೆ ಗೋರೆಬಾಳನ ನನಗೆ ಪರಿಚಿತನಿದ್ದ ಯಂಕೊಬ ತಂದಿ ಯಮನಪ್ಪ ಭೋವಿ ಈತನು ಧನರೈಸ್ ಮೀಲ್ ಸಮೀಪ ಬಂದಿದ್ದರಿಂದ ಆತನನ್ನು ಮಾತನಾಡಿಸಲು ನಮ್ಮ ಮೋಟಾರ್ ಸೈಕಲ್ ನ್ನು ರಸ್ತೆಯ ಎಡಭಾಗದಲ್ಲಿ ನಿಲ್ಲಸಿಕೊಂಡು ಮಾತನಾಡಿಸಿಕೊಂಡು ನಿಂತಿದ್ದಾಗ್ಗೆ ಕಾರಟಗಿ ಕಡೆಯಿಂದ ಒಂದು ಬಿಳಿಯ ಬಣ್ಣದ ಇಂಡಿಕಾ ಕಾರ್ ಚಾಲಕ ತನ್ನ ಕಾರನ್ನು ಅತೀ ವೇಗ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ್ ಸೈಕಲ್ ಗೆ ಟಕ್ಕರ ಕೊಟ್ಟು ನಂತರ ನಮ್ಮ ಜೊತೆಯಲ್ಲಿ ಮಾತನಾಡುತ್ತಾ ನಿಂತುಕೊಂಡಿದ್ದ ಯಂಕಪ್ಪ ಈತನಿಗೂ ಟಕ್ಕರ ಕೊಟ್ಟು ಅಪಘಾತಪಡಿಸಿದ್ದರಿಂದ ನಾನು ನಮ್ಮ ತಾಯಿ ಮೋಟಾರ್ ಸೈಕಲ್ ಸಮೇತ ಕೆಳಗಡೆ ಬಿದ್ದೆವು ಯಂಕಪ್ಪನು ರಸ್ತೆಯ ಮೇಲೆ ಬಿದ್ದನು ಕಾರ್ ಚಾಲಕನು ತನ್ನ ಕಾರನ್ನು ನಿಲ್ಲಿಸದೇ ಹಾಗೆ ಹೋಗಿದ್ದರಿಂದ ಕಾರಿನಲ್ಲಿ ಇದ್ದ ಒಂದು ಬ್ಯಾಗ ರಸ್ತೆಯ ಮೇಲೆ ಬಿತ್ತು ನಾನು ನೊಡಿಕೊಳ್ಳಲು ನನಗೆ ಬಲಗೈ ಬೆರಳಿಗೆ, ಬಲಗಾಲು ಪಾದಕ್ಕೆ ಗಾಯ ಒಳಪೆಟ್ಟಾಗ್ಗಿದ್ದು ಮತ್ತು ನಮ್ಮ ತಾಯಿಗೆ ಗದ್ದಕ್ಕೆ ರಕ್ತಗಾಯವಾಗಿ ತಲೆಯ ಹಿಂಬಾಗದಲ್ಲಿ ಬಾರಿ ರಕ್ತಗಾಯವಾಗಿ ರಕ್ತ ಸೋರುತ್ತಿತ್ತು ಮತ್ತು ಯಂಕಪ್ಪ ಈತನಿಗೆ ಬಲಗೈ ಮತ್ತು ಬಲಗಾಲಿಗೆ ಮೂಳೆ ಮುರಿತವಾದ ಗಾಯಗಳಾಗಿದ್ದವು ನಂತರ ಅಲ್ಲಿ ಹೋರಟಿದ್ದ ಬಸವರಾಜ ತಂದಿ ಮಹಾಂತಗೌಡ ಸಾ. ಕಾರಟಗಿ ರವರು ಬಂದು ನಮಗೆ ಎತ್ತಿದರು ನಂತರ ನಾವು ನಮಗೆ ಅಪಘಾತಪಡಿಸಿ ಹೋದ ಕಾರಿನಿಂದ ಬಿದ್ದಿದ್ದ ಒಂದು ಬ್ಯಾಗನ್ನು ತೆರೆದು ನೊಡಲು ಅದರಲ್ಲಿ ಒಂದು ಲ್ಯಾಪ್ ಟಾಪ್ ಮತ್ತು ಒಂದು ಡೈರಿ ಇತ್ತು ಡೈರಿಯಲ್ಲಿ ನಜೀರ್ ಅಂತಾ ಹೆಸರು ಇರುತ್ತದೆ ಅಂತಾ ತಿಳಿಸಿದರು ನಂತರ ನಾವು 108 ಗಾಡಿಗೆ ಪೋನ್ ಮಾಡಿಸಿ ಕರೆಯಿಸಿಕೊಂಡು ಕಾರಟಗಿ ಆಸ್ಪತ್ರೆಗೆ ಬಂದು ನಮ್ಮ ತಾಯಿಗೆ ತುಂಬಾ ರಕ್ತ ಸೋರುತ್ತಿದ್ದರಿಂದ ಇಲ್ಲ ತಡ ಮಾಡದೇ ನಾವು ಹೆಚ್ಚಿನ ಚಿಕಿತ್ಸೆ ಕುರಿತು ಬಳ್ಳಾರಿ ವಿಸ್ಮ್ ಆಸ್ಪತ್ರೆಗೆ ನಮ್ಮ ತಾಯಿಯನ್ನು ಮತ್ತು ಯಂಕಪ್ಪ ಇತನಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕುರಿತು ದಾಖಲು ಮಾಡಿದೇವು ಹೀಗೆ ಚಿಕಿತ್ಸೆ ಪಡೆಯುತ್ತಿದ್ದ ನಮ್ಮ ತಾಯಿ ಹನುಮಮ್ಮ ಈಕೆಯು ದಿನಾಂಕ-21-03-2016 ರಂದು ಬೆಳಗಿನ ಜಾವ 02-15 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾಳೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯನ್ನು ಸ್ವೀಕರಿಸಿಕೊಂಡು ವಾಪಾಸ ಠಾಣೆಗೆ ಮದ್ಯಾಹ್ನ 2-40 ಗಂಟೆಗೆ ಬಂದು ಸದರಿ ಪಿರ್ಯಾದಿಯ ಸಾರಾಂಶದ ಮೇಲಿದ್ದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 108/2016 ಕಲಂ: 341, 323, 504, 506 ಐ.ಪಿ.ಸಿ:.
ದಿನಾಂಕ:- 21-03-2016 ರಂದು ಬೆಳಿಗ್ಗೆ 10:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಉಮೇಶ ತಂದೆ ಮಹಾನಂದೀಶ್ವರ ಬಿ.ಆರ್. ವಯಸ್ಸು 24 ವರ್ಷ, ಜಾತಿ: ಜಂಗಮರು ಉ: ಟೋಲ್ ಪ್ಲಾಜದಲ್ಲಿ ಶಿಫ್ಟ್ ಇನಚಾರ್ಜ ಸಾ: ಜಾಜೂರು ತಾ: ಚಳ್ಳಿಕೇರಿ  ಜಿಲ್ಲೆ: ಚಿತ್ರದುರ್ಗ ಹಾಲಿವಸ್ತಿ: ಜಿ.ಕೆ.ಸಿ. ಕ್ಯಾಂಪ್-ವೆಂಕಟಗಿರಿ  ಇವರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ನಾನು ಜನವರಿ-2016 ರಿಂದ ಹೇಮಗುಡ್ಡ ಟೋಲ್ ಪ್ಲಾಜಾದಲ್ಲಿ ಶಿಫ್ಟ್ ಇನಚಾರ್ಜ ಅಂತಾ ಕೆಲಸ ಮಾಡಿಕೊಂಡಿರುತ್ತೇನೆ. ನಿನ್ನೆ ದಿನಾಂಕ:-20-03-2016 ರಂದು ಮಧ್ಯಾಹ್ನ 2:00 ರಿಂದ ರಾತ್ರಿ 10:00 ಗಂಟೆಯವರೆಗೆ ನನ್ನ ಕರ್ತವ್ಯ ಇದ್ದು, ಅದರ ಪ್ರಕಾರ ಟೋಲ್ ನಲ್ಲಿ ಕೆಲಸ ಮಾಡುತ್ತಿದ್ದೆನು.  ರಾತ್ರಿ 7:15 ಗಂಟೆಯ ಸುಮಾರಿಗೆ ಕೊಪ್ಪಳ ಕಡೆಯಿಂದ ಲೈನ್ ನಂ: 6 ರಲ್ಲಿ ಕ್ರ್ಯೂಸರ್ ವಾಹನ ನಂ: ಕೆ.ಎ-37/ 9665 ಬಂದು ಸರದಿಗೆ ನಿಂತಿದ್ದು, ಚಾಲಕನು ತಮ್ಮ ವಾಹನಕ್ಕೆ ಪಾಸ್ ಇದೆ ಅಂತಾ ಚಾಲಕನು ಹೇಳಿದನು. ಪಾಸ್ ನಂಬರ್ ತಿಳಿಸುವಂತೆ ಟೋಲ್ ಕಲೆಕ್ಟರ್ ಮಹೇಶ ಇವರು ಕೇಳಿದರು.  ಚಾಲಕನು ಪಾಸ್ ನಂಬರ್ ತನಗೆ ಗೊತ್ತಿಲ್ಲಾ ತನ್ನ ಅಣ್ಣನಿಗೆ ಗೊತ್ತು, ತನ್ನ ಅಣ್ಣ ಹಿಂದೆ ಬೇರೊಂದು ಟಾಟಾ ಏಸ್ ವಾಹನದಲ್ಲಿ ಬರುತ್ತಿದ್ದಾನೆ ಆತನು ಬಂದು ತಿಳಿಸುತ್ತಾನೆ ಅಂತಾ ಹೇಳಿದನು. ಸ್ವಲ್ಪ ಸಮಯದಲ್ಲಿಯೇ ಕೊಪ್ಪಳ ಕಡೆಯಿಂದ ಟಾಟಾ ಏಸ್ ವಾಹನ ನಂಬರ್: ಕೆ.ಎ-37/ 5850 ನೇದ್ದನ್ನು ನಡೆಯಿಸಿಕೊಂಡು ಬಂದ ಚಾಲಕನು ವಾಹನವನ್ನು ನಿಲ್ಲಿಸಿ ಬಂದಿದ್ದೇ  ಒಮ್ಮೆಲೇ ಅಕ್ರಮವಾಗಿ ನನ್ನನ್ನು ತಡೆದು ಕೈಯಿಂದ ಕಪಾಳಕ್ಕೆ, ಕುತ್ತಿಗೆಗೆ ಬಡಿದನು.  ಅಲ್ಲದೇ ನನಗೆ ಲೇ ಸೂಳೇ ಮಕ್ಕಳೇ, ನಿಮ್ಮ ಟೋಲ್ ನವರದು ಬಹಳಾ ಅಗಿದೆ ಮಕ್ಕಳಾ, ಜನರಿಂದ ಹಣ ವಸೂಲಿ ಮಾಡುತ್ತೀರೇನಲೇ, ನಿನ್ನನ್ನು ಉಳಿಸುವುದಿಲ್ಲಾ, ಮುಗಿಸಿಬಿಡುತ್ತೇನೆಅಂತಾ ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದನು.  ಆಗ ನಮ್ಮ ಟೋಲ್ ವಾಹನ ಚಾಲಕ ಮಾರುತಿ ಮತ್ತು ಸೆಕ್ಯೂರಿಟಿ ಫಕೀರಪ್ಪ ಮತ್ತು ಹನುಮಂತಪ್ಪ ಇವರುಗಳು ಬಂದು ಬಡಿಯುವುದನ್ನು ಬಿಡಿಸಿಕೊಂಡರು.  ನಂತರ ನನ್ನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯ ಬಗ್ಗೆ ವಿಚಾರಿಸಲು ಮತ್ತು ನಮ್ಮ ಟೋಲ್ ದಾಖಲೆಗಳನ್ನು ಪರಿಶೀಲಿಸಲಾಗಿ ಆತನು ಟೋಲ್ ನಿಂದ ಪಾಸ್ ಪಡೆದಂತಹ ಹನುಮಂತಪ್ಪ ಸಾ: ಲಿಂಗದಹಳ್ಳಿ ಅಂತಾ ಗೊತ್ತಾಯಿತು. ನಾನು ನಮ್ಮ ಟೋಲ್ ನವರೊಂದಿಗೆ ಚರ್ಚಿಸಿ ಈಗ ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿರುತ್ತೇನೆ. ಕಾರಣ  ನನ್ನ ಮೇಲೆ ಹಲ್ಲೆ ಮಾಡಿದ ಹನುಮಂತಪ್ಪ ಸಾ: ಲಿಂಗದಹಳ್ಳಿ ಈತನ ವಿರುದ್ಧ  ಕಾನೂನು ಕ್ರಮ ಜರುಗಿಸಲು ವಿನಂತಿ." ಅಂತಾ ಇದ್ದ ದೂರಿನ ಆಧಾರದ ಮೇಲಿಂದ  ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 109/2016 ಕಲಂ: 143, 147, 498(ಎ), 354, 323, 504, 506 ಸಹಿತ 149 ಐ.ಪಿ.ಸಿ:.

ದಿನಾಂಕ:- 15-03-2016 ರಂದು ರಾತ್ರಿ 9:00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ದೇವಮ್ಮ ಗಂಡ ಬಸವರಾಜ ಬಕ್ಕಾರ, ವಯಸ್ಸು 33 ವರ್ಷ, ಜಾತಿ: ಲಿಂಗಾಯತ ಉ: ಪಾನ್ ಶಾಪ್ ಸಾ: ಡಾಣಾಪೂರು ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ  ದೂರು ಸಲ್ಲಿಸಿದ್ದು, ನಂತರ ಕೌನ್ಸಲಿಂಗ್ ಕುರಿತು ಮಾನ್ಯ ಸಿ.ಡಿ.ಪಿ.ಓ. ಗಂಗಾವತಿ ರವರಲ್ಲಿ ಕಳುಹಿಸಿಕೊಟ್ಟಿದ್ದು ಆದರೆ ಕೌನ್ಸಿಲಿಂಗಗೆ ಗಂಡನ ಮನೆಯವರು ಹಾಜರಾಗದ ಕಾರಣ ಕೌನ್ಸಿಲಿಂಗ್ ನಡೆಯದೇ ಇಂದು ದಿನಾಂಕ:- 21-03-2016 ರಂದು ಮಧ್ಯಾಹ್ನ 12:00 ಗಂಟೆಗೆ ಫಿರ್ಯಾದಿದಾರರು ಪುನ: ಠಾಣೆಗೆ ಹಾಜರಾಗಿ ಪ್ರಕರಣ ದಾಖಲಿಸುವಂತೆ ಕೋರಿದ್ದು, ಸದರಿ ದೂರಿನ ಸಾರಾಂಶ ಈ ಪ್ರಕಾರ ಇದೆ. " ನನ್ನ ತವರುಮನೆ ಡಾಣಾಪೂರು ಗ್ರಾಮ ಇದ್ದು, ನನ್ನ ತಂದೆಯವರು ತೀರಿಕೊಂಡಿರುತ್ತಾನೆ.  ಈಗ್ಗೆ ಸುಮಾರು 15 ವರ್ಷಗಳ ಹಿಂದೆ ಡಾಣಾಪೂರು ಗ್ರಾಮದ ಬಸವರಾಜ ತಂದೆ ಶರಣಪ್ಪ ಬಕ್ಕಾರ, 38 ವರ್ಷ ಈತನೊಂದಿಗೆ ನನ್ನ   ಮದುವೆಯಾಗಿರುತ್ತದೆ. ನನ್ನ ಗಂಡನು ಯಾವುದೇ ಕೆಲಸ ಕಾರ್ಯಗಳನ್ನು ಮಾಡದೇ ಖಾಲಿ ತಿರುಗಾಡುತ್ತಾ ಸಂಸಾರಕ್ಕೆ ಯಾವುದೇ ಸಾಮಾನುಗಳನ್ನು ತಂದು ಹಾಕದೇ, ನನ್ನಿಂದಲೇ ಹಣವನ್ನು ಪಡೆದುಕೊಂಡು ನನಗೆ ಹೊಡಿ-ಬಡಿ ಮಾಡುತ್ತಾ ಕಿರುಕುಳ ನೀಡಲು ಪ್ರಾರಂಭಿಸಿದನು. ನನ್ನ ಗಂಡನೊಂದಿಗೆ ನನ್ನ ಮಾವ ಶರಣಪ್ಪ, ಅತ್ತೆ ನಿಂಗಮ್ಮ , ಗಂಡನ ಅಕ್ಕ ಚಿನ್ನಮ್ಮ ಗಂಡ ಶರಣಪ್ಪ ಸಾ: ಮುಷ್ಟೂರು, ನಾದಿನಿ ಗಂಗಮ್ಮ ಗಂಡ ಶರಣಪ್ಪ ಸಾ: ಬೋಳುಟಗಿ ಇವರು ಕೂಡಿಕೊಂಡು ಕಳೆದ ದೀಪಾವಳಿಯಿಂದ  ನನ್ನ ಮೇಲೆ ವಿನಾ ಕಾರಣ ಸಂಶಯಪಡುತ್ತಾ ನಾನು ಅವರಿವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದೇನೆಂದು ಹೇಳುತ್ತಾ ನನಗೆ ಹೊಡಿ-ಬಡಿ ಮಾಡುವುದು, ಬೈದಾಡುವುದು ಮಾಡುತ್ತಾ ವಿಪರೀತ ಕಿರುಕುಳ ನೀಡಲು ಪ್ರಾರಂಭಿಸಿದರು. ಅಲ್ಲದೇ ಮನೆಯನ್ನು ತಮ್ಮ ಹೆಸರಿನಲ್ಲಿ ಬರೆಯಿಸಿಕೊಡಬೇಕೆಂದು ಒತ್ತಾಯಿಸಲು ಪ್ರಾರಂಭಿಸಿದರು.  ಹಿರಿಯರು ಪಂಚಾಯತಿ ಮಾಡಿ ಬುದ್ದಿ ಮಾತು ಹೇಳಿದರೂ ಸಹ ಕೇಳದೇ ಅವರು ಪುನ: ನನಗೆ ವಿಪರೀತ ಕಿರುಕುಳ ನೀಡುವುದನ್ನು ಮುಂದುವರೆಸಿದರು. ಅಲ್ಲದೇ ಖಾಲಿ ಪ್ರಾಮಿಜರಿ ನೋಟ ಗೆ ಹೊಡಿ-ಬಡಿ ಮಾಡಿ ಸಹಿ ಮಾಡಿಸಿಕೊಂಡಿರುತ್ತಾರೆ.    ಅವರ ಈ ಕಿರುಕುಳ ತಾಳದೇ ಇಂದು ದಿನಾಂಕ:- 15-03-2016 ರಂದು ಬೆಳಿಗ್ಗೆ 09:30 ಗಂಟೆಯ ಸುಮಾರಿಗೆ ನನ್ನ ತವರುಮನೆಯಲ್ಲಿ ಮೇಲ್ಕಂಡ ಹಿರಿಯರ ಸಮಕ್ಷಮದಲ್ಲಿ ಪುನ: ಪಂಚಾಯತಿ ಕರೆಯಲಾಗಿತ್ತು. ಈ ಸಮಯದಲ್ಲಿ 5 ಜನರು ಕೂಡಿಕೊಂಡು ನನಗೆ ಹಿರಿಯರ ಸಮಕ್ಷಮದಲ್ಲಿ ಬಾಯಿಗೆ ಬಂದಂತೆ ಬೈದು  ಬೆದರಿಕೆ ಹಾಕಿ ಎಲ್ಲರೂ ಕೂಡಿ ನನಗೆ ಕೈಗಳಿಂದ ಬಡಿದು ಕಾಲಿನಿಂದ ಒದ್ದರು.  ಬಿಡಿಸಲು ಬಂದ ನನ್ನ ತಾಯಿ ಈರಮ್ಮಳಿಗೆ ಸಹ ಮೈ ಕೈ ಮುಟ್ಟಿ ಸೀರೆ ಹಿಡಿದು ಎಳೆದಾಡ ಮಾನಭಂಗ ಮಾಡಿ ಕೂದಲು ಹಿಡಿದು ಎಳೆದಾಡಿ ಬಡಿದರು.  ಕಾರಣ  5 ಜನರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ." ಅಂತಾ ಇದ್ದ ದೂರಿನ ಆಧಾರದ ಮೇಲಿಂದ  ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008