1) ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ: 15/2016
ಕಲಂ. 279, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ. 31-03-2016
ರಂದು ರಾತ್ರಿ 9-00
ಗಂಟೆಗೆ ಕೊಪ್ಪಳದ
ಕಿಮ್ಸ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ
ಗಾಯಗೊಂಡ ಗಾಯಾಳುವಿನ ಫಿರ್ಯಾದಿಯ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ,
ಇಂದು ದಿನಾಂಕ. 31-03-2016
ರಂದು ರಾತ್ರಿ 7-00
ಗಂಟೆಗೆ ಫಿರ್ಯಾದಿಯ
ತನ್ನ ಕೆಲಸವನ್ನು ಮುಗಿಸಿಕೊಂಡು ತನ್ನ ಮೋಟಾ ಸೈಕಲ್ ನಂಬರ KA-37/W-2665
ನೆದ್ದನ್ನು
ಚಲಾಯಿಸಿಕೊಂಡು ಕೊಪ್ಪಳ ನಗರದ ಗದಗ-ಹೊಸಪೇಟೆ ಎನ್.ಹೆಚ್-63
ರಸ್ತೆಯ ಮೇಲೆ ಬಸ್
ನಿಲ್ದಾಣದ ಕಡೆಯಿಂದ ಬಂದು ಅಶೋಕ ಸರ್ಕಲ್ ಮುಖಾಂತರ ಜವಾಹರ ರಸ್ತೆಗೆ ಹೊಗಲು ಮೋಟಾರ್ ಸೈಕಲ್ ಬಲಗಡೆ
ತಿರುಗಿಸುತ್ತಿರುವಾಗ ಹಿಂದಿನಿಂದ ಯಾವುದೋ ಒಬ್ಬ ಮೋಟಾರ್ ಸೈಕಲ್ ಸವಾರನು ತಾನು ಚಲಾಯಿಸುತ್ತಿರುವ
ಮೋಟಾರ್ ಸೈಕಲನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ
ಮೋಟಾರ್ ಸೈಕಲ್ ಗೆ ಟಕ್ಕರಮಾಡಿ ಅಪಘಾತಮಾಡಿದ್ದರಿಂದ ಫಿರ್ಯಾದಿಯ ಬಲಗಡೆಯ ಮೋಣಕಾಲ ಕೆಳಗೆ ಗಂಭೀರ
ಗಾಯವಾಗಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆಯ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2)
ಮುನಿರಾಬಾದ
ಪೊಲೀಸ್ ಠಾಣೆ ಗುನ್ನೆ ನಂ: 77/2016 ಕಲಂ. 32, 34 Karnataka Excise Act.
ದಿನಾಂಕ. 31-03-2016 ರಂದು 07-20 ಪಿ.ಎಂ.ಕ್ಕೆ ಫಿರ್ಯಾದಿದಾರರು ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ
ಮೇರೆಗೆ ಸಿಬ್ಬಂದಿಯವರನ್ನು ಮತ್ತು ಪಂಚರನ್ನು ಕರೆದುಕೊಂಡು ದಾಳಿ ಮಾಡಿ ಆರೋಪಿತರಿಂದ ಪಾನಶಾಫ
ಅಂಗಡಿಯಲ್ಲಿ ಅಕ್ರಮವಾಗಿ ಯಾವುದೇ ದಾಖಲಾತಿ ಇಲ್ಲದೆ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದು
ಆರೋಪಿತರಿಂದ 3907=02 ರೂ. ಬೆಲೆಯ 78 ವಿಂಡ್ಸರ ವಿಸ್ಲಿ ಬಾಟಲಿಗಳು ಮತ್ತು 3605=76 ರೂ. ಬೆಲೆಯ ಓರಿಜನಲ್ ಚಾಯ್ಸ ವಿಸ್ಕಿ ಪೌಚ್ ಗಳು ಜಪ್ತ ಮಾಡಿಕೊಂಡು
ಠಾಣೆಗೆ ಬಂದು ಫಿರ್ಯಾದಿ ನೀಡಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ
ಕೈಕೊಂಡಿದ್ದು ಇರುತ್ತದೆ.
3) ಗಂಗಾವತಿ
ನಗರ ಪೊಲೀಸ್ ಠಾಣೆ ಗುನ್ನೆ ನಂ: 70/2016 ಕಲಂ. 323, 324, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ 31-03-2016 ರಂದು 13-30 ಗಂಟೆಗೆ ಮಾನ್ಯ ಪ್ರಿನ್ಸಿಪಲ್ ಸಿ.ಜೆ. & ಜೆ.ಎಂ.ಎಫ್.ಸಿ.
ನ್ಯಾಯಾಲಯ, ಗಂಗಾವತಿರವರ ಪಿ.ಸಿ ನಂ 78/16 ನೇದ್ದು
ಪತ್ರ ಸಂ. 762/2016 ದಿನಾಂಕ 29-03-2015 ನೇದ್ದು ಕಲಂ. 156(3) ಸಿ.ಆರ್.ಪಿ.ಸಿ.
ನೇದ್ದರ ಪ್ರಕಾರ ಕ್ರಮ ಜರುಗಿಸುವ ಕುರಿತು ಸ್ವೀಕೃತವಾಗಿರುತ್ತದೆ. ಸದರಿ ಖಾಸಗಿ ಫಿರ್ಯಾದಿಯನ್ನು
ಎಮ್ ಕೆ ಶ್ರೀಕಾಂತಗೌಡ ತಂದೆ ದಿ: ಎಮ್ ಖಾಜನಗೌಡ, ವಯಾ: 32 ವರ್ಷ, ಉ: ವ್ಯಾಪಾರ, ಸಾ: 1 ನೇ ಕ್ರಾಸ್
ಮೇನ್ ರೋಡ್ ಜಯನಗರ ಗಂಗಾವತಿ ಹಾ.ವ. ವಡ್ಡರಹಟ್ಟಿ ಕ್ಯಾಂಪ್ ಗಂಗಾವತಿ. ರವರು ಮಾಡಿದ್ದು ಇರುತ್ತದೆ.
ಸದರಿ ಫಿರ್ಯಾದಿ ಸಾರಂಶವೇನೆಂದರೆ, ಫಿರ್ಯಾದಿದಾರರು ತಮ್ಮ ತಂದೆ ಮತ್ತು ತಾಯಿಯವರ ಆಸ್ತಿಯನ್ನು ತಮ್ಮ
ಹೆಸರಿಗೆ ವರ್ಗಾವಣೆ ಮಾಡಿಸುವ ಸಲುವಾಗಿ ನಗರಸಭೆ ಗಂಗಾವತಿ ರವರಿಗೆ ಅರ್ಜಿಯನ್ನು ನೀಡಿದ್ದು ಸದರಿ
ಅರ್ಜಿಗೆ ಆರೋಪಿತರು ತಕರಾರು ಸಲ್ಲಿಸಿದ್ದರಿಂದ ನಗರ ಸಭೆಯಲ್ಲಿ ಕೆಲಸ ಮಾಡುವ ರವಿ ಇವರು ಫಿರ್ಯಾದಿದಾರರಿಗೆ
ಬರುಲು ತಿಳಿಸಿದ್ದರಿಂದ ಫಿರ್ಯಾದಿಯು ದಿನಾಂಕ: 15-03-2016 ರಂದು ನಗರ ಸಭೆ ಗಂಗಾವತಿಗೆ ಹೋಗಿದ್ದು
ಆ ಸಮಯದಲ್ಲಿ ಆರೋಪಿತರು ಫಿರ್ಯಾದಿಯ ಮೇಲೆ ಏಕಾ-ಏಕಿ ಹಲ್ಲೆ ಮಾಡಿ ಎಳೆದಾಡಿ ಕೈಯಿಂದ ಮತ್ತು ಚಪ್ಪಲಿಯಿಂದ
ಹೋಡೆ-ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಾಡಿ ಜೀವದ ಬೆದರಿಕೆ ಹಾಕಿರುತ್ತಾರೆಂದು
ನೀಡಿದ ಫಿರ್ಯಾದಿ ಸಾರಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment