1) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 102/2016 ಕಲಂ. 143,
147, 323, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ 30-03-2016
ರಂದು ಮಧ್ಯಾಹ್ನ 2-15 ಗಂಟೆಗೆ ಫಿರ್ಯಾಧಿದಾರರಾದ
ಶ್ರೀ ಹನುಮಂತಪ್ಪ ತಂದೆ ಮಲ್ಲಪ್ಪ ಹಿರೇಕುರುಬರ ವಯ.40 ವರ್ಷ ಜಾ.ಕುರುಬರು ಉ.ಒಕ್ಕಲುತನ ಸಾ. ಬಂಕಾಪುರ
ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾಧಿ ಕೊಟ್ಟಿದ್ದು, ಅದರ ಸಾರಾಂಶವೇನೆಂದರೆ, ತಮ್ಮ ಗ್ರಾಮದಲ್ಲಿರುವ
ತನ್ನ ಸ್ವಂತ ಅಣ್ಣಂದಿರಾದ ಪರಸಪ್ಪ, ಕೊಟ್ರಪ್ಪ ಇವರ ಜೊತೆ ಇತ್ತೀಚಿಗೆ ಮೃತಪಟ್ಟ ತನ್ನ ತಾಯಿಯ ಶವಸಂಸ್ಕಾರವನ್ನು
ಮಾಡುವ ಸ್ಥಳದ ಕುರಿತಂತೆ ವಾದವಿವಾದಗಳಾಗಿದ್ದು ಇದರಿಂದಾಗಿ ಆರೋಪಿತರು ಫಿರ್ಯಾದಿಯ ಜೊತೆಯಲ್ಲಿ
ದ್ವೇಷ ಸಾಧಿಸುತ್ತಿದ್ದುದು ಇರುತ್ತದೆ. ದಿನಾಂಕ 29/03/16 ರಂದು ಪರಸಪ್ಪ ಈತನ ಕುರಿಗಳು ಹನುಮಂತಪ್ಪ
ಈತನ ಹೊಲದಲ್ಲಿ ಹೋದ ಬಗ್ಗೆ ಜಗಳವಾಗಿದ್ದು ಇದಕ್ಕೆ ಸಂಭಂಧಪಟ್ಟಂತೆ ಫಿರ್ಯಾದಿಯು ವಿಚಾರಿಸಲೆಂದು
ಪರಸಪ್ಪ ಈತನ ಮನೆಯ ಮುಂದೆ ರಾತ್ರಿ 8-00 ಗಂಟೆಯ ಸುಮಾರಿಗೆ ಅಲ್ಲಿದ್ದ ಪರಸಪ್ಪ ಹಾಗೂ ಕೊಟ್ರಪ್ಪ ಮತ್ತು
ಇವರಿಬ್ಬರು ಮತ್ತು ಇವರ ಮಕ್ಕಳಾದ ನಾಗಪ್ಪ ತಂದೆ ಪರಸಪ್ಪ, ಯಮನೂರ ತಂದೆ ಪರಸಪ್ಪ, ಬಸವರಾಜ ತಂದೆ ಪರಸಪ್ಪ, ಮಲ್ಲಪ್ಪ ತಂದೆ ಕೊಟ್ರಪ್ಪ, ನಿರುಪಾದೆಪ್ಪ ತಂದೆ ಕೊಟ್ರಪ್ಪ
ಎಲ್ಲರೂ ಜಾ.ಕುರುಬರು ಸಾ. ಬಂಕಾಪುರ ಇವರೆಲ್ಲರೂ ಸೇರಿಕೊಂಡು ಫಿಯರ್ಾದಿಯನ್ನು ಎಳೆದಾಡಿ ಕೈಯಿಂದ ಹೊಡಿಬಡಿ
ಮಾಡಿ ಕಾಲಿನಿಂದ ಒದ್ದು ಅವಾಚ್ಯವಾಗಿ ಬೈದಾಡಿ ಒಳಪೆಟ್ಟುಗಳನ್ನುಂಟು ಮಾಡಿರುವುದಾಗಿ ಇದಕ್ಕೆ ಸಂಭಂಧಪಟ್ಟಂತೆ
ಫಿರ್ಯಾದಿದಾರರು ದಿನಾಂಕ 29-03-2016 ರಂದು ಠಾಣೆಗೆ ಬಂದು ಆಸ್ಪತ್ರೆಗೆ ಹೋಗಿ ಬಂದಿದ್ದು
ನಂತರ ವಾಪಸ್ ಗ್ರಾಮಕ್ಕೆ ತೆರಳಿ ಗ್ರಾಮದ ಹಿರಿಯರನ್ನು ಕಂಡು ಮತ್ತು ಕುಟುಂಬದವರ ಜೊತೆಗೆ ಚಚರ್ೆ ಮಾಡಿ
ಇಂದು ದಿನಾಂಕ 30-03-2016 ರಂದು ತಡವಾಗಿ ಬಂದು ಫಿರ್ಯಾದಿಯನ್ನು ಸಲ್ಲಿಸಿರುವುದಾಗಿ
ಕಾರಣ ತನಗೆ ಹೊಡಿಬಡಿ ಮಾಡಿದ ತನ್ನ ಸ್ವಂತ ಅಣ್ಣಂದಿರ ಹಾಗೂ ಆತನ ಮಕ್ಕಳ ವಿರುದ್ಧ ಸೂಕ್ತ ಕಾನೂನು
ಕ್ರಮವನ್ನು ತೆಗೆದುಕೊಳ್ಳಲು ವಿನಂತಿಯಿರುತ್ತದೆ. ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ
ಮೇಲಿನಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2)
ಕನಕಗಿರಿ
ಪೊಲೀಸ್ ಠಾಣೆ ಗುನ್ನೆ ನಂ: 103/2016 ಕಲಂ. 454, 380 ಐ.ಪಿ.ಸಿ:.
ದಿನಾಂಕ 30-03-2016 ರಂದು ರಾತ್ರಿ 9-30 ಗಂಟೆಗೆ ಫಿರ್ಯಾಧಿದಾರ ಶ್ರೀಪರಶುರಾಮ ತಂದೆ ವಿಠಪ್ಪ ಹಂಚಾಟಿ ಸಾ: ತೆಗ್ಗಿನಮನೆ ಓಣಿ ಕನಕಗಿರಿ
ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾಧಿ ಕೊಟ್ಟಿದ್ದು, ಅದರ ಸಾರಾಂಶವೇನೆಂದರೆ, ನಮ್ಮ ಮನೆಯಲ್ಲಿ
ನಾನು, ನನ್ನ ಹೆಂಡತಿ ರೂಪಬಾಯಿ, 2 ಜನ ಗಂಡು, ಒಬ್ಬಳು ಹೆಣ್ಣು ಮಕ್ಕಳಿರುತ್ತಾರೆ. ನಾನು ಮತ್ತು ನನ್ನ
ಹೆಂಡತಿ ರೂಪಬಾಯಿ ಕೂಡಿಕೊಂಡು ಮೇನ್ ಬಜಾರದಲ್ಲಿ ಮಹಿಷಾಷರ ಮದರ್ಿನಿ ಗುಡಿಯಲ್ಲಿ ಟೇಲರ್ ಕೆಲಸ ಮಾಡಿಕೊಂಡು
ಜೀವಿಸುತ್ತೇವೆ. ಈಗ ಕನಕಾಚಲ ಜಾತ್ರೆ ಇದ್ದ ಪ್ರಯುಕ್ತ ಈಗ್ಗೆ ಸುಮಾರು 1 ತಿಂಗಳದಿಂದ ನಾನು ಮತ್ತು
ನನ್ನ ಹೆಂಡತಿ ಹಗಲು ರಾತ್ರಿ ಟೇಲರ ಕೆಲಸ ಮಾಡಿ ಬಂದ ಹಣವನ್ನು ಮನೆಯಲ್ಲಿ ಕೂಡಿ ಇಟ್ಟಿದ್ದೇವು. ದಿನಾಂಕ 30-03-2016 ರಂದು ಸಂಜೆ 4-00 ಗಂಟೆಯಿಂದ 6-00
ಗಂಟೆಯ ಅವಧಿಯಲ್ಲಿ ನಾನು ಮತ್ತು ನನ್ನ ಹೆಂಡತಿ ಮಕ್ಕಳೊಂದಿಗೆ ಶ್ರೀ ಕನಕಾಚಲ ದೇವರ ರಥೋತ್ಸವ ನೋಡಲು
ನಮ್ಮ ಮನೆಯ ಬಾಗಿಲಿಗೆ ಬೀಗ ಹಾಕಿ ಮೇನ ಬಜಾರಕ್ಕೆ ಹೋದ ಸಮಯದಲ್ಲಿ ಯಾರೋ ಅಪರಿಚಿತ ಕಳ್ಳರು ನಮ್ಮ ಮನೆಯ
ಬಾಗಿಲು ಕೀಲಿ ಪತ್ತ ಕುರಿತು ಮನೆಯಲ್ಲಿ ಇಟ್ಟಿದ್ದ ನಗದು ಹಣ ರೂ.30,000/-,ಒಂದು ತೊಲೆ ಬಂಗಾರ ಅ.ಕಿ.ರೂ.18,000/-
ಒಟ್ಟು ರೂ.48,000/- ಗಳ ಬೆಲೆ ಬಾಳವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಕಾರಣ ಅವರನ್ನು
ಪತ್ತೆ ಹಚ್ಚಿ ಕಳ್ಳತನವಾದ ಬಂಗಾರ, ಹಣವನ್ನು ನಮಗೆ
ಕೊಡಲು ವಿನಂತಿ ಅಂತಾ ಕೊಟ್ಟ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಯಿತು.
0 comments:
Post a Comment