Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, April 3, 2016

1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 57/2016 ಕಲಂ. 302 ಐ.ಪಿ.ಸಿ:.
ದಿನಾಂಕ: 02.04.2016 ರಂದು ಮದ್ಯಾನ 3:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ರಹಿಂ ಆಲೂರು ಸಾ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾದಿಯನ್ನು ಹಾಜರು ಪಡಸಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ: 02.04.2016 ರಂದು ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ನಾನು ಮರ್ದಾನ ಅಲಿ ದರ್ಗಾದ ಹತ್ತಿರ ದೇವರ ದರ್ಶನಕ್ಕಾಗಿ ಹೋಗಿದ್ದೇನು. ದರ್ಗಾದ ಮುಂದೆ ಇರುವ ಕಟ್ಟೆಯ ಹತ್ತಿರ ದರ್ಶನಕ್ಕೆ ಬಂದಿದ್ದ ಕೆಲವೊಂದು ವ್ಯಕ್ತಿಗಳು ದರ್ಗಾದಿಂದ ಸ್ವಲ್ಪದೂರ ಮಹಿಳಾ ಶೌಚಾಲಯದ ಹತ್ತಿರ ಒಬ್ಬ ಅಪರಿಚಿತ ವ್ಯಕ್ತಿಯು ಸತ್ತುಬಿದ್ದಿದ್ದು ಆತನ ತಲೆಯಿಂದ ರಕ್ತಸೋರುತ್ತಿದೆ ಅಂತಾ ಮಾತನಾಡುವುದನ್ನು ನಾನು ಕೇಳಿ ನಂತರ  ಬೆಳಿಗ್ಗೆ 10:15 ಗಂಟೆಗೆ ಸ್ಥಳಕ್ಕೆ ಹೋಗಿ ನೋಡಲು ವಿಷಯ ನಿಜವಿತ್ತು. ನಾನು ಕೂಡಲೇ ನಮ್ಮ ಜನಾಂಗದವರಾದ 1] ಮಹ್ಮದ ಅನೀಸ್ ದಫೇದಾರ 2] ಮಹ್ಮದ ಸಲಿಂ ಗೊಂಡಬಾಳ ಇವರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಸದರಿ ವ್ಯಕ್ತಿಯನ್ನು ನೋಡಲು ವ್ಯಕ್ತಿಯು ಸುಮಾರು 50 ರಿಂದ 55 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯಾಗಿದ್ದು, ನೋಡಲು ಆತನ ಎಡಗಡೆಯ ತಲೆಯ ಮೇಲೆ ಒಂದು ದೊಡ್ಡದಾದ ಕಲ್ಲನ್ನು ಎತ್ತಿಹಾಕಿ ಭಾರಿ ರಕ್ತಗಾಯ ಮಾಡಿದ್ದು, ಮತ್ತು ಎಡಗಡೆಯ ಕಣ್ಣಿನ ಹುಬ್ಬಿನ ಪಕ್ಕಕ್ಕೆ ಯಾವುದೋ ಒಂದು ಹರಿತವಾದ ಆಯುಧದಿಂದ ಚುಚ್ಚಿ, ಕುತ್ತಿಗೆಯ ಕೆಳಭಾಗದಲ್ಲಿ ಕೊಯ್ದು ಭಾರಿ ರಕ್ತಗಾಯ ಮಾಡಿದ್ದು, ಇದರಿಂದ ಸದರಿ ವ್ಯಕ್ತಿಯು ಭಾರಿ ರಕ್ತಗಾಯಹೊಂದಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ. ನಂತರ ಮೃತ ಪಟ್ಟ ವ್ಯಕ್ತಿಯನ್ನು ಕೊಲೆ ಮಾಡಿದ ವ್ಯಕ್ತಿಗಳು ಕೊಲೆ ಮಾಡಿದ ಸ್ಥಳದಿಂದ ಸುಮಾರು 100 ಅಡಿಗಳ ವರೆಗೆ ಎಳೆದುಕೊಂಡು ಹೋಗಿ ಅಲ್ಲಿಯೇ ಇದ್ದ ಒಂದು ಬಂಡೆಯ ಪಕ್ಕದಲ್ಲಿ ಹಾಕಿದ್ದು ಇರುತ್ತದೆಮೃತಪಟ್ಟ ವ್ಯಕ್ತಿಯನ್ನು ದಿನಾಂಕ 01.04.2016 ರಂದು ರಾತ್ರಿ ವೇಳೆಯಿಂದ ಇಂದು ದಿನಾಂಕ 02.04.2016 ರಂದು ಬೆಳಗಿನ ಜಾವದ ವರೆಗೆ ಯಾರೋ ಅಪರಿಚಿತ ವ್ಯಕ್ತಿಗಳು, ಯಾವುದೋ ಉದ್ದೇಶಕ್ಕಾಗಿ, ಬಲವಾದ ಹರಿತವಾದ ಆಯುಧದಿಂದ ಎಡಗಡೆಯ ಕಣ್ಣಿನ ಹುಬ್ಬಿನ ಪಕ್ಕದಲ್ಲಿ ಬಲವಾಗಿ ಚುಚ್ಚಿ ಮತ್ತು ಕುತ್ತಿಗೆಯ ಕೆಳಭಾಗದಲ್ಲಿ ಬಲವಾಗಿ ಕೊಯ್ದು ಭಾರಿ ರಕ್ತಗಾಯವನ್ನುಂಟು ಮಾಡಿ, ನಂತರ ತಲೆಯ ಮೇಲೆ ದೊಡ್ಡದಾದ ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಿದ್ದು ಇರುತ್ತದೆ. ಕಾರಣ ಕೊಲೆ ಮಾಡಿದ ಅಪರಿಚಿತ ವ್ಯಕ್ತಿಯನ್ನು ಪತ್ತೆಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ತಮ್ಮಲ್ಲಿ ವಿನಂತಿ ಇರುತ್ತದೆ. ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 31/2016 ಕಲಂ. 447, 323, 355, 504, 506, 109 ಐ.ಪಿ.ಸಿ:.
ದಿನಾಂಕ:-02/04/2016 ರಂದು 5-00 ಪಿ.ಎಂ.ಕ್ಕೆ ಫಿರ್ಯಾದಿದಾರರಾದ ಗೌಡಪ್ಪರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೆನೆಂದರೆ, ಆರೋಪಿತರು ಪಿರ್ಯಾದಿ ತನ್ನ ಮನೆ ಕಟ್ಟಲು ಅಡೆತಡೆ ಮಾಡಿದ್ದಕ್ಕೆ ಫಿರ್ಯಾದಿದಾರರು ಮಾನ್ಯ ನ್ಯಾಯಾಲಯದಲ್ಲಿ ದಾವೆ ಹೂಡಿ ಅಡೆತಡೆ ಮಾಡದಂತೆ ತಡೆಯಾಜ್ಞೆ ಮಾಡಿಸಿದ ದ್ವೇಷದಿಂದ ದಿನಾಂಕ; 31/03/2016  ರಂದು 2.00 ಪಿ.ಎಂ.ಕ್ಕೆ ಫಿರ್ಯಾದಿ ತನ್ನ ಮನೆಯಲ್ಲಿ ಇರುವಾಗ ಆರೋಪಿತರಲ್ಲಿ ಮಲ್ಲಪ್ಪನು ತನ್ನ ಅಣ್ಣ ಮತ್ತು ತಮ್ಮನ ಪ್ರಚೋದನೆಯಿಂದ ಪಿರ್ಯಾದಿದಾರರ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರಿಗೆ ಹಿಡಿದುಕೊಂಡು ಮನೆಯಿಂದ ಹೊರಗೆ ಎಳೆದುಕೊಂಡು ಬಂದು “ಲೇ ಬೊಸುಡಿ ಮಗನೇ” ಅಂತಾ ಅವಾಚ್ಯವಾಗಿ ಬೈಯ್ದಾಡಿ ತನ್ನ ಬಲಗಾಲಲ್ಲಿಯ ಚಪ್ಪಲಿಯಿಂದ ಬೆನ್ನಿಗೆ ಹೊಡೆದಾಗ ಫಿರ್ಯಾದಿಯ ಮಗ ಬಸವರಾಜ ಮತ್ತು ಪಕ್ಕದ ಮನೆಯ ಹನುಮಂತಪ್ಪ, ಬಸಮ್ಮರವರು ಬಂದು ತನಗೆ ಬಡಿಯುವದನ್ನು ಬಿಡಿಸಿದ್ದು ಆಗ ಆರೋಪಿತನು ಫಿರ್ಯಾದಿಗೆ ‘‘ ಇನ್ನೊಮ್ಮೆ ಸಿಗೂ ನಿನಗೆ ಜೀವಂತ ಉಳಿಸುವದಿಲ್ಲಾ’’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ತಮ್ಮ ಊರಲ್ಲಿ ಹಿರಿಯರಿಗೆ ವಿಚಾರಮಾಡಿ ನಂತರ ತಡವಾಗಿ ಬಂದು  ತನಗೆ ಹೊಡೆಬಡೆ ಮಾಡಿದವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈ ಕೊಂಡೆನು.
3) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 32/2016 ಕಲಂ.  323, 354, 504 ಸಹಿತ 34 ಐ.ಪಿ.ಸಿ:.
ದಿನಾಂಕ:02-04-2016 ರಂದು 1-00 ಪಿಎಂಕ್ಕೆ ಜಿಲ್ಲಾ ಆಸ್ಪತ್ರೆ ಕೊಪ್ಪಳದಿಂದ ಎಂ.ಎಲ್.ಸಿ ಯಾದಿ ಬಂದಿದ್ದು  ದಿನಾಂಕ: 02-04-2016 ರಂದು 2-00 ಪಿಎಂ ಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ರೇಣುಕವ್ವ ಗಂ.ರಾಮಪ್ಪ ಮೂಲಿಮನಿ ಸಾ: ಕದ್ರಳ್ಳಿ ಇವರಿಗೆ ಅವಲೋಕಿಸಿ ಹೇಳಿಕೆಯನ್ನು ದಿನಾಂಕ: 02-04-2016 ರಂದು ಮದ್ಯಾಹ್ನ 3-00 ಗಂಟೆಯಿಂದ 4-00 ಗಂಟೆಯ ವರೆಗೆ ಪಡೆದುಕೊಂಡಿದ್ದು ಸಾರಾಂಶವೆನೆಂದರೆ, ದಿನಾಂಕ: 31-03-2016 ರಂದು ಗುರುವಾರ ದಿವಸ ರಾತ್ರಿ 8-00 ಗಂಟೆಯ ಸುಮಾರು ಪಿರ್ಯಾದಿದಾರರು ತನ್ನ ಮನೆಯಲ್ಲಿದ್ದಾಗ ತನ್ನ ಗಂಡನಿಗೆ ನೀನು ಯಾಕೆ ದುಡಿಯಲು ಹೋಗುವದಿಲ್ಲಾ ಕುಳಿತು ತಿಂದರೆ ಎಲ್ಲಿಂದ ಬರಬೇಕು ನಾನೊಬ್ಬಳೆ ದುಡಿದರೆ ಹೇಗೆ ಜೀವನ ಸಾಗುತ್ತದೆ ಅಂತಾ ಬುದ್ದಿಮಾತಿಗಾಗಿ ಗಂಡನಿಗೆ ಬೈಯುತ್ತಿದ್ದಾಗ ನ್ನ ಗಂಡನು ಸುಮ್ಮನೇ ಇದ್ದನು. ಆಗ ನ್ನ ತಾಯಿ ನ್ನ ತವರು ಮನೆ ಬಿಸರಳ್ಳಿ ಇಂದ ನ್ನನ್ನು ಮಾತನಾಡಿಸಲು ಬಂದಿದ್ದು ಅಷ್ಟರಲ್ಲಿ ನ್ನ ಮೈದುನ ನಾಗರಾಜ್ ನ್ನ ತಾಯಿ ಬಂದಿದ್ದನ್ನು ನೋಡಿ ನ್ನ ಗಂಡನಿಗೆ ಬೈದಾಡುತ್ತಿರುವದನ್ನು ಕೇಳಿ ಏಕಾಏಕಿ ನಮ್ಮ ಅಣ್ಣನಿಗೆ ಯಾಕೇ ಬೈದಾಡುತ್ತಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ತಾನು ಇರುವ ಮನೆಯೊಳಗೆ ಬಂದು ನಗೆ ಹೊಡಿಬಡಿ ಮಾಡಿದರು ನ್ನ ತಾಯಿ ಬಿಡಿಸಲು ಬಂದಾಗ ಆಕೆಗು ಸಹ ಕೈಯಿಂದ ಹೊಡಿಬಡಿಮಾಡಿದರು ನ್ನ ಮೈದುನನ ಹೆಂಡತಿ ಬಂಜವ್ವ ಮತ್ತು ಅತ್ತೆ ಕನಕವ್ವ ಬ್ಬರು ನ್ನ ಮೈದುನನಿಗೆ ಎತ್ತಿ ಕಟ್ಟಿ ನಗೆ ಮತ್ತು ನ್ನ ತಾಯಿಗೆ ಬಾಯಿಗೆ ಬಂದಂತೆ ಬೈದಾಡಿದರು ನಾಗರಾಜ್ ನು ನ್ನ ಎದೆಗು ಗೆಜ್ಜೆಗು ಕಾಲಿನಿಂದ ಒದ್ದಿನು. ಇದನ್ನು ನೋಡಿದ ರಾಮಪ್ಪ ಮೂಲಿಮನಿ ,ರಣದಪ್ಪ ಮೂಲಿಮನಿ ಇವರು ಬಿಡಿಸಲು ಬಂದಾಗ ಅವರಿಗೂ ಸಹ ಕೇಳದೇ ಇದ್ದಿದ್ದರಿಂದ ಸುಮ್ಮನೆ ಹೋದರು ತಾನು ನ್ನ ತಂದೆ ಹಾಗು ತನ್ನ ಅಣ್ಣ ಬರುವರೆಗೂ ಮನೆಯಲ್ಲಿದ್ದು ಅವರು ಬಂದ ನಂತರ ಇಂದು ದಿನಾಂಕ: 02-04-2016 ರಂದು 12-00 ಗಂಟೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುತ್ತೆನೆ. ತನಗೆ ಹೊಡೆಬಡಿ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಿ  ಅಂತಾ ಮುಂತಾಗಿ ಹೇಳಿಕೆ ನೀಡಿದ್ದನ್ನು ಪಡೆದುಕೊಂಡು ದಿನಾಂಕ: 02-04-2016 ರ ಸಾಯಂಕಾಲ 5-15 ಗಂಟೆಗೆ ವಾಪಾಸ್ಸು ಬಂದು  ಸದರಿ ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
4) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 33/2016 ಕಲಂ. 448, 323, 324, 326, 504, 506 ಸಹಿತ 34 ಐ.ಪಿ.ಸಿ:.

ದಿನಾಂಕ: 02-04-2016 ರಂದು ರಾತ್ರಿ 9-30 ಗಂಟೆ ಸುಮಾರಿಗೆ ಆರೋಪಿತರೆಲ್ಲರೂ ಕೂಡಿಕೊಂಡು ಪಿರ್ಯಾದಿದಾರನ ಮನೆಯಲ್ಲಿ ಅತೀಕ್ರಮ ಪ್ರವೇಶ ಮಾಡಿ ಆರೋಪಿ ನಂ 01 ಮತ್ತು 02 ನೇದ್ದವರು ಪಿರ್ಯಾದಿಗೆ ಏನಲೇ ಸೋಳೆ ಮಗನೆ ನಮಗೆ ಬರಬೇಕಾದ ಆಸ್ತಿಯಲ್ಲಿ ಪಾಲು ಕೊಡು ಅಂದರ ಪಾಲು ಕೊಡುವಲ್ಲಿ ನಿನ್ನ ಸೊಕ್ಕು ಜಾಸ್ತಿಯಾಗಿದೆ ಅಂತಾ ಅಂದು ಅವಾಚ್ಯ ಶಬ್ದಗಳಿಂದ ಬೈದು ಆರೋಪಿ ನಂ 01 ಇತನು ಪಿರ್ಯಾದಿಗೆ ಅಲ್ಲಿಯೇ ಇದ್ದ ನಾಯಿಗೆ ಊಟ ಹಾಕಲಿಕ್ಕೆ ಇಟ್ಟಿದ್ದ  ಡೋಣಿ ತೆಗೆದುಕೊಂಡು ಬಾಯಿಗೆ ತುಟಿಗೆ ಮತ್ತು ಮುಂದಿನ ಮೇಲಿನ ಹಲ್ಲಿಗೆ ಹೊಡೆದಿದ್ದರಿಂದ ಮುಂದಿನ ಮೇಲಿನ ಒಂದು ಹಲ್ಲು ಮುರಿದು ಬಿದ್ದು ಭಾರಿಸ್ವರೂಪದ ರಕ್ತಗಾಯವಾಗಿದ್ದು ಮತ್ತು ತುಟಿಗೆ ರಕ್ತಗಾಯವಾಗಿದ್ದು  ಆರೋಪಿ ನಂ 02 ಇತನು ಪಿರ್ಯಾದಿಗೆ ಅಲ್ಲಿಯೇ ಇದ್ದ ಕಟ್ಟಿಗೆ ಬಡಿಗೆಯನ್ನು ತೆಗೆದುಕೊಂಡು ಬೆನ್ನಿಗೆ, ಬಲಭುಜಕ್ಕೆ ಹೊಡೆದು ಒಳಪೆಟ್ಟು ಮಾಡಿದ್ದು. ಆರೋಪಿ ನಂ 03 ಇತನು ಪಿರ್ಯಾದಿಗೆ ಕೈಯಿಂದ ಬೆನ್ನಿಗೆ ಹೊಡೆದು ಮತ್ತು ಕಾಲಿನಿಂದ ತೊಡೆಗೆ ಒದ್ದು ಒಳಪೆಟ್ಟು ಮಾಡಿದ್ದು ಇರುತ್ತದೆ. ಮೇಲ್ಕಾಣಿಸಿ ಆರೋಪಿತರು ಪಿರ್ಯಾದಿಗೆ ನಿನ್ನನ್ನು ಇಷ್ಟಕ್ಕೆ ಬಿಡುವದಿಲ್ಲಾ ನಿನ್ನ ಜೀವ ತೆಗೆಯುತ್ತೇವೆ ಅಂತಾ ಜೀವ ಬೆದರಿಕೆ ಹಾಕಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಪಿರ್ಯಾದಿಯ ಸಾರಾಂಶ ಇರುತ್ತದೆ. ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ  ಪ್ರಕರಣ ಧಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008