1) ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ: 10/2016
ಕಲಂ. 279, 337, 338 ಐ.ಪಿ.ಸಿ:.
ದಿನಾಂಕ 03-04-2016 ರಂದು ಬೆಳಗ್ಗೆ 6-00 ಗಂಟೆಗೆ ಫಿರ್ಯಾದಿದಾರನು ತನ್ನ ಸೈಕಲ್ ತೆಗೆದುಕೊಂಡು ಜಯನಗರಕ್ಕೆ
ಹೋಗುವ ಕುರಿತು ಸಿಎಂಸಿ ಗೇಟ್ ನಿಂದ ಹೋರಗಡೆ ಬಂದಾಗ ಆರೋಪಿತನು ತನ್ನ ಹೀರೂ ಹೋಂಡಾ ಸ್ಪ್ಲೇಂಡರ ಮೋ/ಸೈ ನಂ ಕೆಎ37 ಎಸ್ 7357 ನೇದ್ದನ್ನು ಸರಕಾರಿ ಆಸ್ಪತ್ರೆ ಕಡೆಯಿಂದ ಅತಿಜೋರಾಗಿ
ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಫಿರ್ಯಾದಿದಾರನ್ನು ಸೈಕಲ್ ಗೆ ಟಕ್ಕರ್ ಕೊಟ್ಟು
ಅಪಾಘತ ಮಾಡಿದ್ದರಿಂದ ಫಿರ್ಯಾದಿದಾರನು ಸೈಕಲ್ ಹಾಕಿಕೊಂಡು ರಸ್ತೆ ಮೇಲೆ ಬಿದ್ದಿದ್ದು ಮತ್ತು ಆರೋಪಿ ಸಹಾ ಮೋ/ಸೈ ಹಾಕಿಕೊಂಡು ರಸ್ತೆ ಮೇಲೆ ಬಿದ್ದಾಗ ಫಿರ್ಯಾದಿದಾರನಿಗೆ ಸಾದ ಮತ್ತು ಭಾರಿ ಸ್ವರೂಪದ ಗಾಯ ಮತ್ತು ಒಳಪೆಟ್ಟುಗಳಾಗಿದ್ದು ಮತ್ತು ಆರೋಪಿತನಿಗೆ ಸಾದ ಸ್ವರೂಪದ ಗಾಯ ಮತ್ತು ಒಳಪೆಟ್ಟುಗಳಾಗಿದ್ದು ಇರುತ್ತದೆ ಕಾರಣ ಆರೋಪಿತನ ಪ್ರಕರಣ ದಾಖಲಿಸಿ
ತನಿಖೆ ಕೈಗೊಂಡಿದೆ.
2)
ಹನುಮಸಾಗರ
ಪೊಲೀಸ್ ಠಾಣೆ ಗುನ್ನೆ ನಂ: 27/2016 ಕಲಂ. 354, 354(ಎ), 307, 504, 506 ಸಹಿತ 34
ಐ.ಪಿ.ಸಿ:.
ದಿನಾಂಕ: 03-04-2015 ರಂದು ಸಾಯಾಂಕಾಲ 18-15 ಗಂಟೆಗೆ ಫಿರ್ಯದಿದಾರರಾದ ಶ್ರೀ
ಚಂದಪ್ಪ ಗುಡಗಲದಿನ್ನಿ ಸಾ: ಹನಮಸಾಗರ ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ನೀಡಿದ್ದ
ಸಾರಾಂಶವೇನೆಂದರೆ, ಫಿರ್ಯಾದಿಯ ಮಗಳಾದ ಸುಜಾತಳಿಗೆ ಆರೋಪಿತರು ಪ್ರೀತಿಸು ಅಂತಾ ಪೀಡಿಸಿದ್ದು, ಈ
ಬಗ್ಗೆ ಫಿರ್ಯಾದಿ ಆರೋಪಿತರಿಗೆ ಹಿರಿಯರ ಸಮಕ್ಷಮ ಬುದ್ದಿ ಹೇಳಿದ್ದರಿಂದ, ಫಿರ್ಯಾದಿಯ ಮೇಲೆ
ಆರೋಪಿತರು ಸಿಟ್ಟಾಗಿದ್ದು ಇರುತ್ತದೆ. ಹೀಗಿರುಗಾಗ ಇಂದು ದಿನಾಂಕ: 03-04-2016 ರಂದು
ಫಿರ್ಯಾದಿಯ ಮಗಳಾದ ಸುಜಾತ ಈಕೆಯ ನಿಶ್ಚಿತಾರ್ಥ ಕಾರ್ಯಕ್ರಮ ಹನಮಸಾಗರದ ಶ್ರೀ ದುರ್ಗಮ್ಮ ದೇವರ
ಗುಡಿಯಲ್ಲಿ ಹಿರಿಯರು ಹಾಗೂ ಗಂಡಿನ ಕಡೆಯವರು ಮಧ್ಯಾಹ್ನ 02-00 ಗಂಟೆಗೆ ನಿಶ್ಚಿತಾರ್ಥ ಮಾಡುವಾಗ
ಆರೋಪಿ ಚಂದ್ರಶೇಖರ ಇವನು ಕೈಯಲ್ಲಿ ಚಾಕು ಹಿಡಿದುಕೊಂಡು ಅವನ ಹಿಂದೆ ಆರೋಪಿ ಹನಮಂತನು ಬಂದು
ಚಂದ್ರಶೇಖರ ಈತನು ಫಿರ್ಯಾದಿಯ ಮಗಳು ಸುಜಾತಳ ಜಂಪರ ಹಾಗೂ ಸೀರೆ ಸೆರಗು ಹಿಡಿದು ಎಳೆದು ಚಾಕು
ಚುಚ್ಚಲು ಹೋದಾಗ ಫಿರ್ಯಾದಿಯು ಅಡ್ಡ ಬಂದು ಮಗಳನ್ನು ಎಳೆದುಕೊಂಡಾಗ ಚಾಕು ಫಿರ್ಯಾದಿಯ ಬಲಗೈ
ಕಿರುಬೆರಳಿಗೆ ತಾಕಿದ್ದು ಗಾಯವಾಗಿದ್ದು ಇರುತ್ತದೆ. ನಂತರ ಹಿರಿಯರು ಬಿಡಿಸಿ ತಿಳಿ
ಹೇಳುವಷ್ಟರಲ್ಲಿ ಆರೋಪಿತರಿಬ್ಬರೂ ಓಡಿ ಹೋಗಿದ್ದು, ಈ ಬಗ್ಗೆ ಹಿರಿಯರಲ್ಲಿ ವಿಚಾರಿಸಿ ನಂತರ
ತಡವಾಗಿ ಠಾಣೆಗೆ ಬಂದು ಫಿರ್ಯಾದಿ ನೀಡಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ.
3) ಕುಕನೂರ
ಪೊಲೀಸ್ ಠಾಣೆ ಗುನ್ನೆ ನಂ: 33/2016 ಕಲಂ. 323,
324, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ:3/4/2016 ರಂದು 2-00 ಪಿ.ಎಂ.ಕ್ಕೆ ಫಿರ್ಯಾದಿದಾರರಾದ ಅನ್ನಮ್ಮರವರು ಠಾಣೆಗೆ ಬಂದು
ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೆನೆಂದರೆ, ದಿನಾಂಕ;
31/03/2016 ರಂದು 2-00 ಪಿ.ಎಂ.ಕ್ಕೆ ತಾನು, ತನ್ನ ಮಗ ಮಲ್ಲಪ್ಪ ಮನೆಯಲ್ಲಿರುವಾಗ ಫಿರ್ಯಾದಿದಾರರು
ಆರೋಪಿತನಿಗೆ ತನ್ನ ಜಮೀನು ಮತ್ತು ಮದ್ಯದ ಗೋಡೆ ಕಟ್ಟಿಸಿದ ಹಣವನ್ನು ಕೊಡಲು ಕೇಳಿದಾಗ ಆರೋಪಿತನು
‘’ಪ್ರತಿಸಲ ಹೊಲ ಮತ್ತು ಹುದುವಿನ(ಮದ್ಯದ) ಗೋಡೆ ಕಟ್ಟಿಸಿದ ಹಣ ಕೇಳುತ್ತಿಯೇನಲೇ ಬೋಸುಡಿ ಸೂಳೆ ಇಲ್ಲಿ
ಗಳಿಸಿ ಇಟ್ಟಿಯೇನು ’’ ಅಂತಾ ಅವಾಚ್ಯವಾಗಿ ಬೈಯ್ದಾಡಿ ಆರೋಪಿತರು ಹಿಡಿ ಗಾತ್ರದ ಕಲ್ಲಿನಿಂದ ಹೊಡೆದು
ಗಾಯಗೊಳಿಸಿದಾಗ, ಫಿರ್ಯಾದಿ ತನ್ನ ಜಮೀನು ಮತ್ತು ಗೋಡೆ ಕಟ್ಟಿಸಿದ ಹಣ ಕೇಳಿದ್ದಕ್ಕೆ ಕಲ್ಲಿನಿಂದ
ಹೊಡೆಯುತ್ತೀರಿ ಅಂತಾ ಬಾಯಿ ಮಾಡಿದಾಗ ಆರೋಪಿ ಸಾವಿತ್ರಿ ಈಕೆಯು ಫಿರ್ಯಾದಿಯ ಸೀರೆ ಹಿಡಿದು ಎಳೆದಾಡಿ
ಕೈಯಿಂದ ಹೊಡೆದಿದ್ದು, ಆಗ ಫಿರ್ಯಾದಿಯ ಮಗ ಮಲ್ಲಪ್ಪ ಬಿಡಿಸಲು ಹೊದಾಗ ಆರೋಪಿತನು ಅಲ್ಲೇ ಬಿದ್ದಿದ್ದ
ಕಟ್ಟಿಗೆಯನ್ನು ತೆಗೆದುಕೊಂಡು ತನ್ನ ಮಗನಿಗೆ ಹೊಡೆದು ದುಃಖಾಪತಗೊಳಿಸಿದ್ದು, ಅಲ್ಲದೇ ಆರೋಪಿತನ ಮಗಳು
ತನಗೆ ಕೈಯಿಂದ ಬಡಿಯುತ್ತಿರುವಾಗ ಇಬ್ಬರು ಚೀರಾಡಲು ಘಟನೆ ನೋಡಿದ ಗೂಳಪ್ಪ ಪಂತರ, ಈರಪ್ಪ ಮುತ್ತಾಳ
ಮತ್ತು ಶಂಕ್ರಪ್ಪ ಮುತ್ತಾಳ ಎಲ್ಲರೂ ಬಂದು ಅವರಿಗೆ ಸಿಟ್ಟು ಮಾಡಿ ತಮಗೆ ಹೊಡೆಯುವದನ್ನು ಬಿಡಿಸಿದಾಗ ಆರೋಪಿತ ಗೌಡಪ್ಪ ತನ್ನ ಕೈಯಲ್ಲಿದ್ದ ಕಟ್ಟಿಗೆಯನ್ನು ಅಲ್ಲಿಯೇ ಬಿಸಾಕಿ ಫಿರ್ಯಾದಿಗೆ ‘‘ಇವತ್ತು ಉಳಕೊಂಡಿರಿ
ಇನ್ನೊಮ್ಮೆ ಹೊಲ ಮತ್ತು ಗೋಡೆ ಕಟ್ಟಿಸಿದ ಹಣ ಕೇಳಿದರೆ ನಿಮ್ಮನ್ನು
ಜೀವಂತ ಉಳಿಸೋಲ್ಲಾ’’ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು, ತಾನು ಹಿರಿಯರು ಹೇಳಿದ ಬುದ್ಧಿ ಮಾತು ಕೇಳಿ ಈಗ ತಡವಾಗಿ
ಬಂದು ದೂರು ನೀಡಿದ್ದು ಅವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ದೂರಿನ
ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈ
ಕೊಂಡೆನು.
4) ಕೊಪ್ಪಳ ನಗರ ಪೊಲೀಸ್
ಠಾಣೆ ಗುನ್ನೆ ನಂ. 58/2016 ಕಲಂ.
379 ಐ.ಪಿ.ಸಿ:.
ದಿನಾಂಕ 03-04-2016 ರಂದು ಸಂಜೆ 6-00 ಗಂಟೆಗೆ ಫಿರ್ಯಾಧಿದಾರರಾದ ವಿನಯ ತಂದೆ ಶ್ರೀನಿವಾಸ
ಕಟ್ಟಿಮನಿ ಸಾ: 3 ನೇ ಕ್ರಾಸ್ ಗವಿಶ್ರೀ ನಗರ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹಾಜರು
ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೆ. ದಿನಾಂಕ 22-03-2016 ರಂದು ರಾತ್ರಿ 11-30 ಗಂಟೆಗೆ ತಮ್ಮ
ಹೆಸರಿನಲ್ಲಿರುವ ತಮ್ಮ ಬಜಾಜ್ ಪಲ್ಸರ್ ಮೋಟಾರ ಸೈಕಲ್ ನಂ KA 37/W 7183 ಅಂ.ಕಿ.ರೂ 40,000-00 ಬೆಲೆಬಾಳುವುದನ್ನು ನಗರದ ಗವಿಶ್ರೀ ನಗರದಲ್ಲಿರುವ ತಮ್ಮ ಮನೆಯ
ಹತ್ತಿರ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿ ತಾನು ತಮ್ಮ ಮನೆಯೊಳಗೆ ಹೋಗಿದ್ದು ನಂತರ ಮುಂಜಾನೆ 7-00
ಗಂಟೆಗೆ ಮನೆಯಿಂದ ಹೊರಗಡೆ ಬಂದು ನೋಡಿದಾಗ ತನ್ನ ಮೋಟಾರ ಸೈಕಲ್ ಕಾಣಲಿಲ್ಲಾ. ಕೂಡಲೇ ಗಾಬರಿಯಾಗಿ
ಗವಿಶ್ರೀ ನಗರದ ಸುತ್ತಾಮುತ್ತಾ ಮತ್ತ ಜವಾಹರ ರೋಡ್, ಬಸ್ ನಿಲ್ದಾಣ, ಗಂಜ್ ಸರ್ಕಲ್
ಮುಂತಾದ ಕಡೆಗಳಲ್ಲಿ ಹುಡುಕಾಡಲು ಎಲ್ಲಿಯೂ ಕಂಡು ಬರಲಿಲ್ಲಾ ಯಾರೋ ಕಳ್ಳರು ಕಳ್ಳತನ
ಮಾಡಿಕೊಂಡು ಹೋಗಿರುವ ಬಗ್ಗೆ ತಿಳಿದು ಬಂದಿತು. ಅಂತಾ ಇರುವ ಫಿರ್ಯಾದಿಯ ಮೇಲಿಂದ ಠಾಣಾ ಗುನ್ನೆ
ನಂ 58/2016 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
0 comments:
Post a Comment