1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 90/2016 ಕಲಂ: 279, 337, 338, 304(ಎ) ಐ.ಪಿ.ಸಿ ಮತ್ತು 187
ಐ.ಎಂ.ವಿ. ಕಾಯ್ದೆ:.
ದಿ:27-04-16 ರಂದು
ನಮ್ಮೂರ ಈಶಪ್ಪ ಗೌಡ್ರ ಇವರ ಮಗಳು ಬಸಮ್ಮ ಇವರ ಮದುವೆಯ ಕಾರ್ಯಕ್ರಮವು ಗಂಗಾವತಿ ತಾಲ್ಲೂಕಿನ ಕನ್ನೇರಮಡುವು
ಗ್ರಾಮದಲ್ಲಿದ್ದುದರಿಂದ ಮದುವೆಗೆ ಹೋಗಲು ಅಂತಾ ಬೆಳಿಗ್ಗೆ ನಾನು ಮತ್ತು ನಮ್ಮೂರಿನ ಇತರರು ಕೂಡಿ ನಮ್ಮೂರ
ಚಂದನಗೌಡ ಇವರ ಮಹಿಂದ್ರಾ ಟ್ರಾಕ್ಟರಿ ಇಂಜನ್ ನಂ: RDGWO2315 ಹಾಗೂ ಟ್ರೇಲರ್ ನಂಬರ ಇಲ್ಲದ ವಾಹನದಲ್ಲಿ ಕುಳಿತುಕೊಂಡು ನಮ್ಮೂರಿಂದ ಕನ್ನೇರಮಡುವ ಗ್ರಾಮಕ್ಕೆ
ಹೋಗಿದ್ದೆವು. ನಮ್ಮ ಟ್ರ್ಯಾಕ್ಟರಿಗೆ ಚಾಲಕ ನಮ್ಮೂರಿನ ನಾಗಪ್ಪ ಪೊಲೀಸ್ ಪಾಟೀಲ ಇದ್ದನು. ಹೀಗೆ ಕನ್ನೇರಮಡುವು
ಗ್ರಾಮದಲ್ಲಿ ಮದುವೆ ಮುಗಿಸಿಕೊಂಡು ವಾಪಸ್ ಊರಿಗೆಂದು ಕುಷ್ಟಗಿ-ಹೊಸಪೇಟ ಎನ್.ಹೆಚ್-50 ರಸ್ತೆಯಲ್ಲಿ
ಮೆತಗಲ್ ದಾಟಿ ನಮ್ಮೂರು ಇನ್ನೂ ಮುಂದೆ ಸುಮಾರು 01 ಕಿಮೀ ಅಂತರದಲ್ಲಿ ಇರುವಾಗ ಭದ್ರಯ್ಯ ಕೋಳಿ ಫಾರ್ಮ
ಸಮೀಪದಲ್ಲಿ ನಮ್ಮ ಟ್ರ್ಯಾಕ್ಟರಿಯ ಚಾಲಕನು ಟ್ರ್ಯಾಕ್ಟರಿಯನ್ನು ಓಡಿಸಿಕೊಂಡು ಸಾಯಂಕಾಲ 6-00 ಗಂಟೆಯ
ಸುಮಾರಿಗೆ ಹೊರಟಿದ್ದಾಗ, ಅದೇವೇಳೆಗೆ ನಮ್ಮ ಹಿಂದಿನಿಂದ ಅಂದರೆ ಕುಷ್ಟಗಿ ಕಡೆಯಿಂದ ಒಂದು ಲಾರಿ ನಂ:
ಎಮ್.ಹೆಚ್-16/ಎವೈ-5467 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ
ಓಡಿಸುತ್ತಾ ಮುಂದೆ ಹೊರಟಿದ್ದ ನಮ್ಮ ವಾಹನದ ಸುರಕ್ಷಿತ ಅಂತರವನ್ನು ಕಾಪಾಡದೇ ಬಂದವನೇ ನಮ್ಮ ಟ್ರ್ಯಾಕ್ಟರಿಗೆ
ಹಿಂದಿನಿಂದ ಟಕ್ಕರ ಕೊಟ್ಟು ಅಪಘಾತ ಮಾಡಿ ಲಾರಿ ಚಾಲಕನು ತನ್ನ ಲಾರಿಯನ್ನು ಬಿಟ್ಟು ಓಡಿ ಹೋಗಿದ್ದು
ಇರುತ್ತದೆ. ಲಾರಿ ಚಾಲಕನಿಗೆ ನೋಡಿದಲ್ಲಿ ಗುರುತಿಸುತ್ತೇನೆ. ಈ ಅಪಘಾತದಲ್ಲಿ ನನಗೆ ಮತ್ತು ನಮ್ಮ ಟ್ರ್ಯಾಕ್ಟರಿಯ
ಚಾಲಕನಾದ 1] ನಾಗಪ್ಪ ಹಾಗೂ 2] ದುರುಗಮ್ಮ ಪೊಲೀಸ್ ಪಾಟೀಲ. 3] ರತ್ನವ್ವ ಗೌಡ್ರ. 4] ಮಂಜುನಾಥ ಹೊಸಳ್ಳಿ.
5] ಕಳಚಂಬವ್ವ ಕುರುಬರ, 6] ರತ್ವವ್ವ ಗೌಡ್ರ. 7] ಜ್ಯೋತಿ ತಂದೆ ದ್ಯಾಮಣ್ಣ 8] ಶಿವಮ್ಮ ಗೌಡ್ರ,
9] ಮಂಜವ್ವ ಕಟ್ಟೀಮನಿ. 10] ಯಲ್ಲವ್ವ ಕುಂಟ್ರ. 11] ಮಂಜುನಾಥ ಕಂಬಳಿ. 12] ಮರಿಯಪ್ಪ ಮಡಿವಾಳರ.
13] ಲಕ್ಷ್ಮವ್ವ ಮ್ಯಾದನೇರಿ. 14] ನೇತ್ರಾವತಿ ಗೌಡ್ರ, 15] ಗಂಗಮ್ಮ ಗೌಡ್ರ, ಹಾಗೂ ಕುಣಿಕೇರಿ ಗ್ರಾಮದ 16] ನೀಲಮ್ಮ ತಂದೆ ದೇವಪ್ಪ, ಗೋಸಲದೊಡ್ಡಿ
ಗ್ರಾಮದ 17] ಗಂಗವ್ವ ಮ್ಯಾದನೇರಿ, ನಮ್ಮೂರಿನ 18] ಸಲೀಂಬೀ ಕುದರಿಮೋತಿ. ಹಾಗು ಕಕರ್ಿಹಳ್ಳಿ ಗ್ರಾಮದ
19] ಸೋಮವ್ವ ಶೆಲ್ಯೂಡಿ. ಮತ್ತು ಗುಡದಹಳ್ಳಿ ಗ್ರಾಮದ 20] ನಾಗರತ್ನ ಕುರಿ, 21] ಜೀವನ ಕುರಿ 22]
ಕನಕರಾಯ ಕುರಿ ಹೀಗೆ ಇವರುಗಳಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಮತ್ತು
ನಮ್ಮ ಟ್ರ್ಯಾಕ್ಟರಿಯಲ್ಲಿದ್ದ ನಮ್ಮೂರಿನ 1] ಗಂಗವ್ವ ಆಗೋಲಿ, 2] ಹನಮಂತ ಕುರಿ, 3] ರುದ್ರಪ್ಪ ಕುಂಟ್ರ
4] ಗೌರವ್ವ ಗೌಡ್ರ 5] ರಾಧಿಕಾ ಹೊಸುರು 6] ಭೀಮಪ್ಪ ಗೌಡ್ರ ಹೀಗೆ 06 ಜನರಿಗೆ ಭಾರಿ ರಕ್ತಗಾಯಗಳಾಗಿದ್ದರಿಂದ
ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ನಂತರ ಗಾಯಗೊಂಡಿದ್ದ ನಾವುಗಳು 108 ಅಂಬುಲೆನ್ಸ ದಲ್ಲಿ ಕೊಪ್ಪಳ
ಜಿಲ್ಲಾ ಆಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ಸೇರಿಕೆ ಯಾಗಿದ್ದು ಇರುತ್ತದೆ. ಕಾರಣ ಅಪಘಾತ ಮಾಡಿದ ಲಾರಿ
ನಂ: ಎಮ್.ಹೆಚ್-16/ಎವೈ-5467 ನೇದ್ದರ ಚಾಲಕನಿಗೆ ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು
ಮುಂತಾಗಿ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 84/2016 ಕಲಂ: 143, 147, 148, 341, 323, 324, 504, 506 ಸಹಿತ
149 ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ 1989:
ದಿನಾಂಕ 28-04-2016
ರಂದು 02-00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾದಿ ಸಲ್ಲಿಸಿದ್ದು,
ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರರು ತಮ್ಮ ಸ್ನೇಹಿತನ ಸಂಗಡ ಮೋಟಾರ್ ಸೈಕಲ್ ತೆಗೆದುಕೊಂಡು ಗುಂಡಮ್ಮ ಕ್ಯಾಂಪ್
ಮೂಲಕ ತಮ್ಮ ಮನೆಗೆ ಹೋಗುತ್ತಿರುವಾಗ ಜಗಳ ಬಿಡಿಸಿದ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ
27-04-2016 ರಂದು 23-30 ಗಂಟೆ ಸುಮಾರಿಗೆ ಆರೋಪಿತರೆಲ್ಲರೂ ಅಕ್ರಮಕೂಟ ರಚಿಸಿಕೊಂಡು ಪಿರ್ಯಾಧಿದಾರನಿಗೆ
ಲೇ ಮಾದಿಗ ಸೂಳೇ ಮಗನೇ ಅಂತಾ ಜಾತಿ ಎತ್ತಿ ಬೈದಾಡಿ ಈ ಮಾದಿಗ ಸೂಳೇಮಗನ್ನಾ ಬಿಡಬ್ಯಾಡ್ರಿ ಹೊಡ್ರಿ
ಸೂಳೇಮಗ, ಇನ್ನೊಂದ್ ಸರ್ತಿ ಜಗಳಾ ಬಿಡ್ಸಾಕ್ ಬರ್ಬಾರ್ದು ಅಂತಾ ಬೈದಾಡಿ ಸೂಳೇ ಮಗನೇ, ಇವತ್ ನಿನ್ನ
ಮುಗಿಸಿಬಿಡ್ತಿವಿ ಅಂತಾ ಅಂದವರೇ ತಮ್ಮ ಹತ್ತಿರ ಇದ್ದ ಕಟ್ಟಿಗೆಗಳಿಂದ ಹಾಗೂ ಕೈಯಿಂದ ಮೈ-ಕೈಗಳಿಗೆ
ಮತ್ತು ತಲೆಗೆ ಹೊಡೆ ಬಡಿ ಮಾಡಿ ರಕ್ತಗಾಯಗೊಳಿಸಿರುತ್ತಾರೆಂದು ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
3] ಕಾರಟಗಿ ಪೊಲೀಸ್
ಠಾಣೆ ಗುನ್ನೆ ನಂ. 99/2016 ಕಲಂ 143, 147, 341, 323, 324, 504, 506 ಸಹಿತ 149 ಐ.ಪಿ.ಸಿ
ದಿ 28-04-16 ರಂದು 00-20 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಮೀನಾಕ್ಷಿ ಗಂಡ ಶಿವಕುಮಾರ ವಯಾ-6 ವರ್ಷ ಜಾ- ಲಿಂಗಾಯತ ಉ- ಮನೆಕೆಲಸ ಸಾ- 1ನೇ ವಾರ್ಡ ಕಾರಟಗಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಯನ್ನು ಹಾಜರುಪಡಿಸಿದ್ದು ಸದರಿ ಪಿರ್ಯಾದಿಯ ಸಾರಾಂಸವೆನಂದರೆ ದಿನಾಂಕ:-27-04-2016 ರಂದು ಕಾರಟಗಿಯ ಪುರಸಭೆಯ ಚುನಾವಣೆಯ ಫಲಿತಾಂಶಗಳು ಘೋಷಣೆಯಾಗಿದ್ದು ಇದರಲ್ಲಿ ಕಾಂಗ್ರೇಸ್ ಪಕ್ಷದಿಂದ ಸ್ಪರ್ದಿಸಿ ಸೋತ 1) ಪಾರ್ವತೆಮ್ಮ ಗಂಡ ಮಹಾದೇವಪ್ಪ ತೊಂತನಾಳ(ಕಟಾಂಬ್ಲಿ) 2) ಶಿವಪ್ಪ ಕಟಾಂಬ್ಲಿ 3) ಬಸವ ತಂದಿ ಶಿವಪ್ಪ 4) ಮಹಾಂತೇಶ ತಂದಿ ಶಿವಪ್ಪ 5) ಶಿವರಾಜ ತಂದಿ ಶಿವಪ್ಪ 6) ಪ್ರಶಾಂತ ತಂದೆ ಶಿವಪ್ಪ 7) ವಿರುಪಣ್ಣ ತೊಂತನಾಳ 8) ಮಲ್ಲಿಕಾರ್ಜುನ ತಂದಿ ವಿರುಪಣ್ಣ 9) ಅಯ್ಯಪ್ಪ ತಂದಿ ವಿರುಪಣ್ಣ ತೊಂತನಾಳ 10) ಅಮರೇಶ ತಂದಿ ಗುಂಡಪ್ಪ ಕಟಾಂಬ್ಲಿ 11) ಸರಸ್ವತಿ ಗಂಡ ಅಮರೇಶ ಕಟಾಂಬ್ಲಿ 12 ) ರತ್ನಮ್ಮ ಗಂಡ ಶಿವಪ್ಪ ಹಾಗೂ ಇತರರು
ನಮ್ಮ ಮನೆಯ ಹತ್ತಿರ ಬಂದು ನಮಗೆ ಅವಚ್ಯವಾಗಿ ಬೈದಾಡಿ ನೀವು ಚುನಾವಣೆಯಲ್ಲಿ ನಿಮ್ಮ ಮನೆಯ ಮತವನ್ನು ನಮಗೆ ಹಾಕಿರುವುದಿಲ್ಲಾ ಅದಕ್ಕೆ ನಾವು ಸೊತಿದ್ದು ಅಂತಾ ನನ್ನ ಮೇಲೆ ಹಲ್ಲೆ ಮಾಡಿದ್ದು ನಂತರ ಬಂದು ನಮ್ಮ ಅಣ್ಣ ಬಸವರಾಜ ತಂದಿ ಗುಂಡಪ್ಪ ಗುಡಿ ಈತನು ಬಂದಾಗ್ಗೆ ಎಲ್ಲರೂ ಸೇರಿ ಆತನಿಗೂ ಕೂಡಾ ಅವಚ್ಯವಾಗಿ ಬೈದು ಕೈಯಿಂದ ಹಲ್ಲೆ ಮಾಡಿ ಜೀವ ಬೇದರಿಕೆ ಹಾಕಿ ಹೋಗಿರುತ್ತಾರೆ ಜಗಳದಲ್ಲಿ ನಮ್ಮ ಅಣ್ಣನ ಕೊರಳಲ್ಲಿ ಇದ್ದ 2 ತೊಲೆ ಬಂಗಾರ ಕಳೆದಿರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 97/2016 ಕಲಂ 143, 147, 341,
323, 324, 307, 395, 504, 506 ಸಹಿತ 149 ಐ.ಪಿ.ಸಿ ಮತ್ತು (1)(10) ಎಸ್.ಸಿ/ಎಸ್.ಟಿ. ಕಾಯ್ದೆ 1989:
ದಿನಾಂಕ:-27-04-2016
ರಂದು ಸಾಯಂಕಾಲ 5-35 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರಮೇಶ ತಂದಿ ಹನುಮಂತಪ್ಪ ಡಂಬರ್ ವಯಾ-25 ವರ್ಷ
ಜಾ. ಡಂಬರ್ (ಎಸ್.ಸಿ) ಸಾ. ಬುದಗುಂಪಾ ತಾ. ಗಂಗಾವತಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಯನ್ನು
ಹಾಜರುಪಡಿಸಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ ದಿನಾಂಕ:-24-04-2016 ರಂದು ನಡೆದ ಕಾರಟಗಿಯ
ಪುರಸಭೆಯ ಚುನಾವಣೆಯ ಪಲಿತಾಂಶಗಳು ಇಂದು ದಿನಾಂಕ:-27-04-2016 ರಂದು ಬಂದಿದ್ದರಿಂದ ಕಾರಟಗಿಯ ವಾರ್ಡ
ನಂ 21 ರಲ್ಲಿ ವಿಜೇತರಾದ ಕಾಂಗ್ರೇಸ್ ಪಕ್ಷದ ಅನ್ನಪೂರ್ಣಮ್ಮ ಮತ್ತು ಗಂಡ ಗಿರಿಯಪ್ಪ ಬೂದಿ ಕಾರಟಗಿ
ಯವರು ತಮ್ಮ ಕಾರ್ಯಕರ್ತರೊಂದಿಗೆ ಬೂದಗುಂಪಾ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಾದ ಶರಣೇಗೌಡ ಮಾಲೀಪಾಟೀಲ್
ಇವರಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಮೇರವಣಗೆಯ ಮುಖಾಂತರ ಟಿಪ್ಪುಸುಲ್ತಾನ ಸರ್ಕಲ್ ಮುಖಾಂತರ ಹೊರಟಿದ್ದಾಗ್ಗೆ
ನಾನು ಅಲ್ಲೆ ಮೇರವಣೆಗೆ ನೋಡುತ್ತಾ ನಿಂತುಕೊಂಡಿದ್ದೇನು ಅದೆ ಸಮಯಕ್ಕೆ ಕಾರಟಗಿಯ ವಾರ್ಡ ನಂ 21 ರಲ್ಲಿ
ಸೊತ ಬಿಲ್ದಾರ ಕುಟುಂಬದವರ ಬೆಂಬಲಿಗರು ಮತ್ತು ಎಲ್ಲಾ ಆರೋಪಿತರಾದ 1) ಬಸವರಾಜ ತಂದೆ ಹನುಮಂತಪ್ಪ ಬಿಲ್ಗಾರ
2) ನಾಗರಾಜ ತಂದೆ ಹನುಮಂತಪ್ಪ ಬಿಲ್ಗಾರ 3) ಯರ್ರಿಸ್ವಾಮಿ ತಂದೆ ಹನುಮಂತಪ್ಪ ಬಿಲ್ಗಾರ 4) ಭೀಮರಾಜ
ತಂದೆ ಹನುಮಂತಪ್ಪ ಬಿಲ್ಗಾರ 5) ವೀರುಪಣ್ಣ ತಂದೆ ಪಾಮಣ್ಣ ಬಿಲ್ಗಾರ 6) ಮಂಜುನಾಥ ತಂದೆ ವಿರುಪಣ್ಣ
ಬಿಲ್ದಾರ 7) ಹನುಮೇಶ ತಂದೆ ಮಲ್ಲಪ್ಪ ಮಡ್ಡೆರ 8) ಭೀಮೇಶ ತಂದೆ ಹನುಮಂತಪ್ಪ ಮಡ್ಡೆರ 9) ರಾಜ ತಂದೆ
ಹಿರೇ ಭೀಮಪ್ಪ ತಳವಾರ 10) ವೆಂಕಟೇಶ ತಂದೆ ಮಾರೆಪ್ಪ ತಳವಾರ 11) ಹನುಮಂತ ತಂದೆ ಈರಪ್ಪ ನಾಯಿಕುನ್ನಿ
12) ಶರಣಪ್ಪ ತಂದೆ ಭೀಮೇಶ ಬಾರಕೇರ 13) ಬಸವರಾಜ ತಂದೆ ಯಂಕೋಬ ಪುಜಾರಿ ಎಲ್ಲರೂ ಸೇರಿಕೊಂಡು
ಬಂದು ಕಾಂಗ್ರೇಸ ಕಾರ್ಯಕರ್ತರಿಗೆ ಅಡ್ಡಗಟ್ಟಿ ನಿಲ್ಲಿಸಿ ನೀವು ನಮ್ಮೂರಿನಲ್ಲಿ ಬರಬೇಡಿರಿ ಅಂತಾ ಕಾಂಗ್ರೇಸ್
ಕಾರ್ಯಕರ್ತರೊಂದಿಗೆ ಗಲಾಟೆ ಮಾಡುತ್ತಿದ್ದರು ಆಗ ನಾನು ಬಿಡಿಕೊಳ್ಳಲು ಹೋದಾಗ್ಗೆ ಆರೋಪಿ ನಂ 7,
8, 11, 12 ಇವರು ನನಗೆ ತಡೆದು ನಿಲ್ಲಿಸಿ ನಿನ್ನದೇನು ಇದರಲ್ಲಿ ಇರುತ್ತದೆ ಲೇ ಡಂಬರ ಸೋಳೆ ಮಗನೇ
ಅಂತಾ ಜಾತಿ ನಿಂದನೆ ಮಾಡಿದ್ದಾಗ್ಗೆ ನನಗೆ ಬಡೆಯುವುದನ್ನು ನೋಡಿದ ಶರಣೇಗೌಡ ತಂದಿ ಮರೇಗೌಡ, ಶರಣೆಗೌಡ
ತಂದಿ ಚಿಕ್ಕವೀರನಗೌಡ, ಚನ್ನಪ್ಪ ತಂದಿ ಗುರುಲಿಂಗಪ್ಪ ಕೆಂಡದ, ವಿರುಪನಗೌಡ ತಂದಿ ಚಿಕ್ಕವೀರನಗೌಡ
6) ನಾಗಪ್ಪ ತಂದೆ ಆದೆಪ್ಪ ಬುಡಕುಂಟಿ ರವರು ನನ್ನ ರಕ್ಷಣೆಗೆ ಬಂದಾಗ್ಗೆ ಎಲ್ಲಾ ಆರೋಪಿತರು ಸೇರಿ ತಾವು
ತಂದಿದ್ದ ಮಚ್ಚ ಮತ್ತು ರಾಡುಗಳನ್ನು ತೆಗೆದುಕೊಂಡು ಬಿಲ್ಗಾರ ಕುಟುಂಬದವರು ಶರಣೇಗೌಡ ಮಾಲೀಪಾಟೀಲ್
ಈತನು ಕಾರಟಗಿ ವಾರ್ಡ ನಂ 21 ರಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಮತಯಾಚನೆ ಮಾಡಿದ್ದರಿಂದ ಅದೇ ರಾಜೀಯ
ದ್ವೇಷದಿಂದ ಶರಣೇಗೌಡ ಇವರಿಗೆ ಕೊಲೆ ಮಾಡುವ ಉದ್ದೇಶದಿಂದ ಆಯುಧಗಳಿಂದ ಹೊಡೆದು ತೀವ್ರವಾದ ಗಾಯಗೊಳಿಸಿ ಶರಣೇಗೌಡನಿಗೆ ಹೊಡೆಯುವಾಗ ಆತನ ಕೊರಳಲ್ಲಿ ಇದ್ದ 3
ತೊಲೆ ಬಂಗಾರದ ಚೈನು ಸರವನ್ನು ಮತ್ತು 50,000=00 ರೂ.ಹಣವನ್ನು ಮತ್ತು ನನ್ನ 2 ತೊಲೆ ಬಂಗಾರದ ಸರವನ್ನು ಕಿತ್ತಿಕೊಂಡು ಹೋಗಿರುತ್ತಾರೆ. ಈ
ಘಟನೆಯಲ್ಲಿ ನನಗೆ ಮತ್ತು ಶರಣಗೌಡ ಮತ್ತು ಶರಣೇಗೌಡ ತಂದಿ ಚಿಕ್ಕವೀರನಗೌಡ ಇತರರಿಗೆ ತಿವ್ರವಾದ ಗಾಯಗಳಾಗಿದ್ದರಿಂದ
ಶರಣೇಗೌಡ ತಂದಿ ಚಿಕ್ಕವೀರನಗೌಡನ ಸ್ಥಿತಿ ಚಿಂತಾ ಜನಕವಾಗಿದ್ದರಿಂದ ಆತನಿಗೆ ಹೆಚ್ಚಿನ ಚಿಕಿತ್ಸೆ ಕುರಿತು
ಕಳುಹಿಸಿಕೊಟ್ಟು ನಂತರ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 112/2016 ಕಲಂ 457, 380 ಐ.ಪಿ.ಸಿ:.
ದಿನಾಂಕ 27-4-2016 ರಂದು ಮುಂಜಾನೆ 10-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಸೈಯದ್ ಹುಸೇನ್ ತಂದೆ ಸೈಯದ ಅಲಿ ಮುಲ್ಲಾರ, ವಯಾ 40 ವರ್ಷ ಜಾತಿ ಮುಸ್ಲಿಂ
ಉ : ವ್ಯಾಪಾರ (ಕಿರಾಣಿ ಅಂಗಡಿ ) ಸಾ : 5 ನೇ ವಾರ್ಡ ತಂಗಡಗಿ ಮನೆ ಹತ್ತಿರ ಕನಕಗಿರಿ ರವರು ಠಾಣೆಗೆ
ಹಾಜರಾಗಿ ತಮ್ಮದೊಂದು ಲಿಖಿತ ಪಿರ್ಯಾದಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕ 26-04-2016 ರಂದು
11-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ, ಅಕ್ಕಳೊಂದಿಗೆ ನಮ್ಮ ಮನೆಯಲ್ಲಿ ಊಟ ಮಾಡಿ ನಮ್ಮ
ಮನೆಯ ಮುಖ್ಯ ಬಾಗಿಲಿಗೆ ಬೀಗ ಹಾಕಿ ನಾವೆಲ್ಲರೂ ನಮ್ಮ ಮನೆಯ ಮಾಳಿಗೆಯ ಮೇಲೆ ಮಲಗಿಕೊಂಡಿದ್ದೇವು. ಇಂದು
ದಿನಾಂಕ 27-04-2016 ರಂದು ಮದ್ಯರಾತ್ರಿ 1-30 ಗಂಟೆಯ ಸುಮಾರಿಗೆ ನಾನು ಮೂತ್ರ ವಿಸರ್ಜನೆ ಮಾಡಲು
ಕೆಳಗೆ ಇಳಿದು ಮೂತ್ರ ವಿಸರ್ಜನೆ ಮಾಡಿ ಪುನ : ಮಲಗಲು ಮಾಳಿಗೆ ಏರುವಾಗ ಆ ಸಮಯದಲ್ಲಿ ಮನೆಯ ಮುಖ್ಯ
ಬಾಗಿಲು ಮುಚ್ಚಿದ್ದು ಕಂಡು ಬಂದಿರುತ್ತದೆ. ಬೆಳಗ್ಗೆ 6-30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ
ಹೆಂಡತಿ ಎದ್ದು ಕೆಳಗೆ ಇಳಿದು ನೋಡಲಾಗಿ, ಮನೆಯ ಬಾಗಿಲು ಸ್ವಲ್ಪ ಕದ ತೆರೆದಿರುವುದನ್ನು ಕಂಡು ನಾವು
ಗಾಬರಿಯಾಗಿ ಹೋಗಿ ನೋಡಲಾಗಿ, ನೆಲದ ಮೇಲೆ ದಿಂಬಿನ ಇಟ್ಟು ಅದರ ಮೇಲೆ ಜೋಡು ಅಲಾಮರವನ್ನು ಮಲಗಿಸಿದ್ದು,
ಅದರ ಒಂದು ಡೋರ್ ಸಂಪೂರ್ಣ ಕಡೆಗೆ ಬಂದಿದ್ದು, ಇನ್ನೊಂದು ಡೋರ್ ಅದರಲ್ಲಿಯೇ ಇದ್ದು, ಅದರೊಳಗೆ ಇದ್ದ
ಕೆಳಗೆ ನಮೂದು ಮಾಡಿದ ನಗದು ಹಣ, ಬಂಗಾರ, ಬೆಳ್ಳಿ ಸಾಮಾನುಗಳನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ
ಮಾಡಿಕೊಂಡು ಹೋಗಿರುವದು ಕಂಡು ಬಂದಿರುತ್ತದೆ. 1] ಮನೆ ಕಟ್ಟುವ ಸಲುವಾಗಿ ಬ್ಯಾಂಕಿನಿಂದ ಡ್ರಾ ಮಾಡಿದ
ಹಣ ನಗದು ಹಣ ರೂ.1,80,000/- 2] 1 ತೊಲೆ ಬಂಗಾರದ ಗುಂಡಿನ ಟಿಕಿ, ಜಬ್ಬಕಿ (ಅರ್ದ, ಅರ್ಧ ತೊಲೆ)
ಅಂ.ಕಿ.ರೂ.20,000/- 3] 1 ತೊಲೆ ಬಂಗಾರದ ಹುಡುಗರ ಕಿವಿ ರಿಂಗ್ಗಳು 5 ಜೊತೆ ಅ.ಕಿ.ರೂ.
20,000=00 4] 35 ತೊಲೆಯ ಬೆಳ್ಳಿಯ ಕಾಲು ಚೈನ್ಗಳು ಮತ್ತು ಕಡಗ ದೊಡ್ಡವು ಅಂ.ಕಿ.ರೂ.10,500=00
ಈಗ್ಗೆ ಒಟ್ಟು ಅಂ.ಕಿ.ರೂ. 2,30,500=00 ಬೆಲೆ ಬಾಳವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವದು
ಕಂಡು ಬಂದಿದ್ದು, ಕಾರಣ ಇಂದು ದಿನಾಂಕ 27-04-2016 ರಂದು ಮದ್ಯರಾತ್ರಿ 1-30 ಗಂಟೆಯಿಂದ ದಿನಾಂಕ
ಬೆಳಗ್ಗೆ 6-30 ಗಂಟೆಯ ಅವಧಿಯಲ್ಲಿ ನಮ್ಮ ಮನೆಯ ಅಲಮಾರದಲ್ಲಿ ಇಟ್ಟಿದ್ದ ನಗದು ಬಂಗಾರ, ಬೆಳ್ಳಿಯ ಸಾಮಾನುಗಳು
ಅ.ಕಿ.ರೂ.2,30,500/- ಗಳ ಬೆಲೆ ಬಾಳವುದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರಿಂದ
ಅವರನ್ನು ಪತ್ತೆ ಹಚ್ಚಿ ಕಳ್ಳತನವಾದ ಬೆಳ್ಳಿ-ಬಂಗಾರ, ಹಣವನ್ನು ನಮಗೆ ಕೊಡಲು ವಿನಂತಿ ಅಂತಾ ಮುಂತಾಗಿ
ನೀಡಿದ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
6] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 123/2016 ಕಲಂ 302, 109 ಐ.ಪಿ.ಸಿ:.
ದಿನಾಂಕ: 27-04-2016
ರಂದು 11-00 ಎ.ಎಂ. ಗಂಟೆಗೆ ನ್ಯಾಯಾಲಯದ ಖಾಸಗಿ ಪಿರ್ಯಾದಿ ಸಂಖ್ಯೆ: 75/2014 ನೇದ್ದು ಸ್ವೀಕೃತವಾಗಿದ್ದು
ಅದರ ಸಾರಾಂಶವೆನೆಂದರೆ. ಪಿರ್ಯಾದಿಯ ಗಂಡನಾದ ದಿ.ಅಂಬಣ್ಣ ಈತನು ಒರಿಯಂಟಲ್ ಕಂಪನಿಯಲ್ಲಿ ಕೆಲಸಕ್ಕೆ
ಹೋಗುತ್ತಿದ್ದು, ಆರೋಪಿ ಬಾಗಲೆವ್ವ ಸಹ ಅಲ್ಲಿಯೇ ಕೆಲಸಕ್ಕೆ ಹೋಗುತ್ತಿದ್ದು, ಇಬ್ಬರೂ ಸಲುಗೆಯಿಂದ
ಇದ್ದು, ಇದರಿಂದ ಆರೋಪಿ ಬಾಗಲೆವ್ವಳ ಗಂಡನಾದ ಬಸವರಾಜ ಮತ್ತು ಆತನ ಸಂಬಂಧಿಕರು ಬಾಗಲೆವ್ವಳಿಗೆ ಕೆಲಸಕ್ಕೆ
ಹೋಗದಂತೆ ಮತ್ತು ದಿ.ಅಂಬಣ್ಣನಿಗೂ ಕೆಲಸಕ್ಕೆ ಹೋಗದಂತೆ ಹೇಳಿ ಜೀವದ ಬೆದರಿಕೆ ಹಾಕಿದ್ದು, ನಂತರ
11-04-2014 ರಂದು ಬೆಳಿಗ್ಗೆ 9-00 ಗಂಟೆ ಸುಮಾರಿಗೆ ಬಾಗಲೆವ್ವ ಈಕೆಯು ದಿ.ಅಂಬಣ್ಣನನ್ನು ಮನೆಗೆ
ಬಂದು ಕರೆದುಕೊಂಡು ಹೋಗಿದ್ದು ನಂತರ ರಾತ್ರಿಯಾದರೂ ಅಂಬಣ್ಣ ಈತನು ವಾಪಸ್ ಮನೆಗೆ ಬರದೇ ಇದ್ದರಿಂದ
ಅಲ್ಲಲ್ಲಿ ಹುಡುಕಾಡಿದರೂ ಆತನು ಸಿಗದೇ ಇದ್ದು, ನಂತರ ದಿನಾಂಕ. 12-04-2014 ರಂದು ಬೆಳಿಗ್ಗೆ
5-00 ಗಂಟೆ ಸುಮಾರಿಗೆ ಮೊಬೈಲ್ ಮುಖಾಂತರ ಅಂಬಣ್ಣನನ್ನು ದೊಡ್ಡಪ್ಪ ಚಳಗೇರಿ ರವರ ಹೊಲದಲ್ಲಿ ಹೊಡೆದು
ಹಾಕೀವಿ ಸತ್ತಾನಾ ಬದುಕ್ಯಾನಾ ಹೋಗಿ ನೋಡು ಅಂತಾ ತಿಳಿಸಿದ ಮೇರೆಗೆ ಹೋಗಿ ನೋಡಲಾಗಿ ಅಂಬಣ್ಣ ತನು ಮೃತಪಟ್ಟಿದ್ದು,
ಸದರಿ ಆರೋಪಿತರೆಲ್ಲರೂ ಕೂಡಿಕೊಂಡು ಫಿರ್ಯಾಧಿದಾರಳ ಗಂಡನಾದ ಅಂಬಣ್ಣ ಈತನನ್ನು ಕೊಲೆ ಮಾಡಿದ್ದು
ಕಾರಣ ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
7] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 134/2016 ಕಲಂ
143, 147, 148, 448, 323, 324, 354, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ:- 27-04-2016 ರಂದು ಸಾಯಂಕಾಲ 4:00 ಗಂಟೆಗೆ ಫಿರ್ಯಾದಿದಾರ ಶ್ರೀ ಚೆನ್ನಬಸವ ತಾಯಿ ಪಾರ್ವತೆಮ್ಮ ಪುಜಾರ, ವಯಸ್ಸು: 33 ವರ್ಷ ಜಾತಿ: ಮಾದಿಗ,
ಉ: ಖಾಸಗಿ ನೌಕರ, ಸಾ: ವೆಂಕಟಗಿರಿ ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ತಮ್ಮ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ." ನಿನ್ನೆ ದಿನಾಂಕ:
26-04-2016 ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ನಮ್ಮೂರಿನ 1] ಜಡಿಸ್ವಾಮಿ ತಂದೆ ದಿ: ಗಿಡ್ಡಪ್ಪ
41 ವರ್ಷ 2] ಮಹಾದೇವಪ್ಪ ತಂದೆ ದಿ: ಗಿಡ್ಡಪ್ಪ ಪುಜಾರ, ವಯಸ್ಸು: 47 ವರ್ಷ 3] ನಾಗಮ್ಮ ಗಂಡ ದಿ:
ಸುಕುಮುನಿಯಪ್ಪ ಪುಜಾರ, 48 ವರ್ಷ 4] ಮಹಾದೇವಪ್ಪ ತಂದೆ ದಿ: ಸುಕುಮುನಿಯಪ್ಪ 25 ವರ್ಷ 5] ಗೌರಮ್ಮ
ಗಂಡ ಜಡೆಸ್ವಾಮಿ ಪುಜಾರ 30 ವರ್ಷ 6] ಗಾಳೆಮ್ಮ ಗಂಡ ಮಹಾದೇವಪ್ಪ ಪುಜಾರ 40 ವರ್ಷ 7] ಮಾಳವ್ವ ಗಂಡ
ಗಿಡ್ಡಪ್ಪ ಪುಜಾರ, 44 ವರ್ಷ 8] ಹಿರೇಮರಿಯಮ್ಮ ತಾಯಿ ದ್ಯಾವಮ್ಮ ಪುಜಾರ, 30 ವರ್ಷ ಇವರೆಲ್ಲರೂ ಆಕ್ರಮ
ಕೂಟ ರಚಿಸಿಕೊಂಡು ಕೈಯಲ್ಲಿ ಕೊಡ್ಲಿ, ಕುಡುಗೋಲು, ಕಟ್ಟಿಗೆ, ಕಲ್ಲು, ಮತ್ತು ಇನ್ನಿತರ ಮಾರಕಾಸ್ತ್ರಗಳನ್ನು
ಹಿಡಿದುಕೊಂಡು ಏಕಾಏಕಿಯಾಗಿ ನಮ್ಮ ಮನೆಯ ಒಳಗಡೆ ನುಗ್ಗಿ ನನಗೆ ಮತ್ತು ನನ್ನ ತಾಯಿ ಪಾರ್ವತೆಮ್ಮ
52 ವರ್ಷ ಅಜ್ಜಿಯಾದ ಫಕೀರಮ್ಮ 75 ವರ್ಷ ಹಾಗೂ ತಮ್ಮಂದಿರಾದ ಮಹಾದೇವಪ್ಪ 22 ವರ್ಷ, ಯಂಕೋಬ 30 ವರ್ಷ
ಇವರುಗಳಿಗೆ “ ಲೇ ಸೂಳೆ ಮಕ್ಕಳ ನಮ್ಮ ಜಾಗದ ಮೇಲೆ ಸಿ.ಸಿ. ರಸ್ತೆಯನ್ನು ಹಾಕಿಸಿದ್ದೀರಿ ಸುಕ್ಕು ಏನಲೇ
ನಿಮ್ಮೌನ ಜೀವಂತ ಹೂತು ಹಾಕುತ್ತೇವೆ ” ಅಂತಾ ಬೈದಾಡುತ್ತಿರುವಾಗ ನಾನು ಮತ್ತು ನನ್ನ ತಮ್ಮಂದಿರು ನಾವೇಕೆ
ನಿಮ್ಮ ಜಾಗದಲ್ಲಿ ಸಿ.ಸಿ. ರಸ್ತೆ ಹಾಕಿಸೋಣ ರಸ್ತೆ ಬಗ್ಗೆ ನಮಗೇನು ಗೊತ್ತಿಲ್ಲಾ ಸರಕಾರದವರೇ ಸಿ.ಸಿ.
ರಸ್ತೆಯನ್ನು ಮಾಡಿಸಿದ್ದಾರೆ ಅವರಿಗೆ ಹೋಗಿ ಕೇಳಿ ಅಂತಾ ಹೇಳಿದ್ದಕ್ಕೆ “ ಲೇ ಸೂಳೆ ಮಕ್ಕಳಾ ಎದುರು
ಮಾತನಾಡುತ್ತೀಯಾ ” ಅಂತಾ ಜಡಿಸ್ವಾಮಿ ಈತನು ನನಗೆ ಮತ್ತು ನನ್ನ ತಮ್ಮನಿಗೆ ಹೊಡೆಬಡೆ ಮಾಡುತ್ತಿರುವಾಗ
ನನ್ನ ತಾಯಿ ಮತ್ತು ಅಜ್ಜಿ ಇಬ್ಬರೂ ಬಿಡಿಸಲು ಬಂದಾಗ ಅವರಿಗೂ ಸಹ ಮೈಕೈ ಮುಟ್ಟಿ ಕೂದಲು ಹಿಡಿದು ಎಳೆದಾಡಿ
ಮನಬಂದಂತೆ ಹೊಡೆಬಡೆ ಮಾಡಿರುತ್ತಾರೆ. ಆಗ ಅಲ್ಲಿಯೇ ಇದ್ದ ಗ್ರಾಮಸ್ಥರು ಬಂದು ಜಗಳ ಬಿಡಿಸಿದರು. ಆಗ
ಆರೋಪಿತರು “ ಲೇ ಸೂಳೆ ಮಕ್ಕಳಾ ಇಂದು ನಿಮ್ಮ ಹಣೆ ಬರಹ ಗಟ್ಟಿ ಇದೆ ಬೇರೆಯವರು ಬಂದು ನಿಮ್ಮನ್ನು ಕಾಪಾಡಿದ್ದಾರೆ
ಇನ್ನೊಂದು ಸಾರಿ ನಿಮ್ಮ ಒಬ್ಬೊಬ್ಬರನ್ನೆ ಯಾರೂ ಇರದ ಸ್ಥಳದಲ್ಲಿ ಮುಗಿಸಿಬಿಡುತ್ತೇವೆ ಹಾಗೂ ನಿವೇಲ್ಲಾ
ಊರು ಬಿಟ್ಟು ಹೋಗಬೇಕು ಇಲ್ಲವಾದಲ್ಲಿ ನಿಮ್ಮನ್ನು ಕತ್ತರಿಸಿ ಹಾಕುತ್ತೇವೆ ನಮ್ಮನ್ನು ಯಾರೂ ಏನು ಮಾಡಿಕೊಳ್ಳಲು
ಆಗುವದಿಲ್ಲಾ ” ಅಂತಾ ಕೇಕೆ ಹಾಕುತ್ತಾ ಹೊರಟು ಹೋದರು. ನಂತರ ಗಾಯಗೊಂಡ ನನ್ನ ತಾಯಿ ಮತ್ತು ಅಜ್ಜಿಯನ್ನು
ಚಿಕಿತ್ಸೆ ಕುರಿತು ಯಾವುದೋ ಒಂದು ಖಾಸಗಿ ವಾಹನದಲ್ಲಿ ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ಕರೆದುಕೊಂಡು
ಬಂದು ಸೇರಿಕೆ ಮಾಡಿದ್ದು ಇರುತ್ತದೆ. ನಾನು ಯಾವುದೇ ಚಿಕಿತ್ಸೆ ಪಡೆದುಕೊಂಡಿರುವದಿಲ್ಲಾ. ಗಾಯಗೊಂಡ
ನನ್ನ ತಮ್ಮಂದಿರಿಗೆ ಹಾಗೂ ತಾಯಿ, ಅಜ್ಜಿಗೆ ಚಿಕಿತ್ಸೆ ಮಾಡಿಸಿ ಈ ಬಗ್ಗೆ ಗ್ರಾಮದಲ್ಲಿ ಹಿರಿಯವರ ಹತ್ತಿರ
ಚೆರ್ಚಿಸಿ ಈ ದಿವಸ ತಡವಾಗಿ ಠಾಣೆಗೆ ಬಂದು ಈ ದೂರನ್ನು ಸಲ್ಲಿಸಿರುತ್ತೇನೆ.
8] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 135/2016 ಕಲಂ
143, 147, 148, 448, 323, 324, 354, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ: 27-04-2016 ರಂದು ರಾತ್ರಿ 7:00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಗಾಳೆಮ್ಮ
ಗಂಡ ಮಹಾದೇವಪ್ಪ ಪುಜಾರ ವಯಸ್ಸು: 45 ವರ್ಷ ಜಾತಿ: ಮಾದಿಗ, ಉ: ಕೂಲಿಕೆಲಸ ಸಾ: ವೆಂಕಟಗಿರಿ ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ
ಬೆರಳಚ್ಚು ಮಾಡಿಸಿದ ದೂರನ್ನ ಸಲ್ಲಿಸಿದ್ದು ಅದರ ಸಾರಾಂಶ ಏನಂದರೆ, ನಿನ್ನೆ ದಿನಾಂಕ: 26-04-2016 ರಂದು ರಾತ್ರಿ 9:30 ಗಂಟೆಯ ಸುಮಾರಿಗೆ
ನನ್ನ ಮನೆಯ ಪಕ್ಕದಲ್ಲಿರುವ ಆರೋಪಿತರ ಮನೆ ಇದ್ದು ಅವರ ಮನೆಯ ಹತ್ತಿರ ಸಿಸಿ ರೋಡ ಬಂದಿದ್ದರಿಂದ
ಅದರ ಬದಲಾಗಿ ನಾವು ಬೇಸ್ ಮೆಂಟ್ ಹಾಕಿದ್ದ ಜಾಗೆಯ ಮೇಲೆ ಸಿ.ಸಿ. ರೋಡ ಮಾಡಿಸಿದ್ದು ಯಾಕೇ ಅಂತಾ
ಕೇಳಿದ್ದಕ್ಕೆ 1] ಚೆನ್ನಬಸವ 2] ನಾಗಮ್ಮ 3] ಗೋವಿಂದ 4] ನಿರ್ಮಲ 5] ಶಿವರಾಮ 6] ಹುಲಿಗೆಮ್ಮ
(ಹೆಂಡತಿ ) 7] ಮಹಾದೇವ 8] ತಿಮ್ಮಣ್ಣ 9] ಪಾರ್ವತೆಮ್ಮ 10] ಹುಲಿಗೆಮ್ಮ ಇವರೆಲ್ಲರೂ ಆಕ್ರಮ ಕೂಟ
ರಚಿಸಿಕೊಂಡು ನಮ್ಮ ಮನೆಯಲ್ಲಿ ಅತೀಕ್ರಮ ಪ್ರವೇಶ ಮಾಡಿ ಲೇ ಸೂಳೆ ಸದರಿ ಜಾಗೆಯು ರಸ್ತೆಗೆ
ಸಂಭಂಧಪಟ್ಟಿದ್ದು ಅದನ್ನೇನು ಕೇಳಲು ಬಂದಿಯಾ " ಅಂತಾ ಹೇಳಿ ನನ್ನನ್ನು ಹಾಗೂ
ಕುಟುಂಬದವರೆಲ್ಲರನ್ನು ಹೊರಗಡೆ ಎಳೆದು ಹಾಕಿ ನನ್ನ ಮೇಲೆ ಇರುವ ಸೀರೆ ಕುಬಸ ಹರಿದು ಹಾಕಿ
ಮಾರಕಾಸ್ತ್ರಗಳಿಂದ ( ಕೊಡಲೆ ಕುಡುಗೋಲು ) ಇತ್ಯಾದಿಗಳನ್ನು ಸಾಮಾಗ್ರಿಗಳನ್ನು ಹಿಡಿದುಕೊಂಡು
ಬಂದು ಹಲ್ಲೆ ಮಾಡಿ ನಿಮ್ಮನ್ನು ಇಂದು ಜೀವಂತ ಉಳಿಸುವದಿಲ್ಲಾ ಎಂದು ಕೊಲೆ ಬೆದರಿಕೆ
ಹಾಕಿರುತ್ತಾರೆ. ರಾತ್ರಿಯಾಗಿದ್ದರಿಂದ ತಡವಾಗಿ ಆಸ್ಪತ್ರೆಗೆ ಬಂದು ಚಿಕಿತ್ಸೆಪಡೆದುಕೊಂಡು
ಮನೆಯಲ್ಲಿ ಚೆರ್ಚಿಸಿ ದೂರು ನೀಡಲು ತಡವಾಗಿದೆ. ಕಾರಣ ಮಾನ್ಯರು ನನಗೆ ಹಾಗೂ ನನ್ನ ಕುಟುಂಬಕ್ಕೆ
ಅವಾಚ್ಯ ಶಬ್ದಗಳಿಂದ ಬೈದಾಡಿ ಮೈಕೈ ಮುಟ್ಟಿ ಎಳೆದಾಡಿ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದ 10
ಜನರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ
ಕೈಗೊಂಡಿದ್ದು ಇರುತ್ತದೆ.
0 comments:
Post a Comment