1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 133/2016 ಕಲಂ: 78(3) Karnataka Police Act.
ದಿನಾಂಕ: 25-04-2016 ರಂದು ರಾತ್ರಿ 8:00 ಗಂಟೆಗೆ ಶ್ರೀ ಟಿ.ಜಿ. ನಾಗರಾಜ ಎ.ಎಸ್.ಐ. ರವರು
ಠಾಣೆಗೆ ಹಾಜರಾಗಿ ಮೂಲ ಪಂಚನಾಮೆ ಹಾಗೂ ವರದಿಯೊಂದಿಗೆ ಇಬ್ಬರು ಆರೋಪಿತರನ್ನು ಹಾಜರಪಡಿಸಿದ್ದು
ಅದರ ಸಾರಾಂಶ ಈ ಪ್ರಕಾರ ಇದೆ. " ಇಂದು ದಿನಾಂಕ:- 25-04-2016 ರಂದು ರಾತ್ರಿ ಗಂಗಾವತಿ
ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮನಗರ ಗ್ರಾಮದ ಬಸ್ ನಿಲ್ದಾಣದ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದಿದ್ದು, ಮಾನ್ಯ ಡಿ.ಎಸ್.ಪಿ ಸಾಹೇಬರು ಹಾಗೂ ಸಿಪಿಐ ಸಾಹೇಬರ ಮಾರ್ಗದರ್ಶನದ ಮೇರೆಗೆ ಪಿ.ಸಿ. 287, 323 ಎ.ಪಿ.ಸಿ. 77 ಕನಕಪ್ಪ ಹಾಗೂ ಇಬ್ಬರು ಪಂಚರು ಕೂಡಿಕೊಂಡು ಸರಕಾರಿ ಜೀಪ್ ನಂಬರ್:
ಕೆ.ಎ-37/ ಜಿ-307 ನೇದ್ದರಲ್ಲಿ ಠಾಣೆಯಿಂದ ಸಂಜೆ 6:00 ಗಂಟೆಗೆ ಹೊರಟು ಶ್ರೀರಾಮನಗರ ಗ್ರಾಮದ
ಎ.ಪಿ.ಎಂ.ಸಿ ಹತ್ತಿರ ಹೋಗಿ ಜೀಪ್ನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ನೋಡಲಾಗಿ ನಮಗೆ
ಮಾಹಿತಿ ಇದ್ದ ಪ್ರಕಾರ ಶ್ರೀರಾಮನಗರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ
ಜನರು ಸೇರಿದ್ದು,
ಅವರಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಜನರಿಗೆ 1-00 ರೂಪಾಯಿಗೆ
80-00 ರೂಪಾಯಿ ಕೊಡುತ್ತೇನೆೆ, ಅದೃಷ್ಟದ ಮಟಕಾ
ನಂಬರ್ಗಳಿಗೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗುತ್ತಾ ಜನರನ್ನು ಕೂಗುತ್ತಿದ್ದನು, ಹಾಗೂ ಇನ್ನೂಬ್ಬನು ಜನರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ
ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಪಟ್ಟಿಯನ್ನು ಬರೆದುಕೊಳ್ಳುತ್ತಾ ಅದೃಷ್ಠದ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಸಂಜೆ 6-30 ಗಂಟೆಯಾಗಿದ್ದು ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಮಟಕಾ ಜೂಜಾಟದಲ್ಲಿ
ತೊಡಗಿದ್ದವರು ಸಿಕ್ಕಿ ಬಿದ್ದಿದ್ದು, ಉಳಿದ ಜನರು ಅಲ್ಲಿಂದ
ಓಡಿ ಹೋದರು. ವಿಚಾರಿಸಲಾಗಿ ಮಟಕಾ ಪಟ್ಟಿ ಬರೆದುಕೊಳ್ಳುತ್ತಿದ್ದವನು ತನ್ನ ಹೆಸರು 1)
ರಾಮಾಂಜನೇಯ ತಂದೆ ರಂಗಯ್ಯ.ಕೆ ವಯಸ್ಸು 65 ವರ್ಷ, ಜಾತಿ: ಕಮ್ಮಾ, ಉ: ಪಾನ್ಶಾಪ್ ಸಾ: 2 ನೇ
ವಾರ್ಡ ಶ್ರೀರಾಮನಗರ, ತಾ: ಗಂಗಾವತಿ ಅಂತಾ
ತಿಳಿಸಿದ್ದು,
ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 850/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ಪೆನ್ನು
ದೊರೆತಿದ್ದು ಇದೆ. ನಂತರ ಜನರನ್ನು ಕೂಗಿ ಕರೆಯುತ್ತಿದ್ದವನನ್ನು ವಿಚಾರಿಸಲಾಗಿ 2) ಕೃಷ್ಣ ತಂದೆ
ನಾಗೇಶ್ವರ್ ರಾವ್,
ವಯಸ್ಸು 36 ವರ್ಷ, ಜಾತಿ: ನೇಕಾರ, ಉ: ಸೋಡಾ ಅಂಗಡಿ, ಸಾ: 1 ನೇ ವಾರ್ಡ ಶ್ರೀರಾಮನಗರ, ತಾ: ಗಂಗಾವತಿ ಅಂತಾ
ತಿಳಿಸಿದ್ದು,
ಸದರಿಯವರಿಗೆ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀಯಾ ? ಅಂತಾ ವಿಚಾರಿಸಲು ಅವನು ಮಟಕಾ ಪಟ್ಟಿಯನ್ನು ಯಾರಿಗೂ ಕೊಡುವುದಿಲ್ಲಾ ತಾನೇ
ಇಟ್ಟುಕೊಳ್ಳುವುದಾಗಿ ತಿಳಿಸಿದನು. ಈ ಬಗ್ಗೆ ರಾತ್ರಿ 6:30 ರಿಂದ 7:30 ಗಂಟೆಯವರೆಗೆ
ಸ್ಥಳದಲ್ಲಿಯೇ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತನೊಂದಿಗೆ ಠಾಣೆಗೆ ವಾಪಸ್ ಬಂದಿದ್ದು, ನಂತರ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 42/2016 ಕಲಂ: 304(ಎ) ಐ.ಪಿ.ಸಿ:
ದಿನಾಂಕ:26-04-2016 ರಂದು 7-00 ಪಿಎಂಕ್ಕೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ ಎಂ.ಎಲ್.ಸಿ.ಮಾಹಿತಿ
ಬಂದ ಮೇರೆಗೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದು, 8-30 ಪಿಎಂಕ್ಕೆ ಪಿರ್ಯಾದಿದಾರ ಕನ್ನಡದಲ್ಲಿ
ಬರೆದ ಒಂದು ಪಿರ್ಯಾದಿಯನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ತನ್ನ ಮಗನಾದ ಮೃತನಿಗೆ ಕೂಲಿ
ಕೆಲಸಕ್ಕೆಂದು ಇತರೇ ಊರಿನ ಜನರೊಂದಿಗೆ ಕುಕನೂರಿಗೆ ಆರೋಪಿ ಮಹಾಂತೇಶ ಇವರು ಕರೆದುಕೊಂಡು ಹೋಗಿ, ಆರೋಪಿ
ಚನ್ನಬಸಯ್ಯ ಇವರ ಮನೆಯ ಗೋಡೆಯನ್ನು ಕೆಡವಿದ್ದು, ಕೆಲಸ ಮುಗಿಸಿ ಮನೆಗೆ ಹೋಗುವಾಗ ಆರೋಪಿತರು ಇನ್ನು
ಉಳಿದ ಗೋಡೆಯನ್ನು ಕೆಡವಿ ಹೋಗಬೇಕು ಅಂತಾ ತಿಳಿಸಿದ್ದು, ಆ ಗೋಡೆ ಬೀಳುತ್ತದೆ ರಕ್ಷಣೆ ಇಲ್ಲಾ ಅಂತಾ
ಹೇಳಿದರೂ ಕೂಡಾ ಗೋಡೆ ಬೀಳಿಸಲು ಕೂಲಿಕಾರರಿಗೆ ಒತ್ತಾಯ ಮಾಡಿದ್ದು, ಮೃತ ಮತ್ತು ಇತರರು ಗೋಡೆ ಕೆಡವುತ್ತಿರುವಾಗ
ಗೋಡೆಯು ಒಮ್ಮಿಂದೊಮ್ಮೇಲೆ 4-30 ಪಿಎಂಕ್ಕೆ ಬಿದ್ದಿದ್ದು, ಉಳಿದವರು ಓಡಿಹೋಗಿದ್ದು, ಆದರೆ, ಮೃತ ಗೋಡೆಯ
ಕೆಳಗೆ ಸಿಕ್ಕಿಕೊಂಡಿದ್ದರಿಂದ ಗೋಡೆ ಬೀಮ್ ಸಮೇತ ಬಿದ್ದು, ಮೃತ ಭಾರೀ ಗಾಯಗೊಂಡಿದ್ದು, ಆತನಿಗೆ ಕುಕನೂರ
ಸರ್ಕಾರೀ ಆಸ್ಪತ್ರೆಗೆ ತೋರಿಸಿ, ರೇಫರ್ ಮಾಡಿದ್ದರಿಂದ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆಯುವಾಗ 6-40 ಪಿಎಂಕ್ಕೆ ಮೃತಪಟ್ಟಿದ್ದು, ನನ್ನ ಮಗನ ಸಾವಿಗೆ ಆರೋಪಿತರಾದ ಚನ್ನಬಸಯ್ಯ ಮತ್ತು ಮಹಾಂತೇಶ
ಇವರು ಮುಂದೆ ನಿಂತು ಮುಂಜಾಗ್ರತಾ ಕ್ರಮ ವಹಿಸದೇ ನಿರ್ಲಕ್ಷ್ಯತನದಿಂದ ಗೋಡೆ ಕೆಡಲು ಹಚ್ಚಿದ್ದು ಕಾರಣವಿದ್ದು,
ಅವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರನ್ನು ಪಡೆದುಕೊಂಡು
ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
3] ಮುನಿರಾಬಾದ ಪೊಲೀಸ್
ಠಾಣೆ ಗುನ್ನೆ ನಂ. 95/2016 ಕಲಂ 279, 337 ಐ.ಪಿ.ಸಿ
ದಿನಾಂಕ: 26-04-2016 ರಂದು ಸಾಯಂಕಾಲ 6-30 ಗಂಟೆಗೆ ಹೊಸಪೇಟೆಯ ಪುತ್ತೂರು ಆಸ್ಪತ್ರೆಯಿಂದ ರಸ್ತೆ ಅಪಘಾತದಲ್ಲಿ ಗಾಯಾಳು ಚಂದ್ರಶೇಖರ ಚಿಕಿತ್ಸೆ ಕುರಿತು ದಾಖಲಾಗಿರುತ್ತಾರೆಂದು ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ನಾನು ಹೊಸಪೇಟೆಯ ಪುತ್ತೂರು ಆಸ್ಪತ್ರೆಗೆ ಬೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತದ್ದ ಗಾಯಾಳುವನ್ನು ಅವಲೋಕಿಸಿ ಅವನು ಹೇಳಿಕೆ ಕೊಡುವ ಸ್ಥೀತಿಯಲ್ಲಿ ಇರದ ಕಾರಣ ಗಾಯಾಳುವಿನ ಅಳಿಯನಾದ ಪಿರ್ಯಾದಿದಾರ ಮಧುಸೂದನ ಇವರು 7-20 ಪಿ.ಎಂ.ಕ್ಕೆ ಲಿಖಿತ ದೂರನ್ನು ಹಾಜರ ಪಡಿಸಿದ್ದು ಸಾರಾಂಶವೇನಂದರೆ, ದಿನಾಂಕ: 25-04-2016 ರಂದು 11-00 ಪಿ.ಎಂ.ಕ್ಕೆ ಅಗಳಕೇರ ಹತ್ತಿರ ಗಂಗಾವತಿಗೆ ಹೋಗುವ ರಸ್ತೆಯಲ್ಲಿರುವ ಸಾಯಿಡಾಬಾದ ಸಮೀಪ ಗಾಯಾಳು ಚಂದ್ರಶೇಖರ ಇವರು ನಡೆದುಕೊಂಡು ಮನೆಗೆ ಬರುತ್ತಿರುವಾಗ ಅದೇ ವೇಳೆಗೆ ಆರೋಪಿ ದೇವರಾಜ ಇತನು ತನ್ನ ಮೋಟರ ಸೈಕಲ್ ನಂ. ಕೆಎ35/ಆರ್-9198 ನೇದ್ದನ್ನು ಡಾಬಾದ ಕಡೆಯಿಂದ ಅತೀ ವೇಗ ಹಾಗೂ ಅಲಕ್ಷತನದಿಂದ ಓಡಿಸಿಕೊಂಡು ಬಂದು ಗಾಯಾಳುವಿಗೆ ಹಿಂದಿನಿಂದ ಟಕ್ಕರ ಪಡಿಸಿದ್ದರಿಂದ ಒಳಪೆಟ್ಟು ಆಗಿದ್ದು ಇರುತ್ತದೆ. ಕಾರಣ ಸದರಿ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಿರಿ ಎಂದು ಮುಂತಾಗಿ ಇದ್ದ ಪಿರ್ಯಾದಿಯನ್ನು ಪಡೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
4] ಕಾರಟಗಿ ಪೊಲೀಸ್
ಠಾಣೆ ಗುನ್ನೆ ನಂ. 96/2016 ಕಲಂ 498(ಎ) ಐ.ಪಿ.ಸಿ:.
ದಿನಾಂಕ:-26-04-2016 ರಂದು ರಾತ್ರಿ 8-40 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಅಕ್ಕಮ್ಮ ಗಂಡ ಶಿವಬಸನಗೌಡ ಸಿಂಧನೂರು ವಯಾ- 32 ವರ್ಷ, ಜಾ. ಲಿಂಗಾಯತ ಸಾ. ಲಕ್ಷ್ಮೀ ಕ್ಯಾಂಪ್ ಗಂಗಾವತಿ ಇವರು ಠಾಣೆಗೆ ಹಾಜರಾಗಿ ಒಂದು ದೂರು ನೀಡಿದ್ದು ಸದರಿ ದೂರಿನ ಸಾರಾಂಶವೆನಂದರೆ, ನನ್ನ ತವರು ಮನೆ ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮ ಇದ್ದು ನನ್ನನ್ನು ಈ ಹಿಂದೆ ಸಕ್ರಗೌಡ ತಂದೆ ಮಲ್ಲಿಕಾರ್ಜುನಗೌಡ ಮಾಲೀಪಾಟೀಲ್ ಇವರೊಂದಿಗೆ ಮದುವೆಯಾಗಿದ್ದು ನನ್ನ ಗಂಡ ವಿಪರೀತ ಕುಡಿತದ ಚೆಟಕ್ಕೆ ಬಿದ್ದಿದ್ದರಿಂದ ನನಗೆ ಮತ್ತು ನನ್ನ ಗಂಡನಿಗೆ ಜಗಳವಾಗಿದ್ದು ನಾನು ನನ್ನ ಗಂಡನಿಂದ ದೂರವಾಗಿದ್ದು ಈ ಮದ್ಯ ನನಗೆ ಸಿಂದನೂರ ಗ್ರಾಮದ ಶಿವಬಸನಗೌಡ ತಂದೆ ಶಿವನಗೌಡ ಸಿಂದನೂರ ಇವರೊಂದಿಗೆ ಪ್ರೇಮಾಂಕುರವಾಗಿ ಇವರನ್ನು 2015 ನೇ ಸಾಲಿನಲ್ಲಿ ಶ್ರಾವಣ ಶುಕ್ರವಾರದ ದಿನದಂದು ಮದುವೆಯಾಗಿದ್ದು ಇರುತ್ತದೆ ನಾನು ಮದುವೆಯಾದ ನಂತರ ನನ್ನನ್ನು ಸದರಿ ಶಿವಬಸನಗೌಡ ಇವರು ಕಾರಟಗಿಯ ರಾಮನಗದಲ್ಲಿ ಮನೆ ಮಾಡಿಟ್ಟಿದ್ದು ನಂತರ ಸ್ವಲ್ಪ ದಿನಗಳವರೆಗೆ ಚೆನ್ನಾಗಿ ನೋಡಿಕೊಂಡು ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕಳ ಕೊಟ್ಟಿದ್ದು ಗಂಗಾವತಿಯ ಲಕ್ಷ್ಮೀ ಕ್ಯಾಂಪದಲ್ಲಿ ಬಾಡಿಗೆ ಮನೆ ಮಾಡಿ ಇಟ್ಟಿದ್ದು ಇರುತ್ತದೆ. ಮದುವೆ ಯಾದಾಗಿನಿಂದ ನನ್ನ ಗಂಡ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದು ಇರುತ್ತದೆ ಆದರೆ ಇತ್ತಿಚಿಗೆ ಅಂದರೆ ಈಗ್ಗೆ 1 ತಿಂಗಳಿನಿಂದ ಸದರಿ ನನ್ನ ಗಂಡ ನನ್ನೊಂದಿಗೆ ವಿನಾಃಕಾರಣ ನನಗೆ ತೊಂದರೆ ಕೊಡುತ್ತಾ ಬಂದಿದ್ದು ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ವಿನಾಃಕಾರಣ ನನಗೆ ಬೈದಾಡುವುದು ಮತ್ತು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಿರುತ್ತಾನೆ ನಾನು ನನ್ನ ಗಂಡ ಮುಂದೆ ಸುದಾರಿಸಿಯಾನು ಅಂತಾ ಸುಮ್ಮನಿದ್ದೇನು. ಸದರಿ ನನ್ನ ಗಂಡನ ಈಗ್ಗೆ 20 ದಿನಗಳ ಹಿಂದೆ ಅಂದರೆ ದಿನಾಂಕ 04-04-2016 ರಂದು ನಾನು ಬಾಡಿಗೆ ಇದ್ದ ಮನೆಗೆ ಬಂದು ನನ್ನೊಂದಿಗೆ ವಿನಾಃಕಾರಣ ಏಕಾ ಏಕಿ ನನ್ನೊಂದಿಗೆ ಬಾಯಿ ಮಾಡ ಹತ್ತಿದನು ನಾನು ಈ ರೀತಿ ಮಾಡುವುದು ಸರಿ ಅಲ್ಲ ಅಂತಾ ತಿಳಿಸಿದರೂ ನನಗೆ ಅವಾಚ್ಯವಾಗಿ ಬೈದಾಡಿ ನೀನು ಎಲ್ಲಿಯಾದರೂ ಹೋಗಿ ಸಾಯಿ ನೀನು ಯಾರೋ ಏನೋ ನೀನು ಸತ್ತರೆ ನನಗೆ ಒಳ್ಳೆಯದೆ ಅಂತಾ ನನ್ನೊಂದಿಗೆ ಬಾಯಿ ಮಾಡಿ ಮನೆಯಿಂದ ಹೋಗಿದ್ದು ವಾಪಸ್ ನಾನು ಬಾಡಿಗೆ ಇರುವ ಮನೆಗೆ ಬಂದಿರುವುದಿಲ್ಲ ಮತ್ತು ನಾನು ಫೊನ್ ಮಾಡಿದರೂ ಸಹ ಕರೆಯನ್ನು ಸ್ವಿರಿಸುತ್ತಿಲ್ಲ ಕಾರಣ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಮಾಡಿ ಕೈಯಿಂದ ಹೊಡೆಬಡಿ ಮಾಡಿದ ನನ್ನ ಗಂಡನ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ವಿನಂತಿ ಅಂತಾ ಮುಂತಾಗಿ ನೀಡಿದ ದೂರನಿ ಸಾರಾಂಶದ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment