1] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 113/2016 ಕಲಂ: 279, 337, 338, 304(ಎ) ಐ.ಪಿ.ಸಿ: ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ 01-05-2016 ರಾತ್ರಿ
7-30 ಗಂಟೆಯ ಸುಮಾರಿಗೆ ರಾಮಚಂದ್ರ ಮುರಾರಿ ಹೆಚ್.ಸಿ 25 ರವರು ಕನಕಗಿರಿ ಸರಕಾರಿ ಆಸ್ಪತ್ರೆಗೆ ಭೇಟಿ
ನೀಡಿ ಅಲ್ಲಿಯ ಗಾಯಾಳು ಶ್ರೀಮತಿ ಮಲ್ಲಮ್ಮ ಗಂಡ ಗವಿಸಿದ್ದಪ್ಪ ಚಳ್ಳೂರ ಇವರದೊಂದು ಹೇಳಿಕೆಯನ್ನು ಪಡೆದು
ವಾಪಸ್ ಠಾಣೆಗೆ ರಾತ್ರಿ 9-00 ಗಂಟೆಗೆ ಹಾಜರುಪಡಿಸಿದ ಹೇಳಿಕೆ ಸಾರಾಂಶವೆನೆಂದರೇ, ದಿನಾಂಕ 01-05-2016 ರಂದು ಫಿಯರ್ಾದಿಯು
ತನ್ನ ಗಂಡ ಗವಿಸಿದ್ದಪ್ಪ ಮಗ ವಿನಯ ಹಾಗೂ ತಮ್ಮನ ಮಗ ಕರಿಯಣ್ಣ ಎಲ್ಲರೂ ಕೂಡಿಕೊಂಡು ತಮ್ಮ ಹಿರೋ ಸ್ಪ್ಲೆಂಡರ್
ಪ್ರೋ ಮೋಟಾರ್ ಸೈಕಲ್ ಸಂ.ಕೆ.ಎ37 ಡಬ್ಲ್ಯೂ 8607 ನೇದ್ದರಲ್ಲಿ ತವರು ಮನೆಯವರನ್ನು ಮಾತನಾಡಿಸಿಕೊಂಡು
ಬರಲೆಂದು ಮಧ್ಯಾಹ್ನ 4-30 ಗಂಟೆಯ ಸುಮಾರಿಗೆ ಪನ್ನಾಪುರ ಗ್ರಾಮದಿಂದ ಹೊರಟಿದ್ದು ನಮ್ಮ ಮೋ/ಸೈ ನ್ನು
ನನ್ನ ಗಂಡ ಗವಿಸಿದ್ಧಪ್ಪ ಈತನ ನಡೆಸುತ್ತಿದ್ದನು. ಕನಕಗಿರಿಯನ್ನು ದಾಟಿಕೊಂಡು ನಾವು ಹುಲಿಹೈದರ್ ಕಡೆಗೆ
ಹೋಗುತ್ತಿದ್ದಾಗ ಸಂಜೆ 6-00 ಗಂಟೆಯ ಸುಮಾರಿಗೆ ಕಿತ್ತೂರ ಚನ್ನಮ್ಮ ವೃತ್ತದ ಹತ್ತಿರದಲ್ಲಿ ನನ್ನ ಗಂಡನು
ನಮ್ಮ ಮೋಟಾರ್ ಸೈಕಲನ್ನು ರಿಸೇಸ್ ಮಾಡಲೆಂದು ರಸ್ತೆಯ ಎಡಬದಿಯಲ್ಲಿ ನಿಲ್ಲಿಸುವಷ್ಟರಲ್ಲಿಯೇ ಅದೇ ವೇಳೆಯಲ್ಲಿ
ಎದುರುಗಡೆಯಿಂದ ಒಂದು ಅಟೋ ಸಂ. ಕೆ.ಎ-37 ಎ.0351 ನೇದ್ದನ್ನು ಅದರ ಚಾಲಕನು ಅತೀ ವೇಗ ಹಾಗೂ ಅಲಕ್ಷ್ಯತನದಿಂದ
ನಡೆಸಿಕೊಂಡು ಬಂದು ನಮ್ಮ ಮೋಟಾರ ಸೈಕಲ್ಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿ ಅದರ ಚಾಲಕ ಓಡಿ ಹೋದನು ಇದರಿಂದಾಗಿ
ನನ್ನ ಗಂಡನ ತಲೆಗೆ ಮುಖಕ್ಕೆ ಹಾಗೂ ಕರಿಯಣ್ಣನಿಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು ಮತ್ತು ನನಗೆ ಗದ್ದದ
ಹತ್ತಿರ ಬಲಗಾಲಿನ ಹಿಮ್ಮಡಿಗೆ ಎದೆಗೆ ಹೊಡೆತ ಬಿದ್ದಿದ್ದು ಮತ್ತು ನನ್ನ ಮಗ ವಿನಯನಿಗೆ ಅಲ್ಲಲ್ಲಿ
ತರಚಿದ ಗಾಯಗಳಾಗಿರುತ್ತವೆ. ನಂತರ ಆಸ್ಪತ್ರೆಗೆ ಸಾಗಿಸುತ್ತಿರುವಾಗ ದಾರಿಯಲ್ಲಿ ನನ್ನ ಗಂಡ ಗವಿಸಿದ್ಧಪ್ಪ
ತಂದೆ ಯಮುನಪ್ಪ ಚಳ್ಳೂರ ವಯ.24 ವರ್ಷ ಜಾ.ಕುರುಬರು ಉ.ಒಕ್ಕಲುತನ ಸಾ.ಪನ್ನಾಪುರ ಮತ್ತು ಕರಿಯಣ್ಣ ತಂದೆ
ಬೆಟ್ಟಪ್ಪ ಗುರಿಕಾರ ವಯ. 03 ವರ್ಷ ಜಾ.ಕುರುಬರು ಸಾ.ಸಿರವಾರ ಇವರು ಮೃತಪಟ್ಟಿದ್ದು ಕಾರಣ ಅಟೋ ಸಂ.
ಕೆ.ಎ-37 ಎ.0351 ನೇದ್ದನ್ನು ಅತೀ ವೇಗ ಹಾಗೂ ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟಾರ್
ಸೈಕಲ್ಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿ ಓಡಿ ಹೋದ ಹೆಸರು ಮತ್ತು ವಿಳಾಸ ಗೊತ್ತಿರದ ಅಟೋ ಚಾಲಕನ ವಿರುದ್ಧ
ಸೂಕ್ತ ಕಾನುನು ಕ್ರಮವನ್ನು ಜರುಗಿಸಲು ವಿನಂತಿಯಿರುತ್ತದೆ. ಅಂತಾ ಮುಂತಾದ ಸಾರಾಂಶದ ಮೇಲಿನಿಂದ ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 43/2016 ಕಲಂ: 279, 337, 338 ಐ.ಪಿ.ಸಿ:.
ದಿನಾಂಕ:02-05-2016 ರಂದು 4-45 ಪಿಎಂಕ್ಕೆ ಕುಕನೂರ ಸರ್ಕಾರೀ ಆಸ್ಪತ್ರೆ, ಕುಕನೂರದಿಂದ
ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಪಿರ್ಯಾದಿದಾರನ ಹೇಳಿಕೆ ಪಿರ್ಯಾದಿಯನ್ನು
5-00 ಪಿಎಂದಿಂದ 6-00 ಪಿಎಂದವರೆಗೆ ಪಡೆದುಕೊಂಡಿದ್ದು, ಅದರ ಸಾರಾಂಶವೇನೆಂದರೆ, ಪಿರ್ಯಾದಿದಾರನು
ಆರೋಪಿ ಶ್ರೀಕಾಂತ ಈತನು ಚಲಾಯಿಸುತ್ತಿದ್ದ ಮೋ.ಸೈ. ನಂ;ಕೆಎ-35 ಹೆಚ್-5349 ನೇದ್ದರಲ್ಲಿ ಕುಳಿತು
ಬಳೂಟಗಿಯಿಂದ ಕುಕನೂರಿಗೆ ಹೊರಟಾಗ ಎದುರುಗಡೆಯಿಂದ ಆರೋಪಿತ ಪೀರಪ್ಪ ರಾಠೋಡ ಈತನು ಮೋ.ಸೈ. ನಂ:ಕೆಎ-35
ಕೆ-1220 ನೇದ್ದರಲ್ಲಿ ಹಿಂದೆ ವಿರೇಶ ರಾಠೋಡ ಈತನಿಗೆ ಕೂಡ್ರಿಸಿಕೊಂಡು ಕುಕನೂರಿನಿಂದ ಯಲಬುರ್ಗಾ ಕಡೆಗೆ
ಹೊರಟಿದ್ದು, ಎರಡು ಮೋಟಾರ್ ಸೈಕಲ್ ಚಾಲಕರು ತಮ್ಮ ತಮ್ಮ ಮೋಟಾರ್ ಸೈಕಲ್ ನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ
ಚಲಾಯಿಸಿಕೊಂಡು ಹೋಗಿ ರಾಜೂರಿನ ನೀರಿನ ಟ್ಯಾಂಕ್ ಹತ್ತಿರ ಮುಖಾಮುಖಿ ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ
ಎರಡು ವಾಹನದ ಸವಾರರಿಗೆ ಸಾದಾ ಸ್ವರೂಪದ ಹಾಗೂ ಹಿಂದೆ ಕುಳಿತವರಿಗೆ ಭಾರೀ ಸ್ವರೂಪದ ಗಾಯಗಳಾಗಿದ್ದು,
ಕಾರಣ, ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯನ್ನು
ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 75/2016 ಕಲಂ: 379
ಐ.ಪಿ.ಸಿ:.
ದಿನಾಂಕ: 01-05-2016 ರಂದು ಮುಂಜಾನೆ 11-30 ಗಂಟೆಗೆ ಫಿರ್ಯಾದಿದಾರರಾದ
ಫಕೃದ್ದೀನ ತಂದೆ ಅಲ್ಲಾಬಕ್ಷಿ ಸಾ: ಜಾಮೀಯಾ ಮಸೀದಿ ಹತ್ತಿರ ಹುಲಗಿ ತಾ:ಜಿ: ಕೊಪ್ಪಳ ಇವರು ಠಾಣೆಗೆ
ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೆ, ಫಿರ್ಯಾದಿದಾರು ದಿನಾಂಕ:
26-04-2016 ರಂದು ಮದ್ಯಾಹ್ನ 12-20 ಗಂಟೆ ಸುಮಾರಿಗೆ ಹೊಸಳ್ಳಿ ಗ್ರಾಮ ಪಂಚಾಯತಿಯವರು ನೀಡಿದ ತಮ್ಮ ಹೆಸರಿನಲ್ಲಿರುವ ಐದು
ಚೆಕ್ಗಳನ್ನು ಕೊಪ್ಪಳದ ಆಕ್ಸಿಸ್ ಬ್ಯಾಂಕಿಗೆ ಬಂದು ಆ ಚೆಕ್ಗಳನ್ನು ತಮ್ಮ ಅಕೌಂಟ್ಗೆ ವಗರ್ಾವಣೆ ಮಾಡಿಕೊಂಡು,
ಅದೇ ಬ್ಯಾಂಕಿನಲ್ಲಿ ನಗದು ಹಣ ರೂ 2,21,800=00 ಗಳನ್ನು ಡ್ರಾ ಮಾಡಿಕೊಂಡು ಅದರಲ್ಲಿ ರೂ
21,800=00 ಗಳನ್ನು ತಮ್ಮ ಪ್ಯಾಂಟಿನ ಜೇಬಿನಲ್ಲಿ ಇಟ್ಟುಕೊಂಡು ಉಳಿದ ಹಣ ರೂ 2,00,000=00 ಗಳನ್ನು
ಒಂದು ಪ್ಲಾಸ್ಟೀಕ್ ಕವರನಲ್ಲಿ ಹಾಕಿಕೊಂಡು ತಮ್ಮ ಮೋಟಾರ ಸೈಕಲ್ನ ಸೈಡ್ ಬ್ಯಾಗಿನಲ್ಲಿದ್ದ ಇನ್ನೊಂದು
ಪ್ಲಾಸ್ಟೀಕ್ ಕವರನಲ್ಲಿ ಹಾಕಿಕೊಂಡು ಬ್ಯಾಂಕ್ ಹತ್ತಿರ ಇದ್ದ ಕಲ್ಲಂಗಡಿ ಹಣ್ಣಿನ ಹತ್ತಿರ ನಿಲ್ಲಿಸಿ
ಹಣ್ಣನ್ನು ತಿನ್ನಲು ಹೋದಾಗ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಒಂದು ಮೋಟಾರ ಸೈಕಲ್ ಮೇಲೆ ಬಂಧು
ಫಿರ್ಯಾದಿದಾರರ ಮೋಟಾರ್ ಸೈಕಲ್ನ ಸೈಡ್ ಬ್ಯಾಗಿನಲ್ಲಿದ್ದ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
ನನ್ನ ಹಣವಿರುವ ಪ್ಲಾಸ್ಟೀಕ್ ಕವರನ್ನು ತೆಗೆದುಕೊಂಡು ಹೋದ ಆ ಅಪರಿಚಿತ ವ್ಯಕ್ತಿಗಳ ಚಹರೆ ಪಟ್ಟಿ ನನಗೆ
ಸರಿಯಾಗಿ ಕಂಡುಬರಲಿಲ್ಲಾ, ಆದರೆ ಮೋ ಸೈಕಲ್ನ ಮುಂದೆ ಕುಳಿತವನು ನೀಲಿ ಬಣ್ಣದ ಚೆಕ್ಸ್ ಶರ್ಟ ಹಾಕಿಕೊಂಡಿದ್ದು,
ಮತ್ತು ಹಿಂದೆ ಕುಳಿತವನು ಆರೆಂಜ್ ಕಲರ್ನ ಅರ್ಧ ತೋಳಿನ ಶರ್ಟ ಹಾಕಿಕೊಂಡಿದ್ದು ಕಂಡುಬಂದಿರುತ್ತದೆ.
ಮತ್ತು ಅವರ ಮೋಟಾರ್ ಸೈಕಲ್ ಕಪ್ಪು ಬಣ್ಣದು ಇರುತ್ತದೆ. ಕಾರಣ ಮಾನ್ಯರವರು ದಿನಾಂಕ: 26-04-2016 ರಂದು ಮದ್ಯಾಹ್ನ
2-10 ಗಂಟೆಗೆ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ನನ್ನ ಮೋಟಾರ ಸೈಕಲ್ನ ಸೈಡ್ ಬ್ಯಾಗಿನಲ್ಲಿದ್ದ
ನಗದ ಹಣ ರೂ 2,00,000=00 ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಕಾರಣ ಕಳ್ಳತನ ಮಾಡಿದ ಕಳ್ಳರನ್ನು
ಪತ್ತೇ ಮಾಡಿ ಕಳ್ಳತನವಾದ ನನ್ನ ಹಣವನ್ನು ಮರಳಿ ಕೊಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ.
ಅಂತಾ ಇರುವ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
4] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 139/2016 ಕಲಂ: 447, 323, 354, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ:- 01-05-2016 ರಂದು ಬೆಳಿಗ್ಗೆ 10:30 ಗಂಟೆಗೆ ಫೀರ್ಯಾದಿದಾರರಾದ ಶ್ರೀಮತಿ ಹುಲಿಗೆಮ್ಮ ಗಂಡ ಶರಣಬಸಪ್ಪ, ವಯಸ್ಸು 26 ವರ್ಷ, ಜಾತಿ: ನಾಯಕ ಉ: ಮುಖ್ಯ
ಅಡುಗೆದಾರಳು ಸಾ: ಚಿಕ್ಕಡಂಕನಕಲ್. ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ
ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ನಾನು ಚಿಕ್ಕಡೆಂಕನಕಲ್ ಗ್ರಾಮದಲ್ಲಿರುವ ಸರಕಾರಿ
ಪ್ರೌಢಶಾಲೆಯಲ್ಲಿ ಮುಖ್ಯ ಅಡುಗೆದಾರಳಾಗಿ ಕೆಲಸ ಮಾಡಿಕೊಂಡಿರುತ್ತೇನೆ. ನಾನು ದಿನಾಂಕ:- 28-06-2014 ರಂದು ಶಂಕರಗೌಡ ತಂದೆ ರುದ್ರಗೌಡ, ಸಾ: ಹಿರೇಡೆಂಕನಕಲ್ ಎಂಬುವವರಿಂದ ಚಿಕ್ಕಡೆಂಕನಕಲ್ ಗ್ರಾಮದ ಪಂಚಾಯತಿ
ಆಸ್ಥಿ ಸಂಖ್ಯೆ: 152/2 ರಲ್ಲಿ 35 x 25 ಅಡಿ ವಿಸ್ತೀರ್ಣದ ಖಾಲಿ ಪ್ಲಾಟನ್ನು ಖರೀದಿಸಿದ್ದು, ಈ ಬಗ್ಗೆ ಗ್ರಾಮ ಪಂಚಾಯತಿಯ ಡಿಮಾಂಡ್ ರಜಿಸ್ಟರನಲ್ಲಿ ನೋಂದಣಿ
ಮಾಡಿಸಿದ್ದು, ಇದರ ಆಸ್ಥಿ ಸಂಖ್ಯೆ: 152/2/ಬಿ ಅಂತಾ ಇರುತ್ತದೆ. ಆದರೆ ನಾನು ಖರೀದಿಸಿದ ಪ್ಲಾಟ್ ಗೆ ಯಾವುದೇ
ಸಂಬಂಧವಿರದ ಮತ್ತು ದಾಖಲೆಗಳು ಇರದ ಸಿದ್ದಮ್ಮ ದೇವದಾಸಿ ತಂದೆ ಹನುಮಂತಪ್ಪ ಜಾತಿ: ಚಲವಾದಿ ಇವಳು
ನನ್ನ ಪ್ಲಾಟನಲ್ಲಿ ಅತಿಕ್ರಮಿಸಿ ಶೆಡ್ ನ್ನು ಹಾಕಿಕೊಂಡಿರುತ್ತಾರೆ. ಈ ಶೆಡ್ ನ್ನು
ತೆರವುಗೊಳಿಸುವಂತೆ ಅವರಿಗೆ ತಿಳುವಳಿಕೆ ಹೇಳಿದರೂ ಸಹ ಕೇಳದೇ ಪ್ರತಿನಿತ್ಯ ಕುಡಿದು ಬಾಯಿಗೆ
ಬಂದಂತೆ ಅವಾಚ್ಯವಾಗಿ ಬೈದಾಡುತ್ತಾ ವಿಪರೀತಿ ತೊಂದರೆಯನ್ನು ನೀಡುತ್ತಿದ್ದಳು. ಇದರಿಂದ ನಿನ್ನೆ
ದಿನಾಂಕ:- 30-04-2016 ರಂದು ಮಧ್ಯಾಹ್ನ 2:30 ಗಂಟೆಯ ಸುಮಾರಿಗೆ ನಾನು, ನನ್ನ ಗಂಡ ಶರಣಬಸಪ್ಪ ಹಾಗೂ ಪ್ಲಾಟ್ ಖರೀದಿಗೆ ನೀಡಿದ ಶಂಕರಗೌಡ, ವಿರುಪಾಕ್ಷಗೌಡ, ಗ್ರಾ.ಪಂ. ಮೆಂಬರ್ ಹನುಮೇಶ ನಾಯಕ ಇವರುಗಳು ಮತ್ತು ಸಿದ್ದಮ್ಮ ದೇವದಾಸಿ-50 ವರ್ಷ ಹಾಗೂ ಅವಳ ಮಗನಾದ ಕೆರೆಯಪ್ಪ-30 ವರ್ಷ, ಸೊಸೆ ಲಕ್ಷ್ಮೀ ಗಂಡ ಕೆರೆಯಪ್ಪ-25 ವರ್ಷ ಇವರು ಕೂಡಿಕೊಂಡು ಪಂಚಾಯತಿ ಮಾಡಿ ಮಾತುಕತೆಯಾಡಿದಾಗ ಶೆಡ್ ಹಾಕಿದ ನಮ್ಮ 12 ಅಡಿ ಜಾಗೆಯ ಪೈಕಿ ನಮಗೆ 4 ಅಡಿ ಬಿಟ್ಟು, ಮಾನವತೆ ದೃಷ್ಠಿಯಿಂದ ಹಾಗೂ ಅವರು ಬಡವರಾಗಿದ್ದರಿಂದ 8 ಅಡಿ ಜಾಗೆಯನ್ನು ಅವರಿಗೆ ನಾವು ಬಿಟ್ಟುಕೊಡಲು ಒಪ್ಪಿದೆವು.
ಮೊದಲಿಗೆ ಅವರೂ ಸಹ ಮಾತಿಗೆ ಒಪ್ಪಿದರು. ಆದರೆ ನಂತರ ಸಂಜೆ 6:00 ಗಂಟೆಯ ಸುಮಾರಿಗೆ ಪುನ: ಸಿದ್ದಮ್ಮ, ಕರೆಯಪ್ಪ ಹಾಗೂ ಲಕ್ಷ್ಮೀ ಇವರುಗಳು ನಮಗೆ ಯಾವುದೇ ಜಾಗೆ
ಬಿಡುವುದಿಲ್ಲಾ ಲೇ ಸೂಳೇ ಮಕ್ಕಳೇ ನಮಗೆ ಕೃಷಿ ಕೂಲಿಕಾರರ ಸಂಘದ, ಸಿ.ಐ.ಟಿ.ಯು. ಸಂಘದ ಬೆಂಬಲ ಇದೆ ನೀವು ಈ ಜಾಗೆಯನ್ನು ಹೇಗೆ
ಬಿಡಿಸಿಕೊಳ್ಳುತ್ತೀರಾ ನೋಡಿಕೊಳ್ಳುತ್ತೇವೆ, ನೀವು ಊರಲ್ಲಿ ಹೇಗೆ ಬಾಳುವೆ ಮಾಡುತ್ತೀರಾ, ನಿಮ್ಮನ್ನು ಜೀವ ಸಹಿತ ಉಳಿಸುವುದಿಲ್ಲಾ ಅಂತಾ ಬಾಯಿಗೆ ಬಂದಂತೆ ಬೈದು ಜೀವದ ಬೆದರಿಕೆ
ಹಾಕಿದರು. ಆಗ ನಾನು, ನನ್ನ ಗಂಡ ಈ ರೀತಿ ಮನೆಯ ಹತ್ತಿರ ಬಾಯಿ ಮಾಡಬೇಡಿರಿ ಅಂತಾ ಹೇಳಿದ್ದಕ್ಕೆ ಮೂವರು
ಕೂಡಿ ನಮಗೆ ಕೈಗಳಿಂದ ಹೊಡಿ-ಬಡಿ ಮಾಡಿ ಮಾಡಿದರು. ಕೆರೆಯಪ್ಪನು ನನ್ನ ಮೈ ಕೈ ಮುಟ್ಟಿ, ಸೀರೆ ಹಿಡಿದು ಎಳೆದಾಡಿ ಬಡಿದು ಮಾನಭಂಗ ಮಾಡಿದನು. ಆಗ ಶಂಕರಗೌಡ.ಜಿ, ವಿರುಪಾಕ್ಷಗೌಡ ಮಾಲೀಪಾಟೀಲ್, ಗ್ರಾ.ಪಂ. ಮೆಂಬರ್ ಹನುಮೇಶ ನಾಯಕ, ಭರಮಗೌಡ ಪೊಲೀಸ್ ಪಾಟೀಲ್ ಇವರುಗಳು ಬಂದು ಅವರಿಗೆ ಬುದ್ದಿ ಹೇಳಿ
ಕಳುಹಿಸಿದರು. ಈ ಬಗ್ಗೆ ನಾವು ಊರಲ್ಲಿ ಪಂಚಾಯತಿ ಮಾಡಬೇಕೆಂದು ಸುಮ್ಮನಿದ್ದೆವು. ಆದರೆ
ನಾವು ದೂರು ನೀಡುತ್ತೇವೆಂದು ತಿಳಿದು ನಿನ್ನೆ ದಿವಸ ಅವರು ಠಾಣೆಗೆ ಬಂದು ನಾವು ಅವರ ಮೇಲೆ ಹಲ್ಲೆ
ಮಾಡಿದ್ದೇವೆಂದು ಸುಳ್ಳು ಆಪಾದನೆ ಮಾಡಿ ಹೋಗಿರುತ್ತಾರೆ. ಕಾರಣ ಮೇಲ್ಕಂಡ 3 ಜನರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ." ಅಂತಾ ಇದ್ದ
ದೂರಿನ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
0 comments:
Post a Comment