1] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 39/2016 ಕಲಂ: 279, 337, 338 ಐ.ಪಿ.ಸಿ:
ಫಿರ್ಯಾದಿ ಹಾಗೂ ಅವರ ತಂದೆ
ಶರಣಪ್ಪ ರವರು ಹನಮಸಾಗರಕ್ಕೆ ಬಂದು ಕೆಲಸ ಮುಗಿಸಿಕೊಂಡು ಸಾಯಾಂಕಾಲ ಅಂದಪ್ಪ ಪೋತರಾಜ ಈತನ ಮೋಟಾರ್
ಸೈಕಲ್ ಮೇಲೆ ಫಿರ್ಯಾದಿಯ ತಂದೆ ಶರಣಪ್ಪನು ಹಿಂದೆ ಕುಳಿತು ಯಲಬುಣಚಿಗೆ ಹೊರಟಿದ್ದು, ಫಿರ್ಯಾದಿಯು
ಅವರ ಹಿಂದೆ ಇಲಕಲ್ ಗಜೇಂದ್ರಗಡ ಬಸ್ಸಿನಲ್ಲಿ ಡ್ರೈವರ್ ಪಕ್ಕದ ಸೀಟಿನಲ್ಲಿ ಕುಳಿತು ಹೊರಟಿದ್ದು, ಮುಂದೆ
ಮಡಿಕೇರಿ ಸೀಮಾದ ಮಡಿಕೇರಿ ಕ್ರಾಸ್ ದಿಂದ 1 ಕೀ.ಮೀ ಈಚೆ ಸಂಜೆ 07-00 ಗಂಟೆಯ ಸುಮಾರಿಗೆ ಹೊರಟಾಗ ಎದುರುಗಡೆಯಿಂದ
ಒಬ್ಬ ಮೋಟಾರ್ ಸೈಕಲ್ ನಂ: ಕೆ.ಎ-37/ವಾಯ್-8098 ನೇದ್ದರ ಚಾಲಕ ಅತೀವೇಗ ಹಾಗೂ ಆಲಕ್ಷತನದಿಂದ ನಡೆಸಿಕೊಂಡು
ಬಂದು ಮುಂದೆ ಅಂದಪ್ಪನ ಮೋಟಾರ್ ಸೈಕಲ್ಲಗೆ ಟಕ್ಕರ ಕೊಟ್ಟು ಅಪಘಾತಪಡಿಸಿದ್ದು, ಆಗ ಫಿರ್ಯಾದಿಯು ಹೊರಟ
ಬಸ್ಸಿನ ಚಾಲಕ ಬಸ್ಸನ್ನು ನಿಲ್ಲಿಸಿದಾಗ ಫಿರ್ಯಾದಿಯು ಕೆಳಗೆ ಇಳಿದು ನೋಡಲು ಶರಣಪ್ಪನಿಗೆ ಬಲಗಾಲ ಮೋಣಕಾಲ
ಕೆಳಗೆ ಮುರಿದು ಭಾರಿ ರಕ್ತಗಾಯವಾಗಿದ್ದು ಎಲುಬು ಕಾಣುತ್ತಿದ್ದು, ಹಾಗೂ ಅಂದಪ್ಪ ಪೋತರಾಜನಿಗೆ ಹಣೆಗೆ
ಭಾರಿ ರಕ್ತಗಾಯ, ಬಲಗೈ ಮುರಿದು ಭಾರಿ ಗಾಯವಾಗಿರುತ್ತದೆ. ಹಾಗೂ ಅಪಘಾತ ಪಡಿಸಿದ ವ್ಯಕ್ತಿಯನ್ನು ಫಿರ್ಯಾದಿ
ನೋಡಲು ಎಡಗಣ್ಣಿನ ಹುಬ್ಬಿನ ಹತ್ತಿರ ಹಾಗೂ ಎಡಗಣ್ಣಿನ ಹತ್ತಿರ ರಕ್ತಗಾಯವಾಗಿದ್ದು, ಹಾಗೂ ಎಡಗೈ ಮತ್ತು
ಬಲಗಾಲಿಗೆ ತೆರಚಿದ ಗಾಯವಾಗಿದ್ದು, ನಂತರ ಅಂದಪ್ಪ ನಡೆಸಿದ ಮೋಟಾರ್ ಸೈಕಲ್ ನ್ನು ನೋಡಲು ಕೆ.ಎ-29/ಡಬ್ಲ್ಯೂ-3845
ಅಂತಾ ಇದ್ದು, ನಂತರ ಫಿರ್ಯಾದಿಯು 108 ಅಂಬ್ಯುಲೆನ್ಸಗೆ ಫೋನ ಮಾಡಿ ಬರಮಾಡಿಕೊಂಡು ಮೂವರನ್ನು ಕರೆದುಕೊಂಡು
ಶ್ರೀ ಮಹಾಂತೇಶ ಅಕ್ಕಿ ಆಸ್ಪತ್ರೆ ಇಲಕಲ್ಲಗೆ ದಾಖಲಿಸಿ ನಂತರ ತಡವಾಗಿ ಠಾಣೆಗೆ ಬಂದು ಫಿರ್ಯಾದಿ ನೀಡಿದ್ದು
ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 102/2016 ಕಲಂ: 498(ಎ), 323, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ:-02-05-2016 ರಂದು ರಾತ್ರಿ 20-15 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಅಮೃತ ಗಂಡ ಗವಿಸಿದ್ದಯ್ಯ ಸ್ವಾಮಿ ವಯಾ- 30 ವರ್ಷ ಜಾ. ಜಂಗಮ ಸಾ. ಸಾಲೋಣಿ ಕಾರಟಗಿ ತಾ. ಗಂಗಾವತಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ನೀಡಿದ್ದು ಅದರ ಸಾರಾಂಶವೆನಂದರೆ ನನಗೆ ಈಗ್ಗೆ 9 ವರ್ಷಗಳ ಹಿಂದೆ ಗವಿಸಿದ್ದಯ್ಯ ಸ್ವಾಮಿ ಇವರಿಗೆ ಮದುವೆ ಮಾಡಿಕೊಟ್ಟಿರುತ್ತಾರೆ ನಮಗೆ 1) ವಿರೇಶ 2) ಅಭಿಷೇಕ ಅಂತಾ ಇಬ್ಬರು ಗಂಡು ಮಕ್ಕಳು ಇರುತ್ತಾರೆ ಮದುವೆಯಾದಾಗನಿಂದ 2-3 ವರ್ಷ ನಾನು ಚನ್ನಾಗಿ ಜೀವನ ಮಾಡಿಕೊಂಡಿದ್ದೆ ನಂತರ ದಿನಗಳಲ್ಲಿ ನನ್ನ ಗಂಡನ ತಂಗಿ ವಿಜಯ ಲಕ್ಷ್ಮೀ ಗಂಡ ಶಿವಕುಮಾರ ಈಕೆಯನ್ನು ಗಂಗಾವತಿಗೆ ಕೊಟ್ಟಿದ್ದು ಈಕೆಯು ನನ್ನ ಗಂಡನ ಮನೆಗೆ ಆಗಾಗ ಬಂದು ನನ್ನ ಗಂಡ ನಾನು ಚನ್ನಾಗಿ ಇರುವುದನ್ನು ಸಹಿಸಿಕೊಳ್ಳದೇ ನನ್ನ ಗಂಡನಿಗೆ ನನ್ನ ಶೀಲದ ಬಗ್ಗೆ ಇಲ್ಲಸಲ್ಲದ ವಿಷಯಗಳನ್ನು ಹೇಳಿ ನಮ್ಮಿಬ್ಬರಿಗೂ ಜಗಳ ಹಚ್ಚಿ ಅಶ್ಲಿಲವಾಗಿ ಬೈದಾಡಿ ನನ್ನ ಗಂಡನಿಗೆ ಹೊಡೆ ಬಡೆ ಮಾಡಿಸಿದ್ದು ನನ್ನ ಗಂಡನ ತಂದೆ ಶರಣಯ್ಯ ಸ್ವಾಮಿ ಇತನು ಕೂಡಾ ನನ್ನ ಬಗ್ಗೆ ಇಲ್ಲ ಸಲ್ಲದ ವಿಷಯಗಳನ್ನು ಹೇಳಿ ಅಶ್ಲೀಲವಾಗಿ ಬೈದು ಪ್ರತಿ ದಿನ ಮನೆಯಲ್ಲಿ ಹೊಡೆಯುವುದು ಬಡೆಯುವುದು ಮಾಡುತ್ತಿದ್ದನು ಈ ಸೊಳೆಯನ್ನು ನಮ್ಮ ಮನೆಯನ್ನು ಬಿಟ್ಟು ಕಳುಹಿಸಿ ಇನ್ನೊಂದು ಮದುವೆ ಮಾಡಿಕೊಂಡರು ಚಿಂತೆಯಿಲ್ಲಾ ಈ ಸೂಳೆಯನ್ನು ಒದೆ ಅಂತಾ ಅಶ್ಲೀಲವಾಗಿ ಬೈದಾಡುತ್ತಿದ್ದನು ನನಗೆ ಮೂರು ಜನರು ನಮ್ಮ ಮನೆಯ ಕದ ಹಾಕಿ ಹೊಡೆಯುವುದು ಬಡೆಯುವುದು ಮಾಡುತ್ತಿದ್ದರು ನನ್ನ ಗಂಡ ನಾನು ಯಾರನ್ನಾದರೂ ಮಾತನಾಡಿಸಿದರೆ ನನ್ನ ಗಂಡ ನನ್ನ ಮೇಲೆ ವಿನಾ ಕಾರಣ ಸಂಶಯ ಪಡುತ್ತಾದ್ದನು ಹೊಡೆಯುವುದು ಬಡೆಯುವುದು ಮಾಡುತ್ತಿದ್ದನು ಮನೆಯಲ್ಲಿದ್ದ ನನ್ನ ಗಂಡನ ಅಣ್ಣನ ಹೆಂಡತಿ ನಿರ್ಮಲ ಗಂಡ ಶಿವಮೂರ್ತಿಯ್ಯಸ್ವಾಮಿ ಈಕೆಯು ಬಿಡಿಸಿಕೊಳ್ಳಲು ಬಂದರೆ ಆಕೆಗೆ ನನ್ನ ಗಂಡ ನೀನು ಇದರಲ್ಲಿ ಬರಬೇಡ ಬಂದರೆ ನೀನಗೂ ಬಿಳುತ್ತವೆ ಅಂತಾ ಅನ್ನುತ್ತಿದ್ದರು ನನ್ನ ಗಂಡ ಪ್ರತಿದಿನ ಜನರೆಲ್ಲರೂ ಮಲಗಿದ ಮೇಲೆ ಮದ್ಯ ರಾತ್ರಿ ಮತ್ತು ಬೆಳಗಿನ ಜಾವ 4-00 ಗಂಟೆಗೆ ಎದ್ದು ನನಗೆ ಹೊಡೆಯುವುದು ಬಡೆಯುವುದು ಮಾಡುತ್ತಿದ್ದನು ನನಗೆ ಸರಿಯಾಗಿ ನಿದ್ದೆ ಮಾಡಲು ಬಿಡುತ್ತಿರಲಿಲ್ಲಾ ನಾನು ಜೋರಾಗಿ ಅತ್ತರೆ ನಮ್ಮ ಮಾವ ಎದ್ದು ಅವಳ ಬಾಯಿಗೆ ಬಟ್ಟೆ ತುರಿಕಿ ಹೊಡೆ ಆ ಸೂಳೆ ಬಾಯಿ ಮಾಡುತ್ತಾಳೆ ಅಂತಾ ಅನ್ನುತ್ತಿದ್ದನು ನಾನು ನಮ್ಮ ತಂದೆ ತಾಯಿಗಳಿಗೆ ಅಣ್ಣರಿಗೆ ಫೋನ್ ಮಾಡಿ ಹೇಳಿದರೆ ಅವರು ಮನೆಗೆ ಬಂದು ನನಗೆ ನಿನ್ನ ಜೀವನ ಇರುತ್ತದೆ ಅಂತಾ ಬಿದ್ದಿವಾದ ಹೇಳಿ ಹೋಗುತ್ತಿದ್ದರು ಅವರ ಬಂದು ಹೋದ ಮೇಲೂ ನನ್ನ ಗಂಡ ನನಗೆ ಹೊಡೆಯುವುದು ಬಡೆಯುವುದು ಮಾಡುತ್ತಿದ್ದರು ನಾನು ಕೂಡಾ ನನ್ನ ಬಾಳ್ವೆ ಹಾಳಾಗುತ್ತದೆ ಇಷ್ಟು ದಿನ ಸಹಿಕೊಂಡಿರುತ್ತೇನೆ. ನಮ್ಮ ಮಾವ ದಿನಾಂಕ-30-03-2016
ರಂದು ನಮ್ಮ ನಾದಿನಿ ವಿಜಯ ಲಕ್ಷ್ಮಿ ಗಂಡ ಶಿವಕುಮಾರ ಇವರನ್ನು ಕರೆಯಿಸಿದ್ದರು ಆಕೆ ಬಂದು ನೀನು ನಾವು ಬಂದಾಗ ಸರಿಯಾಗಿ ಮಾತನಾಡಿಸುವುದಿಲ್ಲಾ ನಾನು ಹೇಳಿದ ಹಾಗೆ ಕೇಳಬೇಕು ನಮ್ಮ ಅಣ್ಣನಿಗೆ ಇನ್ನೊಂದು ಮದುವೆ ಮಾಡುತ್ತೇವೆ ಇನ್ನೊಂದು ಮದುವೆ ಮಾಡಲು ಸಹಿ ಕೊಡು ಅಂತಾ ಅಂದಳು ಆಗ ನಾನು ಆಕೆಗೆ ನೀನು ಮದುವೆಯಾಗಿ ಹೋಗಿದ್ದಿ ನಮ್ಮ ಮನೆಯ ಸಂಸಾರ ನಾನು ನೊಡಿಕೊಳ್ಳುತ್ತೇವೆ ಅಂತಾ ಅಂದಿಕ್ಕೆ ಮೂರು ಜನರು ಸೇರಿ ನನಗೆ ಹೊಡೆ ಬಡೆ ಮಾಡಿ ಮನೆಯಿಂದ ಹೊರಗಡೆ ಹಾಕಿ ವಾಪಾಸ ಮನೆಗೆ ಬಂದರೆ ಸೀಮೆ ಎಣ್ಣೆ ಹಾಕಿ ಮನೆಯಲ್ಲಿ ಸುಟ್ಟುಬಿಡುತ್ತೇವೆ ಅಂತಾ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ಇದ್ದ ಗಣಕೀಕೃತ ದೂರನ್ನು ಸ್ವೀಕರಿಸಿಕೊಂಡು ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್. ನಂ: 12/2016 ಕಲಂ: 174(ಸಿ) ಸಿ.ಆರ್.ಪಿ.ಸಿ:.
ದಿ:02.05.2016
ರಂದು ರಾತ್ರಿ 9.30
ಗಂಟೆಗೆ ಫಿರ್ಯಾದಿದಾರರಾದ ಪ್ರಮೋದ ಪತ್ತಾರ ಸಾ: ಕೊಪ್ಪಳ ಇವರು
ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ದಿ-28.04.16 ರಂದು
ತನ್ನ ತಂದೆ ಮೌನೇಶ ಪತ್ತಾರ ಲಾರಿ ಚಾಲಕ ಇವರು ಮದುವೆಗೆ ಅಂತಾ ಲಾರಿ ತೆಗೆದುಕೊಂಡು ಹನುಮನಹಳ್ಳಿ
ಗ್ರಾಮಕ್ಕೆ ಹೋದಾಗ ರಾತ್ರಿ 8.30 ಗಂಟೆಗೆ ಕುಡಿದ ಅಮಲಿನಲ್ಲಿ ಹನಮನಹಳ್ಳಿ ಗ್ರಾಮದ ರಸ್ತೆಯಲ್ಲಿ
ಬಿದ್ದು ಅಸ್ವಸ್ಥನಾಗಿದ್ದು, ನಂತರ ಆತನಿಗೆ ಚಿಕಿತ್ಸೆ ಕುರಿತು ಕೊಪ್ಪಳ ಜಿಲ್ಲಾ
ಆಸ್ಪತ್ರೆಗೆ ಸೇರಿಸಿದ್ದು ನಂತರ ವೈದ್ಯರು ಆತನಿಗೆ ಹೆಚ್ಚಿನ ಇಲಾಜಿಗೆ ಹುಬ್ಬಳ್ಳಿಯ ಕಿಮ್ಸ್
ಆಸ್ಪತ್ರೆಗೆ ರೇಪರ್ ಮಾಡಿದ್ದರಿಂದ ದಿ: 01.05.16
ರಂದು ಮಧ್ಯಾನ್ನ ಕೊಪ್ಪಳದಿಂದಾ ಕರೆದುಕೊಂಡು ಹುಬ್ಬಳ್ಳಿಗೆ
ಹೋಗಿದ್ದು ಇರುತ್ತದೆ. ನಂತರ ಇಂದು ದಿ:02.05.16
ರಂದು ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಯು ಫಲಿಸದೇ
ಮಧ್ಯಾನ್ನ 2.45 ಗಂಟೆ ಸುಮಾರಿಗೆ ತನ್ನ ತಂದೆ ಮೃತಪಟ್ಟಿದ್ದು, ತನ್ನ
ತಂದೆ ಹೇಗೆ ಯಾವ ರೀತಿ ಯಾಗಿ ಬಿದ್ದು ಮೃತಪಟ್ಟಿದ್ದಾನೆ ಎಂಬ ಬಗ್ಗೆ ನನಗೆ ಗೊತ್ತಿಲ್ಲಾ ಹೀಗಾಗಿ
ನನ್ನ ತಂದೆಯ ಸಾವಿನಲ್ಲಿ ಸಂಶಯ ಇರುತ್ತದೆ. ಅಂತಾ ಮುಂತಾಗಿ ನೀಡಿದ ದೂರಿನ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment