1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ:
132/2016 ಕಲಂ: 78(3) Karnataka Plice Act:.
ದಿನಾಂಕಃ- 27-06-2016 ರಂದು ರಾತ್ರಿ 9-50 ಗಂಟೆಯ ಸುಮಾರಿಗೆ ಶ್ರೀ. ನಿಂಗಪ್ಪ ಪಿ.ಎಸ್.ಐ ರವರು ದಿನಾಂಕ 27-06-2016 ರಂದು ಸಾಯಂಕಾಲ 8-30 ಗಂಟೆಯ ಸುಮಾರಿಗೆ ನಂದಿಹಳ್ಳಿ ಈರಣ್ಣ
ದೇವಸ್ಥಾನದ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಸಾರ್ವಜನಿಕರಿಗೆ ಮೊಸ ಮಾಡುವ ಉದ್ದೇಶದಿಂದ ಮಟಕಾ ಜೂಜಾಟ ನಡೆದಿರುತ್ತದೆ
ಅಂತಾ ಖಚಿತ ಮಾಹಿತಿ ಬಂದ ಮೇರೆಗೆ
ಪಂಚರೊಂದಿಗೆ
ಹಾಗೂ ಸಿಬ್ಬಂದಿಯವರಾದ ಮಲ್ಲಪ್ಪ .ಎ.ಎಸ್.ಐ. ಹೆಚ್.ಸಿ-
35, ಪಿ.ಸಿ-
422, 294 ರವರೊಂದಿಗೆ
ಹೊಗಿ ಜೂಜಾಟದಲ್ಲಿ ತೊಡಗಿದ್ದ ಆರೋಪಿ ಮೇಲೆ ದಾಳಿ ಮಾಡಲು ಮಟ್ಕಾ ಪಟ್ಟಿ
ಬರೆದುಕೊಳ್ಳುತ್ತಿದ್ದ 1) ದೊಡ್ಡಪ್ಪ ತಂದಿ
ರುದ್ರಪ್ಪ
ನಾಯಕ ವಯಾ- 40 ವರ್ಷ ಜಾ- ನಾಯಕ ಉ-
ಕೂಲಿ ಕೆಲಸ ಸಾ- ನಂದಿಹಳ್ಳಿ ತಾ- ಗಂಗಾವತಿ. ಜಿ-
ಕೊಪ್ಪಳ ಇವನು ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದವನ ಕಡೆಯಿಂದ ನಗದು ಹಣ 10,150=00 ರೂ.
ಹಾಗೂ ಒಂದು ಮಟ್ಕಾ ನಂಬರ್ ಬರೆದ ಪಟ್ಟಿ, ಒಂದು ಬಾಲಪೆನ್ನು ಹಾಗೂ ಒಂದು ಮಟ್ಕಾ ನಂಬರ್ ಬರೆದ ಪಟ್ಟಿ ಒಂದು ಲಾವಾ ಕಂಪನಿಯ ಮೊಬೈಲ್ ಪೋನ್ ಅಂ.ಕಿ
500=00 ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 32/2016 ಕಲಂ: 498(ಎ), 323, 354, 448,
504, 506, ಸಹಿತ 34 ಐ.ಪಿ.ಸಿ.
ಮಾನ್ಯ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಕುಷ್ಟಗಿ
ರವರಿಂದ ನ್ಯಾಯಾಲಯದ ಪಿ.ಸಿ-28 ರವರು ಖಾಸಗಿ ಫಿರ್ಯಾದಿ ನಂ: 57/2016 ಪತ್ರ ಸಂಖ್ಯೆ:ಎಲ್.ಟಿ.77/ಸಿ.ಆರ್.ಎಲ್./2016
ದಿನಾಂಕ: 17-06-2016 ನೇದ್ದನ್ನು ಹಾಜರಪಡಿಸಿದ್ದ ಸಾರಾಂಶವೇನೆಂದರೆ, ಫಿರ್ಯಾದಿಯು ದಿನಾಂಕ: 27-03-2008 ರಂದು ಯಲಬುರ್ಗಾ ತಾಲೂಕ ಮುಧೋಳ
ಗ್ರಾಮದ ನಾಗಪ್ಪ ಐನಕ್ಕಿ ಈತನ ಸಂಗಡ ಯಲಬುರ್ಗಾದ ಶ್ರೀ ಸಿದ್ದಾರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಗುರು
ಹಿರಿಯರ ಸಮಕ್ಷಮ ಮುದವೆಯಾಗಿದ್ದು, ನಂತರ ಎರಡು ಮಕ್ಕಳಾಗಿದ್ದು, ಎರಡನೇ ಮಗ ವಿಶ್ವ ಹುಟ್ಟುವವರೆಗೆ
ಗಂಡ ಹೆಂಡತಿ ಚೆನ್ನಾಗಿ ಇದ್ದು, ನಂತರ ಫಿರ್ಯಾದಿಯ ಗಂಡ ಹಾಗೂ ಮನೆಯವರಾದ ಯಲ್ಲಪ್ಪ, ಗಂಗಮ್ಮ ಇವರು
ಫಿರ್ಯಾದಿಗೆ ನೀನು ಸಾಕಷ್ಟು ವರದಕ್ಷಣೆ ತರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದು,
ಮದುವೆ ಸಮಯದಲ್ಲಿ 100000/- ರೂ ಹಣ, ಹಾಗೂ 20 ಗ್ರಾಮ ಬಂಗಾರ ಮತ್ತು ಬೆಲೆಬಾಳುವ ವಸ್ತುಗಳನ್ನು ಕೊಟ್ಟಿದ್ದು
ಇರುತ್ತದೆ. ನಂತರ 4 ತಿಂಗಳ ಹಿಂದಿನಿಂದ ಆರೋಪಿತರು
ಫೀರ್ಯಾದಿದಾರಳಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಮನೆಯಿಂದ ಹೊರಗೆ ಹಾಕಿದ್ದು ಇರುತ್ತದೆ. ನಂತರ
ಫಿರ್ಯಾದಿದಾರಳು ತನ್ನ ತವರು ಮನೆಯಾದ ಕಾಟಾಪೂರ ಗ್ರಾಮದಲ್ಲಿ ಬಂದು ಇದ್ದಳು. ನಂತರ ದಿನಾಂಕ: 15-06-2016 ರಂದು ಸಂಜೆ 04-30 ಗಂಟೆಗೆ
ಫಿರ್ಯಾದಿದಾರಳು ಮತ್ತು ಸಾಕ್ಷಿದಾರರು ಮನೆಯಲ್ಲಿದ್ದಾಗ ಆರೋಪಿತರೆಲ್ಲ ಕೂಡಿ ಅಲ್ಲಿಗೆ ಬಂದು ಫಿರ್ಯಾದಿದಾರರ
ಮನೆಯನ್ನು ಪ್ರವೇಶ ಮಾಡಿ ಫಿರ್ಯಾದಿದಾರಳಿಗೆ ಲೇ ಬೋಸೂಡಿ ಸೂಳೆ ನಿನ್ನ ತವರು ಮನೆಯಿಂದ ಇನ್ನೂ ಹೆಚ್ಚಿನ
ಹಣ, ಮತ್ತು ಬಂಗಾರ ತೆಗೆದುಕೊಂಡು ಬಾ ಅಂದರೆ ಇಲ್ಲಿಯೇ ಕುಳಿತಿಯನಲೇ ನಿನ್ನ ಸೊಕ್ಕು ಬಹಳ ಆಗೈದ ಇವತ್ತು
ನಿನ್ನ ಕತೆ ಮುಗಿಸಿತ್ತೇವೆ. ಒಂದು ವೇಳೆ ನಾವು ಹೇಳಿದ ಹಣ ಮತ್ತು ಒಡವೆಗಳನ್ನು ತರದೇ ಹೋದರೆ, ಎಲ್ಲಿಯಾದರೂ
ಹಾಳು ಬಾವಿಗೆ ಬಿದ್ದು ಸಾಯಿ ಅಂದು ಫಿರ್ಯಾದಿದಾರಳಿಗೆ ಆರೋಪಿತರು ಕೈಯಿಂದ ಹೊಡೆಬಡೆ ಮಾಡಿ ಸೀರೆ ಹಿಡಿದ
ಜಗ್ಗಿ ಮಾನಭಂಗ ಮಾಡಿ ಕೈ, ಕಾಲು ಮುರಿಯುತ್ತೇವೆ ಅಂತಾ
ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಫಿರ್ಯಾದಿ ಸಾರಾಂಶ ಇರುತ್ತದೆ.
0 comments:
Post a Comment