1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ:
66/2016 ಕಲಂ: 78(3) Karnataka Police Act:.
ಶ್ರೀ. ವಿಶ್ವನಾಥ ಹಿರೇಗೌಡರ ಪಿ.ಎಸ್.ಐ. ಕುಕನೂರ ರವರಿಗೆ ಇಂದು ಮಾಹಿತಿ ಬಂದ ಪ್ರಕಾರ ತಾವು ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಕುಕನೂರ ಪಟ್ಟಣದ ಚಳ್ಳೇಶ್ವರ್ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದವನ ಮೇಲೆ ದಾಳಿ ಮಾಡಿ, ಸದರಿಯವರನ್ನು ವಶಕ್ಕೆ ಪಡೆದುಕೊಂಡು ಸದರಿಯವರ ಅಂಗಜಡ್ತಿಯಿಂದ 600-00 ರೂ., 1 ಮಟಕಾ ನಂಬರ್ ಬರೆದ ಚೀಟಿ, 1 ಬಾಲ್ ಪೆನ್ ಇವುಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ:
67/2016 ಕಲಂ: 87 Karnataka Police Act:.
ಶ್ರೀ. ವಿಶ್ವನಾಥ ಹಿರೇಗೌಡರ ಪಿ.ಎಸ್.ಐ. ಕುಕನೂರ ರವರಿಗೆ ಇಂದು ಜೂಜಾಟದ ಮಾಹಿತಿ ಬಂದ ಪ್ರಕಾರ ತಾವು ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 5-30 ಪಿಎಂಕ್ಕೆ ಯರೆಹಂಚಿನಾಳ ಗ್ರಾಮದ ಸಮುದಾಯ ಭವನ ಮುಂದಿನ ಸಾರ್ವಜನಿಕ
ಸ್ಥಳದಲ್ಲಿ ಪಣಕ್ಕೆ ಹಣ ಹಚ್ಚಿ ಇಸ್ಪೆಟ್ ಎಲೆಗಳಿಂದ
ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಸದರಿಯವರಿಂದ ಹಾಗೂ ಜೂಜಾಟದ ಕಣದಿಂದ ಒಂದು ಟಾವೆಲ್ಲ್, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 1900/- ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ:
129/2016 ಕಲಂ. 87 Karnataka Police Act:.
ದಿನಾಂಕ 21-06-2016
ರಂದು ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ಬರಗೂರು ಗ್ರಾಮದ ಏಕನಾಥ ದೇವಸ್ಥಾನದ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಶ್ರೀ. ನಿಂಗಪ್ಪ
ಪಿ.ಎಸ್.ಐ ಕಾರಟಗಿ ರವರು ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 6
ಜನರು ಸಿಕ್ಕಿಬಿದ್ದಿದ್ದು ಆರೋಪಿತರ ಕಡೆಯಿಂದ ಹಾಗೂ ಖಣದಲ್ಲಿ ಸೇರಿ ಒಟ್ಟು ರೂ.2380=00 ಗಳನ್ನು
ಮತ್ತು ಸ್ಥಳದಲ್ಲಿ ಇದ್ದ ಇಸ್ಪೀಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಗುನ್ನೆ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ:
130/2016 ಕಲಂ. 78(3) Karnataka Police Act:.
ದಿನಾಂಕ 21-06-2016 ರಂದು ಸಾಯಂಕಾಲ 6-30 ಗಂಟೆಯ ಸುಮಾರಿಗೆ ಕಾರಟಗಿಯ ಬೂದುಗುಂಪಾ ರೋಡಿನಲ್ಲಿ ಮೂಕಾಂಭಿಕಾ ದೇವಸ್ಥಾನದ ಹತ್ತಿರ ಸಾರ್ವಜನಿಕರ
ಸ್ಥಳದಲ್ಲಿ ಮಟಕಾ
ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ. ಕಾರಟಗಿ ಮತ್ತು ಸಿಬ್ಬಂದಿ ರವರು ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ ರೂ. 3030=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿರುತ್ತಾರೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 120/2016 ಕಲಂ. 457, 380 ಐ.ಪಿ.ಸಿ:.
ದಿನಾಂಕ 21-06-2016 ರಂದು 11-00 ಎ.ಎಂ.ಕ್ಕೆ ಶರತ್ ಭಾವಿಕಟ್ಟಿ ತಂದೆ ದಿ:ವೀರೇಶ ಭಾವಿಕಟ್ಟಿ ವಯಸ್ಸು 28 ವರ್ಷ ಇಸ್ಲಾಂಪುರ
ಗಂಗಾವತಿ ರವರು ಫಿರ್ಯಾದಿ ನೀಡಿದ್ದು, ದಿನಾಂಕ 20-06-2016 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ 21-06-2016 ರಂದು ಬೆಳಿಗ್ಗೆ
06-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಗಂಗಾವತಿ ನಗರದ ವಾರ್ಡ ನಂ. 13 ರಲ್ಲಿಯ ಇಸ್ಲಾಂಪುರ
ಏರಿಯಾದ ಶಿರಿಗೇರಿ ಆಸ್ಪತ್ರೆಯ ಎದುರುಗಡೆ ಇರುವ ಫಿರ್ಯಾದಿದಾರರ ಮನೆಯ ಬಾಗಿಲಿಗೆ ಹಾಕಿದ ಪತ್ತವನ್ನು
ಮುರಿದು ಮನೆಯೊಳಗೆ ಹೋಗಿ ಟ್ರಜರಿಗಳಲ್ಲಿಟ್ಟಿದ್ದ ಮಲ್ಲಿಕಾರ್ಜುನ ಭಾವಿಕಟ್ಟಿ ಇವರಿಗೆ
ಸಂಬಂಧಿಸಿದಂತೆ [01] 10 ಗ್ರಾಂ ತೂಕದ ಎರಡು ಬಂಗಾರದ ಕಿವಿ ಓಲೆಗಳು. ಅಂ.ಕಿ.ರೂ.20,000-00.
[02] 15 ಗ್ರಾಂ ತೂಕದ ಒಂದು ಬಂಗಾರದ ಬ್ರಾಸ್ಲೈಟ್. ಅಂ.ಕಿ.ರೂ. 30,000-00. [03] 05 ಗ್ರಾಂ ತೂಕದ
ಮೂರು ಬಂಗಾರದ ಉಂಗುರಗಳು.ಅಂ.ಕಿ.ರೂ. 10,000-00. [04] ಬೆಳ್ಳಿಯ ಎರಡು ದೀಪದ ಕಂಬಗಳು.
[05] ಬೆಳ್ಳಿಯ ಒಂದು ಆರತಿ ತಾಟು. [06] ಬೆಳ್ಳಿಯ ಒಂದು ಲೋಟ.[07] ಬೆಳ್ಳಿಯ ಒಂದು ಚರಿಗೆ.
[08] ಬೆಳ್ಳಿಯ ಎರಡು ಕುಂಕುಮ ಭರಣಿ. ಬೆಳ್ಳಿಯ ಸಾಮಾನುಗಳು ಎಲ್ಲಾ ಸೇರಿ ಒಟ್ಟು ಅಂ. 01 ಕೆ.ಜಿ.
ಅಂ.ಕಿ.ರೂ. 20,000-00 ಬೆಲೆ ಬಾಳುವ ಸಾಮಾನುಗನ್ನು. ಶ್ರೀಮತಿ ಲಲೀತಾ ಭಾವಿಕಟ್ಟಿ ಇವರಿಗೆ ಸಂಬಂಧಿಸಿದಂತೆ
[01] 30 ಗ್ರಾಂ ತೂಕದ ಬಂಗಾರದ ಒಂದು ಅವಲಕ್ಕಿ ಸರ. ಅಂ.ಕಿ.ರೂ. 60,000-00. [02] 20 ಗ್ರಾಂ ತೂಕದ
ಬಂಗಾರದ ಒಂದು ಮುತ್ತಿನ ಸರ. ಅಂ.ಕಿ.ರೂ. 40,000-00. [03] 15 ಗ್ರಾಂ ತೂಕದ ಒಂದು ಬಂಗಾರದ ನಾಗರ.
ಅಂ.ಕಿ.ರೂ. 30,000-00. [04] 10 ಗ್ರಾಂ ತೂಕದ ಬಂಗಾರದ ಒಂದು ಮಾಟೀಲು ಅಂ.ಕಿ.ರೂ. 20,000-00.
[05] 05 ಗ್ರಾಂ ತೂಕದ 03 ಬಂಗಾರದ ಕ್ವಾಯಿನ್ ಗಳು. ಅಂ.ಕಿ.ರೂ. 10,000-00. [06] 10 ಗ್ರಾಂ
ತೂಕದ ಬಂಗಾರದ 07 ಪೀಸ್ ಕುತ್ತಿಗೆ ಹರಳಿನ ಸರ. ಅಂ.ಕಿ.ರೂ. 20,000-00. [07] 10 ಗ್ರಾಂ ತೂಕದ ಒಂದು
ಬಂಗಾರದ ಸುತ್ತಿನ ಉಂಗುರ. ಅಂ.ಕಿ.ರೂ. 20,000-00. [08] 05 ಗ್ರಾಂ ತೂಕದ ಬಂಗಾರದ ತುಂಡುಗಳು. ಅಂ.ಕಿ.ರೂ.
10,000-00.. ಮತ್ತು [09] 250 ಗ್ರಾಂ ತೂಕದ ಬೆಳ್ಳಿಯ ಒಂದು ಆರತಿ ತಾಟು. ಅಂ.ಕಿ.ರೂ.
5,000-00. ಬೆಲೆ ಬಾಳುವ ಸಾಮಾನುಗಳನ್ನು ಮತ್ತು ಶ್ರೀಮತಿ ಶಾಂತಮ್ಮ ಇವರಿಗೆ ಸಂಬಂಧಿಸಿದಂತೆ
[01] 10 ಗ್ರಾಂ ತೂಕದ ಎರಡು ಸುತ್ತಿನ ಉಂಗುರಗಳು. ಅಂ.ಕಿ.ರೂ. 20,000-00. ಮತ್ತು [02] 02 ಗ್ರಾಂ
ತೂಕದ ಒಂದು ಸಾದಾ ಉಂಗುರ. ಅಂ.ಕಿ.ರೂ. 4,000-00 ಬೆಲೆ ಬಾಳುವ ಸಾಮಾನುಗಳು. ಹೀಗೆ ಒಟ್ಟು ಅಂ.ಕಿ.ರೂ.
3,19,000-00 ಬೆಲೆ ಬಂಗಾರದ ಒಡವೆಗಳನ್ನು ಮತ್ತು ಬೆಳ್ಳಿಯ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
0 comments:
Post a Comment