Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, June 21, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 173/2016 ಕಲಂ: 87 Karnataka Police Act:.
ದಿನಾಂಕ: 20-06-2016 ರಂದು ಮಧ್ಯಾಹ್ನ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮುಷ್ಟೂರು ಸೀಮಾದಲ್ಲಿ ಬರುವ ಶ್ರೀ ಮಲ್ಲಿಕಾರ್ಜುನ ಗುಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಹಾರ ಎಂಬ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಮೇರೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿ ಮತ್ತು ಮಾನ್ಯ ಸಿಪಿಐ ಸಾಹೇಬರವರ ಮಾರ್ಗದರ್ಶನದಲ್ಲಿ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಸಿಬ್ಬಂದಿಯವರಾದ ಪಿ.ಸಿ. 160, 129, 323, 110, 277, 363, 366, 180, 38, ಹೆಚ್.ಸಿ. 68 ಜೀಪ ಚಾಲಕ ಎ.ಪಿ.ಸಿ. 77 ಕನಕಪ್ಪ ರವರು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ನಮಗೆ ಮಾಹಿತಿ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತು ನೋಡಲು ಅಲ್ಲಿ ಶ್ರೀ ಮಲ್ಲಿಕಾರ್ಜುನ ಗುಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ ಪವಾಡಿ ತಂದೆ ಹನುಮಂತಪ್ಪ ಮಡಿವಾಳರು, ವಯಸ್ಸು 28 ವರ್ಷ, ಜಾತಿ: ಅಗಸರು ಉ: ಇಸ್ತ್ರಿ ಮಾಡುವುದು ಸಾ: ಸಿದ್ದಾಪೂರು ಹಾಗೂ 8 ಜನರು ಸಿಕ್ಕಿ ಬಿದ್ದಿದ್ದು, ಇನ್ನೂ ಒಬ್ಬ   ಈರಣ್ಣ ತಂದೆ ಈರಪ್ಪ ಗೊರೇಬಾಳ, ವಯಸ್ಸು 40 ವರ್ಷ, ಜಾತಿ: ಕಬ್ಬೇರ ಸಾ: ಮುಷ್ಟೂರು ಎಂಬಾತನು ಓಡಿ ಹೋಗಿದ್ದು,   ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ 8,955/- ರೂಪಾಯಿ, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಬರಕಾ ಹಾಗೂ 7 ಮೋಟಾರ ಸೈಕಲ್ಗಳು ಸಿಕ್ಕಿದ್ದು, ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 127/2016 ಕಲಂ: 87 Karnataka Police Act:.
ದಿನಾಂಕ 20-06-2016 ರಂದು ಸಾಯಂಕಾಲ 5-15 ಗಂಟೆಯ ಸುಮಾರಿಗೆ ಈಳಿಗನೂರ-ಯರಡೋಣಾ ರಸ್ತೆಯ ಹುಣಸಿಗಿಡದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಶ್ರೀ. ನಿಂಗಪ್ಪ ಪಿ.ಎಸ್.ಐ ಕಾರಟಗಿ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 10 ಜನರು ಸಿಕ್ಕಿಬಿದ್ದಿದ್ದು 8 ಜನರು ಓಡಿ ಹೋಗಿದ್ದು ಸಿಕ್ಕಿ ಬಿದ್ದ ಆರೋಪಿತರ ಕಡೆಯಿಂದ ಹಾಗೂ ಣದಲ್ಲಿ ಸೇರಿ ಒಟ್ಟು ರೂ.13800=00 ಗಳನ್ನು ಮತ್ತು ಸ್ಥಳದಲ್ಲಿ ಇದ್ದ ಇಸ್ಪೀಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 167/2016 ಕಲಂ 504, 506 .ಪಿ.ಸಿ ಮತ್ತು 3(1)(10) ಎಸ್.ಸಿ. ಎಸ್.ಟಿ. ಕಾಯ್ದೆ 1989:.
ದಿನಾಂಕ: 20-06-2016 ರಂದು ರಾತ್ರಿ 07-45 ಗಂಟೆಗೆ ಫಿರ್ಯಾದಿದಾರರಾದ ಸುಖಮುನಿಯಪ್ಪ ತಾಯಿ ನರಸಮ್ಮ ಸಾ:ಗುಮಗೇರಾ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಯನ್ನು ಹಾಜರ ಪಡಿಸಿದ್ದು ಸದರ ಪಿರ್ಯಾದಿಯ ಸಾರಾಂಶವೆನೆಂದರೆ. ದಿನಾಂಕ: 16-06-2016 ರಂದು ಸಾಯಾಂಕಾಲ 04-30 ಗಂಟೆಯ ಸುಮಾರಿಗೆ ಪಿರ್ಯಾದಿಯು ಹೊಲಕ್ಕೆ ಹೋಗಿದೆ. ಹೊಲಕ್ಕೆ ಹೋಗುವಷ್ಟರಲ್ಲಿ ತನ್ನ ಹೊಲದಲ್ಲಿ ಕುರಿಗಳನ್ನು ಬಿಟ್ಟಿದ್ದರು. ಹಾಗೂ ನಾನು ಯಾರು ಅವರು ನನ್ನ ಬಿತ್ತಿದ ಹೊಲದಲ್ಲಿ ಅದು ಅಸಿಯಲ್ಲಿ ಹೊಲದಲ್ಲಿ ನಾಟುವ ಸಸಿಗಳು ಆಳಾಗುತ್ತವೆ ಎಂದು ಬೆದರಿಸಿದೆ. ಅಷ್ಟಕ್ಕೆ ಯಮನಪ್ಪ ತಂದೆ ಬಸಪ್ಪ ಜರಗಡ್ಡಿ ಎಂಬಾತನು ಏಕಾ ಏಕಿ ಏನಲೇ ಮಾದಿಗ ನನ್ನನ್ನು ಬೆದರಿಸುತ್ತೀಯಾ ಸೂಳೆಮಗನೇ ನನ್ನ ಎಲ್ಲಾ ಕುರಿಗಳು ಹೋಗಲಿ ನಾನು ಹೊಲದಲ್ಲಿಯೇ ಮೆಯಿಸುತ್ತೇನೆ ಎಂದು ಏಕಾ ಏಕಿ ಕೈಯಲ್ಲಿದ್ದ ಕೊಡಲಿಯನ್ನು ಎತ್ತಿಕೊಂಡು ನಿಲ್ಲಲೇ ಮಾದಿಗ ನಿನ್ನನ್ನು ಕಡಿದು ಬಿಡುತ್ತೇನೆ ಎಂದು ಓಡೋಡಿ ಬಂದ ತಕ್ಷಣ ನಾನು ಮನೆಗೆ ಓಡೋಡಿ ಬಂದೆ. ಆದಕಾರಣ ನನಗೆ ಜೀವ ಬೆದರಿಕೆಯಾಗಿದೆ ಕೂಡಲೇ ನನಗೆ ರಕ್ಷಣೆ ನೀಡಿ ಕಾನೂನು ಕ್ರ ಜರಗಿಸಬೇಕೆಂದು ತಮ್ಮಲ್ಲಿ ವಿನಂತಿ ಅಂತಾ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕ್ರಮ ಕೈಕೊಂಡಿದ್ದು ಇರುತ್ತದೆ.
4] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 118/2016 ಕಲಂ 448, 354, 504, 506 .ಪಿ.ಸಿ:.

ದಿನಾಂಕ 20-06-2016 ರಂದು 21-00 ಗಂಟೆಗೆ ಶ್ರೀಮತಿ ಮಂಜುಳಾ ಗಂಡ ನಾಗರಾಜ ಉಪ್ಪಾರ ವಯಸ್ಸು 25 ವರ್ಷ ಜಾ: ಉಪ್ಫಾರ, : ಮನೆಗೆಲಸ, ಸಾ: ಗಿಣಗೇರಾ ಹಾ:; ಅಣ್ಣೂರ ಗೌರಮ್ಮಕ್ಯಾಂಪ್ ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ದಿನಾಂಕ 20-06-2016 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ಮನೆಯ ಕಂಪೌಂಡ್ ಒಳಗೆ ಬಾಂಡೆ ಸಾಮಾನುಗಳನ್ನು ತೊಳೆಯುತ್ತಾ ಕುಳಿತಿದ್ದಾಗ ಅವರ ಮನೆಯ ಗೇಟಿನ ಬಾಗಿಲನ್ನು ತೆಗೆದು ಮನೆಯ ಒಳಗೆ ಅತಿಕ್ರಮ ಪ್ರವೇಶ ಮಾಡಿ ಪಿರ್ಯಾಧಿಯ ಎಡ ಸೊಂಟಕ್ಕೆ ಕೈಹಾಕಿ ಹಿಡಿದುಕೊಂಡಿದ್ದು, ಆಗ ಪಿರ್ಯಾದಿಯು ಯಾಕೆ ನೀನು ನಮ್ಮ ಮನೆಯ ಒಳಗೆ ಬಂದಿದ್ದೀಯಾ ಅಂತಾ ಆರೋಪಿತನಿಗೆ ಕೇಳಿದಾಗ ಪಿರ್ಯಾಧಿಯ ಗಂಡನು ಅವನಿಗೆ ಯಾಕೆ ನೀನು ನಮ್ಮ ಮನೆಯ ಒಳಗೆ ಬಂದಿದ್ದೀಯಾ ಎಂದು ಪ್ರಶ್ನಿಸಿದ್ದಕ್ಕೆ ಪಿರ್ಯಾದಿ ಮತ್ತು ಆಕೆಯ ಗಂಡನಿಗೆ ಅವಾಚ್ಯವಾಗಿ ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಅಲ್ಲದೇ ಪಿರ್ಯಾದಿಯ ಮಾನಕ್ಕೆ ಕುಂದುಂಟು ಬರುವಂತೆ ವರ್ತಿಸಿ ಪಿರ್ಯಾದಿಗೆ ಅವಮಾನ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008