1] ತಾವರಗೇರಾ ಪೊಲೀಸ್
ಠಾಣೆ ಗುನ್ನೆ ನಂ. 69/2016 ಕಲಂ. 87 Karnataka Police Act.
ದಿನಾಂಕ: 22-06-2016 ರಂದು ಸಂಜೆ 4:
45 ಗಂಟೆಗೆ ಶ್ರೀ ಅಮರೇಶ ಹುಬ್ಬಳ್ಳಿ ಪಿ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆರವರು ನಂದಾಪುರ ಹಳ್ಳದ ಸಾರ್ವಜನಿಕ ಸಾರ್ವಜನಿಕ ಸ್ಥಳದಲ್ಲಿ 1) ಅಮರೇಶ ತಂದೆ ವೀರಭದ್ರಪ್ಪ ನಾಲತವಾಡ ವಯ: 25 ವರ್ಷ, ಜಾತಿ: ಲಿಂಗಾಯತ,
ಉ: ಗುತ್ತಿಗೆದಾರರು. ಸಾ: ತಾವರಗೇರಾ. 2] ವಿನೋದ ತಂದೆ ಹನಮಂತ ಭೋವಿ ವಯ: 22 ವರ್ಷ, ಜಾತಿ: ವಡ್ಡರ. ಉ: ಕೂಲಿಕೆಲಸ, ಸಾ: 3ನೇ ವಾರ್ಡ ಆನೆಗುಂದಿ 3] ರಾಘವೇಂದ್ರ ತಂದೆ ಶ್ಯಾಮಣ್ಣ ಕಟಿಕ್ ವಯ: 35 ವರ್ಷ, ಜಾತಿ: ಕಲಾಲ. ಉ: ವ್ಯಾಪಾರ.
ಸಾ: ತಾವರಗೇರಾ. 4] ಶ್ಯಾಮ @ ಮುದಿಯ ತಂದೆ ಯಮನಪ್ಪ ಹಂಚಿ ವಯ: 24 ವರ್ಷ, ಜಾತಿ: ವಾಲ್ಮೀಕಿ, ಉ: ಕೂಲಿಕೆಲಸ. ಸಾ: ತಾವರಗೇರಾ 5] ಧರ್ಮಸಿಂಗ್ ತಂದೆ ವೆಂಕಟಸಿಂಗ್ ಬಳ್ಳಾರಿ ವಯ: 38 ವರ್ಷ, ಜಾತಿ: ರಜಪೂತ. ಉ: ಒಕ್ಕಲುತನ. ಸಾ: ತಾವರಗೇರಾ ಇವರು ಅಂದರ್ ಬಾಹರ್ ಎಂಬ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದು, ಆ ಕಾಲಕ್ಕೆ ಅಧಿಕಾರಿರವರು ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ.
18560-00, ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತ ಮಾಡಿಕೊಂಡಿದ್ದು, ಸಿಕ್ಕಿಬಿದ್ದ 05 ಜನ ಆರೋಪಿತರು ಹಾಗೂ ಓಡಿ ಹೋದ 06 ಜನ ಆರೋಪಿತರ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಅಳವಂಡಿ
ಪೊಲೀಸ್ ಠಾಣೆ ಗುನ್ನೆ ನಂ. 76/2016
ಕಲಂ. 143,147,504,341,323,506,354 ಸಹಿತ 149 ಐ.ಪಿ.ಸಿ.
ದಿನಾಂಕ: 22-06-2016 ರಂದು ಮಧ್ಯಾಹ್ನ 12-00 ಗಂಟೆಗೆ ಫಿರ್ಯಾದಿ
ಹುಲಿಗೇಮ್ಮ ಗಂಡ ಸೀಮಪ್ಪ ಕವಲೂರು ಸಾ: ಮೋರನಾಳ ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿಯಾದಿ ನೀಡಿದ್ದು
ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರರಿಗೂ ಹಾಗೂ ಆರೋಪಿತರಿಗೂ ಈಗ್ಗೆ ಸುಮಾರು ಒಂದು ವರ್ಷದಿಂದ ಫಿರ್ಯಾದಿದಾರರ
ಮನೆಯ ಮುಂದಿನ ಜಾಗೆಯ ಸಂಭಂದ ಹಾಗೂ ಅವರ ಮನೆಯ ಮುಂದೆ ಹರಿದು ಹೋಗುವ ನೀರಿನ ಸಂಭಂದ ಜಗಳವಿದ್ದು ಈ
ವಿಷಯವಾಗಿ ಮಾನ್ಯ ನ್ಯಾಯಾಲಯದಲ್ಲಿ ವ್ಯಾಜ್ಯವಿರುತ್ತದೆ. ಸದರಿ ಫಿರ್ಯಾಧಿದಾರರ ಮನೆಯ ಮುಂದೆ ಆರೋಪಿತರು
ನೀರು ಹೋಗದಂತೆ ಒಡ್ಡು ಹಾಕಿದ್ದು, ಸದರಿ ಒಡ್ಡನ್ನು ಸಾರ್ವಜನಿಕರು ರಸ್ತೆಯಲ್ಲಿ ನೀರು ನಿಲ್ಲುತ್ತವೆ
ಅಂತ ಒಡ್ಡನ್ನು ತೆಗೆಸಿದ್ದರು. ನಿನ್ನೆ ದಿನಾಂಕ: 21-06-2016 ರಂದು ಮಧ್ಯಾಹ್ನ 01-00 ಗಂಟೆ ಸುಮಾರಿಗೆ ಆರೋಪಿತನಾದ ಶಂಕ್ರಪ್ಪನು ಒಡ್ಡು ತೆಗೆದು ಫಿರ್ಯಾದಿದಾರರ
ಮನೆಯ ಮುಂದೆ ನೀರು ಹರಿದು ಹೋಗುವಂತೆ ಒಡ್ಡು ಹಾಕುತ್ತಿದ್ದಾಗ ಫಿರ್ಯಾದಿದಾರರ ತಾಯಿ ಹೀಗೇಕೆ ಮಾಡುತ್ತಿಯಾ
ಅಂತಾ ಕೇಳಿದ್ದಕ್ಕೆ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಫಿರ್ಯಾದಿದಾರಳ ತಾಯಿಗೆ ಅವಾಚ್ಯ ಶಬ್ದಗಳಿಂದ
ಬೈದು ಮುಂದೆ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡು ಕೈಯಿಂದ ಮೈ ಕೈ ಗೆ ಹೊಡೆ ಬಡೆ ಮಾಡಿ ಸೀರೆ ಸೆರಗು
ಹಿಡಿದು ಜೆಗ್ಗಾಡುತ್ತಿದ್ದಾಗ ಇದನ್ನು ನೋಡಿದ ಫಿರ್ಯಾದಿದಾರಳು ತಮ್ಮ ತಾಯಿಯನ್ನು ಬಿಡಿಸಲು ಹೋದಾಗ
ಆಕೆಗೂ ಸಹ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ ತಮ್ಮ ತಾಯಿಗೆ
ಹೊಡೆ-ಬಡೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿರ್ಯಾದಿಯ ಸಾರಾಂಶದ
ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಅಳವಂಡಿ
ಪೊಲೀಸ್ ಠಾಣೆ ಗುನ್ನೆ ನಂ. 77/2016
ಕಲಂ. 143,147,504,341,323,506, ಸಹಿತ 149 ಐ.ಪಿ.ಸಿ.
ದಿನಾಂಕ: 22-06-2016 ರಂದು ಮಧ್ಯಾಹ್ನ 1-30 ಗಂಟೆಗೆ ಫಿರ್ಯಾಧಿ ಮರಿಯಮ್ಮ ಗಂಡ
ಮಲ್ಲಪ್ಪ ಹೊರಪೇಟೆ ಸಾ : ಮೋರನಾಳ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಫಿರ್ಯಾಧಿಯನ್ನು ನೀಡಿದ್ದು, ಅದರ ಸಾರಾಂಶವೇನೆಂದರೆ, ಫಿರ್ಯಾಧಿದಾರರ ಹಾಗೂ ಆರೋಪಿತರ ಮನೆಗಳು ಅಕ್ಕ ಪಕ್ಕ ಇದ್ದು ಅವರ ಈಗ್ಗೆ ಸುಮಾರು ದಿನಗಳಿಂದ ಫೀರ್ಯಾಧಿಯ ಮನೆಯ ಮುಂದಿನ ಜಾಗೆಯ ಸಂಭಂದ ಹಾಗೂ ಅವರ ಮನೆಯ ಮುಂದೆ ಹರಿದು ಹೋಗುವ ನೀರಿನ ಸಂಭಂದ ಜಗಳವಿದ್ದು, ಈ ವಿಷಯವಾಗಿ ಮಾನ್ಯ ನ್ಯಾಯಾಲಯದಲ್ಲಿ ವ್ಯಾಜ್ಯವಿರುತ್ತದೆ. ಸದರಿ ಫೀರ್ಯಾಧಿದಾರರ ಮನೆಯ ಮುಂದೆ ಆರೋಪಿತರು ನೀರು ಹೋಗದಂತೆ ಒಡ್ಡು ಹಾಕಿದ್ದು, ಸದರಿ ಒಡ್ಡನ್ನು ಸಾರ್ವಜನಿಕರು ರಸ್ತೆಯಲ್ಲಿ ನೀರು ನಿಲ್ಲುತ್ತವೆ ಅಂತ ಒಡ್ಡನ್ನು ತೆಗೆಸಿದ್ದರು. ನಿನ್ನೆ ದಿನಾಂಕ: 21-06-2016 ರಂದು ಮಧ್ಯಾಹ್ನ 01-00 ಗಂಟೆ ಸುಮಾರಿಗೆ ಫೀರ್ಯಾಧಿದಾರರು ಮತ್ತು ಅವರ ಮಗನಾದ ಶಂಕ್ರಪ್ಪ ಮೋಮ್ಮಗ ಬಸಪ್ಪ ಮಗಳಾದ ಶಿವಪುತ್ರವ್ವ ಇವರೆಲ್ಲರೂ ಕೂಡಿಕೊಂಡು ನೀರು ನಿಂತು ತಮ್ಮ ಗೋಡೆ ನನೆದಿದ್ದರಿಂದ ಗೋಡೆಗೆ ಮಣ್ಣನ್ನು ಹಾಕುತ್ತಿದ್ದಾಗ ಆರೋಪಿತರೆಲ್ಲರೂ ಅಕ್ರಮ ಕೂಟ ರಚಿಸಿಕೊಂಡು ಬಂದು ಪಿಯಾದಿದಾರಳಿಗೆ ಅವಾಚ್ಯ ಶಬ್ದಗಳಿಂದ ಬೈದು ಮುಂದೆ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡು ಕೈ ಯಿಂದ ಮೈ-ಕೈ ಗೆ ಹೊಡೆ ಬಡೆ ಮಾಡಿದ್ದು ಅಲ್ಲದೆ ಅಲ್ಲಿಯೇ ಇದ್ದ ಫಿರ್ಯಾಧಿಯ ಮಗನಾದ ಶಂಕ್ರಪ್ಪ, ಮೋಮ್ಮಗನಾದ ಬಸಪ್ಪ ಹಾಗೂ ಮಗಳಾದ ಶಿವಪುತ್ರವ್ವ ಇವರಿಗೂ ಸಹ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮೈ ಕೈ ಗೆ ಹೊಡೆ- ಬಡೆ ಮಾಡಿ ಜೀವದ ಬೆರಿಕೆ ಹಾಕಿದ್ದು ಇರುತ್ತದೆ. ಕಾರಣ ತಮಗೆ ಹೊಡೆ-ಬಡೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕುಷ್ಟಗಿ
ಪೊಲೀಸ್ ಠಾಣೆ ಗುನ್ನೆ ನಂ. 169/2016
ಕಲಂ. 379, 504, ಐ.ಪಿ.ಸಿ.
ದಿನಾಂಕ 22-06-2016 ರಂದು ಮದ್ಯಾಹ್ನ 3-00 ಗಂಟೆಗೆ ಮಾನ್ಯ ನ್ಯಾಯಾಲಯದಿಂದ
ಖಾಸಗಿ ಫಿರ್ಯಾದಿ ಸಂ: 51/2016 ನೇದ್ದು ಸ್ವೀಕೃತವಾಗಿದ್ದು ಸಾರಾಂಶವೆನೆಂದರೆ, ಫಿರ್ಯಾದಿದಾರರು ಲಾರಿ ನಂ: ಎಂ.ಹೆಚ್-06/ಕೆ-4389 ನೇದ್ದರ ಚಾಲಕನಾಗಿದ್ದು ಸದರಿಯವರು 2004 ರಿಂದ ಚಾಲಕನಾಗಿ ಕೆಲಸ
ಮಾಡುತ್ತಿದ್ದು ದಿನಾಂಕ: 08-06-2016 ರಂದು ಸದರಿ ಲಾರಿ ನಂ: ಎಂ.ಹೆಚ್-06/ಕೆ-4389 ನೇದ್ದರಲ್ಲಿ ಬಟ್ಟೆ ಹಾಗೂ ಇತರ
ಗೃಹೋಪಯೋಗಿ ವಸ್ತುಗಳು ಅಂ.ಕಿ. 18,52,163=00 ರೂ. ಬೆಲೆ ಬಾಳುವವುಗಳನ್ನು ಸದರಿ
ಲಾರಿಯಲ್ಲಿ ಡಿ-1 ಕುರಕುಂಭಾ ಎಂಐಡಿಸಿ ಇಂಡಸ್ಟ್ರಿಯಲ್ ಏರಿಯಾ ಪುನೆ ಸೊಲ್ಲಾಪೂರ ಹೈವೆ
ಕುರಕುಂಭಾ ತಾ: ದಾಂಡ್ ಜಿಲ್ಲಾ: ಪುನೆ ಯಲ್ಲಿ ಲೋಡ ಮಾಡಿಕೊಂಡು
ನೆಲಮಂಗಲ ಮತ್ತು ಹೊಸಕೋಟೆ ಗಳಿಗೆ ಬಂದು ಲಾರಿಯಲ್ಲಿನ ಮಾಲನ್ನು ನೆಲಮಂಗಲ ಮತ್ತು
ಹೊಸಕೋಟೆಯಲ್ಲಿ ಅನ್ ಲೋಡ ಮಾಡಿ ನಂತರ ಸದರಿ ಲಾರಿಯ ಚಾಲಕನು ಲಾರಿಯನ್ನು ತೆಗೆದುಕೊಂಡು ವಾಪಾಸ್
ಹೋಗುವಾಗ್ಗೆ ದಿನಾಂಕ: 09-06-2016 ರಂದು 1-30 ಪಿ.ಎಂ. ಗೆ ಕುಷ್ಟಗಿ ಹತ್ತಿರದ ರಾಮದೇವ ಡಾಬಾದಲ್ಲಿ
ನಿಲ್ಲಿಸಿ ಊಟ ಮಾಡಿದ್ದು ಸದರಿ ಡಾಬಾದ ಮಾಲಿಕನು ಊಟ ಮಾಡಿದ ಬಿಲ್ಲನ್ನು ತೆಗೆದುಕೊಳ್ಳದೇ ನಾಳೆ
ಬಿಲ್ಲನ್ನು ಕೊಡು ಅಂತಾ ಹೇಳಿದ್ದು ನಂತರ ಫಿರ್ಯಾದಿದಾರನು ಊಟ ಮಾಡಿ ಅಲ್ಲಿಯೇ ಮಲಗಿ ಮರು ದಿವಸ
ಬೆಳಿಗ್ಗೆ 6-00 ಗಂಟೆಗೆ ತನ್ನ ಲಾರಿಯನ್ನು ನೋಡಿಕೊಂಡಾಗ ಸದರಿ ಲಾರಿಯ ಹಿಂದಿನ ಬಾಗಿಲು
ತೆರೆದಿದ್ದು ಪರೀಶಿಲಿಸಿ ನೋಡಿದಾಗ ಒಟ್ಟು
96 ಬಾಕ್ಸ ಗಳ ಪೈಕಿ 49 ಬಟ್ಟೆಯ ಬಾಕ್ಸಗಳು ಕಳ್ಳತನವಾಗಿದ್ದು
ಮತ್ತು ಇತರ ಗೃಹೋಪಯೋಗಿ ವಸ್ತುಗಳು ಕಳ್ಳತನ ವಾಗಿದ್ದು ಕಂಡು ಬಂದಿದ್ದು ಈ ಬಗ್ಗೆ ಡಾಬಾದ
ಮಾಲೀಕನಿಗೆ ವಿಚಾರಿಸಿದಾಗ ಸದರಿಯವನು ಅವ್ಯಾಚ್ಯವಾಗಿ ಬೈದು ಕಳುಹಿಸಿದ್ದು ಕಾರಣ ಮುಂದಿನ ಸೂಕ್ತ
ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು
ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
5] ಕೊಪ್ಪಳ
ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 131/2016
ಕಲಂ. 447, 506, 109, 427 ಸಹಿತ
34 ಐ.ಪಿ.ಸಿ.
ದಿ:22.06-2016 ರಂದು
ಮದ್ಯಾಹ್ನ 1-30 ಗಂಟೆಗೆ ಫಿರ್ಯಾದಿದಾರರಾದ ಈರಮ್ಮ ಗಂಡ ಬಾಳಪ್ಪ ಮಾದಿನೂರ. ಸಾ:
ಬಹದ್ದೂರಬಂಡಿ ತಾ:ಜಿ: ಕೊಪ್ಪಳ. ಇವರು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿಯ ಸಾರಾಂಶವೆನಂದರೆ, ಕೊಪ್ಪಳ
ತಾಲ್ಲುಕಾ ಕುಟುಗನಹಳ್ಳಿ ಸೀಮಾದಲ್ಲಿ ಜಮೀನು ಸರ್ವೇ ನಂ: 17 ಮತ್ತು 18 ರಲ್ಲಿ ಒಟ್ಟು 30 ಎಕರೆ ಜಮೀನು
ಇದ್ದು ಸದರಿ ಜಮೀನು ಪಿತ್ರಾರ್ಜಿತ ಆಸ್ತಿ ಇದ್ದು, ಸದರಿ
ಜಮೀನುದಲ್ಲಿ ಫಿರ್ಯಾದಿ ಮತ್ತು ತನ್ನ ತಮ್ಮಂದಿರಾದ 1] ಸಿದ್ದಪ್ಪ
ಮತ್ತು 2] ನಂದೆಪ್ಪ @ ಎನ್. ಆನಂದ
ಕೂಡಿ ಸಮಾನವಾಗಿ ಅನುಭವಿಸುತ್ತಾ ಸಾಗುವಳಿ ಮಾಡಿಕೊಂಡು ಬಂದಿರುತ್ತೇವೆ. ನಂತರ ದಿ:16-06-16 ರಂದು ಸಾಯಂಕಾಲ
4-30 ಗಂಟೆಯ ಸುಮಾರಿಗೆ ಆರೋಪಿತರು ಸದರಿ ಜಮೀನುದಲ್ಲಿ ಯಾವುದೇ ರೀತಿಯ
ಹಕ್ಕು ಹಾಗೂ ಹಿತಾಸಕ್ತಿ ಇರದಿದ್ದರೂ ಒಂದು ಟ್ರ್ಯಾಕ್ಟರ ಚಾಲಕ ಮಾರುತಿ ಇವರ ಸಮೇತೆ ಕಳುಹಿಸಿ
ಬೆಳೆದ ಬೆಳೆಯ ಹೊಲದಲ್ಲಿ ಅನಧಿಕೃತ ಪ್ರವೇಶ ಮಾಡಿ 4 ಎಕರೆ
ಬೆಳೆಯಷ್ಟು ಟ್ರಿಲ್ಲರ ಹೊಡೆದು ಲುಕ್ಸಾನ ಮಾಡಿರುತ್ತಾರೆ. ಅಲ್ಲದೇ ಆರೋಪಿ ನಂ: 01 ಟ್ರ್ಯಾಕ್ಟರ
ಡ್ರೈವರ ಮಾರುತಿ ಇವರಿಗೆ ಪೋನ ಮಾಡಿ ಧಮ್ಕಿ ಹಾಕಿದ್ದಲ್ಲದೇ ಇಲ್ಲಿಂದ ಹೋಗದಿದ್ದರೆ ಟ್ರ್ಯಾಕ್ಟರ
ಓಡಿಸಿ ಪ್ರಾಣ ತೆಗೆದುಬಿಡು ಎಂದು ಜೀವದ ಭಯವನ್ನು ಟ್ರ್ಯಾಕ್ಟರ ಡ್ರೈವರ್ ಮುಖಾಂತರ ಪೋನದಲ್ಲಿ
ತಿಳಿಸಿ ಜೀವದ ಭಯ ಒಡ್ಡಿರುತ್ತಾನೆ. ಸದರಿ ಟ್ರ್ಯಾಕ್ಟರ ಡ್ರೈವರ ಮಾರುತಿ ಗೆ ಫಿರ್ಯಾದಿತರು ಈ
ರೀತಿ ಏಕೆ ಮಾಡಬೇಡಿರಿ ಎಂದು ವಿನಂತಿಸಿಕೊಂಡಾಗ ಅಲ್ಲಿಂದ ಡ್ರೈವರ್ ತನ್ನ ಟ್ರ್ಯಾಕ್ಟರ
ತೆಗೆದುಕೊಂಡು ಹೋಗಿದ್ದಾನೆ. ಇದಕ್ಕೆಲ್ಲಾ ಆರೋಪಿ ನಂ: 02 ಆರೋಪಿ ನಂ: 01 ನೇದ್ದವರಿಗೆ
ಪ್ರಚೋದನೆ ನೀಡಿ ಮಾಡಿಸಿದ್ದು ಇರುತ್ತದೆ. ಇದರಿಂದ ಸದರಿ ಹೊಲದಲ್ಲಿ 4 ಎಕರೆ ಬೆಳೆಗೆ
ಅಂದಾಜು 1 ಲಕ್ಷ ರೂ. ದಷ್ಟು ಲುಕ್ಸಾನ ಆಗಿದ್ದು ಇರುತ್ತದೆ. ಅಲ್ಲದೇ ದಿ:21-06-16 ರಂದು ರಾತ್ರಿ 9-00 ಗಂಟೆಯ
ವೇಳೆಯಲ್ಲಿ ಸದರಿ ಆರೋಪಿತರು ಉಳಿದ 26 ಎಕರೆ
ಜಮೀನುದಲ್ಲಿದ್ದ ಬೆಳೆಯನ್ನು ಟ್ರಾಲಿ ಹೊಡೆಸಿ ಲುಕ್ಸಾನ ಮಾಡಿರುತ್ತಾರೆ. ಹೀಗೆ ಸುಮಾರು
4,50,000=00 ರಿಂದ 5,00,000=00 ರೂ. ದಷ್ಟು
ಲುಕ್ಸಾನ ಆಗಿರುತ್ತದೆ. ಇದರ ಬಗ್ಗೆ ಫಿರ್ಯಾದಿತರು ಆರೋಪಿತರಿಗೆ ಕೇಳಿದ್ದಕ್ಕೆ ಕೇವಲ ಬೆಳೆ
ಅಷ್ಟೇ ನಾಶ ಮಾಡಿರುತ್ತೇವೆ. ಹೆಚ್ಚಿಗೆ ಮಾತನಾಡಿದರೇ ನಿಮಗೆ ಅದೇ ಜಮೀನುನಲ್ಲಿ ಸಾಲಾಗಿ ಹೂತು
ಬಿಡುತ್ತೇವೆಂದು ಜೀವದ ಭಯ ಒಡ್ಡಿರುತ್ತಾರೆ. ಅಂತಾ ಮುಂತಾಗಿ
ಸಲ್ಲಿಸಿದ ಫಿರ್ಯಾದಿ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
6] ಕೊಪ್ಪಳ
ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 132/2016
ಕಲಂ. 304(ಎ) ಐ.ಪಿ.ಸಿ.
ದಿ:22-06-16 ರಂದು
ಮದ್ಯಾಹ್ನ 3-00 ಗಂಟೆಗೆ ಕಿನ್ನಾಳ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜದಲ್ಲಿ ಓರ್ವ
ಶಾಲಾ ಬಾಲಕ ಮೃತಪಟ್ಟ ಬಗ್ಗೆ ದೂರವಾಣಿ ಮೂಲಕ ಠಾಣೆಗೆ ಮಾಹಿತಿ ಬಂದಿದ್ದು ಕೂಡಲೇ ನಮ್ಮ ಠಾಣೆಯ
ಶ್ರೀ ಚಿತ್ತರಂಜನ್. ಡಿ. ಪಿ.ಎಸ್.ಐ ರವರು ಕಿನ್ನಾಳ ಗ್ರಾಮಕ್ಕೆ ಭೇಟಿ ನೀಡಿದಾಗ ಫಿರ್ಯಾದಿ
ಕರಿಯಪ್ಪ ಬನ್ನಿಕಟ್ಟಿ ಇವರು ನೀಡಿದ ದೂರಿನ ಸಾರಾಂಶವೇನೆಂದರೇ, ಕಿನ್ನಾಳ ಗ್ರಾಮದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜದಲ್ಲಿನ
ಪ್ರಿನ್ಸಿಪಾಲ್ ಹಾಗೂ ಇತರರು ತಮ್ಮ ಕಟ್ಟಡದ ರೂಮಿನ ಪಕ್ಕದಲ್ಲಿ ವಿಧ್ಯಾರ್ಥಿಗಳು ಶೌಚಾಲಯಕ್ಕೆ
ಹೋಗುವ ದಾರಿಯ ಸಂದಿಯಲ್ಲಿ ಪ್ರಿನ್ಸಿಪಾಲ್ ರೂಮಿನ ಗೋಡೆಗೆ ಕರೆಂಟ್ ಅರ್ಥಿಂಗ್ ವೈಯರ್ ಗೆ
ಸುರಕ್ಷತೆ ದೃಷ್ಟಿಯಿಂದ ಯಾವುದೇ ಪೈಪ ಜೋಡಣೆ ಮಾಡದೇ ಅಪಾಯವಾಗುವ ಸ್ಥಿತಿಯಲ್ಲಿ ಹಾಗೆಯೇ ಬಿಟ್ಟು
ನಿರ್ಲಕ್ಷ್ಯತನ ವಹಿಸಿದ್ದರಿಂದ, ಇಂದು ದಿ:22-06-16 ರಂದು
ಮಧ್ಯಾಹ್ನ 2-30 ಗಂಟೆಯ ಸುಮಾರಿಗೆ ಫಿರ್ಯಾದಿಯ ಮಗ ಹನುಮೇಶ ನಿಗೆ ಸದರಿ ಅರ್ಥಿಂಗ್
ವೈಯರ ತಗುಲಿ ಶಾರ್ಟ ಆಗಿ ಮೃತಪಟ್ಟಿದ್ದು ಇರುತ್ತದೆ. ಕಾರಣ ಸದರಿ ಕಾಲೇಜಿನ ಪ್ರಿನ್ಸಿಪಾಲ್ ಹಾಗೂ
ಸಂಬಂಧಪಟ್ಟ ಇತರರ ಮೇಲೆ ಸೂಕ್ತ ಕಾನೂನು ಕ್ರಮ ಮಾಡಬೇಕೆಂದು ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು
ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
7] ಕೊಪ್ಪಳ
ನಗರ ಪೊಲೀಸ್ ಠಾಣೆ ಗುನ್ನೆ ನಂ. 105/2016
ಕಲಂ. 143, 147, 341, 323, 324, 354, 504, 506 ಸಹಿತ
149 ಐ.ಪಿ.ಸಿ.
ದಿನಾಂಕ 22-06-2016 ರಂದು ಸಾಯಂಕಾಲ 07-00 ಗಂಟೆಗೆ ಪಿರ್ಯಾಧಿದಾರರಾದ ಶ್ರೀಮತಿ ಶಹಜಾನ ಗಂಡ ಮಕಬುಲಸಾಬ ಹೂಗಾರ ವ: 38 ಜಾ: ಮುಸ್ಲೀಂ ಸಾ: ನಿರ್ಮಿತಿ ಕೇಂದ್ರ ಕೊಪ್ಪಳ ಇವರು ಹೇಳಿಕೆ ಪಿರ್ಯಾಧಿ ನೀಡಿದ ಸಾರಾಂಶವೇನೆಂದರೆ ದಿನಾಂಕ 21-06-2016 ರಂದು ಸಾಯಂಕಾಲ 07-30 ಗಂಟೆಗೆ ಪಿರ್ಯಾಧಿದಾರರು ತಮ್ಮ ಮನೆಯಲ್ಲಿದ್ದಾಗ ತಮ್ಮ ಮಗ ಸರ್ತಾಜ್ ಈತನು ಬಂದು ತನ್ನ ಗೆಳೆಯರಾದ ಶಿರಾಜ್, ಅಲ್ತಾಫ್ ರೊಂದಿಗೆ ದೇವರಾಜ ಅರಸ್ ಕಾಲೋನಿಯಲ್ಲಿ ಪಾನಿಪುರಿ ತಿನ್ನುವಾಗ ಅಲ್ಲಿಗೆ ದೇವರಾಜ ಅರಸ ಕಾಲೋನಿಯ ಅಲ್ತಾಫ್ ಇತನು ನನ್ನ ಗೆಳೆಯನಾದ ಅಲ್ತಾಫ್ ಇತನ ಟೋಪಿಯನ್ನು ತೆಗೆದುಕೊಂಡು ಕಾಡಿಸುತ್ತಿದ್ದು ಆಗ ಶಿರಾಜ ಇತನು ಅಲ್ತಾಫ್ ಇತನಿಗೆ ಯಾಕೆ ಟೋಪಿಯನ್ನು ತೆಗೆದುಕೊಂಡು ಕಾಡಿಸುತ್ತೀ ಅಂತಾ ಬೈದು ಕಳುಹಿಸಿದನು. ನಂತರ ಅಲ್ತಾಫ್ ಇತನು ಅಲ್ಲಿಂದ ಹೋಗಿ ತನ್ನ ಗೆಳೆಯನಾದ ಜಿಲಾನ ಇತನನ್ನು ಕರೆದುಕೊಂಡು ಬಂದು ಶಿರಾಜನಿಗೆ ಹೊಡೆದಿದ್ದು ಇರುತ್ತದೆ ಅಂತಾ ತಿಳಿಸಿದನು. ಆಗ ನಾನು ಕೂಡಲೇ ನನ್ನ ಮಗ ಸರ್ತಾಜ್ ಇತನನ್ನು ಕರೆದುಕೊಂಡು ದೇವರಾಜ ಅರಸ್ ಕಾಲೋನಿಯ 30 ನೇ ನಂಬರ ಟಿ.ಸಿ ಹತ್ತಿರ ರಾತ್ರಿ 8:30 ಗಂಟೆಯ ಸುಮಾರಿಗೆ ಹೋಗುತ್ತಿರುವಾಗ ಅಲ್ಲಿಗೆ ಏಕಾಏಕೀ ಆರೋಪಿತರಾದ 1] ರಸೂಲ್ 2] ಜಿಲಾನ್ 3] ನೂರ 4] ಇಶರ್ಾದ್ 5] ಶಬ್ಬೀರ 6] ರಿಯಾಜ್ 7] ಗೌಸ್ 8] ಮಹಿಬೂಬ್ ಬೀ 9] ಗೋರಿಮಾ ಇವರೇಲ್ಲರೂ ಗುಂಪು ಕಟ್ಟಿಕೊಂಡು ಬಂದು ನಮ್ಮನ್ನು ತಡೆದು ನಿಲ್ಲಿಸಿ ಏನಲೇ ಚಿನಾಲಿ ಭೋಸುಡಿ ನಿನ್ನ ಮಗನನ್ನು ಕರೆದುಕೊಂಡು ನಮ್ಮ ವಿರುದ್ದ ಪೊಲೀಸ ಕಂಪ್ಲೇಂಟ್ ಕೊಡುತ್ತೀಯೆನಲೇ ಅಂತಾ ಅಂದವರೆ ರಸೂಲ್, ಜಿಲಾನ್, ಇವರು ನನ್ನ ಕೈ ಹಿಡಿದು ಜಗ್ಗಾಡಿ ತಮ್ಮ ಕೈಯಲ್ಲಿದ್ದ ಕಟ್ಟಿಗೆಯಿಂದ ನನ್ನ ಕುತ್ತಿಗೆಯ ಹಿಂಬಾಗಕ್ಕೆ ಹೊಡೆದರು ನಂತರ ಮಹಿಬೂಬ ಬೀ, ಗೋರಿಮಾ ಇವರು ಇವಳನ್ನು ಬಿಡಬೇಡಿರಿ ಅಂತಾ ತಮ್ಮ ಕೈಗಳಿಂದ ನನಗೆ ಮೈಕೈಗೆ ಹೊಡೆದರು. ನಂತರ ನನ್ನ ಮಗ ಸತರ್ಾಜ್ ಇತನು ನನಗೆ ಬಿಡಿಸಲು ಬಂದಿದ್ದು ಆಗ ಎನಲೇ ಭೋಸುಡಿ ಮಗನೇ ಜಗಳ ಬಿಡಸಾಕ್ ಬರತಿಯಾ ಅಂತಾ ನೂರ, ಇರ್ಶಾದ್, ಶಬ್ಬೀರ, ರಿಯಾಜ್, ಗೌಸ್ ಇವರು ತಮ್ಮ ಕೈಗಳಿಂದ ನನ್ನ ಮಗನಿಗೆ ಹೊಡೆದರು ನಂತರ ನಾನು ಗಾಬರಿಯಾಗಿ ಕೂಗಾಡಲು ಅಲ್ಲಿಯೇ ಇದ್ದ ದಾದು ತಂದೆ ಗಫಾರ್, ಮದರ್ಾನ್ ತಂದೆ ಗೌಸಸಾಬ ಸಿಕ್ಕಲಗಾರ, ಮುನೀರ ತಂದೆ ಅಬ್ದುಲ್ ಗಫಾರ್, ಬಸವರಾಜ ಚಿಕ್ಕೀರಪ್ಪ ಇವರು ಬಂದು ಜಗಳ ಬಿಡಿಸಿದರು. ನಂತರ ಆರೋಪಿತರೇಲ್ಲರೂ ಅಲ್ಲಿಂದ ಹೋಗುವಾಗ ಇವತ್ತು ಜೀವಂತ ಉಳಿದುಕೊಂಡಿರಿ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿ ಹೋದರು. ಗಾಯಗೊಂಡ ನಾನು ಹಾಗೂ ನನ್ನ ಮಗ ಸರ್ತಾಜ್ ಇಬ್ಬರೂ ಒಂದು ಆಟೋದಲ್ಲಿ ಚಿಕಿತ್ಸೆ ಕುರಿತು ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ. ನಾನು ಈ ಘಟನೆಯ ಬಗ್ಗೆ ನಮ್ಮ ಮನೆಯಲ್ಲಿ ತಿಳಿಸಿ ಮತ್ತು ಚಿಕಿತ್ಸೆ ಪಡೆದುಕೊಂಡು ತಡವಾಗಿ ಇಂದು ತಮ್ಮಲ್ಲಿ ಈ ಹೇಳಿಕೆಯನ್ನು ನೀಡಿದ ಪಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.
8] ಹನಮಸಾಗರ
ಪೊಲೀಸ್ ಠಾಣೆ ಗುನ್ನೆ ನಂ. 50/2016
ಕಲಂ. ಮಹಿಳೆ ಕಾಣೆ.
ಫಿರ್ಯಾದಿ ನಿಂಗರಾಜ
ತಂದೆ ಈಶ್ವರಪ್ಪ ನರಸಕೊಪ್ಪ, ವಯಾ: 36 ವರ್ಷ ಜಾ: ಲಿಂಗಾಯತ, ಉ: ಕೂಲಿ ಕೆಲಸ ಸಾ: ಯಲಬುರ್ತಿ,
ಹಾ/ವ: ಹನಮಸಾಗರ ತಾ: ಕುಷ್ಟಗಿ ಇವರು ಹನಮಸಾಗರದ ಹೊಟೇಲನಲ್ಲಿ ಕೆಲಸ ಮಾಡಿಕೊಂಡಿದ್ದು, ಫಿರ್ಯಾದಿಯ
ಹೆಂಡತಿ ಜಯಶ್ರೀ ವಯಾ: 28 ವರ್ಷ, ಈಕೆಯು ಮೈಯಲ್ಲಿ ಹುಷಾರಿಲ್ಲಿದ್ದರಿಂದ ದಿನಾಂಕ: 20-06-2016
ರಂದು ಸಾಯಾಂಕಾಲ ತನ್ನ ತಾಯಿಯ ಹತ್ತಿರ ಬಾಡಿಗೆ ಮನೆಗೆ ಬಂದು ಇದ್ದು, ನಂತರ ದಿನಾಂಕ:
21-06-2016 ರಂದು ಬೆಳಿಗ್ಗೆ 08-00 ಗಂಟೆಗೆ ಚರಗಿ ತೆಗೆದುಕೊಂಡು ಹೋಗಿ ಬರುತ್ತೇನೆ ಅಂತಾ ಹೇಳಿ
ಹೋಗಿದ್ದು, ವಾಪಸ್ ಮನೆಗೆ ಬಾರದೇ ಇರುವುದರಿಂದ ಎಲ್ಲಾ ಕಡೆ ಹುಡುಕಾಡಿದರೂ ಸಿಗದೇ ಇದ್ದುದರಿಂದ
ಇಂದು ತಡವಾಗಿ ಠಾಣೆಗೆ ಬಂದು ಕಾಣೆಯಾದ ತನ್ನ ಹೆಂಡತಿಯನ್ನು ಪತ್ತೆ ಹಚ್ಚಿ ಕೊಡಲು ವಿನಂತಿ ಅಂತಾ
ಮುಂತಾಗಿ ಫಿರ್ಯಾದಿ ಅರ್ಜಿ ನೀಡಿದ್ದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
9] ಕೂಕನೂರು
ಪೊಲೀಸ್ ಠಾಣೆ ಗುನ್ನೆ ನಂ. 69/2016 ಕಲಂ. 447, 427, ಐ.ಪಿ.ಸಿ.
ದಿನಾಂಕ:22-06-2016 ರಂದು 8-00
ಪಿಎಂಕ್ಕೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ಒಂದು ಪಿರ್ಯಾದಿಯನ್ನು
ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ತಳಬಾಳ ಸೀಮಾದಲ್ಲಿರುವ ತಮ್ಮ ಅತ್ತೆಯ ಹೆಸರಿನಲ್ಲಿರುವ
ಹೊಲ ಸರ್ವೇ ನಂ:65 ವಿಸ್ತೀರ್ಣ 3 ಎ. 7 ಗುಂಟೆ ಹೊಲದಲ್ಲಿ 25,000-00 ರೂ. ಖರ್ಚು ಮಾಡಿ, ಹೆಸರು
ಮತ್ತು ತೊಗರಿಯನ್ನು ಬಿತ್ತಿದ್ದು, ಅದನ್ನು ತಳಕಲ್ ಗ್ರಾಮದ ರಮೇಶ ತಂದೆ ಮಲ್ಲಪ್ಪ ಹೊಸಮನಿ ಈತನು
ಸದರಿ ಹೊಲವನ್ನು ಖರೀದಿಸಿರುತ್ತೇವೆ ಅಂತಾ ತಮ್ಮ ಮೇಲ್ಕಾಣಿಸಿದ ಹೊಲದಲ್ಲಿ ಅತೀಕ್ರಮ ಪ್ರವೇಶ
ಮಾಡಿ, ಬಿತ್ತಿದ ಬೆಳೆಯನ್ನು ಹರಗಿ ಲುಕ್ಷಾನ್ ಮಾಡಿದ್ದು, ಕಾರಣ, ಸದರಿಯವರ ಮೇಲೆ ಕಾನೂನು ರೀತಿಯ
ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡೆನು.
10] ಗಂಗಾವತಿ
ನಗರ ಪೊಲೀಸ್ ಠಾಣೆ ಗುನ್ನೆ ನಂ. 122/2016 ಕಲಂ. 379 ಐ.ಪಿ.ಸಿ.
ದಿನಾಂಕ:12-04-2016 ರಂದು 16-00 ಗಂಟೆಯಿಂದ 18-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ
ಕಳ್ಳರು ಗಂಗಾವತಿ ನಗರದ ತಾಲೂಕ ಕ್ರೀಡಾಂಗಣದ ಹೊರಗಡೆ ನಿಲ್ಲಿಸಿದ ಫಿರ್ಯಾದಿದಾರರ ಟಿ.ವಿ.ಎಸ್
ಸ್ಪೋರ್ಟ್ಸ ಇ.ಎಸ್ ಮೋ. ಸೈಕಲ್ ನಂ ಕೆ,ಎ 37 ಡಬ್ಲ್ಯೂ 9397 ಚಾಸ್ಸಿ ನಂ MD625MF55E1A83345 ಇಂಜಿನ್ ನಂ DF5AE1098001 ಇದ್ದು ಹಸಿರು ಮಿಶ್ರಿತ ಕಪ್ಪು ಬಣ್ಣದ್ದು ಅಂ.ಕಿಮ್ಮತ್ತು
ರೂ. 30,000-00 ಬೆಲೆ
ಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ಗಣಕಿಕೃತ ಫಿರ್ಯಾದಿಯ ಸಾರಾಂಶದ
ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ.122/2016 ಕಲಂ. 379 ಐ.ಪಿ.ಸಿ. ನೇದ್ದರ
ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment