Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, June 24, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 174/2016 ಕಲಂ: 87 Karnataka Police Act:.
ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆ ರವರು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲಾಪೂರು ಸೀಮಾದ ವಾನಭದ್ರೇಶ್ವರ ಗುಡ್ಡದ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಹಾರ ಎಂಬ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಮೇರೆಗೆ ಕೂಡಲೇ ಹೋಗಿ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 4 ಜನರು ಸಿಕ್ಕಿ ಬಿದ್ದಿದ್ದು, ಸಿಕ್ಕವರ ಹೆಸರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ಅಂಬರೇಶ ತಂದೆ ಶೇಖರಪ್ಪ ಇಲಕಲ್, ವಯಸ್ಸು 30 ವರ್ಷ, ಜಾತಿ: ಲಿಂಗಾಯತ ಉ: ಗೌಂಡಿ ಕೆಲಸ ಸಾ: ಉಪ್ಪಿನಮಾಳಿ ಕ್ಯಾಂಪ್-ಗಂಗಾವತಿ (2) ಬಾಲಪ್ಪ ತಂದೆ ದೊಡ್ಡ ಈರಣ್ಣ, ವಯಸ್ಸು 31 ವರ್ಷ, ಜಾತಿ: ಲಿಂಗಾಯತ ಉ: ಕಿರಾಣಿ ಅಂಗಡಿ ಸಾ: ಪ್ರಶಾಂತ ನಗರ-ಗಂಗಾವತಿ (3) ಮಹಿಬೂಬ ತಂದೆ ಖಾಜಾಸಾಬ ಕುರಗೋಡ, ವಯಸ್ಸು 22 ವರ್ಷ, ಜಾತಿ: ಮುಸ್ಲೀಂ ಉ: ಮಂಡಾಳ ಭಟ್ಟಿ ಸಾ: ಶರಣಬಸವೇಶ್ವರ ಕ್ಯಾಂಪ್-ಗಂಗಾವತಿ (4) ಮೈನು ತಂದೆ ಮಹಿಬೂಬಸಾಬ, ವಯಸ್ಸು 35 ವರ್ಷ, ಜಾತಿ: ಮುಸ್ಲೀಂ ಉ: ಗೌಂಡಿ ಕೆಲಸ ಸಾ: ಪ್ರಶಾಂತ ನಗರ-ಗಂಗಾವತಿ ಅಂತಾ ತಿಳಿಸಿದರು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ 1,955/- ರೂಪಾಯಿ, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಚೀಲ ಸಿಕ್ಕಿದ್ದು, ಈ ಬಗ್ಗೆ ಮಧ್ಯಾಹ್ನ 3:30 ರಿಂದ 4:30 ಗಂಟೆಯವರೆಗೆ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತರೊಂದಿಗೆ ವಾಪಸ್ ಠಾಣೆಗೆ ಬಂದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 135/2016 ಕಲಂ: 78(3) Karnataka Police Act:.
ದಿನಾಂಕ:23-06-2016 ರಂದು ರಾತ್ರಿ 7-10 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ, ಸಿಡಗನಹಳ್ಳಿ ಗ್ರಾಮದ ಶ್ರೀ ಹನಮಂತ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಆರೋಪಿತರಾದ 1] ಬಾಳಪ್ಪ ತಂದೆ ಭೀಮನಗೌಡ ಜರಕುಂಟಿ ಸಾ: ಸಿಡಗನಳ್ಳಿ 2] ಗುಂಡಪ್ಪ ತಂದೆ ಗುಂಡಪ್ಪ ದಳಪತಿ ಸಾ: ಸಿಡಗನಹಳ್ಳಿ ಇವರು ಬರ ಹೋಗುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00 ರೂಪಾಯಿಗಳನ್ನು ಕೊಡುತ್ತೇವೆ. ಅಂತಾ ಕೂಗುತ್ತಾ ಮಟಕಾ ನಶೀಬದ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ ಸಾಹೇಬರು ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ನಗದು ಹಣ ರೂ. 460=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು, ಆರೋಪಿ ನಂ: 02 ಓಡಿ ಹೋಗಿದ್ದು ಇರುತ್ತದೆ. ಅಂತಾ ನೀಡಿದ ವರದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
3] ಕೂಕನೂರು ಪೊಲೀಸ್ ಠಾಣೆ ಗುನ್ನೆ ನಂ:70/2016 ಕಲಂ. 87 Karnataka Police Act  

ಪಿ.ಎಸ್.. ಕುಕನೂರ ಠಾಣೆರವರು ಸಿ.ಪಿ.ಐ. ಮತ್ತು ಡಿ.ಎಸ್.ಪಿ. ಸಾಹೇಬರ ಮಾರ್ಗದರ್ಶನದಂತೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 6.00 ಪಿಎಂಕ್ಕೆ ಆಡೂರು ಗ್ರಾಮದ ತೇರಿನ ಮನೆಯ ಹಿಂದಿನ ಆಲದ ಮರದ ಕೆಳಗಿನ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, 1] ಶರಣಯ್ಯ ತಂದೆ ಶಂಕ್ರಯ್ಯ ಪೂಜಾರ, ವಯಾ 42, ಜಾ:ಜಂಗಮ, ಉ:ಒಕ್ಕಲುತನ, 2] ಸಂಗಪ್ಪ ತಂದೆ ಬಸವರಡ್ಡೆಪ್ಪ ಮುತ್ತಾಳ, ವಯಾ 48, ಜಾ:ರಡ್ಡಿ, ಉ:ಒಕ್ಕಲುತನ, 3] ಶರಣಯ್ಯ ತಂ.ಷಷ್ಮುಖಯ್ಯ ಪೂಜಾರ, ವಯಾ 38, ಜಾ:ಜಂಗಮ, ಉ:ಒಕ್ಕಲುತನ, 4] ವೀರಬಸಯ್ಯ ತಂ.ರುದ್ರಯ್ಯ ಗಣಾಚಾರಿ, ವಯಾ 50, ಜಾ:ಜಂಗಮ, ಉ:ಒಕ್ಕಲುತನ, 5] ಶಿವಪುತ್ರಪ್ಪ ತಂ.ಸುಬ್ರಾಯ ಆರೇರ, ವಯಾ 46, ಜಾ:ಆರೇರ, ಉ: ಒಕ್ಕಲುತನ, 6] ಅಜ್ಜಪ್ಪ ತಂ.ಅನಂತಪ್ಪ ಆರೇರ, ವಯಾ 35, ಜಾ:ಆರೇರ, ಉ:ಒಕ್ಕಲುತನ, 7] ಗವಿಸಿದ್ದಪ್ಪ ತಂ.ಯಲ್ಲಪ್ಪ ಮೋಟಮ್ಮನವರ್, ವಯಾ 35, ಜಾ:ರಡ್ಡಿ, ಉ:ಒಕ್ಕಲುತನ, ಎಲ್ಲರೂ ಸಾ:ಆಡೂರು, ತಾ:ಯಲಬುರ್ಗಾ ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಸದರಿಯವರಿಂದ ಹಾಗೂ ಜೂಜಾಟದ ಕಣದಿಂದ ಒಂದು ಟಾವೆಲ್ಲ್, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 1600/- ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

4] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 125/2016 ಕಲಂ: 363 ಐ.ಪಿ.ಸಿ.
ದಿನಾಂಕ. 23-06-2016 ರಂದು 6-00 ಪಿ.ಎಮ್.ಕ್ಕೆ ಫಿರ್ಯಾದಿದಾರರಾದ ಹನುಮವ್ವ ಗಂಡ ಸುರೇಶ ಉಪ್ಪಾರ ವಯಾ:  38 ವರ್ಷ, ಜಾ-ಉಪ್ಪಾರ, ಉ:-ಕೂಲಿಕೆಲಸ, ಸಾ-ಹಿಟ್ನಾಳ ತಾ: ಜಿ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಹಾಜರಪಡಿಸಿದ್ದರ ಸಾರಾಂಶವೇನೆಂದರೆ  ದಿನಾಂಕ. 20-06-2016 ರಂದು ಮುಂಜಾನೆ 9-30 ಗಂಟೆ ಸುಮಾರಿಗೆ ಫಿರ್ಯಾದಿದಾರಳ ಮಗಳಾದ ಭಿಮವ್ವ ವಯಾ 16 ವರ್ಷ ಈಕೆಯು ಬಟ್ಟೆತೊಳೆದುಕೊಂಡು ಬರಲು ಹಿಟ್ನಾಳ ಡ ದಂಡೆಕಾಲುವೆಗೆ ಹೋಗಿದ್ದು ಅಲ್ಲಿ ಯಾರೋ ದುಷ್ಟರು ಬೀಮವ್ವಳನ್ನು ಅಪಹರಣ ಮಾಡಿಕೊಂಡು ಮಾಡಿಕೊಂಡು ಹೋಗಿರುತ್ತಾರೆ. ಮದ್ಯಾಹ್ನ 12-00 ಗಂಟೆಯಾದರು ಆಕೆಯು ಮನೆಗೆ ಬರದೆಇದ್ದುದರಿಂದ ನೋಡಿಕೊಂಡು ಬರಲು ಹೋದಾಗ ಕಾಲುವೆ ದಂಡೆಯ ಮೇಲೆ ಬಟ್ಟೆ ತುಂಬಿದ ಬಕೆಟು ಹಾಗೆ ಇದ್ದುದನ್ನು ಕಂಡು ನಂತರ ಅಂದಿನಿಂದ ಇಂದಿನ ವರೆಗೆ ಹುಡುಕಾಡಿದ್ದು ಸಿಕ್ಕಿರುವದಿಲ್ಲಾ ಕಾರಣ ಅಪಹರಣಕ್ಕೋಳಗಾದ ಭೀಮವ್ವ ವಳನ್ನು ಪತ್ತೆ ಹಚ್ಚಿ ಆರೋಪಿತರ ಮೇಲೆ ಕಾನೂನ ಪ್ರಕಾರ ಕ್ರಮ ಜರುಗಿಸಲು ವಿನಂತಿ  ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರರಕಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
5] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 170/2016 ಕಲಂ: 279, 337, 338 ಐ.ಪಿ.ಸಿ.
ದಿನಾಂಕ : 23-06-2016 ರಂದು ರಾತ್ರಿ 9-30 ಗಂಟೆಗೆ ಪಿರ್ಯಾದಿದಾರು ಠಾಣೆಗೆ ಹಾಜರಾಗಿ ಗಣಕೀಕೃಥ ಪಿರ್ಯಾಧಿ ಹೇಳಿಕೆ ಸಾರಾಂಶವೇನೆಂದರೇ, ದಿನಾಂಕ: 23-06-2016 ರಂದು ಸಂಜೆ 7-00 ಗಂಟೆಯ ಸುಮಾರಿಗೆ ನಾನು ನಮ್ಮ ಕುರಿಗಳನ್ನು ಮೇಯಿಸಿಕೊಂಡು ವಾಪಾಸ್ ನಮ್ಮೂರಿಗೆ ಗುಮಗೇರಾಕ್ಕೆ ಹೋಗುವಾಗ ಕುಷ್ಟಗಿ-ತಾವರಗೇರಾ ರೋಡಿನಲ್ಲಿ ನಮ್ಮೂರು ಇನ್ನೂ ಸ್ವಲ್ಪ ದೂರ ಇರುವಾಗ್ಗೆ ರಾಘವೇಂಧ್ರರಾವ್ ದೇಸಾಯಿ ರವರ ಹೊಲದ ಹತ್ತಿರ ನಾನು ರಸ್ತೆಯ ಎಡ ಬದಿಯಲ್ಲಿ ಕುರಿಗಳನ್ನು ಹೊಡೆದುಕೊಂಡು ಹೋಗುತ್ತಿರುವಾಗ ಕುಷ್ಟಗಿ ಕಡೆಯಿಂದ ಒಂದು ಮೋ.ಸೈ. ಸವಾರನು ತನ್ನ ಮೋ.ಸೈ ನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ನನಗೆ ಹಿಂದಿನಿಂದ ಟಕ್ಕರ ಮಾಡಿ ಅಪಘಾತಪಡಿಸಿ ನನ್ನನ್ನು ಕೆಡವಿ ತಾನೂ ಸಹ ಗಾಡಿಯೊಂದಿಗೆ ಕೆಳಗೆ ಬಿದ್ದನು, ಅದರಿಂದ ನನಗೆ ಬಲಗಾಲ ಮೀನ ಗಂಡದ ಹತ್ತಿರ ಒಳಪೆಟ್ಟು, ಬಲಗಾಲು ಮೊಣಕಾಲ ಕೆಳಗೆ ತೆರಚಿದ ಗಾಯ ಎಡಗಾಲು ಮೀನಗಂಡಕ್ಕೆ ತೆರಚಿದ ಗಾಯ, ಬಲ ಹಿಂದೆಲೆಗೆ ಒಳಪೆಟ್ಟು ಮತ್ತು ಬೆನ್ನಿಗೆ ಒಳಪೆಟ್ಟುಗಳಾಗಿದ್ದು ನಂತರ ಅಪಘಾತಪಡಿಸಿದ ವ್ಯಕ್ತಿಯನ್ನು ನೋಡಲಾಗಿ ಆತನಿಗೆ ಬಲಗಾಲ ಮೊಣಕಾಲಿಗೆ ತೆರಚಿದ ಗಾಯ, ಬಲ ಹಣೆಯ ಕೆಳಗೆ ತೆರಚಿದ ಗಾಯ ಹಾಗೂ ಬಲ ಕಿವಿಯಲ್ಲಿ ರಕ್ತ ಬಂದಿದ್ದು  ಸದರಿಯವನನ್ನು ವಿಚಾರಿಸಲಾಗಿ ಆತನು ತನ್ನ ಹೆಸರು ಬಸವರಾಜ ತಂದೆ ಚನ್ನಪ್ಪ ಗಾದಾರಿ ಸಾ: ನಿಡಶೇಸಿ ಅಂತಾ ಹೇಳಿದ್ದು, ಅಪಘಾತಪಡಿಸಿದ ಮೋ.ಸೈ. ನೋಡಲಾಗಿ ಅದು ಹಿರೋ ಸ್ಲೆಂಡರ್ ಪ್ಲಸ್ ಮೋ.ಸೈ. ನಂ: ಕೆ.ಎ-37/ವಾಯ್-8050 ಅಂತಾ ಇದ್ದು, ನಂತರ ಸ್ಥಳಕ್ಕೆ ಬಂದ 108 ಅಬುಲೇನ್ಸ ನಲ್ಲಿ ಗಾಯಗೊಂಡ ನಾವು ಚಿಕಿತ್ಸೆ ಕುರಿತು ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿ, ನಾನು ಚಿಕಿತ್ಸೆ ಪಡೆದುಕೊಂಡು ಠಾಣೆಗೆ ಬಂದು ಪಿರ್ಯಾದಿ ನೀಡಿದ್ದು ಅದರ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
6] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 134/2016 ಕಲಂ: 279, 337, 338 ಐ.ಪಿ.ಸಿ. ಹಾಗೂ 187 ಐ.ಎಂ.ವಿ. ಕಾಯ್ದೆ. 

ದಿ:23-06-2016 ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿದಾರರಾದ ಗುಂಡಪ್ಪ ಮಾಳಗಿ ಸಾ: ಕುಣಿಕೇರಿ ತಾಂಡಾ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ಇಂದು ದಿ:23-06-16 ರಂದು ಸಾಯಂಕಾಲ ಫಿರ್ಯಾದಿದಾರರು ತನ್ನ ಮೋಟಾರ ಸೈಕಲ್ ನಂ; ಕೆಎ-37/ಡಬ್ಲ್ಯೂ-2055 ನೇದ್ದರ ಹಿಂದೆ ತನ್ನ ತಮ್ಮನ ಮಗ ಕುಮಾರ ನಿಗೆ ಕೂಡ್ರಿಸಿಕೊಂಡು ಕೊಪ್ಪಳಕ್ಕೆ ಅಂತಾ ಬರುವಾಗ ಮಾರ್ಗದ ಕೆ.ಪಿ.ಆರ್ ಫ್ಯಾಕ್ಟರಿಯ ಸಮೀಪ ಸಾಯಂಕಾಲ 4-10 ಗಂಟೆಯ ಸುಮಾರಿಗೆ ಬರುತ್ತಿದ್ದಾಗ ಅದೇವೇಳೆಗೆ ಎದುರುಗಡೆಯಿಂದ ಟಾಟಾ ಸುಮೋ ನಂ: ಕೆಎ-34/ಎಮ್-6455 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದವನೇ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದು ಇರುತ್ತದೆ. ಈ ಅಪಘಾತದಲ್ಲಿ ಕುಮಾರನ ಬಲಕಾಲ ಮೊಣಕಾಲ ಕೆಳಗೆ ಭಾರಿ ರಕ್ತಗಾಯವಾಗಿರುತ್ತದೆ. ಅಪಘಾತ ಮಾಡಿದ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಆತನಿಗೆ ನೋಡಿದಲ್ಲಿ ಗುರುತಿಸುತ್ತೇನೆ. ಕಾರಣ ಅಪಘಾತ ಮಾಡಿದ ಟಾಟಾ ಸುಮೋ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ಸಲ್ಲಿಸಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008