Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, July 1, 2016

1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 184/2016 ಕಲಂ: 87 Karnataka Police Act.
ಕುಷ್ಟಗಿ ಠಾಣಾ ವ್ಯಾಪ್ತಿಯ ಯಲಬುರ್ತಿ ಗ್ರಾಮದ ಹೊನ್ನಮ್ಮ ದೇವಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ಮಾಹಿತಿ ತಿಳಿದು ಬಂದಿದ್ದು ಆಗ ಪಿ.ಎಸ್.ಐ. ಕುಷ್ಟಗಿ ಮತ್ತು ಎ.ಎಸ್.(ಪಿ), ಹೆಚ್.ಸಿ-63,108 ಪಿ.ಸಿ-109,161, 116,430,117,393 ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.-37-ಜಿ-292 ನೇದ್ದರಲ್ಲಿ ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 13 ಜನ ಆರೋಪಿತರು ಸಿಕ್ಕಿದ್ದು ಇರುತ್ತದೆ. ಸಿಕ್ಕ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ಹಣ 3800=00 ರೂ, ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಒಂದು ಹಳೆಯ ಬರಕಾ ಇವುಗಳನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 140/2016 ಕಲಂ: 143, 147, 447, 448, 427, 504, 506 ಸಹಿತ 149 ಐ.ಪಿ.ಸಿ:.

ದಿ:30-06-2016 ರಂದು ಸಾಯಂಕಾಲ 5-00 ಗಂಟೆಗೆ ಫಿರ್ಯಾದಿದಾರರಾದ ಚನ್ನಬಸಪ್ಪ ಗಾಣಿಗೇರ. ಸೆಕ್ಯೂರಿಟಿ ಸೂಪರವೈಸರ್. ಎಂ.ಎಸ್.ಪಿ.ಎಲ್ ಲಿಮಿಟೆಡ್ ಕಂಪನಿ ಹಾಲವರ್ತಿ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ದಿ:29-06-16 ರಂದು ಸಂಜೆ 7-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ತಮ್ಮ ಎಂ.ಎಸ್.ಪಿ.ಎಲ್ ಕಂಪನಿಯ ಒಡೆತನದಲ್ಲಿನ ಜಮೀನಿನಲ್ಲಿರುವ ಸೈಟ ಆಫೀಸ್ ಮತ್ತು ಸೆಕ್ಯೂರಿಟಿ ಇನ್ ಗೇಟ ಹತ್ತಿರ ಹಾಲವರ್ತಿ ಗ್ರಾಮದ ಅಪರಿಚಿತ 50-60 ಜನ ಕುರಿ ಕಾಯುವವರು ಮತ್ತು ಗ್ರಾಮದ ಕೆಲವು ವ್ಯಕ್ತಿಗಳು ಗುಂಪುಗೂಡಿಕೊಂಡು ಬಂದು ಕುರಿಗಾರನು ಕುರಿ ಮೇಯಿಸಲು ಬಂದಾಗ ಅದನ್ನು ತಡೆದ ಸೆಕ್ಯೂರಿಟಿ ಸಿಬ್ಬಂದಿಯು ತಡೆದಿದ್ದಾನೆ. ಎಂಬ ಕಾರಣ ಒಡ್ಡಿ ಅನಧಿಕೃತವಾಗಿ ಪ್ರವೇಶ ಮಾಡಿ ಕಂಪನಿಯ ಅಂದಾಜು 10 ಲಕ್ಷ ರೂ. ಸ್ವತ್ತನ್ನು ಅಂದರೆ ಸೈಟ ಆಫೀಸಿನ ಮತ್ತು ಸೆಕ್ಯೂರಿಟಿ ಇನ್ ಗೇಟ ಅಫೀಸಿನ ಬಾಗಿಲು ಮತ್ತು ಕಿಡಕಿಗಳನ್ನು, ಗಾಜುಗಳನ್ನು ಮತ್ತು ಆಫೀಸುಗಳ ಹೊರಗಡೆ ಹಾಕಿರುವ ಸ್ಟ್ರೀಟ್ ಲೈಟ ಗಳನ್ನು ಒಡೆದು ಹಾಕಿ ಹಾನಿ ಮಾಡಿರುತ್ತಾರೆ. ಅದನ್ನು ತಡೆಯಲು ಪ್ರಯತ್ನಿಸಿದ ಸೆಕ್ಯೂರಿಟಿ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿ ಅವರನ್ನು ಎಳೆದಾಡಿರುತ್ತಾರೆ. ಹಾಗೂ ಈ ಘಟನೆಯಿಂದ ಸಿಬ್ಬಂದಿಗಳಲ್ಲಿ ಭಯದ ವಾತಾವರಣ ವನ್ನು ಹುಟ್ಟಿಸಿರುತ್ತಾರೆ. ಆದಕಾರಣ ಕಂಪನಿಯ ಒಡೆತನದಲ್ಲಿರುವ ಜಮೀನಿನಲ್ಲಿ ಅನಧಿಕೃತವಾಗಿ ಪ್ರವೇಶ ಮಾಡಿ ಈ ಕೃತ್ಯವನ್ನು ಹಾನಿ ಮಾಡಿದ ಮತ್ತು ಹಲ್ಲೆ ಮಾಡಲು ಪ್ರಯತ್ನಿಸಿದ ವ್ಯಕ್ತಿಗಳನ್ನು ವಿಚಾರಣೆ ಮಾಡಿ ಅವರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಂಡು ತಮ್ಮ ಆಸ್ತಿ-ಪಾಸ್ತಿ ಮತ್ತು ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಮುಂತಾಗಿ ಸಲ್ಲಿಸಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008