Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, July 19, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 205/2016 ಕಲಂ: 394 ಐ.ಪಿ.ಸಿ.  
ದಿನಾಂಕ: 18-07-2016 ರಂದು ಸಂಜೆ 6:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಲ್ಲಿಕಾರ್ಜುನ ತಂದೆ ಬಸವರಾಜಪ್ಪ ಸಜ್ಜನ, 34 ವರ್ಷ, ಜಾತಿ: ಗಾಣಿಗೇರ ಉ: ಕೋಟಕ್ ಮಹಿಂದ್ರಾ ಕಂಪನಿಯಲ್ಲಿ ರಿಕವರಿ ಆಫೀಸರ್ ಸಾ: ಗುರಗುಂಟಾ. ಹಾಲಿವಸ್ತಿ: ಗುಡದೂರು ತಾ: ಲಿಂಗಸಗೂರು ಇವರು ದೂರನ್ನು ಸಲ್ಲಿಸಿದ್ದು, ಈಗ್ಗೆ ಸುಮಾರು 4-5 ವರ್ಷಗಳಿಂದ ಗಂಗಾವತಿ ತಾಲೂಕಿನ ವ್ಯಾಪ್ತಿಯಲ್ಲಿ ಮಹೇಂದ್ರ ಕೋಟೆಕ್ ರಿಕವರಿ ಏಜೆನ್ಸಿಯಿಂದ ರಿಕವರಿ ಆಫೀಸರ್ ಅಂತಾ ಕೆಲಸವನ್ನು ಮಾಡಿಕೊಂಡಿರುತ್ತೇನೆ. ದಿ: 15-07-2016 ರಂದು ಶುಕ್ರವಾರ ದಿವಸ ರಿಕವರಿ ಕೆಲಸಕ್ಕಾಗಿ ಮೋಟಾರ ಸೈಕಲ್ ಮೇಲೆ ಗುಡದೂರಿನಿಂದ ಗಂಗಾವತಿ, ಸಿದ್ದಾಪೂರ ಹಾಗೂ ಇತರೆ ಕಡೆಗಳಲ್ಲಿ ಸುಮಾರು ಏಳು ಲಕ್ಷ ರೂಪಾಯಿಗಳನ್ನು ರಿಕವರಿ ಮಾಡಿದ್ದೆನು. ಆದರೆ ಈ ಹಣವನ್ನು ನನ್ನ ಟ್ಯಾಬನಲ್ಲಿ ಬಿಲ್ ಆಗದೇ ಇದ್ದುದರಿಂದ ಬ್ಯಾಂಕಿನಲ್ಲಿ ಪಾವತಿಸದೇ ನನ್ನ ಹತ್ತಿರ ಇಟ್ಟುಕೊಂಡಿದ್ದೆನು.  ನಂತರ ದಿನಾಂಕ: 18-07-2016 ರಂದು ಬೆಳಿಗ್ಗೆ 7:30 ಗಂಟೆಗೆ ಗುಡದೂರದಿಂದ ಬಜಾಜ ಡಿಸ್ಕವರಿ ಮೋಟಾರ ಸೈಕಲ ನಂಬರ್: ಕೆ.ಎ-36/ ಇ.ಬಿ-2138 ನೇದ್ದರಲ್ಲಿ ರಿಕವರಿ ಕೆಲಸಕ್ಕಾಗಿ ಬೆಳಿಗ್ಗೆ 9:20 ಗಂಟೆಗೆ ಗಂಗಾವತಿಗೆ ಬಂದು ಇಲ್ಲಿಂದ ಶಾಲಿಗನೂರ, ಬೂದುಗುಂಪಾ, ಕಾರಟಗಿ ಕಡೆಗಳಲ್ಲಿ ಹೋಗಿ ಐದು ಜನರ ಹತ್ತಿರ ಸುಮಾರು 3,74,000/- ರೂ ರಿಕವರಿ ಮಾಡಿಕೊಂಡು ಈ ಹಣವನ್ನು ಹಾಗೂ ಈ ಮುಂಚೆ ದಿನಾಂಕ:- 15-07-2016 ರಂದು  ರಿಕವರಿ ಮಾಡಿದ್ದ ಹಣ ಅಂದಾಜು 7 ಲಕ್ಷ ರೂಪಾಯಿಗಳನ್ನು ಒಂದು ಕಪ್ಪು ಬ್ಯಾಗನಲ್ಲಿ ಇಟ್ಟು ಬೆನ್ನಿಗೆ ಹಾಕಿಕೊಂಡು ಚಿಕ್ಕಡಂಕನಕಲ್ ಮುಖಾಂತರ ತುಂಗಭದ್ರ ಎಡದಂಡೆ ಮುಖ್ಯ ಕಾಲುವೆಯ ರಸ್ತೆಯಲ್ಲಿ ಕೇಸರಹಟ್ಟಿ ಗ್ರಾಮ ಸೀಮಾದಲ್ಲಿ ಬರುತ್ತಿರುವಾಗ ಮಧ್ಯಾಹ್ನ 3:15 ಗಂಟೆಯ ಸುಮಾರಿಗೆ ನನ್ನ ಮುಂದೆ ರಸ್ತೆಯ ಪಕ್ಕದಲ್ಲಿ ಒಂದು ಮೋಟಾರ ಸೈಕಲ ನಿಲ್ಲಿಸಿಕೊಂಡು ಇಬ್ಬರು ವ್ಯಕ್ತಿಗಳು ನಿಂತಿದ್ದು ನಾನು ಮೋಟಾರ ಸೈಕಲ ಮೇಲೆ ಅವರ ಸಮೀಪ ಬಂದಾಗ ಒಮ್ಮಲೇ ಗಾಳಿಗೆ ಕಣ್ಣಿನಲ್ಲಿ ಕಾರಪುಡಿ ಬಿದ್ದಿದ್ದು ಕೂಡಲೇ ನಾನು ಬ್ರೇಕ್ ಹಾಕಿದಾಗ ಮೋಟಾರ ಸ್ಕಿಡ್ ಆಗಿ ಕೆಳಗೆ ಬಿದ್ದೆನು. ಆಗ ಕಣ್ಣನ್ನು ಒರೆಸಿಕೊಳ್ಳುತ್ತಿರುವಾಗ ಆ ಇಬ್ಬರು ವ್ಯಕ್ತಿಗಳು ಒಮ್ಮಲೇ ನನ್ನನ್ನು ಹಿಡಿದುಕೊಂಡು ಒಬ್ಬನು ಹಣ ಇದ್ದ ಬ್ಯಾಗನ್ನು ಕಸಿದುಕೊಳ್ಳಲು ಪ್ರಯತ್ನಿಸಿದನು ಆದರೆ ನಾನು ಬ್ಯಾಗನ್ನು ಬಿಡದೇ ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಇನ್ನೊಬ್ಬ ವ್ಯಕ್ತಿಯು ಚಾಕುವಿನಿಂದ ನನ್ನ ಎಡಗಡೆ ಹೊಟ್ಟೆಗೆ ಎರಡು ಬಾರಿ ಚುಚ್ಚಿದ್ದರಿಂದ ರಕ್ತ ಗಾಯವಾಗಿ ನಾನು ಚೀರಾಡುತ್ತಿರುವಾಗ ಅವರು ಬ್ಯಾಗನಿಂದ ಹಣವನ್ನು ಕಸಿದುಕೊಂಡು ಮೋಟಾರ ಸೈಕಲ ಮೇಲೆ ಹೊರಟು ಹೋದರು. ನಾನು ಸುಮಾರು ಅರ್ಧಗಂಟೆ ಕಾಲ ಸ್ಥಳದಲ್ಲಿಯೇ ಕಣ್ಣನ್ನು ಒರೆಸಿಕೊಳ್ಳುತ್ತಾ ಹೊಟ್ಟೆ ಹಿಡಿದುಕೊಂಡು ಚೀರಾಡುತ್ತಿರುವಾಗ ಯಾರೋ ರಸ್ತೆಯಲ್ಲಿ ಹೊರಟಿದ್ದವರು ಬಂದು ವಿಚಾರಿಸಿ ನಂತರ 108 ವಾಹನಕ್ಕೆ ಪೋನ್ ಮಾಡಿದ್ದು ಅಂಬ್ಯಲೆನ್ಸ್ ಬಂದ ನಂತರ ಚಿಕಿತ್ಸೆ ಕುರಿತು ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 140/2016 ಕಲಂ: 457, 380 ಐ.ಪಿ.ಸಿ:.
ದಿನಾಂಕ:- 18-07-2016 ರಂದು ಮುಂಜಾನೆ 10-30 ಗಂಟೆಗೆ ಶ್ರೀ  ಪಂಪಣ್ಣ ತಂದೆ ಸುಖಮುನಿಯಪ್ಪ ಕಲ್ಮುಂಗಿ  ಸಾ:ಜಯನಗರ, ಗಂಗಾವತಿ ರವರು ಫಿರ್ಯಾದಿ ನೀಡಿದ್ದು, ದಿನಾಂಕ:- 17-07-2016 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ: 18-07-2016 ರ ಬೆಳಗಿನ 7-30 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಗಂಗಾವತಿ ನಗರದ ಎ,ಪಿ,ಎಮ್ ಸಿಯಲ್ಲಿರುವ  ಪಿರ್ಯಾದಿದಾರರ ಶ್ರೀ ಶಕ್ತಿ ಅಂಗಡಿಯ ಮುಂದಿನ ಮೇಲ್ಬಾಗದಲ್ಲಿನ ಸಣ್ಣ ಕಿಡಕಿಯಲ್ಲಿನ ಕಬ್ಬಿಣದ ರಾಡ್ ಮುರಿದು ಒಳಗೆ ಪ್ರವೇಶ ಮಾಡಿ ಒಳಗಿನಿಂದ ಷಟ್ರಸಗೆ ಹಾಕಿದ ನಟ್ ಬೋಲ್ಟನ್ನು ಬಿಚ್ಚಿ ಉಳಿದವರು ಒಳಗೆ ಪ್ರವೇಶ ಮಾಡಿ ಅಂಗಡಿಯ ಒಳಗೆ ಇದ್ದ ತಿಜೋರಿಯ ಬಾಗಿಲನ್ನು ಕಲ್ಲಿನಿಂದ ಜಜ್ಜಿ ಸೇಪ್ ಲಾಕರ್ ಮುರಿದು ತಿಜೋರಿಯಲ್ಲಿದ್ದ ನಗದು ಹಣ 1,90,000-00 ರೂಪಾಯಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 157/2016 ಕಲಂ: 279, 337, 338 ಐ.ಪಿ.ಸಿ:.
ಗಾಯಾಳು ಗಫೂರಸಾಬ ಮುದಗಲ್. ಸಾ: ಬೇಳೂರ. ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಫಿರ್ಯಾದಿದಾರರು ತನ್ನ ಕೂಲಿಕೆಲಸದ ನಿಮಿತ್ತ ಕೋಕಾಕೋಲಾ ಫ್ಯಾಕ್ಟರಿಗೆ ಹೋಗಲು ಅಂತಾ ಗಿಣಿಗೇರಿ ಬೈಪಾಸ್ ದಿಂದಾ ಅಲ್ಲಾನಗರ ಕಡೆಗೆ ಹೋಗುವ ಪ್ಯಾಸೆಂಜರ್ ಆಟೋ ನಂ: ಕೆಎ-26/ಎ-5191 ನೇದ್ದರಲ್ಲಿ ಕುಳಿತುಕೊಂಡಿದ್ದು, ಹೀಗೆ ಫಿರ್ಯಾದಿಯೊಂದಿಗೆ ಇತರೆ 6 ಜನ ಪ್ರಯಾಣಿಕರು ಕುಳಿತು ಹೊರಟೆವು. ನಂತರ ಬೆಳಿಗ್ಗೆ 10-45 ಗಂಟೆಗೆ ತಾವು ಕುಳಿತಿದ್ದ ಆಟೋ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಓಡಿಸುತ್ತಾ ವಾಹನದ ಮೇಲೆ ನಿಯಂತ್ರಣ ಸಾಧಿಸದೇ ರಸ್ತೆಯ ಎಡಬದಿ ತೆಗ್ಗಿನಲ್ಲಿ ಪಲ್ಟಿ ಮಾಡಿದನು. ಈ ಅಪಘಾತದಲ್ಲಿ 1] ಫಿರ್ಯಾದಿ ಹಾಗೂ 2] ಕೊಟ್ರಪ್ಪ ಪಲ್ಲೇದ ಸಾ: ಹಿರೇಬಗನಾಳ. 3] ರೇಣುಕಾ ಹಂದ್ರಾಳ. ಸಾ: ಗೊಂಡಬಾಳ. 4] ಯಲ್ಲಮ್ಮ ಕುಂಬಾರ ಸಾ: ಹಿಟ್ನಾಳ. 5] ಶಾಂತಮ್ಮ ಹುಲಿಗಿಯವರ ಸಾ: ಹಾಲವರ್ತಿ, 6] ಜಂಬಣ್ಣ ಹಂದ್ರಾಳ ಸಾ: ಗೊಂಡಬಾಳ. ಇವರುಗಳಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಅಲ್ಲದೆ 7] ಕರಿಯಪ್ಪ ದೊಡ್ಡಮನಿ. ಸಾ: ಹಿರೇಬಗನಾಳ. ಹಾಗೂ 8] ಆಟೋ ಚಾಲಕ ಗುರುನಾಥ ಇವರಿಗೆ ಭಾರಿ ಪೆಟ್ಟುಗಳಾಗಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
4] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 204/2016 ಕಲಂ: 279, 337 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.

ದಿನಾಂಕ:- 18-07-2016 ರಂದು ಮಧ್ಯಾಹ್ನ 3:00 ಗಂಟೆಗೆ ಗಂಗಾವತಿಯ ಶ್ರೀ ಮಲ್ಲಿಕಾರ್ಜುನ ನರ್ಸಿಂಗ್ ಹೋಮ್ ನಿಂದ ಎಂ.ಎಲ್.ಸಿ. ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶ್ರೀ ಗಾದಿಲಿಂಗಪ್ಪ ತಂದೆ ಜಡಿಯಪ್ಪ ಮಾರಗಂಡ್ರು, ವಯಸ್ಸು 45 ವರ್ಷ, ಜಾತಿ: ಕುರುಬರು ಉ: ಒಕ್ಕಲುತನ ಸಾ: ಜಮಾಪೂರು ತಾ: ಗಂಗಾವತಿ ಇವರ ನುಡಿ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ನಾನು ಗಂಗಾವತಿ ತಾಲೂಕಿನ ಜಮಾಪೂರು ಗ್ರಾಮದ ನಿವಾಸಿ ಇದ್ದು ಒಕ್ಕಲುತನ ಮಾಡಿಕೊಂಡಿರುತ್ತೇನೆ. ಇಂದು ದಿನಾಂಕ:- 18-07-2016 ರಂದು ಗಂಗಾವತಿ ಕೋರ್ಟನಲ್ಲಿ ಹಾಜರಾಗಬೇಕಾಗಿದ್ದರಿಂದ ನಾನು ಜಮಾಪೂರದಿಂದ ಹೋಂಡಾ ಶೈನ್ ಮೋಟಾರ ಸೈಕಲ್ ನಂಬರ್: ಕೆಎ-37/ ವೈ-4862 ನೇದ್ದನ್ನು ಚಲಾಯಿಸಿಕೊಂಡು ಗಂಗಾವತಿಗೆ ಬರುತ್ತಿದ್ದೆನು. ನಾನು ಮಧ್ಯಾಹ್ನ 12:30 ಗಂಟೆಯ ಸುಮಾರಿಗೆ ಕಾರಟಗಿ-ಗಂಗಾವತಿ ಮುಖ್ಯ ರಸ್ತೆಯಲ್ಲಿ ಶ್ರೀರಾಮನಗರದ ಸಿಂಡಿಕೇಟ್ ಬ್ಯಾಂಕ್ ಸಮೀಪದಲ್ಲಿ ಬರುತ್ತಿರುವಾಗ ರೋಡ್ ಹಂಪ್ಸ್ ಹತ್ತಿರ ಮೋಟಾರ ಸೈಕಲ್ ನ್ನು ನಿಧಾನ ಮಾಡಿದ್ದರಿಂದ ನನ್ನ ಹಿಂಭಾಗದಲ್ಲಿ ಬರುತ್ತಿದ್ದ ಒಂದು ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕನು ತನ್ನ ಬಸ್ಸನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ನನ್ನ ಮೋಟಾರ ಸೈಕಲ್ ನ ಹಿಂಭಾಗದಲ್ಲಿ ಟಕ್ಕರ್ ಕೊಟ್ಟು ಅಪಘಾತ ಮಾಡಿದನು. ಇದರಿಂದ ನಾನು ಮೋಟಾರ ಸೈಕಲ್ ಸಮೇತ ಕೆಳಗೆ ಬಿದ್ದೆನು. ಇದರಿಂದ ನನ್ನ ಎಡಗಡೆ ಮಂಡಿಗೆ, ಬಲಗಡೆ ಮಂಡಿಗೆ ಗಾಯಗಳಾದವು. ಮತ್ತು ಎದೆಗೆ ಹಾಗೂ ಸೊಂಟಕ್ಕೆ ಒಳಪೆಟ್ಟಾದವು. ನಂತರ ರಸ್ತೆಯಲ್ಲಿ ಹೊರಟಿದ್ದ ಜನರು ನನ್ನನ್ನು ಎಬ್ಬಿಸಿ ಪಕ್ಕಕ್ಕೆ ಕೂಡ್ರಿಸಿದ್ದು, ಅಪಘಾತ ಮಾಡಿದ ಬಸ್ಸನ್ನು ನೋಡಲು ಅದರ ನಂಬರ್: ಕೆ.ಎ-42/ ಎಫ್-1232 ಅಂತಾ ಇತ್ತು.  ಚಾಲಕನು ಬಸ್ಸಿನಿಂದ ಇಳಿದು ಕೆಳಗೆ ಬಂದು ನೋಡಿ ನಂತರ ಬಸ್ಸನ್ನು ಚಲಾಯಿಸಿಕೊಂಡು ಗಂಗಾವತಿ ಕಡೆಗೆ ಹೊರಟು ಹೋದನು. ನಂತರ ನನಗೆ ಅಲ್ಲಿಯೇ ಇದ್ದ ಕುಂಟೋಜಿ ಗ್ರಾಮದ ಹುಲಿತೆಪ್ಪ ತಂದೆ ಈರಪ್ಪ ವಯಸ್ಸು: 51 ವರ್ಷ ಎಂಬುವರು ಯಾವುದೋ ಒಂದು ಅಟೋದಲ್ಲಿ ಚಿಕಿತ್ಸೆ ಕುರಿತು ಗಂಗಾವತಿಯ ಡಾ: ಮಲ್ಲಿಕಾರ್ಜುನ ನರ್ಸಿಂಗ್ ಹೋಮಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ.  ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008