Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, July 18, 2016

1] ಬೇವೂರು ಪೊಲೀಸ್ ಠಾಣೆ ಗುನ್ನೆ ನಂ. 47/2016 ಕಲಂ: 279, 337, 338 ಐ.ಪಿ.ಸಿ.  
ದಿನಾಂಕ: 16.07.2016 ರಂದು ಬೆಳಗಿನಜಾವ 05:30 ಗಂಟೆ ಸುಮಾರಿಗೆ ಕುಷ್ಟಗಿ - ಹೊಸಪೇಟ್ ಎನ್ಹೆಚ್ 50 ಒಮ್ಮುಖ ರಸ್ತೆಯ ಮೇಲೆ ಪುಟಗಮರಿ ಸೀಮಾದಲ್ಲಿ ಆರೋಪಿ ಮುಜೀಬ್ ತಂದೆ ಹನೀಪ್ ಸಾ : ಕೃಷ್ಣಗಿರಿ ತಮಿಳನಾಡು ತಾನು ನಡೆಸುತ್ತಿದ್ದ ಲಾರಿ ನಂಬರ್ ಟಿ.ಎನ್. 52 ಸಿ- 3565 ನೆದ್ದನ್ನು ಕುಷ್ಟಗಿ ಕಡೆಯಿಂದ ಹೊಸಪೇಟ್ ಕಡೆಗೆ ಅತಿ ವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವುಂಟಾಗುವ ರೀತಿಯಲ್ಲಿ ನಡೆಸಿಕೊಂಡು ಹೋಗಿದ್ದರಿಂದ ವೇಗದ ರಬಸಕ್ಕೆ ಲಾರಿಯು ಒಮ್ಮಿಂದೊಮ್ಮೆಲೆ ರಸ್ತೆಯ ಎಡಕ್ಕೆ ಜಗ್ಗಿ ಬ್ರಿಡ್ಜ್ನ ಸೆಪ್ಟಿ ಮೇಟಾಲಿಕ ಬ್ಯಾರಿಕೇಡ್ಗೆ ಹಾಯ್ದುಕೊಂಡು ಅದಕ್ಕೆ ತೆರಚುತ್ತಾ ನಿಯಂತ್ರಣವಾಗದೆ ಹಾಗೆ ಮುಂದೆ ಹೋಗಿ ಸದರಿ ಬ್ರಿಡ್ಜ್ಗೆ ಬಲವಾಗಿ ಟಕ್ಕರ್ಆಗಿ ಬ್ರಿಡ್ಜ್ನ ಕೆಳಬಾಗದಲ್ಲಿ ಲಾರಿಯನ್ನು ಪಲ್ಟಿ ಮಾಡಿ ಅಪಘಾತ ಮಾಡಿದ್ದು ಇರುತ್ತದೆ, ಸದರಿ ಅಪಘಾತದಲ್ಲಿ ಲಾರಿಯು ಸಂಪೂರ್ಣ ಜಖಂಗೊಂಡಿದ್ದು ಸದರಿ ಲಾರಿಯ ಕ್ಯಾಬಿನಿನಲ್ಲಿ ಕುಳಿತ್ತಿದ್ದ ಫಿಯರ್ಾದಿಗೆ  ಸಾದಾ ಸ್ವರೂಪದ ರಕ್ತಗಾಯಗಳಾಗಿದ್ದು ಮತ್ತು  ಆರೋಪಿತನಿಗೆ ಭಾರಿ ಸ್ವರೂಪದ ಒಳಪೆಟ್ಟಾಗಿದ್ದು ಇರುತ್ತದೆ, ಅಂತಾ ಇತ್ಯಾದಿ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
2] ಬೇವೂರು ಪೊಲೀಸ್ ಠಾಣೆ ಗುನ್ನೆ ನಂ: 48/2016 ಕಲಂ: 32, 34 ಕೆ.ಇ ಕಾಯ್ದೆ
ಪಿ.ಎಸ್.ಐ. ಬೇವೂರು ರವರು ದಿನಾಂಕ: 17.07.2016 ರಂದು ಸಾಯಂಕಾಲ 5:15 ಗಂಟೆ ಸುಮಾರಿಗೆ ಆರೋಪಿ 1) ಹುಚ್ಚಪ್ಪ ತಂದೆ ಪಂಪಣ್ಣ ಹುಣಸಿಹಾಳ ವಯಾ: 40 ವರ್ಷ ಜಾ: ಗಾಣಗೇರ ಉ: ಕೂಲಿಕೆಲಸ ಸಾ: ಕಲ್ಲಭಾವಿ.  2)ಶಾರವ್ವ ಗಂಡ ತಿಮ್ಮಣ್ಣ ಈಳಗೇರ ಸಾ: ಹಿರೇವಂಕಲಕುಂಟಾ ಇವರು ಹಿರೇವಂಕಲಕುಂಟಾ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪಂಚರೊಂದಿಗೆ ಹೋಗಿ ದಾಳಿ ಮಾಡಿದಾಗ ಒಬ್ಬನು ಸಿಕ್ಕಿಬಿದ್ದಿದ್ದು ಇನ್ನೂಬ್ಬಳು ಓಡಿಹೋಗಿದ್ದು ಆರೋಪಿತನಿಂದ 90 ಎಂ.ಎಲ್ ಅಳತೆಯುಳ್ಳ “HAYWARDS`` ಎಂಬ ಲೇಬಲುಳ್ಳ ಒಟ್ಟು 64 ಮದ್ಯದ ಟೆಟ್ರಾಬಾಕ್ಸಗಳ ರೂ. 1698.56 ಕಿಮ್ಮತ್ತಿನ ಮಧ್ಯವನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಅಂತಾ ವರದಿ ಸಲ್ಲಿಸಿದ ಆಧಾರದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 136/2016 ಕಲಂ: 87 KARNATAKA POLICE ACT.
ಶ್ರೀ ಸಾಬಯ್ಯ, ಪಿ.ಎಸ್.ಐ ಕನಕಗಿರಿ ಪೊಲೀಸ್ ಠಾಣೆ ರವರು ದಿನಾಂಕ 17-07-2016 ರಂದು ಸಂಜೆ 4-30 ಗಂಟೆಯಿಂದ 5-30 ಗಂಟೆಯವರೆಗೆ ಕನಕಗಿರಿ ಗ್ರಾಮದ ಹೊರ ವಲಯದಲ್ಲಿ ಮಾರೆಮ್ಮನ ಗುಡಿಯ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 01] ಮಹೇಶ ತಂದೆ ವಿಶ್ವನಾಥ ಸ್ವಾಮಿ ಹಿರೇಮಠ, ವಯಾ 46 ವರ್ಷ ಜಾತಿ ಜಂಗಮ ಉ ಒಕ್ಕಲುತನ 2] ಹೊಳಿಯಪ್ಪ ತಂದೆ ನರಸಪ್ಪ ಗೊಲ್ಲರ್, ವಯಾ 33 ವರ್ಷ ಜಾತಿ ಗೊಲ್ಲರ್ ಉ:ಒಕ್ಕಲುತನ 3] ವಿರುಪಾಕ್ಷಪ್ಪ ತಂದೆ ಮಹಾದೇವಪ್ಪ ಪಲ್ಲೇದ, ವಯಾ 38 ವರ್ಷ ಜಾತಿ ಲಿಂಗಾಯತ ಉ: ಒಕ್ಕಲುತನ 4] ನಾಗರಾಜ ತಂದೆ ನಿಂಗಪ್ಪ ತೆಗ್ಗಿನಮನೆ, ವಯಾ 31 ವರ್ಷ ಜಾತಿ ಲಿಂಗಾಯತ ಉ: ಗುಮಾಸ್ತ ಕೆಲಸ 5] ಈಶ್ವರಯ್ಯಸ್ವಾಮಿ ತಂದೆ ಬಸಯ್ಯ ಹಿರೇಮಠ, ವಯಾ 39 ವರ್ಷ ಜಾತಿ ಜಂಗಮ ಉ: ಒಕ್ಕಲುತನ 6] ಕೃಷ್ಟಾ ತಂದೆ ಅಂಬಣ್ಣ ಅಚ್ಚಲಕರ್, ವಯಾ 32 ವರ್ಷ ಜಾತಿ ಜನಾಂಗ ಉ: ಟೇಲರಿಂಗ್ ಕೆಲಸ ಸಾಕಿನ ಎಲ್ಲರೂ ಕನಕಗಿರಿ ಆರೋಪಿತರು ದುಂಡಾಗಿ ಕುಳಿತುಕೊಂಡು ದೈವಲಿಲೇ ಮೇಲೆ ಇಸ್ಪೇಟ್ ಜೂಜಾಟ ಆಡುತ್ತಿದ್ದಾಗ ಫಿಯರ್ಾದಿದಾರರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದಿದ್ದು ಸದರಿ ಎಲ್ಲ ಆರೋಪಿತರಿಂದ ಒಟ್ಟು ನಗದು ಹಣ ರೂ. 10310/ ಹಾಗೂ ಜೂಜಾಟಕ್ಕೆ ಉಪಯೋಗಿಸಿದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿ, ಈ ಬಗ್ಗೆ ವಿವರವಾದ ಜಪ್ತಿ ಪಂಚನಾಮೆ ಮಾಡಿಕೊಂಡು ವಾಪಸ್ ಠಾಣೆಗೆ ಬಂದು ಪಂಚನಾಮೆ, ವರದಿಯನ್ನುಕೊಟ್ಟಿದ್ದು, ಸದರಿ ವರದಿಯ ಪ್ರಕಾರ ಅಸಂಜ್ಞೆಯ ಅಪರಾಧವಾಗಿದ್ದರಿಂದ ಎನ್.ಸಿ.ನಂ.02/16 ರೀತ್ಯಾ ದಾಖಲಿಸಿಕೊಂಡು ಆರೋಪಿತರ ವಿರುದ್ದ ಪ್ರಕರಣದ ದಾಖಲು ಮಾಡಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ರಾತ್ರಿ 8-30 ಗಂಟೆಗೆ ಸದರ ವರದಿ ಮತ್ತು ಪಂಚನಾಮೆಯ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 156/2016 ಕಲಂ: 87 KARNATAKA POLICE ACT.
ಪಿ.ಎಸ್.ಐ  ಕಾರಟಗಿ ರವರು  17-07-2016 ರಂದು ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ಚಳ್ಲೂರ ಸೀಮಾದ ಜೀವಪ್ಪ ಇವರ  ಹೊಲದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1] ಜೀವಬಾಬು ತಂದೆ ರಾಘು ಅಬ್ಬಿನಾ ವಯ 50 ವರ್ಷ ಸಾ.ಚಳ್ಳೂರ ಕ್ಯಾಂಪ್ 2] ಬಸಯ್ಯ ತಂದಿ ವೀರಭದ್ರಯ್ಯ ಶಾಸ್ತ್ರಿಮಠ ವಯಾ-49 ವರ್ಷ ಜಾ. ಜಂಗಮ ಉ- ಟೆಲರಿಂಗ್ ಕೆಲಸ ಸಾ. ರಾಮನಗರ ಕಾರಟಗಿ 3] ರಾಜಶೇಖರ ತಂದಿ ನಾರಾಯಣಪ್ಪ ದಂಡು ವಯಾ-50 ವರ್ಷ ಜಾ. ಚಲವಾದಿ ಸಾ. ಶಿವನಗರ ಕಾರಟಗಿ ತಾ. ಗಂಗಾವತಿ 4] ಶ್ರೀನಿವಾಸ ತಂದೆ ನಾರಾಯಣ ಕಟಾಲಿ ವಯ 33 ವರ್ಷ ಜಾತಿ ಈಡಿಗ . ಒಕ್ಕಲುತನ ಸಾ.ಶರಣುಬಸವೇಶ್ವರ ಶಾಲೆ ಹತ್ತಿರ ಕಾರಟಗಿ 5] ಪಂಪಾಪತಿ ತಂದೆ ಶವಬಸಣ್ಣ ವಯ 42 ವರ್ಷ ಜಾತಿ ಲಿಂಗಾಯತ . ಒಕ್ಕಲುತನ ಸಾ.ಚಳ್ಳೂರ 6] ಲಕ್ಷ್ಮಣರಾವ್ ತಂದೆ ಸತ್ಯಪ್ಪ ತಾಲೂರ ವಯ 42 ವರ್ಷ ಜಾತಿ ಕಮ್ಮಾ ಉ. ಒಕ್ಕಲುತನ ಸಾ. ಚಳ್ಳುರ ಕ್ಯಾಪ್ 7] ಈರಪ್ಪ ತಂದೆ ಪುಟ್ಟಪ್ಪ ಲಮಾಣಿ ವಯ 65 ವರ್ಷ ಜಾತಿ ಲಮಾಣಿ ಉ. ಕೂಲಿಕೆಲಸ ಸಾ. ಚಳ್ಳೂರ ಕ್ಯಾಂಪ್ 8] ರಾಮಪ್ಪ ತಂದೆ ಯಮನಪ್ಪ ದಂಡಿನ ವಯ 50 ವರ್ಷ ಜಾತಿ ಚಲವಾದಿ ಉ, ಒಕ್ಕಲುತನ ಸಾ.ರಾಮನಗರ ಕಾರಟಗಿ 9] ಅರುಣಸಿಂಗ್ ತಂದೆ ವೆಂಕಟಸಿಂಗ್ ಎಲಿಗಾರ ವಯ 25 ವರ್ಷ ಜಾತಿ ರಜಪೂತ . ಗೌಂಡಿ ಕೆಲಸ ಸಾ. ರಾಮನಗರ ಕಾರಟಗಿ ತಾ. ಗಂಗಾವತಿ 10] ಶಿವಪ್ಪ ತಂದೆ ಬಸಪ್ಪ ವಯ 45 ವರ್ಷ ಜಾತಿ ರಡ್ಡಿ ಲಿಂಗಾಯತ ಉ. ಒಕ್ಕಲುತನ ಸಾ. ಚಳ್ಳುರ ಕ್ಯಾಂಪ್ ತಾ.ಗಂಗಾವತಿ ಆರೋಪಿತರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಮಾನ್ಯ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 10 ಜನರು ಸಿಕ್ಕಿಬಿದ್ದಿದ್ದು ಆರೋಪಿತರ ಕಡೆಯಿಂದ ಹಾಗೂ ಖಣದಲ್ಲಿ ಸೇರಿ ಒಟ್ಟು ರೂ.5410=00 ಗಳನ್ನು ಮತ್ತು ಇಸ್ಪೀಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ವರದಿಯ ಮೇಲಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ರಾತ್ರಿ 7-00 ಗಂಟೆಗೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 157/2016 ಕಲಂ: 87 KARNATAKA POLICE ACT.
ಪಿ.ಎಸ್.ಐ ಸಾಹೇಬರು ಒಂದು ಇಸ್ಪೀಟ್ ಜೂಜಾಟದ ದಾಳಿ ಮೂಲ ಪಂಚನಾಮೆ ಮತ್ತು ವರದಿಯನ್ನು ಹಾಜರುಪಡಿಸಿದ್ದು ಸದರಿ ವರದಿಯ ಸಾರಾಂಶವೆನಂದರೆ 17-07-2016 ರಂದು ಸಾಯಂಕಾಲ  5-00 ಗಂಟೆಯ ಸುಮಾರಿಗೆ ಕಾರಟಗಿಯ ಎ.ಪಿ.ಎಮ್.ಸಿ.ಯಲ್ಲಿ ಶ್ರೀದೇವಿ ಟ್ರಾನ್ಸಪೊರ್ಟ ಹಿಂದೆ  ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಮಾನ್ಯ  ಡಿ.ಎಸ್.ಪಿ. ಸಾಹೇಬರು ಗಂಗಾವತಿ ರವರ ಮಾರ್ಗದರ್ಶನದಂತೆ ಪಿ.ಎಸ್.ಐ ಸಾಹೇಬರು ಕಾರಟಗಿ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 1] ಮಲ್ಲಿಕಾರ್ಜುನ ತಂದಿ ಗೂಳಪ್ಪ ಟೆತ್ತಿನಬಂಡಿ ವಯಾ- 30 ವರ್ಷ ಜಾ- ಉಪ್ಪಾರ ಸಾ- ಬಸವೇಶ್ವರ ನಗರ ಕಾರಟಗಿ ತಾ- ಗಂಗಾವತಿ ಜಿ- ಕೊಪ್ಪಳ 2] ತಿಮ್ಮಣ್ಣ ತಂದಿ ನರಸಪ್ಪ ಯಾಪಲಪರ್ವಿ ವಯಾ- 46 ವರ್ಷ ಜಾ- ನಾಯಕ ಸಾ- 5ನೇ ವಾರ್ಡ ಕಾರಟಗಿ ತಾ- ಗಂಗಾವತಿ 3] ಸಿದ್ದಲಿಂಗಯ್ಯ ತಂದಿ ತೋಟಯ್ಯ ಶಸಿಮಠ ವಯಾ- 41 ವರ್ಷ ಜಾ- ಜಂಗಮ  ಸಾ- ಬಸವೇಶ್ವರ ನಗರ ಕಾರಟಗಿ 4] ಬಸವರಾಜ ತಂದಿ ಸಂಗಪ್ಪ ತಳವಗೇರಿ ವಯಾ- 38 ವರ್ಷ ಜಾ- ಲಿಂಗಾಯತ – ಲಾರಿ ಚಾಲಕ ಸಾ- ಬಸವೇಶ್ವರ ನಗರ ಕಾರಟಗಿ ತಾ- ಗಂಗಾವತಿ.5] ವಿರೇಶ ತಂದಿ ಈರಣ್ಣ ಸಿದ್ದಾಪೂರ ವಯಾ- 38 ವರ್ಷ ಜಾ- ನಾಯಕ ಉ- ಲಾರಿ ಚಾಲಕ ಸಾ- ಇಂದಿರಾನಗರ ಕಾರಟಗಿ ತಾ- ಗಂಗಾವತಿ 6] ಮಲ್ಲಿಕಾರ್ಜುನ ತಂದಿ ಚಂದ್ರಯ್ಯ ಹಿರೇಮಠ ವಯಾ- 60 ವರ್ಷ ಜಾ- ಜಂಗಮ  - ಟ್ರಾನ್ಸಪೊರ್ಟ  ಸಾ- ಅರಳಿ ಓಣಿ ಕಾರಟಗಿ 7] ಎನ್. ಶ್ರೀನಿವಸರಾವ ತಂದಿ ನರಸಿಂಹಲು ವಯಾ- 42 ವರರಷ ಜಾ- ಹಡಪದ – ಟ್ರಾನ್ಸಪೊರ್ಟ ಕೆಲಸ ಸಾ- ಜೆ.ಪಿ. ನಗರ ಕಾರಟಗಿ ತಾ- ಗಂಗಾವತಿ ಇವರು ಸಿಕ್ಕಿಬಿದ್ದಿದ್ದು ಆರೋಪಿತರ ಕಡೆಯಿಂದ ಹಾಗೂ ಖಣದಲ್ಲಿ ಸೇರಿ ಒಟ್ಟು ರೂ.32,100=00 ಗಳನ್ನು ಮತ್ತು ಇಸ್ಪೀಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ವರದಿಯ ಮೇಲಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ರಾತ್ರಿ 9-15 ಗಂಟೆಗೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
6] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 195/2016 ಕಲಂ:279, 337, 338, 304(ಎ) ಐ.ಪಿ.ಸಿ.
ದಿನಾಂಕ:-12-07-2016 ರಂದು ಬೆಳಿಗ್ಗೆ 09:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಖಾಜಾಸಾಬ ತಂದೆ ನಬೀಸಾಬ ಮುದ್ದಾಪೂರು, 43 ವರ್ಷ, ಜಾತಿ: ಮುಸ್ಲೀಂ ಉ: ಪಂಚರ್ ಅಂಗಡಿ ಸಾ: ಗುಂಡೂರು ಕ್ಯಾಂಪ್.ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. "ನಿನ್ನೆ ದಿ:- 11-07-2016 ರಂದು  ರಾತ್ರಿ 9:15 ಗಂಟೆಯ ಸುಮಾರಿಗೆ  ನನ್ನ ಅಳಿಯನಾದ ಇಮಾಮ ಸಾಬ ತಂದೆ ಮೋದ್ದೀನ್ ಸಾಬ, 26 ವರ್ಷ ಸಾ: ಗುಂಡೂರು ತಾ: ಗಂಗಾವತಿ ಈತನು ಬಸಾಪಟ್ಟಣದಲ್ಲಿ ಗೃಹ ಪ್ರವೇಶ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಗುಂಡೂರಿಗೆ ತನ್ನ ಬಜಾಜ್ ಡಿಸ್ಕವರ ಮೋಟಾರ ಸೈಕಲ್ ನಂ: ಕೆ.ಎ-37/ ವಿ-5117 ನೇದ್ದರಲ್ಲಿ ತನ್ನ ಹೆಂಡತಿ ಖಾಜಾಬನಿ-22 ವರ್ಷ, ಮಗ ಸೈಫ ಅಲಿ-3 ವರ್ಷ ಇವರುಗಳನ್ನು ಕೂಡ್ರಿಸಿಕೊಂಡು ಬರುತ್ತಿರುವಾಗ ಗಂಗಾವತಿ-ಸಿಂಧನೂರು ಮುಖ್ಯ ರಸ್ತೆಯಲ್ಲಿ ಜಂಗಮರ ಕಲ್ಗುಡಿ ಗ್ರಾಮದ ಗಣಪತಿ ಗುಡಿಯ ಹತ್ತಿರ ನನ್ನ ಅಳಿಯನು ಮೋಟಾರ ಸೈಕಲನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿ ರಸ್ತೆ ದಾಟುತ್ತಿದ್ದ ಫಕೀರಗೌಡ ತಂದೆ ಲಿಂಗನಗೌಡ ಮಾಲೀಪಾಟೀಲ್, 60 ವರ್ಷ, ಸಾ: ಜಂಗಮರ ಕಲ್ಗುಡಿ ಎಂಬಾತನಿಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದ್ದು ಇದರಿಂದ ಇಮಾಮಸಾಬನಿಗೆ ಹಣೆಗೆ, ತುಟಿಗೆ, ಎಡ ಮತ್ತು ಬಲಗೈಗೆ, ಎಡಗಾಲಿಗೆ ಗಾಯಗಳಾಗಿದ್ದು, ಖಾಜಾಬನಿಗೆ ಸೊಂಟದ ಹತ್ತಿರ ಒಳಪೆಟ್ಟಾಗಿದ್ದು, ಎರಡೂ ಕಾಲು ಮತ್ತು ಕೈಗಳಿಗೆ ತೆರೆಚಿದ ಗಾಯ ಮತ್ತು ಒಳಪೆಟ್ಟಾಗಿದ್ದು, ಸೈಫ್ ಅಲಿಗೆ ತಲೆಗೆ ರಕ್ತಗಾಯ, ಬೆನ್ನಿಗೆ ಕೈ ಕಾಲುಗಳಿಗೆ ತೆರೆಚಿದ ಗಾಯಗಳಾಗಿದ್ದು, ಫಕೀರಗೌಡನಿಗೆ ತಲೆಗೆ ತೀವ್ರ ಒಳಪೆಟ್ಟಾಗಿದ್ದು, ಎಡಗೈ, ಎಡಗಾಲು ಮತ್ತು ಬಲಗೈ, ಬಲಗಾಲಿಗೆ ಒಳಪೆಟ್ಟು ಮತ್ತು ತೆರೆಚಿದ ಗಾಯಗಳಾಗಿರುತ್ತವೆ. ಫಕೀರಗೌಡನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದುಕೊಂಡು ಹೋಗಿದ್ದು ಇರುತ್ತದೆ. ಕಾರಣ ಈ ಅಪಘಾತ ಮಾಡಿದ ಇಮಾಮ್ ಸಾಬನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ.ಅಂತಾ ಮುಂತಾಗಿ ನೀಡಿದ ಹೇಳಿಕೆ ಆಧಾರದ ಮೇಲಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ್: 195/2016 ಕಲಂ 279, 337, 338 ಐ.ಪಿ.ಸಿ. ಅಡಿ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ. ಗಾಯಾಳು ಫಕೀರಗೌಡ 60 ವರ್ಷ, ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೀಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಲಾಗಿತ್ತು. ನಂತರ ಇಂದು ದಿ:- 17-0075-2016 ರಂದು ಮಧ್ಯಾಹ್ನ 1:15 ಗಂಟೆಗೆ ವಿದ್ಯಾನಗರ ಪೊಲೀಸ್ ಠಾಣೆ ಹುಬ್ಬಳ್ಳಿಯಿಂದ ಇ-ಮೇಲ್ ಮೂಲಕ ಈ ಪ್ರಕರಣದಲ್ಲಿಯ ಗಾಯಾಳು ಫಕೀರಗೌಡ ತಂದೆ ಲಿಂಗನಗೌಡ ಮಾಲೀಪಾಟೀಲ್, 60 ವರ್ಷ, ಸಾ: ಜಂಗಮರ ಕಲ್ಗುಡಿ ಈತನು ಹುಬ್ಬಳ್ಳ ಕೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಇಂದು ದಿನಾಂಕ:- 17-07-2016 ರಂದು ಮುಂಜಾನೆ 11:00 ಗಂಟೆಗೆ ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಎಂ.ಎಲ್.ಸಿ. ಮಾಹಿತಿ ಸ್ವೀಕೃತವಾಯಿತು. ನಂತರ ಪ್ರಕರಣದಲ್ಲಿಯ ಗಾಯಾಳು ಫಕೀರಗೌಡ ಈತನು ಮೃತಪಟ್ಟಿದ್ದರಿಂದ ಈ ಪ್ರಕರಣದಲ್ಲಿ ಕಲಂ 304() .ಪಿ.ಸಿ.ಯನ್ನು ಅಳವಡಿಸಿಕೊಳ್ಳಲು ಮಾನ್ಯ ನ್ಯಾಯಲಯಕ್ಕೆ ಯಾದಿಯನ್ನು ನಿವೇದಿಸಿಕೊಂಡಿದ್ದು ಇರುತ್ತದೆ
7] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 203/2016 ಕಲಂ: 87 Karnataka Police Act
ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆ ರವರು ದಿನಾಂಕ: 17-07-2016 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಅಯೋಧ್ಯ ಸೀಮಾದಲ್ಲಿ ಕಾಲುವೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಹಾರ ಎಂಬ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಮೇರೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿ ಮತ್ತು ಮಾನ್ಯ ಸಿಪಿಐ ಸಾಹೇಬರವರ ಮಾರ್ಗದರ್ಶನದಲ್ಲಿ ನಾನು ಸಿಬ್ಬಂದಿಯವರಾದ ಹೆಚ್.ಸಿ. 68 ಪಿ.ಸಿ. 354, 363, 160, 129, 237, 110, 277, 323, 180, 287, 38 ಜೀಪ ಚಾಲಕ ಎ.ಪಿ.ಸಿ. 77 ಕನಕಪ್ಪ ರವರು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ನಂ: ಕೆ.ಎ-37/ ಜಿ-307 ನೇದ್ದರಲ್ಲಿ ಹಾಗೂ ವೈಯಕ್ತಿಕ ಮೋಟಾರ ಸೈಕಲಗಳಲ್ಲಿ ಗಂಗಾವತಿಯಿಂದ ಸಂಜೆ 4:30 ಗಂಟೆಗೆ ಹೊರಟೆವು. ಅಯೋಧ್ಯ ಸೀಮಾದಲ್ಲಿ ವಾಹನಗಳನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ನಮಗೆ ಮಾಹಿತಿ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತು ನೋಡಲು ಅಯೋಧ್ಯ ಸೀಮಾದಲ್ಲಿ  ಕಾಲುವೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಸಂಜೆ 5:00 ಗಂಟೆಯಾಗಿದ್ದು ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 7 ಜನರು ಸಿಕ್ಕಿ ಬಿದ್ದಿದ್ದು, ಸಿಕ್ಕವರ ಹೆಸರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1)  ವೀರೇಶ ತಂದೆ ಪಂಪಾಪತಿ, 35 ವರ್ಷ, ಸಾ: ಹೊಸಳ್ಳಿ (2) ಶಿವು ತಂದೆ ಮಲ್ಲಪ್ಪ, ಸಾ: 3ನೇ ವಾರ್ಡ-ಗಂಗಾವತಿ (3) ಈರಣ್ಣ ತಂದೆ ಹನುಮಂತಪ್ಪ, 35 ವರ್ಷ, ಸಾ: ಲಿಂಗರಾಜ ಕ್ಯಾಂಪ್, ಗಂಗಾವತಿ (4) ಪರಶುರಾಮ ತಂದೆ ಯಂಕಪ್ಪ ಡಬ್ಬಿ, ವಯಸ್ಸು 35 ವರ್ಷ, ವಿದ್ಯಾನಗರ (5) ರಮೇಶ ತಂದೆ ದುರಗಪ್ಪ ದಾರಿಮನಿ, ವಯಸ್ಸು 34 ವರ್ಷ, ನಾಯಕ ಸಾ: 8ನೇ ವಾರ್ಡ-ಗಂಗಾವತಿ (6) ಚಂದ್ರಪ್ಪ ತಂದೆ ಹನುಮಂತಪ್ಪ ಬಸಾಪಟ್ಟಣ, ವಯಸ್ಸು 30 ವರ್ಷ, ಸಾ: ಸಿಂಗನಾಳ (7) ಬಸಣ್ಣ ತಂದೆ ಹನುಮಂತಪ್ಪ ಬಂಡಿ, ಸಾ: ಗುಂಡಮ್ಮ ಕ್ಯಾಂಪ್-ಗಂಗಾವತಿ ಅಂತಾ ತಿಳಿಸಿದರು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 6,900/- ರೂಪಾಯಿ, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಚೀಲ ಮತ್ತು (1) ಹೋಂಡಾ ಡಿಯೋ ಮೋ.ಸೈ. ನಂ: ಕೆ.ಎ-37/ ವೈ-1927 (2) ಹೊಸ ಹೋಂಡಾ ಆ್ಯಕ್ಟಿವ್ ಮೋಟಾರ ಸೈಕಲ್ (ನಂಬರ್ ಇರುವುದಿಲ್ಲಾ) (3) ಹೊಸ ಹಿರೋ ಹೆಚ್.ಎಫ್. ಡಿಲಕ್ಸ್ ಮೋಟಾರ ಸೈಕಲ್ (ನಂಬರ್ ಇರುವುದಿಲ್ಲಾ) (4) ಹಿರೋ ಪ್ಯಾಸೆನ್ ಪ್ರೋ ಮೋಟಾರ ಸೈಕಲ್ ನಂ: ಕೆ.ಎ-37/ ವಿ-5017 (5) ಹಿರೋ ಹೆಚ್.ಎಫ್. ಡಿಲಕ್ಸ್ ಮೋಟಾರ ಸೈಕಲ್ ನಂ: ಕೆ.ಎ-37/ ಇ.ಬಿ-4480 ಗಳು ಸಿಕ್ಕಿದ್ದು, ಈ ಬಗ್ಗೆ ಸಂಜೆ 5:00 ರಿಂದ 6:00 ಗಂಟೆಯವರೆಗೆ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತರೊಂದಿಗೆ ವಾಪಸ್ ಠಾಣೆಗೆ ಬಂದಿದ್ದು, ಸದರಿ ಆರೋಪಿತರ ವಿರುದ್ಧ ಕಲಂ 87 ಕೆ.ಪಿ. ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಇರುತ್ತದೆಅಂತಾ ಸಾರಾಂಶ ಇರುತ್ತದೆ. ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದು, ಕಾರಣ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಂಜೆ 7:00 ಗಂಟೆಗೆ ಗಂಗಾವತಿ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ: 203/2016 ಕಲಂ 87 ಕೆ.ಪಿ. ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008