Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, July 20, 2016

1] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 83/2016 ಕಲಂ: 107 ಸಿ.ಆರ್.ಪಿ.ಸಿ.
ದಿನಾಂಕ: 19-07-2016 ರಂದು ಸಾಯಂಕಾಲ 5-15 ಗಂಟೆಗೆ ಸುಮಾರು ಶ್ರಿ ಈರಣ್ಣ ಮಾಳವಾಡ .ಎಸ್. ತಾವರಗೇರಾ ಠಾಣೆ ಪಟ್ರೊಲಿಂಗ್ ಕುರಿತು ತಾವರಗೇರ ಠಾಣಾ ವ್ಯಾಪ್ತಿಯ ಹಾಗಲ್ದಾಳ ಗ್ರಾಮಕ್ಕೆ ಬೇಟಿ ನೀಡಿ ಗ್ರಾಮದಲ್ಲಿ ಗುಪ್ತ ಮಾಹಿತಿ ಸಂಗ್ರಹಿಸಲಾಗಿ ಹಾಗಲ್ದಾಳ ಗ್ರಾಮ ಹೊಲ ಸರ್ವೆ ನಂ: 99 ನೇದ್ದರಲ್ಲಿಯ 3 ಎಕರೆ 11 ಗುಂಟೆ ಹೊಲದ ಸಂಬಂಧ ಮೇಲಿನ ಎರಡು ಪಾರ್ಟಿಯವರಿಗೂ ಜಗಳವಿದ್ದು ಮೆಲ್ಕಾಣಿಸಿದ ಆರೋಪಿತರ ಒಬ್ಬರಿಗೊಬ್ಬರೂ ವೈಮನಸ್ಸು ಮಾಡಿಕೊಂಡು ಪರಸ್ಪರ ದ್ವೇಷ ಸಾಧಿಸುತ್ತಿದ್ದುದು ಕಂಡು ಬಂದಿದ್ದು ಇದೇ ದ್ವೇಷದ ಕಾರಣಕ್ಕೆ ಆರೋಪಿತರ ಮೇಲೆ ಈಗಾಗಲೇ ಠಾಣೆ ಗುನ್ನೆ ನಂ: 67/2016 ಮತ್ತು 68/2016 ದಾಖಲಾಗಿದ್ದು ಇರುತ್ತದೆ. ಸದರಿ ಆರೋಪಿತರು ಗ್ರಾಮದಲ್ಲಿ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿ ಸಾರ್ವಜನಿಕರ ಆಸ್ತಿ ಪಾಸ್ತಿ ಹಾನಿಮಾಡುವ ಸಂಭವ ಹೆಚ್ಚಾಗಿ ಕಂಡು ಬಂದ್ದಿದ್ದು ಇರುತ್ತದೆ. ಕಾರಣ ಗ್ರಾಮದಲ್ಲಿ ಶಾಂತತೆಯನ್ನು ಕಾಪಾಡುವ ಕುರಿತು ಸದರಿಯವರಿಂದ ಸದ್ವರ್ತನೆಗಾಗಿ ಯೋಗ್ಯ ಮುಚ್ಚಳಿಕೆಯನ್ನು ಪಡೆದುಕೊಳ್ಳುವುದು ಅತೀ ಅವಶ್ಯಕತೆ ಇರುತ್ತದೆ. ಅಂತಾ ವಾಪಾಸು ಸಂಜೆ 7-30 ಗಂಟೆಗೆ ಠಾಣೆಗೆ ಬಂದು ಸದರಿ 1) ಬಸವರಾಜ ತಂದೆ ದುರಗಪ್ಪ ವಾಲೀಕಾರ ಜಾತಿ: ವಾಲ್ಮೀಕಿ ವಯ: 39 ವರ್ಷ, ಉ: ಒಕ್ಕಲುತನ. ಸಾ: ಹಾಗಲ್ದಾಳ 2) ಯಮನೂರಪ್ಪ ತಂದೆ ದೊಡ್ಡಪ್ಪ ಬಿಸನಾಳ ಜಾತಿ: ವಾಲ್ಮೀಕಿ ವಯ: 28 ವರ್ಷ, ಉ: ಒಕ್ಕಲುತನ. ಸಾ: ಇದ್ಲಾಪುರ 3) ಛತ್ರಪ್ಪ ತಂದೆ ಹನಮಪ್ಪ ವಾಲೀಕಾರ ಜಾತಿ: ವಾಲ್ಮೀಕಿ ವಯ: 25 ವರ್ಷ, ಉ: ಒಕ್ಕಲುತನ. ಸಾ:ಹಾಗಲ್ದಾಳ 4) ಬಸವಂತಪ್ಪ ತಂದೆ ದೊಡ್ಡಪ್ಪ ಬಿಸನಾಳ ಜಾತಿ: ವಾಲ್ಮೀಕಿ ವಯ: 26 ವರ್ಷ, ಉ: ಒಕ್ಕಲುತನ. ಸಾ: ಸಾ:ಇದ್ಲಾಪುರ 5) ಹನಮಪ್ಪ ತಂದೆ ದುರಗಪ್ಪ ವಾಲೀಕಾರ ಜಾತಿ: ವಾಲ್ಮೀಕಿ ವಯ: 45 ವರ್ಷ, ಉ: ಒಕ್ಕಲುತನ. ಸಾ: ಸಾ:ಹಾಗಲ್ದಾಳ  ಎರಡನೇ ಪಾಟರ್ಿಯವರು 1) ರಾಮಣ್ಣ ತಂದೆ ಹನುಮಪ್ಪ ಗಡೇದರ ವಯ: 64 ವರ್ಷ, ಜಾತಿ: ವಾಲ್ಮೀಕಿ ಉ: ಒಕ್ಕಲುತನ. ಸಾ: ಹಾಗಲ್ದಾಳ.2) ಶ್ರೀ ಹನಮಂತ ತಂದೆ ರಾಮಣ್ಣ ವಾಲೀಕಾರ ವಯ :32 ವರ್ಷ, ಜಾತಿ :ವಾಲ್ಮೀಕಿ, ಉ :ಒಕ್ಕಲುತನ ಸಾ :ಹಾಗಲ್ದಾಳ 3) ಶಿವರಾಜ ತಂದೆ ರಾಮಣ್ಣ ಗಡೇದರ. ವಯ: 23 ವರ್ಷ, ಜಾತಿ: ವಾಲ್ಮೀಕಿ. ಉ: ಒಕ್ಕಲುತನ. ಸಾ: ಹಾಗಲ್ದಾಳ. ಆರೋಪಿತರ ಮೇಲೆ ಮುಂಜಾಗ್ರತಾ ಕ್ರಮವಾಗಿ ಸ್ವಂತ ಫಿಯರ್ಾದಿಯ ಮೇಲಿಂದ ಠಾಣೆಯ ಗುನ್ನೆ ನಂ: 83/2016 ಕಲಂ 107 ಸಿಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 116/2016 ಕಲಂ: 379 ಐ.ಪಿ.ಸಿ:.

ದಿನಾಂಕ: 19-07-2016 ರಂದು ಫಿರ್ಯಾದಿದಾರರಾದ ಸಂಗನಗೌಡ ತಂದೆ ಶಂಕ್ರಪ್ಪ ಮದರಿ ಸಾ: ರಾಜೂರ ಹಾ:ವ: ದಿಡ್ಡಿಕೇರಿ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಲಿಖಿತ ಫಿರ್ಯಾದಿಯ ಸಾರಂಶವೇನೆಂದರೆ, ದಿನಾಂಕ: 18-07-2016 ರಂದು ಮದ್ಯಾಹ್ನ 12-00 ಗಂಟೆಗೆ ತಮ್ಮ ಮೋ ಸೈ ನಂ ಕೆಎ 37 ಆರ್ 8197 ನೇದ್ದನ್ನು ಕೊಪ್ಪಳದ ಕೋರ್ಟ ಆವರಣದ ಪೋಸ್ಟ್ ಬಾಕ್ಸ್ ಹತ್ತಿರ ನಿಲ್ಲಿಸಿ ಕೋರ್ಟ ಒಳಗೆ ಹೋಗಿ ತಮ್ಮ ಕೆಲಸ ಮುಗಿಸಿಕೊಂಡು ಮದ್ಯಾಹ್ನ 12-15 ಗಂಟೆಗೆ ತಾವು ತಮ್ಮ ಮೋಟಾರ ಸೈಕಲ್ ನಿಲ್ಲಸಿದ್ದ ಸ್ಥಳದ ಹತ್ತಿರ ಬಂದು ನೋಡಿದಾಗ ತಮ್ಮ ಮೋ ಸೈಕಲ್ ಕಾಣಲಿಲ್ಲಾ, ನಂತರ ತಾವು ಕೋರ್ಟ ಆವರಣದ ಸುತ್ತಾಮುತ್ತಾ ಮತ್ತು ಮುಂತಾದ ಕಡೆಗಳಲ್ಲಿ ಹುಡುಕಾಡಿದರು ತಮ್ಮ ಮೋಟಾರ ಸೈಕಲ್ ಸಿಕ್ಕರುವುದಿಲ್ಲಾ ಯಾರೋ ಕಳ್ಳರು ಕಳ್ಳತನ ಮಾಢಿಕೊಂಡು ಹೋಗಿರುತ್ತಾರೆ. ಕಾರಣ ತಾವುಗಳು ನನ್ನ ವಾಹನವನ್ನು ಕಳುವುಮಾಡಿದವರನ್ನು ಪತ್ತೇ ಮಾಡಿ ಕಾನೂಕ್ರಮ ಜರುಗಿಸಲು ವಿನಂತಿ ಅಂತಾಮುಂತಾಗಿರುವ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008