Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, July 21, 2016

1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 79/2016 ಕಲಂ: 279, 304(ಎ) ಐ.ಪಿ.ಸಿ:.
ದಿನಾಂಕ:21-07-2016 ರಂದು 6-30ಎಎಂಕ್ಕೆ ಪಿರ್ಯಾದಿದಾರ ಠಾಣೆಗೆ ಹಾಜರಾಗಿ ಒಂದು ಗಣಕೀಕರಣ ಮಾಡಿದ ಪಿರ್ಯಾದಿಯನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ,  ದಿನಾಂಕ:20-07-2016 ರಂದು ಮೃತ ಮೌನೇಶ್ವರ ಈತನು ತನ್ನ ಸ್ವಂತ ಊರಿನಲ್ಲಿ ಜಾತ್ರೆ ಇದ್ದುದರಿಂದ ಜಾತ್ರೆಗೆ ಹೋಗಿ, ಜಾತ್ರೆ ಮುಗಿಸಿಕೊಂಡು ವಾಪಸ್ ಕೊಪ್ಪಳಕ್ಕೆ ಹೋಗುವ ಕುರಿತು ಮೋಟಾರ್ ಸೈಕಲ್ ನಂ:ಕೆಎ-37 ಕ್ಯೂ-1257 ನೇದ್ದನ್ನು ತೆಗೆದುಕೊಂಡು ರಾತ್ರಿ 8-10 ಗಂಟೆಯ ಸುಮಾರು ಕುಕನೂರ-ಕೊಪ್ಪಳ ರಸ್ತೆಯ ಮೇಲೆ ಮಸಬಹಂಚಿನಾಳ ಸೀಮಾದ ಹಿರೇಹಳ್ಳದ ಹತ್ತಿರ ಹೊರಟಾಗ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನ್ನು ಅತೀವೇಗವಾಗಿ ಮತ್ತು ರಸ್ತೆಯ ರಿಪೇರಿ ಕುರಿತು ಹಾಕಿದ ಎಚ್ಚರಿಕೆಯ ಫಲಕ, ಸಂಜ್ಞೆ ಗಳನ್ನು ಲಕ್ಷಿಸದೇ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ, ಸಿಮೆಂಟ್ ಪೈಪ್ ಗೆ ಟಕ್ಕರ್ ಕೊಟ್ಟು ಭಾರೀಗಾಯಗೊಂಡಿದ್ದು, ಚಿಕಿತ್ಸೆ ಕುರಿತು ಕುಕನೂರ ಆಸ್ಪತ್ರೆಯಿಂದ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ 12-10 ಗಂಟೆಗೆ ಮೃತಪಟ್ಟಿರುತ್ತಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 117/2016 ಕಲಂ: 78(3) Karnataka Police Act.
ದಿನಾಂಕ: 20-07-2016 ರಂದು ರಾತ್ರಿ 08-30 ಗಂಟೆಗೆ ಶ್ರೀ ಸತೀಶ ಪಾಟೀಲ ಪಿ.. ರವರು ಠಾಣೆಗೆ ಹಾಜರಾಗಿ ಮಟಕಾ ಜೂಜಾಟದ ದಾಳಿ ಮಾಡಿ ವರದಿಯನ್ನು ಹಾಜರಪಡಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೇ, ದಿ: 20-07-2016 ರಂದು ರಾತ್ರಿ 6-45 ಗಂಟೆಗೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಧೋಗಿ ರಸ್ತೆ ಸಿರಸಪ್ಪಯ್ಯನಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ: 01 ಸುಭಾಸ ತುಬಾಕಿ ನೇದ್ದವನು ಸಾರ್ವಜನಿಕರಿಗೆ ಕರೆದು ಇದು ನಶೀಬದ ಆಟ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00 ರೂಪಾಯಿಗಳನ್ನು ಕೊಡುತ್ತೇವೆ, ಯಾರ ಅದೃಷ್ಟ ಅಂತಾ ಕೂಗುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಪಿ. ರವರು ಹಾಗೂ ಸಿಬ್ಬಂದಿಗಳು ಕೂಡಿಕೊಂಡು ದಾಳಿ ಮಾಡಿ ಆರೋಪಿತರಿಂದ ಮಟಕಾ ಜೂಜಾಟದ ನಗದು ಹಣ ರೂ 850=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಬಂದು ಹಾಜರುಪಡಿಸಿದ್ದು ಇರುತ್ತದೆ. ಮಟಕಾ ಬುಕ್ಕಿ ಸುಧಾಕರ ಹೊಸಮನಿ ಇರುತ್ತಾನೆ. ಇವರ ಮೇಲೆ ಕ್ರಮ ಜರುಗಿಸಿ ಅಂತಾ ದೂರ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.
3] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 135/2016 ಕಲಂ: 78(3) Karnataka Police Act.
ದಿನಾಂಕ: 20-07-2015 ರಂದು 11-15 J.ಎಂ ಕ್ಕೆ  ಶ್ರೀ ಜಯಪ್ರಕಾಶ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಮಟಕಾ ಜೂಜಾಟದ ದಾಳಿ ಮಾಡಿ ವರದಿಯನ್ನು ಹಾಜರಪಡಿಸಿದ್ದು, ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಮಾನ್ಯ ಘನ ನ್ಯಾಯಾಲಯದಿಂದಾ ಅನುಮತಿ ಪಡೆದುಕೊಂಡಿದ್ದುಸದರಿ ದೂರಿನ ಸಾರಾಂಶವೇನೆಂದರೆ  ದಿನಾಂಕ. 20-07-2016 ರಂದು 10-00 ಎ.ಎಂ.ಕ್ಕೆ ಆರೋಪಿತರು  ಹೊಸ ನಿಂಗಾಪೂರ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫೀರ್ಯಾದಿದಾರರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಡಿ ಆರೋಪಿತನಿಂದ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು, ಹಾಗೂ ಜೂಜಾಟದ ನಗದು ಹಣ.2500-00 ರೂ. ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
4] ಕನಕಗಿರಿ  ಪೊಲೀಸ್ ಠಾಣೆ ಗುನ್ನೆ ನಂ. 138/2016 ಕಲಂ: 78(3) Karnataka Police Act.
ಇಂದು ದಿನಾಂಕ 20-07-2016 ರಂದು ಸಂಜೆ 6-30 ಗಂಟೆಯ ಸುಮಾರಿಗೆ ಕನಕಗಿರಿ ಗ್ರಾಮದ ಎ.ಪಿ.ಎಂ.ಸಿ. ಆವರಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಓ.ಸಿ.ಮಟಕಾ ನಡೆದಿದೆ ಅಂತಾ ಭಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿ ರವರ ಮಾರ್ಗದರ್ಶನದಲ್ಲಿ ಎ.ಎಸ್.ಐ. ರವರು ಪಂಚರ ಮತ್ತು ಸಿಬ್ಬಂದಿಯವರೊಂದಿಗೆ ಇಂದು ದಿನಾಂಕ 20-07-2016 ರಂದು ಸಂಜೆ 7-00 ಗಂಟೆಗೆ ಕನಕಗಿರಿ ಗ್ರಾಮದ ಎಪಿಎಂಸಿ ಗೋದಾಮಿನ ಆವರಣದಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಾಣಿಸಿದ ಆರೋಪಿತನು ಸಾರ್ವಜನಿಕರನ್ನು ಬರ ಮಾಡಿಕೊಂಡು ಅವರಿಗೆ 1 ರೂಪಾಯಿಗೆ 80 ರೂಪಾಯಿ ಬರುತ್ತದೇ ಬನ್ನೀ ನಸೀಬ ಜೂಜಾಟದ ಅಂತಾ ಕೂಗುತ್ತಾ ಸಾರ್ವಜನಿಕರನ್ನು ಬರ ಮಾಡಿಕೊಂಡು ಅವರಿಂದ ಹಣ ಪಡೆದು ಅವರಿಗೆ ಓ.ಸಿ. ನಂಬರಗಳನ್ನು ಬರೆದು ಕೊಡುತ್ತಿದ್ದಾಗ ಪಂಚರೊಂದಿಗೆ ದಾಳಿ ಮಾಡಲು ಆರೋಪಿತನಿಂದ 01 ಮಟಕಾ ಬರೆದ ಪಟ್ಟಿ, 1 ಬಾಲ್ ಪೆನ್ನು ನಗದು ಹಣ ರೂ. 2300=00 ಸಿಕ್ಕಿದ್ದು, ಮಟಕಾ ಸಾಮಾಗ್ರಿಗಳನ್ನು ಮತ್ತು ನಗದು ಹಣವನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಈ ಬಗ್ಗೆ ಸಂಜೆ 7-00 ಗಂಟೆಯಿಂದ ರಾತ್ರಿ 8-30 ಗಂಟೆಯವರೆಗೆ ಲೈಟಿನ ಬೆಳಕಿನಲ್ಲಿ ಪಂಚನಾಮೆಯನ್ನು ಮಾಡಿ ವಾಪಸ್ ಠಾಣೆಗೆ ರಾತ್ರಿ 8-45 ಗಂಟೆಗೆ ಬಂದು ಸದರಿ ವರದಿಯ ಪ್ರಕಾರ ಅಸಂಜ್ಞೆಯ ಅಪರಾಧವಾಗಿದ್ದರಿಂದ ಎನ್.ಸಿ.ನಂ.03/16 ರೀತ್ಯಾ ದಾಖಲಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣದ ದಾಖಲು ಮಾಡಿ ತನಿಖೆ ನಡೆಸಲು ಅನುಮತಿಯನ್ನು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ರಾತ್ರಿ 10-30 ಗಂಟೆಗೆ ಸದರ ವರದಿ ಮತ್ತು ಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.138/16 ಕಲಂ 78 (3) ಕೆ.ಪಿ. ಯಾಕ್ಟ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ತನಿಖೆ  ಕೈಕೊಂಡೆನು
5] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 206/2016 ಕಲಂ: 87 Karnataka Police Act.

ದಿನಾಂಕ: 20-07-2016 ರಂದು ಮಧ್ಯಾಹ್ನ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಬೆಣಕಲ್ ಕೆರೆ ಹತ್ತಿರ ಗುಡ್ಡದ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಹಾರ ಎಂಬ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಮೇರೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿ ಮತ್ತು ಮಾನ್ಯ ಸಿಪಿಐ ಸಾಹೇಬರವರ ಮಾರ್ಗದರ್ಶನದಲ್ಲಿ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಮತ್ತು ಸಿಬ್ಬಂದಿಯವರಾದ ಪಿ.ಸಿ. 97, 129, 323, 335, 358, 86, 489, 363 ಜೀಪ ಚಾಲಕ ಎ.ಪಿ.ಸಿ. 77 ಕನಕಪ್ಪ ರವರು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಎಲ್ಲರೂ ಹೋಗಿ ನಮಗೆ ಮಾಹಿತಿ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತು ನೋಡಲು ಚಿಕ್ಕಬೆಣಕಲ್ ಕೆರೆ ಹತ್ತಿರ ಗುಡ್ಡದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 4 ಜನರು ಸಿಕ್ಕಿ ಬಿದ್ದಿದ್ದು, ಸಿಕ್ಕವರ ಹೆಸರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ಬಸವರಾಜ ತಂದೆ ಭೀಮಪ್ಪ ಬೋವಿ, ವಯಸ್ಸು 33 ವರ್ಷ, ಗೌಂಡಿ ಕೆಲಸ ಸಾ: ಮುಕ್ಕುಂಪಿ (2) ಪಂಪಾಪತಿ ತಂದೆ ಲಕ್ಷ್ಮಪ್ಪ ಹುರಕಡ್ಲಿ, ವಯಸ್ಸು 34 ವರ್ಷ, ಕುರುಬರು, ವ್ಯವಸಾಯ ಸಾ: ಚಿಕ್ಕಬೆಣಕಲ್ (3) ಗಾದೆಪ್ಪ ತಂದೆ ಮರಿಯಪ್ಪ ಬಾವಿಕಟ್ಟಿ, ವಯಸ್ಸು 46 ವರ್ಷ, ಕುರುಬರು, ಕೂಲಿ ಕೆಲಸ ಸಾ: ಚಿಕ್ಕಬೆಣಕಲ್ (4) ಶಿವಪುತ್ರಪ್ಪ ತಂದೆ ಶಿವಪ್ಪ, ಬನ್ನಿಗೋಳ, 60 ವರ್ಷ, ಲಿಂಗಾಯತ, ವ್ಯವಸಾಯ ಸಾ: ಚಿಕ್ಕಬೆಣಕಲ್ ಅಂತಾ ತಿಳಿಸಿದರು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 2,110/- ರೂಪಾಯಿ, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಖಾಲಿ ಪ್ಲಾಸ್ಟಿಕ್ ಚೀಲ ಸಿಕ್ಕಿದ್ದು, ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008