ದಿನಾಂಕ: 28-07-2016
ರಂದು 4-20 ಗಂಟೆಗೆ ಪಿ.ಎಸ್.ಐ.
ಹನಮಸಾಗರ ರವರು ಠಾಣೆಗೆ ಹಾಜರಾಗಿ ಇಸ್ಪೇಟ್ ದಾಳಿ ಪಂಚನಾಮೆ ಹಾಗೂ 5
ಜನ ಆರೋಪಿತರು ಮತ್ತು ಮುದ್ದೆಮಾಲಸಮೇತ ಆರೋಪಿತರ ವಿರುದ್ದ ಕಾನೂನು
ಕ್ರಮ
ಜರುಗಿಸುವಂತೆ ವರದಿ ನೀಡಿದ್ದರ ಸಾರಾಂಶವೇನೆಂದರೆ. ಪಿ.ಎಸ್.ಐ. ರವರು ದಿನಾಂಕ: 28-07-2016 ರಂದು ಮದ್ಯಾಹ್ನ 2-15 ಗಂಟೆಗೆ ಹನಮಸಾಗರದ ಹಳೆ ಬಸ
ನಿಲ್ದಾಣದಲ್ಲಿದ್ದಾಗ. ಹನಮಸಾಗರದ ಎ.ಪಿ.ಎಂ.ಸಿ.ಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ
ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹೆಚ್.ಸಿ-11, 83, ಪಿ.ಸಿ-126, ರವರು ಹಾಗೂ ಇಬ್ಬರು ಪಂಚರಾದ 1] ಶಿವಪುತ್ರ ತಂದೆ ಬಾಲನಗೌಡ
ಮಾಲಿಪಾಟೀಲ್ ಸಾ: ಹನಮಸಾಗರ 2] ರೈಹಿಮಾನಸಾಬ ತಂದೆ ಚಂದುಸಾಬ ಮುಲ್ಲಾರ ಸಾ: ಕುರುಬನಾಳ ಹಾ:ವ: ಹನಮಸಾಗರ ರವರೊಂದಿಗೆ ಸರಕಾರಿ
ಜೀಪ ನಂ: ಕೆ.ಎ-37 ಜಿ-186 ನೇದ್ದರಲ್ಲಿ ಹೊರಟು ಹನಮಸಾಗರದ ಎ.ಪಿ.ಎಂ.ಸಿ. ಯಲ್ಲಿ ಸಾರ್ವ ಜನಿಕ
ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು, ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವರರನ್ನು ಪಂಚರ ಸಮಕ್ಷಮ ದಾಳಿ ಮಾಡಲು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ 5 ಜನರು ಸಿಕ್ಕಿ ಬಿದಿದ್ದು. ಇಸ್ಪೆಟ್ ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪಟ ಎಲೆಗಳು ಹಾಗೂ 1110/- ನಗದು ಹಣ ಹಾಗೂ ಒಂದು ಪ್ಲಾಸ್ಟಿಕ್ ಬರ್ಕಾ ಜಪ್ತ ಮಾಡಿಕೊಂಡು ಕಾನೂನು
ಕ್ರಮ ಜರುಗಿಸಲು ವರದಿ ನೀಡಿದ್ದು ಇರುತ್ತದೆ.
2] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ.
90/2016 ಕಲಂ: 78(3) Karnatka Police Act.
ದಿನಾಂಕ. 28-07-2016 ರಂದು ಸಂಜೆ 7-00 ಗಂಟೆಗೆ ನಾನು ಠಾಣೆಯಲ್ಲಿದ್ದಾಗ
ಶ್ರೀ ಚಂದ್ರಶೇಖರ ಪಿಸಿ-409 ರವರು ತಾವರಗೇರಾ ಪಟ್ಟಣದ ಶ್ಯಾಮೀದಲಿ ವೃತ್ತದ ಸಾರ್ವಜನಿಕ ಸ್ಥಳದಲ್ಲಿ
ಮಟ್ಕಾ ಜೂಜಾಟ ನಡೆದಿದೆ ಅಂತಾ ಖಚಿತವಾದ ಬಾತ್ಮಿ ಬಂದಿದ್ದು, ರೇಡ್ ಮಾಡುವ ಕುರಿತು ಶ್ರೀ ಚಂದ್ರಶೇಖರ
ಪಿಸಿ-409 ರವರಿಗೆ ಪಂಚರನ್ನು ಕರೆದುಕೊಂಡು ಬಾ ಅಂತಾ ಆದೇಶಿಸಿದ ಪ್ರಕಾರ ಇಬ್ಬರು ಪಂಚರನ್ನು ಬರಮಾಡಿಕೊಂಡು
ತಾವರಗೇರಾದ ಬಸ್ ನಿಲ್ದಾಣದಲ್ಲಿ ಗಂಗಾವತಿಯ ಡಿ.ಎಸ್.ಪಿ ಸಾಹೇಬರ ಅಪರಾಧ ತಂಡದಲ್ಲಿರುವ ಸಿಬ್ಬಂದಿಯವರಾದ
ಶ್ರೀ ಮುತ್ತಣ್ಣ ಪಿಸಿ-65 ಮತ್ತು ಶ್ರೀ ಗ್ಯಾನಪ್ಪ ಪಿಸಿ-131 ರವರು ಜೀಪಿನಲ್ಲಿ ಹತ್ತಿದ್ದು ಅವರನ್ನು
ವಿಚಾರಿಸಲಾಗಿ ಅವರು ತಾವುಗಳು ಮಾನ್ಯ ಡಿ.ಎಸ್.ಪಿ ಸಾಹೇಬರ ಮಾರ್ಗದರ್ಶನದಲ್ಲಿ ಬಂದಿದ್ದು ಡಿ.ಎಸ್.ಪಿ
ಸಾಹೇಬರಿಗೆ ಬಂದ ಮಾಹಿತಿ ಪ್ರಕಾರ ತಾವರಗೆರಾ ಶ್ಯಾಮೀದಲಿ ವೃತ್ತದಲ್ಲಿ ಮಟ್ಕಾ ಜೂಜಾಟ ನಡೆದಿದೆ ಅಂತಾ
ತಿಳಿಸಿದ್ದು ಆಗ ನಾನು ಅವರಿಗೆ ನಾವು ಕೂಡ ಅದೇ ಮಾಹಿತಿಯಂತೆ ರೇಡ್ ಕುರಿತು ಹೋಗುತ್ತಿದ್ದು ನೀವು
ಬನ್ನಿ ಎಂದು ಅವರನ್ನು ಕೂಡ ಕರೆದುಕೊಂಡು ಎಲ್ಲರೂ ಕೂಡಿ ತಾವರಗೇರಾದ ಶ್ಯಾಮೀದಲಿ ವೃತ್ತದ ಹತ್ತಿರ
ಹೋಗಿ ಜೀಪನ್ನು ನಿಲ್ಲಿಸಿ ನೋಡಲಾಗಿ ಶ್ಯಾಮೀದಲಿ ವೃತ್ತದಲ್ಲಿರುವ ಒಂದು ಪಾನ್ಶ್ಯಾಪ್ ಮುಂದೆ ಸಾರ್ವಜನಿಕ
ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರ್ಗಳನ್ನು ಬರುದುಕೊಡುತ್ತಿದ್ದು,
ಮಟ್ಕಾ ನಂಬರ್ ಬಂದಲ್ಲಿ ಒಂದು ರೂಪಾಯಿಗೆ 80-00 ರೂಪಾಯಿ ಕೊಡುತ್ತೆನೆ ಅಂತಾ ಕೂಗೂತ್ತಾ ಮಟ್ಕಾ ನಂಬರ್ಗಳನ್ನು
ಬರೆದುಕೊಳ್ಳುತ್ತಿರುವ ಕಾಲಕ್ಕೆ ನಾನು ಹಾಗೂ ಸಿಬ್ಬಂದಿಯವರು ಮತ್ತು ಪಂಚರು ಕೂಡಿ ಸಂಜೆ 7-30 ಗಂಟೆಗೆ
ದಾಳಿ ಮಾಡಲು ಮಟ್ಕಾ ನಂಬರ್ ಬರೆಸುತ್ತಿದ್ದವರು ಓಡಿ ಹೋಗಿದ್ದು, ಮಟ್ಕಾ ನಂಬರ್ಗಳನ್ನು ಬರದುಕೊಡುತ್ತಿದ್ದನು
ಸಿಕ್ಕಿ ಬಿದ್ದಿದ್ದು, ಸಿಕ್ಕಿ ಬಿದ್ದವನಿಗೆ ವಿಚಾರಿಸಲು ಆತನು ತನ್ನ ಹೆಸರು ಚಂದ್ರಯ್ಯಸ್ವಾಮಿ ತಂದೆ
ವೀರಯ್ಯಸ್ವಾಮಿ ಕಲ್ಮಠ್, ವಯ: 50 ವರ್ಷ, ಜಾತಿ: ಜಂಗಮ, ಉ: ಪಾನಶ್ಯಾಪ್ ಸಾ: ತಾವರಗೇರಾ ಅಂತಾ ತಿಳಿಸಿದ್ದು,
ನಾನು ಅವನ ಅಂಗಜಡ್ತಿಯನ್ನು ಮಾಡಲು ಅವನ ಹತ್ತಿರ ಒಂದು ಮಟ್ಕಾ ನಂಬರ್ ಬರೆದ ಚೀಟಿ, ಒಂದು ಬಾಲ್ ಪೆನ್ನು,
ಹಾಗೂ ಜೂಜಾಟದ ನಗದು ಹಣ 3090=00 ರೂ. ಗಳು ಸಿಕ್ಕಿದ್ದು, ಗುನ್ನೆ ದಾಖಲಿಸಿಕೊಂಡು ತಪಾಸಣೆಯನ್ನು
ಕೈ ಕೊಂಡಿದ್ದು ಇರುತ್ತದೆ.
0 comments:
Post a Comment