ದಿನಾಂಕ 27-07-2016 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ನಾಗನಕಲ್ಲ ಗ್ರಾಮದ ಕೆ.ಎಸ್.ಆರ್.ಟಿ.ಸಿ.
ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಮಟಕಾ ಜೂಜಾಟ ತೊಡಗಿದ್ದ ಆರೋಪಿತರ
ಮೇಲೆ ದಾಳಿ ಮಾಡಲು ಒಬ್ಬನು ಓಡಿ ಹೊಗಿದ್ದು ಒಬ್ಬನು ಸಿಕ್ಕಿದ್ದು ಸಿಕ್ಕಿಬಿದ್ದವನಿಗೆ
ವಿಚಾರಿಸಲಾಗಿ ಬಾಷಾಸಾಬ
ತಂದಿ ಅಮೀನಸಾಬ ಬಡಗಿ ವಯಾ-35 ವರ್ಷ ಜಾ- ಮುಸ್ಲಿಂ ಸಾ- ನಾಗನಕಲ್ಲ ತಾ- ಗಂಗಾವತಿ ಈತನನ್ನ ಪಿ.ಎಸ್.ಐ ಸಾಹೇಬರು ಮತ್ತು
ಸಿಬ್ಬಂದಿವರು ಪಂಚರ ಸಮಕ್ಷದಲ್ಲಿ ದಾಳಿ
ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತನಿಗೆ ಹಿಡಿದುಕೊಂಡು ಆತನಿಂದ ರೂ. 850=00 ಗಳನ್ನು ಜಪ್ತ ಮಾಡಿಕೊಂಡು ಈತನು ಮಟ್ಕಾ ಪಟ್ಟಿ ಮತ್ತು ಹಣವನ್ನು ವಶಪಡಿಸಿಕೊಂಡಿದ್ದು ಗುನ್ನೆ ದಾಖಲು ಮಾಡಿಕೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 162/2016 ಕಲಂ: 454, 457, 380 ಐ.ಪಿ.ಸಿ:.
ದಿ :27.07.2016 ರಂದು ಮದ್ಯಾಹ್ನ 1.30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಶ್ರೀನಿವಾಸರಾವ್ ತಂದೆ ಸದಾಶಿವರಾವ್
ಕುಲಕರ್ಣಿ, BSNL Sub Divisional Engineer, ಸಾ : ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ನಿನ್ನೆ ದಿ-26.07.2016 ರಂದು ಸಂಜೆ 05.30 ಗಂಟೆಯಿಂದ ಇಂದು ದಿ-27.07.2016 ರಂದು ಬೆಳಿಗ್ಗೆ 10.30 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಗಿಣಗೇರಿ ದೂರವಾಣಿ ವಿನಿಮಯ ಕೇಂದ್ರ ಕೊಠಡಿಯ ಬೀಗ ಮುರಿದು
ಒಳಗಡೆ ಪ್ರವೇಶ ಮಾಡಿ ಕೊಠಡಿಯಲ್ಲಿದ್ದ, 1] 400 ಎ.ಹೆಚ್ ಸಾಮರ್ಥ್ಯ 45 ಸೆಲ್ ಗಳು ತಲಾ 1 ಕ್ಕೆ 6000/- ರೂ ಒಟ್ಟು ಅಂ.ಕಿ-270000-00 ರೂ ಮತ್ತು 2] 600 ಎ.ಹೆಚ್ ಸಾಮರ್ಥ್ಯ 24 ಸೆಲ್ ಗಳು ತಲಾ 1 ಕ್ಕೆ 10,000/- ರೂ ಒಟ್ಟು ಅಂ.ಕಿ-240000-00 ರೂ ಹೀಗೆ ಒಟ್ಟು 69 ಸೆಲ್ ಗಳು ಅಂ.ಕಿ-5,10,000-00 ರೂ ಬೆಲೆಬಾಳುವ ಸಾಮಾಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಮಾಡಿ ಅವರ ಮೇಲೆ ಸೂಕ್ತ
ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ತಡವಾಗಿ ನೀಡಿದ ದೂರಿನ ಮೇಲಿಂದ ಕೊಪ್ಪಳ ಗ್ರಾಮೀಣ ಠಾಣೆ
ಗುನ್ನೆ ನಂ : 162/2016. ಕಲಂ : 454,457,380 ಐಪಿಸಿ ಅಡಿಯಲ್ಲಿ
ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ.
213/2016 ಕಲಂ: 498(ಎ), 323, 504, 506 ಸಹಿತ 149 ಐ.ಪಿ.ಸಿ ಮತ್ತು 3, 4 ವರದಕ್ಷಿಣೆ ನಿಷೇಧ
ಕಾಯ್ದೆ.
ದಿನಾಂಕ:27-07-2016 ರಂದು
ಮುಂಜಾನೆ 11-00 ಗಂಟೆಗೆ ಪಿರ್ಯಾದಿದಾರರಾದ ಶ್ರಿಮತಿ ಅನಿತಾ @ ಅನೆಂತೆಮ್ಮ ಗಂಡ ತಿಮ್ಮಣ್ಣ ಭೋವಿ ಸಾ :ಹುಲಿಹೈದರ ಹಾ :ವ : 8 ನೇ ವಾರ್ಡ ವಡ್ಡರ ಓಣಿ
ಕುಷ್ಟಗಿ ಪಿರ್ಯಾದಿಯನ್ನು ಸಲ್ಲಿಸಿದ್ದು ಪಿರ್ಯಾದಿದಾರಳನ್ನು ದಿನಾಂಕ :17-02-2015 ರಂದು ಮದುವೆ
ಮಾಡಿಕೊಟ್ಟಿದ್ದು ಇರುತ್ತದೆ. ಸುಮಾರು 4 ತಿಂಗಳವರೆಗೆ ಸಂಸಾರ
ಮಾಡಿದ್ದು ನಂತರ ತನ್ನ ಗಂಡನಾದ ತಿಮ್ಮಣ್ಣ ಈತನು ನೀನು ಚೆಂದ
ಇಲ್ಲಾ, ವರದಕ್ಷಿಣೆ ಕಡಿಮೆ ಕೊಟ್ಟಿದಿ, ಇನ್ನೂ ನೀನು ವರದಕ್ಷಿಣೆ ತೆಗೆದೆಕೊಂಡು ಬಾ ಅಂತಾ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ಮಾಡುತ್ತಿದ್ದನು. ಆಗ ನಾನು ನಮ್ಮ ತಂದೆ-ತಾಯಿಗೆ ಈ ವಿಷಯವನ್ನು ತವರು ಮನೆಗೆ ಅಂತಾ ಬಂದಾಗ ಹೇಳುತ್ತಿದ್ದೇನು. ಆಗ ನಮ್ಮ ತಂದೆ-ತಾಯಿಯು ಇದು ಸಂಸಾರದ ವಿಷಯ ನಾವು ಸ್ವಲ್ಪ ದಿನದಲ್ಲಿ ಹಣವನ್ನು ರೆಡಿಮಾಡಿಕೊಂಡು ಬರುತ್ತೇನೆ. ಅಂತಾ ಹೇಳಿ ಸಮಜಾಹಿಸಿ ಕಳುಹಿಸುತ್ತಿದ್ದರು. ಮತ್ತು ನಾವು ಹುಲಿಹೈದರಕ್ಕೆ ಬಂದು ಹಣವನ್ನು ತಂದು ಕೊಡುತ್ತೇವೆ. ಅಂತಾ ಹೇಳುತ್ತಿದ್ದರು. ಹಾಗೂ ನನ್ನ ಗಂಡನು ಅಲ್ಲದೇ ನನ್ನ ಅತ್ತೆ ಯಲ್ಲಮ್ಮ ಮಾವ ಹನುಮಂತಪ್ಪ, ಮೈದುನಾ ಬಸವರಾಜ ಹಾಗೂ ನಾದಿನಿ ದ್ಯಾಮವ್ವ ಇವರು ಸಹ ನೀನು
ಸರಿಯಾಗಿಲ್ಲಾ ನಿನ್ನ ತವರು ಮನೆಯಿಂದ ವರದಕ್ಷಿಣೆ ಹಣ ಕಡಿಮೆ ತಂದಿದ್ದಿ ಅಂತಾ ಬೈದಾಡುತ್ತಾ
ಹೊಡಿಬಡಿ ಮಾಡುತ್ತಾ ಇವರು ಸಹ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಮಾಡಿ ಹೊಡಿಬಡಿ
ಮಾಡುತ್ತಿದ್ದರು. ನನ್ನನ್ನು ಈಗ್ಗೆ 6 ತಿಂಗಳದ ಹಿಂದೆ ನನ್ನ ಗಂಡ ತಿಮ್ಮಣ್ಣ ಭೋವಿ, ಅತ್ತೆ ಯಲ್ಲಮ್ಮ ಭೋವಿ, ಮಾವ ಹನುಮಂತಪ್ಪ ಭೋವಿ, ಮೈದುನಾ ಬಸವರಾಜ ಭೋವಿ ಮತ್ತು ನಾದಿನಿ ದ್ಯಾಮವ್ವ ಭೋವಿ ಇವರೆಲ್ಲರೂ ಹೊಡಿಬಡಿ ಮಾಡಿ
ನೀನು ನಿನ್ನ ತವರು ಮನೆಯಿಂದ ವರದಕ್ಷಿಣೆಯಾಗಿ 10,000=00 ರೂ :ಹಣವನ್ನು ಮತ್ತು 2 ತೊಲೆ ಬಂಗಾರವನ್ನು ತೆಗೆದುಕೊಂಡು ಬಾ ಅಂತಾ ನನಗೆ ಅವಾಚ್ಯವಾಗಿ ಬೈದಾಡಿ ಮನೆಯಿಂದ ಹೊರಗೆ
ಹಾಕಿ ನೀನು ವರದಕ್ಷಿಣೆ ಹಣ ಮತ್ತು ಬಂಗಾರವನ್ನು ತೆಗೆದುಕೊಂಡು ವಾಪಸ ಗಂಡನ ಮನೆಗೆ ಬಾ ಇಲ್ಲ
ಅಂದರೆ ಅಲ್ಲಿಯೇ ಬಿದ್ದರಿ ಅಂತಾ ಹೇಳಿ ಕಳಿಸಿದ್ದರು. ಆಗ ನಾನು ತವರುಮನೆಯಾದ ಕುಷ್ಟಗಿಗೆ ಬಂದು ನನ್ನ ತಂದೆ-ತಾಯಿಯೊಂದಿಗೆ ಇರುತ್ತೇನೆ. ಈಗ್ಗೆ 15-20 ದಿವಸಗಳ ಹಿಂದೆ ದಿನಾಂಕ :30-06-2016 ರಂದು ಕುಷ್ಟಗಿಗೆ ನನ್ನ ಗಂಡ ತಿಮ್ಮಣ್ಣ ಭೋವಿ, ಅತ್ತೆ ಯಲ್ಲಮ್ಮ ಭೋವಿ, ಮಾವ ಹನುಮಂತಪ್ಪ ಭೋವಿ, ಮೈದುನಾ ಬಸವರಾಜ ಭೋವಿ ಮತ್ತು ನಾದಿನಿ ದ್ಯಾಮವ್ವ ಭೋವಿ ಇವರೆಲ್ಲರೂ ಕುಷ್ಟಗಿಗೆ
ಬಂದು ನಮ್ಮ ಮನೆಯ ಅಂಗಳದಲ್ಲಿ ನನ್ನ ಗಂಡನಾದ ತಿಮ್ಮಣ್ಣ ಲೇ ಭೋಸುಡಿ ನೀನು ನಿನ್ನ ತವರು ಮನೆಯಿಂದ
10,000=00 ವರದಕ್ಷಿಣೆ ಮತ್ತು 2 ತೊಲೆ ಬಂಗಾರವನ್ನು ತೆಗೆದುಕೊಂಡು ಬಾ ಅಂತಾ ಹೇಳಿ ಕಳಿಸಿದ್ದೀವಿ ನೀನು
ಇಲ್ಲಿಯೇ ಇದ್ದೀಯಾ ಅಂತಾ ಅಂದವನೇ ತಲೆಯ ಕೂದಲನ್ನು ಹಿಡಿದು ಎಳೆದಾಡಿ ಹೊಡೆದನು, ಅತ್ತೆ ಯಲ್ಲಮ್ಮ ಭೋವಿ ಈಕೆಯು ಈ ಸೂಳೆಯದು ಇಲ್ಲಿ ಯಾಕ ಹಡಸಾಕ ಅದಳ
ಈಕೆಯ ಜೀವವನ್ನು ತೆಗೆಯಿರಿ ಅಂತಾ ಬೈದು ಕೈಯಿಂದ ಹೊಡಿಬಡಿ ಮಾಡಿ ಈವಳ ಜೀವವನ್ನು ತೆಗೆಯಿರಿ ಅಂತಾ
ಜೀವದ ಬೆದರಿಕೆ ಹಾಕಿದಳು, ಮಾವ ಹನುಮಂತಪ್ಪ, ಮೈದುನಾ ಬಸವರಾಜ ಮತ್ತು ನಾದಿನಿ ದ್ಯಾಮವ್ವ ಇವರೆಲ್ಲರೂ ಈಕೆಯದು ಬಹಳ ಆಗೈತಿ ಒದಿರಿ ಬಡಿರಿ
ಅಂತಾ ಅನ್ನುತ್ತಾ ಮೈಗೆ.ಕೈಗೆ ಕೈಗಳಿಂದ ಹೊಡಿಬಡಿ ಮಾಡಿದರು. ಆಗ ನಮ್ಮ ತಂದೆ-ತಾಯಿ ಮತ್ತು ಬಾಜು ಮನೆಯವರಾದ 1) ಯಲ್ಲಪ್ಪ ತಂದೆ ಹನುಮಪ್ಪ ಭೋವಿ 2) ಯಲ್ಲಪ್ಪ ತಂದೆ ಯಂಕಪ್ಪ ಭೋವಿ ಮತ್ತು 3) ಗಂಗಮ್ಮ ಗಂಡ ಯಲ್ಲಪ್ಪ ಭೋವಿ ರವರು ಜಗಳ ಬಿಡಿಸಿ ಬುದ್ದಿ ಹೇಳಿ
ಕಳಿಸಿದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment