Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, August 1, 2016

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 164/2016 ಕಲಂ: 87 Karnatka Police Act.
ದಿ:31.07.2016 ರಂದು ಮಧ್ಯಾನ್ಹ 3-45 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ವದಗನಹಾಳ ಗ್ರಾಮದ ಸಮುದಾಯ ಭವನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ 13 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಮಾನ್ಯ ಡಿ.ಎಸ್.ಪಿ ಕೊಪ್ಪಳ ಸಾಹೇಬರು ರವರ ನೇತೃತ್ವದಲ್ಲಿ ಪಿ.ಎಸ್,ಐ ರವರು ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ 4,100=00 ರೂ, ಮತ್ತು 52 ಇಸ್ಪೇಟ್ ಎಲೆಗಳನ್ನು ಹಾಗೂ ಒಂದು ಹಾಳೆಯ ಚೀಲ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಆರೋಪಿ ಯಂಕಪ್ಪ ಗೊಂದಿಹೊಸಳ್ಳಿ ಮತ್ತು ಹಮ್ಮಿಗೇಶ ಸಂಗಟಿ ಇವರು ಓಡಿ ಹೋಗಿರುತ್ತಾರೆ. ಸದರಿ 11 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 165/2016 ಕಲಂ: 87 Karnatka Police Act.
ದಿ-31.07.16 ರಂದು ಸಂಜೆ 6.00 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ನೆರೆಗಲ್ಲ ಗ್ರಾಮದ ಹನಮಂತ ದೇವರ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 03 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್,ಐ ರವರು ಸಿ.ಪಿ.ಐ ಸಾಹೇಬರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಪಂಚರ ಸಮಕ್ಷಮ ದಾಳಿ ಮಾಡಿದ್ದು 3 ಜನರು ಸಿಕ್ಕಿಬಿದ್ದಿದ್ದು ಉಳಿದ 3 ಜನ ಓಡಿ ಹೋಗಿದ್ದು, ಸಿಕ್ಕಿಬಿದ್ದವರಿಂದ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ 1510=00 ರೂ, ಮತ್ತು 52 ಇಸ್ಪೇಟ್ ಎಲೆಗಳನ್ನು ಹಾಗೂ ಒಂದು ಹಾಳೆಯ ಚೀಲ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಸಿಕ್ಕಿ03 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 169/2016 ಕಲಂ: 78(3) Karnatka Police Act.
ದಿನಾಂಕಃ- 30-07-2016 ರಂದು 2-30 ಗಂಟೆಯ ಸುಮಾರಿಗೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಒಂದು ಮೂಲ ಪಂಚನಾಮೆಯೊಂದಿಗೆ ಮಾನ್ಯ ನ್ಯಾಯಾಲಯದ ಅನುಮತಿ ಪತ್ರದೊಂದಿಗೆ ವರದಿಯನ್ನು ಹಾಜರುಪಡಿಸಿದ್ದು ಸಾರಾಂಶವೆನಂದರೆ, ಇಂದು ದಿನಾಂಕ 30-07-2016 ರಂದು ಮದ್ಯಾಹ್ನ 1-05 ಗಂಟೆಯ ಸುಮಾರಿಗೆ ಬೇವಿನಾಳ ಗ್ರಾಮದಲ್ಲಿ ಸಾರ್ವಜನಿಕರ ಸ್ಥಳದಲ್ಲಿ ಮಟಕಾ ಜೂಜಾಟ ತೊಡಗಿದ್ದ ಆರೋಪಿತನ ಮೇಲೆ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿವರು ಪಂಚರ ಸಮಕ್ಷದಲ್ಲಿ ದಾಳಿ ಮಾಡಿ ಆರೋಪಿ ಹಿಡಿದುಕೊಂಡು ಉಮೇಶ ತಂದಿ ಬಸಣ್ಣ  ಗುಂಡದ  ವಯಾ- 31 ವರ್ಷ ಜಾ- ಲಿಂಗಾಯತ ಹೊಟೇಲ್  ಸಾ- ಬೇವಿನಾಳ ತಾ- ಗಂಗಾವತಿ ಆತನಿಂದ ರೂ. 1010=00 ಗಳನ್ನು ಜಪ್ತ ಮಾಡಿಕೊಂಡು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗಕೊಂಡೆನು .
4] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 217/2016 ಕಲಂ: 279, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.

ಫಿರ್ಯಾದಿದಾರರಾದ ಶ್ರೀಮತಿ ಸರಸ್ವತಿ ಗಂಡ ರಮೇಶ ಮೂಲಿಮನಿ ವಯಸ್ಸು: 25 ಗಂಗಾವತಿ ತಾಲೂಕ ದಿನಾಂಕ:  25-07-2016 ರಂದು ರಾತ್ರಿ 9:30 ಗಂಟೆಯ ಸುಮಾರಿಗೆ ನಾನು ಮಾರುಕಟ್ಟೆಯಿಂದ ಮನೆಗೆ ಗಂಗಾವತಿ-ಸಿಂಧನೂರ ಮುಖ್ಯ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ರಾಮಲಿಂಗೇಶ್ವರ ಗುಡಿ ಹತ್ತಿರ ನನ್ನ ಹಿಂಭಾಗದಿಂದ ಅಂದರೆ ಕಾರಟಗಿ ಕಡೆಯಿಂದ ಒಬ್ಬ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ನನಗೆ ಟಕ್ಕರು ಕೊಟ್ಟು ಅಪಘಾತ ಮಾಡಿದ್ದರಿಂದ ನಾನು ರಸ್ತೆಯಲ್ಲಿ ಎಡಮಗ್ಗುಲಾಗಿ ಬಿದ್ದೆನು. ಇದರಿಂದಾಗಿ ನನ್ನ ಎಡಗೈ ಮುಂಗೈ ಹತ್ತಿರ ತೀವ್ರ ಒಳಪೆಟ್ಟಾಗಿ ಎಡಭುಜದ ಹತ್ತಿರ ತೆರಚಿದ ಗಾಯವಾಗಿದ್ದು ಇರುತ್ತದೆ. ಆಗ ಅಲ್ಲಿಯೇ ಇದ್ದ ನಟರಾಜ ಕಬಾಡಿ ಎಂಬುವರು ಬಂದು ನನ್ನನ್ನು ಎಬ್ಬಿಸಿ ಪಕ್ಕಕ್ಕೆ ಕೂಡಿಸಿದ್ದು ನಂತರ ನನಗೆ ಅಪಘಾತ ಮಾಡಿದ ಮೋಟಾರ ಸೈಕಲ ಮತ್ತು ಅದರ ಸವಾರನನ್ನು ವಿಚಾರಿಸಲು ಹಿರೋ ಹೊಂಡಾ ಸ್ಪ್ಲೆಂಡರ್ + ಮೋಟಾರ ಸೈಕಲ ನಂಬರ್: ಕೆ.ಎ-36/ ಜೆ-3169 ಅಂತಾ ಇದ್ದು ಸವಾರನ ಹೆಸರು ತೌಸಿಫ್ ಅಂತಾ ತಿಳಿಸಿದನು. ಕೂಡಲೇ ವಿಷಯ ತಿಳಿದ ನನ್ನ ಗಂಡ ಸ್ಥಳಕ್ಕೆ ಬಂದಿದ್ದು, ಅವರು ಮತ್ತು ಅಪಘಾತ ಪಡಿಸಿದ ಮೋಟಾರ ಸೈಕಲ ಸವಾರ ಇಬ್ಬರೂ ಸೇರಿ ಮೋಟಾರ ಸೈಕಲನ್ನು ಸ್ಥಳದಲ್ಲಿಯೇ ಬಿಟ್ಟು ಯಾವುದೋ ಒಂದು ಅಟೋದಲ್ಲಿ ಚಿಕಿತ್ಸೆ ಕುರಿತು ಗಂಗಾವತಿಯ ಮಲ್ಲಿಕಾರ್ಜುನ ನರ್ಸಿಂಗ್ ಹೋಮಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದನು. ನಂತರ ಅಪಘಾತ ಪಡಿಸಿದ ಮೋಟಾರ ಸೈಕಲ ಸವಾರನು ಆಸ್ಪತ್ರೆಯ ಚಿಕಿತ್ಸೆಯ ವೆಚ್ಚ ಭರಿಸುವದಾಗಿ ತಿಳಿಸಿ ಹೋದವನು ಇಲ್ಲಿಯವರೆಗೆ ವಾಪಸ್ಸು ಬರದೇ ಮತ್ತು ಚಿಕಿತ್ಸೆ ವೆಚ್ಚವನ್ನು ಭರಿಸದೇ ಇದ್ದುದರಿಂದ ಈ ದಿವಸ ತಡವಾಗಿ ಠಾಣೆಗೆ ಬಂದು ದೂರನ್ನು ಕೊಟ್ಟಿರುತ್ತೇನೆ.  

0 comments:

 
Will Smith Visitors
Since 01/02/2008