Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, August 2, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 218/2016 ಕಲಂ: 323,341,354,504,506,ಸಹಿತ 149 ಐ.ಪಿ.ಸಿ.   
ದಿನಾಂಕ:- 01-08-2016 ರಂದು ಬೆಳಿಗ್ಗೆ 11:30 ಗಂಟೆಗೆ ಮಾನ್ಯ ನ್ಯಾಯಾಲಯದ ಖಾಸಗಿ ದೂರು ನಂ: 155/2016 ನೇದ್ದು ಪ್ರಕರಣ ದಾಖಲು ಮಾಡುವ ಕುರಿತು ಠಾಣೆಯಲ್ಲಿ ಸ್ವೀಕೃತವಾಗಿದ್ದು, ಸದರಿ ದೂರನ್ನು ಶ್ರೀಮತಿ ಲತಾ ಗಂಡ ಜಿ. ಲಕ್ಷ್ಮಣ, ವಯಸ್ಸು 21 ವರ್ಷ, ಉ: ಮನೆಗೆಲಸ ಸಾ: ಬಸವನದುರ್ಗ (ಕೊರ್ರಮ್ಮ ಕ್ಯಾಂಪ್) ತಾ: ಗಂಗಾವತಿ ಇವರು ಸಲ್ಲಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ಫಿರ್ಯಾದಿದಾರರ ಮದುವೆಯು ಆರೋಪಿ ಲಕ್ಷ್ಮೀ ಇವರ ಮಗನಾದ ಲಕ್ಷ್ಮಣ ಇತನೊಂದಿಗೆ ಆಗಿದ್ದು, ಅವರಿಗೆ ಒಂದು ಗಂಡು ಮಗು ಇರುತ್ತದೆ.  ಲಕ್ಷ್ಮಣ ಈತನು ತಮ್ಮ ಊರಿನಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದು, ನಂತರ ಫಿರ್ಯಾದಿದಾರರು ಹಾಗೂ ಅವರ ಮನೆಯವರು ಹೋಗಿ ಆಸ್ಥಿಯ ವಿಚಾರದಲ್ಲಿ ಪಂಚಾಯತಿ ಮಾಡಿ ಬಂದಿದ್ದು, ದಿನಾಂಕ:- 14-07-2016 ರಂದು ಸಂಜೆ 5:30 ರಿಂದ 6:00 ಗಂಟೆಯ ಅವಧಿಯಲ್ಲಿ ಆರೋಪಿತರಾದ (1) ಬಾಲಕೃಷ್ಣ ತಂದೆ ಗೋಪಾಲ-40 ವರ್ಷ (2) ವಿಜಯಲಕ್ಷ್ಮೀ ಗಂಡ ಬಾಲಕೃಷ್ಣ, 35 ವರ್ಷ, (3) ರಾಧಾ ಗಂಡ ಗೋವಿಂದ, 43 ವರ್ಷ (4) ಗೋವಿಂದ 45 ವರ್ಷ (5) ಗೀತಾ ತಂದೆ ಗೋವಿಂದ-20 ವರ್ಷ (6) ಲಕ್ಷ್ಮೀ ಗಂಡ ಗೋಪಾಲ, 54 ವರ್ಷ ಎಲ್ಲರೂ ಸಾ: ವಾರ್ಡ ನಂ: 21, ರಾಘವೇಂದ್ರ ನಗರ, ತಿರುಪತಿ (ಆಂಧ್ರಪ್ರದೇಶ) ಇವರುಗಳು ಕೂಡಿಕೊಂಡು ಫಿರ್ಯಾದಿದಾರರಿಗೆ ಮತ್ತು ತಾಯಿಯವರೊಂದಿಗೆ ಜಗಳ ಮಾಡಿ ಮಗುವನ್ನು ಕಿತ್ತುಕೊಂಡು ಹೋಗಲು ಪ್ರಯತ್ನಿಸಿದ್ದು, ಅಲ್ಲದೇ ಅವಾಚ್ಯ ಶಬ್ದಗಳಿಂದ " ಈ ಹಲ್ಕಾ ಸೂಳೇಯರಿಗೆ ಆಸ್ಥಿ ಬೇಕಂತೆ, ಈ ನಮ್ಮ ವಂಶದ ಕುಡಿಯನ್ನು ತೆಗೆದುಕೊಂಡು ಈಕೆಯನ್ನು ಇಲ್ಲಿಯೇ ಹೂತು ಹಾಕಿ ಬಿಡೋಣಾ" ಅಂತಾ ಬೈದು ಕೂದಲು ಮತ್ತು ಸೀರೆ ಹಿಡಿದು ಎಳೆದಾಡಿ ಹಲ್ಲೆ ನಡೆಯಿಸಿ ಹೊಡಿ-ಬಡಿ ಮಾಡಿ ಮಾನಭಂಗ ಮಾಡಿ, ಜೀವ ಬೆದರಿಕೆ ಹಾಕಿರುತ್ತಾರೆ. ಕಾರಣ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ" ಅಂತಾ ಇದ್ದ ದೂರಿನ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 150/2016 ಕಲಂ: 87 Karnatka Police Act.

ಶ್ರೀ ರಾಮಣ್ಣ ನಾಯ್ಕ ಪಿ.ಎಸ್ ಐ.(ಅ.ವಿ) ನಗರ ಪೊಲೀಸ್ ಠಾಣೆ ಗಂಗಾವತಿ ರವರು ಗಂಗಾವತಿ ನಗರದ ಹೊಸಳ್ಳಿ  ಬೈಪಾಸ್  ರಸ್ತೆಯಲ್ಲಿರುವ ಬಾಲಕರ ವಸತಿ ನಿಲಯದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಇಸ್ಪೇಟ್ ಜೂಜಾಟ ಆಡುತ್ತಿರುವಾಗ 1] SHIVALINGAPPA(A1) LINGAPPA DESAI ,HOSALLI CAMP, 2]  LINGAPPA (A2) HEMAPPA UPPAR ,GUNDAMMA CAMP, 3] MAHIBOOB(A3) RAJASAB, BANNIGIDA CAMP, 4] MAHEBOOB(A4) VALISAB ,JULAI NAGAR, GANGAVATI 5] AYUBKHAN(A5) SAMAT KHAN ,PIRJAD ONI,GANGAVATI 6] SIDDAYYA(A6)VIRUPAKSHAYYA,KADABOORU,TQ: MANVI,NOW IN HIREJANTAKAL,GANGAVATI 7] SIDDAYYA(A6)VIRUPAKSHAYYA KADABOORU,TQ: MANVI,NOW IN HIREJANTAKAL,GANGAVATI 8] MAHMAD RAFI(A8)MAHMAD HUSAIN ,KOTRESWARA CAMP,GANGAVAT ಸದರಿಯವರ ಮೇಲೆ ಪಿ. ಎಸ್ ಐ(ಅ.ವಿ) ರವರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವರಿಂದ ಇಸ್ಪೇಟ್ ಜೂಜಾಟದ ಒಟ್ಟು ರೂ. 5740-00 ನಗದು ಹಣ ಹಾಗೂ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008