Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, August 21, 2016

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 179/2016 ಕಲಂ: 279, 304(ಎ) ಐ.ಪಿ.ಸಿ.
ದಿ:20.08.2016 ರಂದು 1.00 ಪಿ.ಎಮ್ ಕ್ಕೆ ಫಿರ್ಯಾದಿದಾರರಾದ ಹನಮಂತಪ್ಪ ತಂದೆ ಮಲ್ಲಪ್ಪ ಹಡಪದ ಸಾ:ಚಿಲಕಮುಖಿ ತಾ:ಜಿ: ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಫಿರ್ಯಾದಿಯ ಸಾರಾಂಶವೇನೆಂದರೇ, ದಿ:19.08.2016 ರಂದು ಸಂಜೆ 6.00 ಗಂಟೆ ಸುಮಾರಿಗೆ ಫಿರ್ಯಾದಿದಾರರು ಹೊಸೂರ ಸೀಮಾದ ತಮ್ಮ ಹೊಲಕ್ಕೆ ಹೋಗಿ ವಾಪಸ್ ಬರುವಾಗ ಹಾಸಗಲ್ಹೊಸೂರ ರಸ್ತೆಯ ಹಿರೇನಿಂಗಪ್ಪ ಹೊಸೂರ ಇವರ ಹೊಲದ ಹತ್ತಿರ ಕರ್ವಿಂಗ್ ದಲ್ಲಿ ಮೋಟಾರ್ ಸೈಕಲ್ ನಂ:ಕೆಎ-36/ಇಇ-1626 ನೇದ್ದರ ಸವಾರನು ತನ್ನ ಮೋ.ಸೈಕಲ್ಲನ್ನು ಹೊಸುರು ಕಡೆಯಿಂದ ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಓಡಿಸಿಕೊಂಡು ಬಂದವನೇ ವಾಹನ ನಿಯಂತ್ರಿಸದೇ ಅಪಘಾತ ಮಾಡಿಕೊಂಡು ರಸ್ತೆಯ ಪಕ್ಕದ ತಗ್ಗಿನಲ್ಲಿ ಬಿದ್ದು ಆತನ ತಲೆಗೆ ಭಾರಿ ಒಳಪೆಟ್ಟಾಗಿ ಕಿವಿ ಮೂಗಿನಿಂದ ರಕ್ತ ಬಂದಿದ್ದು, ಎಡಗೈ ರಟ್ಟೆಗೆ ಭಾರಿ ಪೆಟ್ಟಾಗಿ ಮೂಳೆ ಮುರಿದಂತಿತ್ತು. ಬಲಗಾಲ ಹಿಂಬಡಕ್ಕೆ ತೆರಚಿದ ರಕ್ತ ಗಾಯವಾಗಿತ್ತು, ಸವಾರನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ಕೂಡಲೇ 108 ಅಂಬ್ಯುಲೆನ್ಸ್ ಮುಖಾಂತರ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಇರುತ್ತದೆ. ಸದರಿ ಗಾಯಾಳು ಸುಮಾರು 25-30 ವರ್ಷದ ಅಪರಿಚಿತ ಗಂಡಸು ವ್ಯಕ್ತಿ ಇರುತ್ತಾನೆ. ನಂತರ ದಿ: 20.08.16 ರಂದು ಬೆಳೆಗ್ಗೆ 11.00 ಗಂಟೆಗೆ ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುತ್ತಾನೆ. ಕಾರಣ ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಓಡಿಸಿಕೊಂಡು ಬಂದು ಅಪಘಾತಪಡಸಿಕೊಂಡು ಮೊ.ಸೈಕಲ ಸವಾರನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಹೇಳಿಕೆ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 234/2016 ಕಲಂ: 279, 337, 338 ಐ.ಪಿ.ಸಿ:
ದಿನಾಂಕ:20-08-2016 ರಂದು ರಾತ್ರಿ 7-15 ಗಂಟೆಗೆ ಪಿರ್ಯಾದಿದಾರರಾದ ಶಂಕ್ರಗೌಡ ತಂದೆ ಯಮನಗೌಡ ಗೌಡ್ರ ವಯಾ: 45 ವರ್ಷ ಜಾತಿ: ವಾಲ್ಮೀಕಿ : ಒಕ್ಕಲುತನ ಸಾ: ಬುನ್ನಟ್ಟಿ ತಾ: ಗಂಗಾವತಿ  ರವರು ಹಾಜರಾಗಿ ಹೇಳಿಕೆ ನೀಡಿದ್ದು ಸಾರಾಂಶವೆನೆಂದರೆ, ದಿನಾಂಕ: 09-08-2016 ರಂದು ಬೆಳಿಗ್ಗೆ ತನ್ನ ವ್ಯಯಕ್ತಿಕ ಕೆಲಸದ ನಿಮಿತ್ಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ತನ್ನ ಹೊರೋ ಹೊಂಡಾ ಸ್ಲೆಂಡರ್ ಪ್ರೋ ಮೋ.ಸೈ ನಂ: ಕೆ.ಎ-37/ಎಸ್-1436 ನೇದ್ದನ್ನು ತೆಗೆದುಕೊಂಡು ಹೋಗಿದ್ದು ಇರುತ್ತದೆ. ನಂತರ ನನಗೆ ಸಾಯಂಕಾಲ 4-30 ಗಂಟೆಯ ಸುಮಾರಿಗೆ ನಮ್ಮ ಅಣ್ಣನಿಗೆ ಪರಿಚಯಸ್ಥರು ನನ್ನ ಪೋನ್ ನಂಬರ ತೆಗೆದುಕೊಂಡು ಪೋನ್ ಮಾಡಿ ನಿಮ್ಮಅಣ್ಣನವರಾದ ನಿರುಪಾದಿಗೌಡ ಇವರು ಇಂದು ಸಾಯಂಕಾಲ 4-00 ಗಂಟೆಯ ಸುಮಾರಿಗೆ ದೋಟಿಹಾಳದಿಂದ ವಾಪಾಸ್ ನಮ್ಮೂರಿಗೆ ಬರುತ್ತಿರುವಾಗ ದೋಟಿಹಾಳ ತಾವರಗೇರಾ ರಸ್ತೆಯ ಮೇಲೆ ದೋಟಿಹಾಳದಿಂದ ಸುಮಾರು 1 ಕಿ.ಮೀ. ಅಂತರದಲ್ಲಿ ಆತನು ನಡೆಸುತ್ತಿದ್ದ ಮೋ.ಸೈ ನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಸ್ಕೀಡ್ ಮಾಡಿಕೊಂಡು ಬಿದ್ದಿದ್ದು ಇರುತ್ತದೆ. ನಂತರ ನನ್ನ ಅಣ್ಣನಾದ ನಿರುಪಾದಿಗೌಡನನ್ನು ನಾನು ಹಾಗೂ ನನ್ನ ಅಳಿಯನಾದ ಹನುಮಂತ ನಾಯಕ್ ಸಾ: ತೆಗ್ಗಿಣ ಓಣಿ ಕುಷ್ಟಗಿ ಇಬ್ಬರೂ ಕೂಡಿ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಲೈಫ್ ಲೈನ್ 24*7 ಆಸ್ಪತ್ರೆ ಗೋಕುಲ ರೋಡ ಹುಬ್ಬಳ್ಳಿ ಆಸ್ಪತ್ರೆಗೆ ಹೋಗಿ ದಾಖಲು ಮಾಡಿದ್ದು ಇರುತ್ತದೆ. ನಂತರ ನಾನು ಹುಬ್ಬಳ್ಳಿ ಆಸ್ಪತ್ರಯಲ್ಲಿ ಚಿಕಿತ್ಸೆ ಮಾಡಿಸಿ ನಮ್ಮ ಮನೆಯಲ್ಲಿ ಹಿರಿಯರನ್ನು ವಿಚಾರಣೆ ಮಾಡಿ ಈಗ ತಡವಾಗಿ ಠಾಣೆಗೆ ಬಂದು ನೀಡಿದ ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 185/2016 ಕಲಂ: 182, 201, 405, 406, 409, 420, 463, 464, 465, 466, 468, 471, 504, 120 (B) R/W 149 IPC.
ದಿನಾಂಕ:--20-08-2016 ರಂದು ಸಾಯಂಕಾಲ 7-35 ಗಂಟೆಗೆ ಠಾಣೆಯ ಕೋರ್ಟ ಪಿ.ಸಿ ರವರು ಠಾಣೆಗೆ ಬಂದು ಮಾನ್ಯ ನ್ಯಾಯಾಲಯದ ಉಲ್ಲೇಖಿತ ಪ್ರಕರಣ ಸಂಖ್ಯೆ 214/2016 ನೆದ್ದನ್ನು ಹಾಜರುಪಡಿಸಿದ್ದ ದೂರನ್ನು ಪರಿಶೀಲಿಸಲು ಶ್ರೀ ಪರಪ್ಪ ತಂದಿ ನಾಗಲಿಂಗಪ್ಪ ಜಂತಕಲ್ ವಯಾ- 60 ವರ್ಷ, -ಒಕ್ಕಲುತನ ಸಾ. ಹಾಲಸಮುದ್ರ ರವರು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗಿ ನೀಡಿದ ದೂರಿನ ಸಾರಾಂಶದಲ್ಲಿ ಯರಡೋಣ ಸೀಮಾ ಸರ್ವೆ ನಂ 370 ನೆದ್ದರಲ್ಲಿರುವ ಒಟ್ಟು 6 ಎಕರೆ 27 ಗುಂಟೆ ಜಮೀನಿನಲ್ಲಿ ಪಿರ್ಯಾದಿದಾರರಿಗೆ ಸಂಬಂದಿಸಿದ ಪಿರ್ಯಾದಿದಾರರು 1970 ರಲ್ಲಿ ಖರಿದಿ ಮಾಡಿದ್ದ 1 ಎಕರೆ 11 ಗುಂಟೆ ಜಮೀನನ್ನು ಪಿರ್ಯಾದಿದಾರರ ಕಬ್ಜಾದಿಂದ ಆರೋಪಿ ಕಬ್ಜಾಕ್ಕೆ ತೋರಿಸುವ ದುರುದ್ದೇಶದಿಂದ ಆರೋಪಿತರೆಲ್ಲರೂ 1) ಗಂಗಪ್ಪ ತಹಸೀಲ್ದಾರ ಸಾ.ಬಿಳಗಿ ತಾ. ಬಿಳಗಿ ಜಿ. ವಿಜಯಾಪೂರ, 2) ಬಸವರಾಜ ಬಡಿಗೇರ , ಭೂ-ಮಾಪನಾ ಶಾಖೆ ಉ-ತಾಲೂಕ ಸರ್ವೆಯರ್ ತಹಸೀಲ್ದಾರರ ಕಛೇರಿ, ಯಲಬುರ್ಗಾ ಜಿ. ಕೊಪ್ಪಳ,      3) ರವಿಶೆಟ್ಟಿ, ವಿ.ಎ (ವಿಲೇಜ್ ಅಂಕ್ವಂಟೆಂಟ್) ಸಾ. ಯರಡೋಣ ತಾ. ಗಂಗಾವತಿ, 4) ಶ್ರೀನಿವಾಸ ಮೂರ್ತಿ, ಉ- ಗ್ರೇಡ್ 2nd ತಹಸೀಲ್ದಾರ ಸಾ. ಲಿಂಗಸ್ಗೂರು ಜಿ:- ರಾಯಚೂರ, 5) ಪ್ರಕಾಶ ನಾಯಕ, ಉದ್ಯೋಗ-ಆರ್.ಐ (ರೆವೆನ್ಯೂ ಇನ್ಸಪೆಕ್ಟರ್) ಸಾ. ಕಾರಟಗಿ ತಾ. ಗಂಗಾವತಿ, 6) ಸೋಮಶೇಖರ ಕೊಲ್ಕಾರ್ ಉ-ಸರ್ವೆಯರ್ ಸಾ. ಬೂದಗುಂಪಾ ತಾ. ಗಂಗಾವತಿ, 7) ಕೆ.ಎಸ್. ಯೋಗೇಶ , ಉದ್ಯೋಗ: ಸರ್ವೆಯರ್ ಸಾ. ಗಂಗಾವತಿ ಜಿ.ಕೊಪ್ಪಳ, 8) ಸೋಮನಾಥ, ಉದ್ಯೋಗ:ವಿ.ಎ (ವಿಲೇಝ್ ಅಕ್ವೌಂಟೆಂಟ್) ಸೋಮನಾಳ ತಾ. ಗಂಗಾವತಿ, 9) ಬಸವರಾಜ ತಂದಿ ವೀರಭದ್ರಗೌಡ ಕಟ್ಟಿ ಉ:- ಒಕ್ಕಲುತನ ಸಾ. ಬೂದಗುಂಪಾ ತಾ. ಗಂಗಾವತಿ, 10) ಬಸವರಾಜ ತಂದಿ ಮರಿಯಪ್ಪ ಕೆಂದೋಡ ಉ:ಒಕ್ಕಲುತನ ಸಾ.ಬೂದಗುಂಪಾ ತಾ. ಗಂಗಾವತಿ, 11) ಪರಮೇಶಗೌಡ ತಂದಿ ವೀರಭದ್ರಗೌಡ ಪೊಲೀಸ ಪಾಟೀಲ್ , ಉ:ಬ್ರೋಕರ್ ಸಾ. ಬೂದಗುಂಪಾ, 12) ಸಿದ್ದನಗೌಡ ತಂದಿ ಲಿಂಗನಗೌಡ ಮಾಲೀಪಾಟೀಲ್ ಉ-ಬ್ರೋಕರ್ ಸಾ. ಬೂದಗುಂಪಾ ತಾ. ಗಂಗಾವತಿ ಶಾಮೀಲಾಗಿ ಸುಳ್ಳು ಖರಿದಿ ದಾಖಲಾತಿ, ಸುಳ್ಳು ಪೋಡಿ,  ಸುಳ್ಳು ಸರ್ವೆ ದಾಖಲಾತಿಗಳನ್ನು, ಸುಳ್ಳು ನಕಾಶಗಳನ್ನು, ಸುಳ್ಳು ಪಹಣಿ ಪತ್ರಿಕೆಗಳನ್ನು ಸೃಷ್ಟಿ ಮಾಡಿ ತೋರಿಸಿ ಆರೋಪಿ ನಂ 1 ರಿಂದ 8 ರವರು ಸರಕಾರಿ ಅಧಿಕಾರಿಗಳು ಇದ್ದು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಸುಳ್ಳು ದಸ್ತಾವೆಜನ್ನು ಸೃಷ್ಟಿ ಮಾಡಲು ಸಹಾಯ ಮಾಡಿ, ತಮಗೆ ಇಸ್ಸಾ ರದ್ದುಪಡಿಸಲು ಅಧಿಕಾರ ಇಲ್ಲದಿದ್ದರೂ ಸಹೀತಾ ಹಿಸ್ಸಾ ರದ್ದುಪಡಿಸಿ, ಆರೋಪಿ ನಂ 10 ರವರಿಗೆ ನೊಂದಾಯಿತ ದಾಖಲಾತಿಗಳನ್ನು ಸೃಷ್ಟಿಸಿ ನಂಬಿಕೆ ದ್ರೋಹ ಮಾಡಿರುತ್ತಾರೆ. ಬಗ್ಗೆ ಕುರಿತು ದಿನಾಂಕ:-25-05-2015 ರಂದು ಬೆಳಿಗ್ಗೆ 8-30 ಗಂಟೆಗೆ ಪಿರ್ಯಾದಿದಾರರು ನಾಡ ತಹಸೀಲ್ದಾರ ಕಾರ್ಯಾಲಯ ಸರ್ವೆ ಅಧಿಕಾರಿಗಳ ಹತ್ತಿರ ಸರ್ವೆ ನಂ 370 ಯರಡೋಣ ಸೀಮಾದ ದಾಖಲಾತಿಗಳ ಬಗ್ಗೆ ಕೇಳಲು ಹೋದಾಗ ನೀನು ಅದನ್ನೇನು ಕೇಳುತ್ತಿಯಾ ಅಂತಾ ಹಿಂಯಾಳಿಸಿ ಅಧಿಕಾರ ದರ್ಪದಿಂದ ಅವಚ್ಯವಾಗಿ ಮಾತನಾಡಿರುತ್ತಾರೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಪ್ರಕಾರ ಮಾನ್ಯ ನ್ಯಾಯಾಲಯದ ಆದೇಶದ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
4] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 138/2016 ಕಲಂ: 379 ಐ.ಪಿ.ಸಿ:

ದಿನಾಂಕ: 20-08-2016 ರಂದು ಸಂಜೆ 7-30 ಗಂಟೆಗೆ ಫಿರ್ಯಾದಿದಾರರಾದ ಶಿವರಾಜ ತಂದೆ ಲಿಂಗಪ್ಪ ಹಡಪದ ವಯಾ: 27 ವರ್ಷ ಜಾ: ಹಡಪದ ಉ: ಎಲೆಕ್ಟ್ರಿಷಿಯನ್ ಕೆಲಸ ಸಾ: ಇಂದ್ರಕಿಲ ನಗರ ಕೊಪ್ಪಳ. ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸರಾಂಶವೇನೆಂದರೆ, ದಿನಾಂಕ: 30-07-2016 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ: 31-07-2016 ರಂದು ಮುಂಜಾನೆ 7-00 ಗಂಟೆಯ ಅವಧಿಯಲ್ಲಿ ಫಿರ್ಯಾದಿದಾರರು ತಮ್ಮ ಹಿರೋ ಹೊಂಡಾ ಸ್ಪ್ಲೆಂಡರ್ ಪ್ರೋ ಮೋಟಾರ್ ಸೈಕಲ್ ನಂ KA 37/U 5186ನೇದ್ದನ್ನು ಇಂದ್ರಕಿಲದಲ್ಲರುವ ತಮ್ಮ ಮನೆಯ ಮುಂದೆ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿದಾಗ ತಮ್ಮ ಮೋಟಾರ ಸೈಕಲ್ನ್ನು 1] ಮಕ್ತುಂಸಾಬ ತಂದೆ ಅಲ್ಲಾಸಾಬ ಕನರ್ಾಚಿ ಸಾ: ಗಂಗಮಡಿ ಗದಗ. ಮತ್ತು 2] ಬಾದಶಾಸಾಬ ತಂದೆ ಮುನ್ನಾ ಭುವಾಜಿ ಸಾ: ಗಂಗಮಡಿ ಗದಗ. ಇವರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ತಾವು ಗದಗ ನಗರ ಪೊಲೀಸ್ ಠಾಣೆಗೆ ಹೋಗಿ ತಮ್ಮ ಮೋಟಾರ ಸೈಕಲ್ನ್ನು ನೋಡಿ ಖಚಿತಪಡಿಸಿಕೊಂಡ ನಂತರ ಠಾಣೆಗೆ ಬಂದು ಫಿರ್ಯಾದಿಯನ್ನು ಸಲ್ಲಿಸಿದ್ದು ಸಲ್ಲಿಸಿದ್ದು ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008