Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, August 23, 2016

1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 94/2016 ಕಲಂ: 341, 419, 420, 384  ಐ.ಪಿ.ಸಿ ಮತ್ತು 3 & 25 ಅಯುಧ ಕಾಯ್ದೆ 1959.
ಖಚಿತ ಬಾತ್ಮೀಮೇರೆಗೆ ಶ್ರೀ. ವಿಶ್ವನಾಥ ಹಿರೇಗೌಡರ, ಪಿ.ಎಸ್.ಐ. ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರ್ಕಾರದಿಂದ ಯಾವುದೇ ಲೈಸನ್ಸ್ ದಾಖಲಾತಿ ಹೊಂದದೇ ಆಯುಧ ಹೊಂದಿ, ಸಾರ್ವಜನಿಕ ರಸ್ತೆಯಲ್ಲಿ ತಿರುಗಾಡುವ ವಾಹನಗಳನ್ನು ತಡೆದು ನಿಲ್ಲಿಸಿ, ಚಾಲಕರುಗಳಿಗೆ ತಾನು ಟಿ.ವಿ. ರಿಪೋರ್ಟರ್ ಅಂತಾ ಸುಳ್ಳು ಐಡೆಂಟಿಟಿ ಕಾರ್ಡ, ವಿಜಿಟಿಂಗ್ ಕಾರ್ಡಗಳನ್ನು ತೋರಿಸಿ, ಅವರಿಂದ ಹಣವನ್ನು ವಸೂಲು ಮಾಡುತ್ತಿದ್ದು, ಹಣ ನೀಡದೇ ಹೋದರೆ ತನ್ನಲ್ಲಿಯ ಪಿಸ್ತೂಲು ಹಾಗೂ ಚಾಕುಗಳನ್ನು ತೋರಿಸಿ, ಅವರಿಗೆ ಹೆದರಿಸಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದು, ಅದರಂತೆ, ಈ ಹಿಂದೆ ಕೂಡಾ ಹಣ ವಸೂಲಿ ಮಾಡುತ್ತಿದ್ದ ಆರೋಪಿತನ ಮೇಲೆ ದಾಳಿ ಮಾಡಿ, ಸದರಿಯವನಿಂದ  1) ವಾರ್ನರ್ ಮೆಡಿಯಾ ಹಂಸ ಟಿವಿಯ 2 ವಿಜಿಟಿಂಗ್ ಕಾರ್ಡಗಳು. ಅಂ.ಕಿ. ಇಲ್ಲಾ. 2) ವಾರ್ನರ್ ಮೆಡಿಯಾ ಹಂಸ ಟಿವಿಯ ಐಡೆಂಟಿಟಿ ಕಾರ್ಡ ಅಂ.ಕಿ. ಇರುವುದಿಲ್ಲಾ.3) ಒಂದು ಕರಿ ಬಣ್ಣದ ಪಿಸ್ತೂಲು ಅಂ.ಕಿ. 2,000-00 ರೂ. 4) ಒಂದು ಸ್ಟೀಲ್  ಬಟನ್ ಚಾಕುವನ್ನು ಅಂ.ಕಿ. ಇಲ್ಲಾ. 5) ಒಂದು ಸಣ್ಣ ಸ್ಟೀಲ್ ಚಾಕು ಅಂ.ಕಿ. ಇಲ್ಲಾ. 6) ಒಂದು ಪ್ಲಾಸ್ಟಿಕ್ ಸಣ್ಣ ಬ್ಯಾಟರಿ ಅಂ.ಕಿ. ಇಲ್ಲಾ. 7) ಒಂದು ಟ್ಯಾಬ್ ಅಂ.ಕಿ. 10,000-00 ರೂ. 8) ಮೊಬೈಲ್ Karbonn ಕಂಪನಿಯದು. ಅಂ.ಕಿ. 2,000-00 ರೂ.  9) ಸ್ಕಾರ್ಪಿಯೋ ಕಾರ್ ನಂ:ಕೆಎ-51 ಎಂ-658 ಅಂ.ಕಿ. 3,00,000-00 ರೂ. ಬೆಲೆಬಾಳುವುಗಳನ್ನು ಜಪ್ತ ಮಾಡಿಕೊಂಡು ಬಂದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
2] ಯಲಬರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 88/2016  ಕಲಂ: 454, 457, 380  ಐ.ಪಿ.ಸಿ:.
ದಿನಾಂಕ: 20-08-2016 ರಂದು ಮಧ್ಯಾನ್ಹ 12-30 ಗಂಟೆಯಿಂದ ದಿನಾಂಕ: 22-08-2016 ರಂದು ಮುಂಜಾನೆ 9-30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಮುಧೋಳ ಗ್ರಾಮದ ಹೊರವಲಯದಲ್ಲಿರುವ ಬಾಲಕೀಯರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾರ್ಯಾಲಯದ ಗ್ರೀಲ್ ಗೆ ಹಾಗೂ ಬಾಗಿಲಿಗೆ ಹಾಕಿದ ಬೀಗ ಒಡೆದು ಒಳಗೆ ಪ್ರವೇಶ ಮಾಡಿ ಕೊಠಡಿಯಲ್ಲಿದ್ದ 1) 34 ಕೆ.ಜಿ ತೊಗರಿ ಬೇಳೆ .ಕಿ 3230/- ನೇದ್ದನ್ನು ಮತ್ತು ಅದೇ ಆವರಣದಲ್ಲಿರುವ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯ ದಾಸ್ತಾನು ಕೊಠಡಿಯ ಬಾಗಿಲದ ಕೀಲಿ ಪತ್ತಾ ಒಡೆದು ಒಳಗೆ ಪ್ರವೇಶ ಮಾಡಿ ಅದರಲ್ಲಿದ್ದ 1). ಭಾರತ ಗ್ಯಾಸ ಕಂಪನಿಯ 02 ಸಿಲೀಂಡರ .ಕಿ 2900/- ರೂಪಾಯಿ 2) 47 ಕೆ.ಜಿ ತೊಗರಿ ಬೇಳೆ ಚೀಲ .ಕಿ 4465/- ರೂಪಾಯಿ ಹೀಗೆ ಒಟ್ಟು 10,595/- ಬೆಲೆ ಬಾಳವುಗಳನ್ನು ಕಳ್ಳತನ ಮಾಡಿ ನಂತರ ಅದೇ ಶಾಲೆಯ ಕಂಪ್ಯೂಟರ್ ಕೊಠಡಿಯ ಗ್ರೀಲ್ ಗೆ ಹಾಗೂ ಬಾಗಿಲಿಗೆ ಹಾಕಿದ ಬೀಗದ ಪತ್ತಾ ಒಡೆದು ಒಳಗೆ ಪ್ರವೇಶ ಮಾಡಿದ್ದು ಯಾವದೇ ಗಣಕ ಯಂತ್ರದ ಸಾಮಾನುಗಳನ್ನು ಕಳ್ಳತನ ಮಾಡಿರುವದಿಲ್ಲ ಮತ್ತು ಮುಖ್ಯೋಪಾಧ್ಯಯರ ಕೋಠಡಿಯ ಬಾಗಿಲದ ಚೀಲಕವನ್ನು ಬೆಂಡ ಮಾಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 95/2016 ಕಲಂ: 279, 338  ಐ.ಪಿ.ಸಿ:.
ಗಾಯಾಳು ತಮ್ಮ ಮೊಮ್ಮಗಳಾದ ಅಂಕಿತ ಈಕೆಯು ಕುಕನೂರಿನ ಎಸ್.ಎಫ್.ಎಸ್. ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ನಿನ್ನೆ ದಿನಾಂಕ:21-08-2016 ರಂದು ಬೆಳಿಗ್ಗೆ 10-00 ಗಂಟೆಗೆ ಊರಿಗೆ ಹೋಗಲು ಅಂತಾ ರಸ್ತೆ ದಾಟಿ ವಾಹನ ನಿಲ್ಲುವ ಸ್ಥಳದಲ್ಲಿಗೆ ಹೋಗಲು ಅಂತಾ ಪಿರ್ಯಾದಿದಾರ ಹಾಗೂ ಇತರರೊಂದಿಗೆ ರಸ್ತೆ ದಾಟುತ್ತಿರುವಾಗ ಆರೋಪಿತನಾದ ರಜನಿಕಾಂತ ಈತನು ತಾನು ಚಲಾಯಿಸುತ್ತಿದ್ದ ಮೋ.ಸೈ. ನಂ: ಕೆಎ-02 ಜೆಜಿ-4172ನೇದ್ದನ್ನು ಕುಕನೂರ ಕಡೆಯಿಂದ ಯಲಬುರ್ಗಾ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಅಂಕಿತಾಳಿಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ, ಅಂಕಿತಾಳು ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಆಕೆಯನ್ನು ಚಿಕಿತ್ಸೆ ಕುರಿತು ಆರೋಪಿತನ ಮೋ.ಸೈ.ದಲ್ಲಿ ಕುಕನೂರ ಸರ್ಕಾರೀ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ಆಕೆಯನ್ನು ಹೆಚ್ಚಿನ ಚಿಕಿತ್ಸೆ ಕುರಿತು ಹುಬ್ಬಳ್ಳಿಯ ಶ್ರೀ ಬಾಲಾಜಿ ನರ್ಸಿಂಗ್ ಹೋಮ್ ಗೆ ರೇಫರ್ ಮಾಡಿದ್ದರಿಂದ ಸದರಿಯವಳನ್ನು ಚಿಕಿತ್ಸೆ ಕುರಿತು ಸದರಿ ಆಸ್ಪತ್ರೆಗೆ ಸೇರಿಕೆ ಮಾಡಿ, ಅವಳಿಗೆ ಚಿಕಿತ್ಸೆಪಡಿಸಿ, ಈಗ ತಡವಾಗಿ ಬಂದು ದೂರು ನೀಡುತ್ತಿದ್ದು, ಕಾರಣ, ಸದರಿ ಮೋ.ಸೈ. ಸವಾರನ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
4] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 96/2016 ಕಲಂ: 279, 337  ಐ.ಪಿ.ಸಿ:.

ಆರೋಪಿತನು ತಾನು ಚಲಾಯಿಸುತ್ತಿದ್ದ ಮೋ.ಸೈ. ನಂ:ಕೆಎ-26 ವಿ-4932ನೇದ್ದನ್ನು ತನ್ನ ಊರಿನಿಂದ ತನ್ನ ಹೆಂಡತಿಯ ಊರಾದ ಅರಕೇರಿಗೆ ಬರುವ ಕುರಿತು ಇಟಗಿ-ಮಂಡಲಗೇರಿ ರಸ್ತೆಯಲ್ಲಿ, ಮಂಡಲಗೇರಿ ಸೀಮಾದ ರಾಯನಗೌಡರ ಮಿಲ್ ನ ಹತ್ತಿರ ಬರುತ್ತಿರುವಾಗ ರಸ್ತೆಯ ಸ್ಥಿತಿಗತಿಯನ್ನು ಅರಿಯದೇ ಇಂದು ರಾತ್ರಿ 8-40 ಗಂಟೆಯ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸ್ಕೀಡ್ಡಾಗಿ ಬಿದ್ದು, ಸಾದಾ ಸ್ವರೂಪದ ಗಾಯಗೊಂಡು ಬಿದ್ದಿದ್ದು, ನೋಡಿದ ಮಂಡಲಗೇರಿ ಗ್ರಾಮದ ಮುಸ್ತಾಫ, ಪ್ರಕಾಶಗೌಡ ಎನ್ನುವವರು ತನಗೆ ಫೋನ್ ಮಾಡಿ ತಿಳಿಸಿದ್ದರಿಂದ ತಾನು ಕುಕನೂರ ಸರ್ಕಾರೀ ಆಸ್ಪತ್ರೆಗೆ ಬಂದು ನೋಡಿ, ವಿಷಯವನ್ನು ಗಾಯಾಳುವಿನಿಂದ ತಿಳಿದುಕೊಂಡಿದ್ದು, ಸದರಿ ಘಟನೆಯು ಆರೋಪಿತನ ಅತೀವೇಗ ಮತ್ತು ಅಲಕ್ಷ್ಯತನದ ಚಾಲನೆಯಿಂದ ಉಂಟಾಗಿದ್ದು, ಸದರಿಯವನ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರನ್ನು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

0 comments:

 
Will Smith Visitors
Since 01/02/2008