ದಿನಾಂಕ:26-08-2016 ರಂದು ಬೆಳಿಗ್ಗೆ 9-15 ಗಂಟೆಗೆ
ಪಿರ್ಯಾದಿದಾರರಾದ ಶಿವಣ್ಣ ತಂದೆ ಕೃಷ್ಣಪ್ಪ ಬಡಿಗೇರ ವಯಾ: 31 ವರ್ಷ ಜಾತಿ: ವಿಶ್ವಕರ್ಮ ಉ: ಹಿರೇವಂಕಲಕುಂಟಾ
108
ಅಂಬುಲೇನ್ಸ ನಂ: ಕೆ.ಎ-42/ಜಿ-
211 ನೇದ್ದರ ಚಾಲಕ ಸಾ: ಕೂಡಲಸಂಗಮ ತಾ: ಹುನಗುಂದ ಜಿ:
ಬಾಗಲಕೋಟ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕರಿಸಿದ
ಪಿರ್ಯಾದಿಯ ಸಾರಾಂಶವೆನೆಂದರೆ ನಿನ್ನೆ ದಿನಾಂಕ: 25-08-2016 ರಂದು ಬೆಳಗಿನ ಜಾವ 2-00 ಗಂಟೆಯ ಸುಮಾರಿಗೆ ಹಿರೇವಂಕಲಕುಂಟಾ ಗ್ರಾಮ ಸರಕಾರಿ ಆಸ್ಪತ್ರೆಯಿಂದ ಹೆರಿಗೆ ಪೇಶೆಂಟ್
ಕರೆದುಕೊಂಡು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಬಂದು ನಂತರ ಅಲ್ಲಿನ ವೈದ್ಯಾಧಿಕಾರಿಗಳು ಹೆಚ್ಚಿನ
ಚಿಕಿತ್ಸೆ ಕುರಿತು ಇಲಕಲಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರಿಂದ ಕುಷ್ಟಗಿ ಬಿಟ್ಟು
ಟೆಂಗುಂಟಿ ಕ್ರಾಸ್ ಹತ್ತಿರ ಇಲಕಲ್ ಕಡೆಗೆ 108 ಅಂಬ್ಯುಲೇನ್ಸ್ ನಂ: ಕೆ.ಎ-42/ಜಿ-211
ನೇದ್ದನ್ನು ತೆಗೆದುಕೊಂಡು ಹೋಗುತ್ತಿರುವಾಗ ಕುಷ್ಟಗಿ-ಟೆಂಗುಂಟಿ ಕ್ರಾಸ್ ಎನ್.ಹೆಚ್-50 ನಲ್ಲಿ ಬೆಳಗಿನ
2-45
ಗಂಟೆ ಸುಮಾರಿಗೆ ನಾನು ಕ್ರಾಸ್ ನಲ್ಲಿ ರೋಡ್
ಹಂಪ್ಸದಾಟುವಷ್ಟರಲ್ಲಿ ಅದೇ ವೇಳೇಗೆ ಹಿಂದಿನಿಂದ ಒಂದು ಲಾರಿ ಚಾಲಕನು ತನ್ನ ಲಾರಿಯ
ಅಂತರವನ್ನು ಕಾಪಾಡದೆ ಅತಿವೇಗ ಮತ್ತು ಅಲಕ್ಷತನದಿಂದ ನಡಿಸಿಕೊಂಡು ಬಂದು ನನ್ನ ಅಂಬ್ಯುಲೇನ್ಸ್ ಗೆ
ಹಿಂದಿನಿಂದ ಟಕ್ಕರಕೊಟ್ಟಿದ್ದು ಆಗ ನಾನು ಅಂಬ್ಯುಲೇನ್ಸ್ ರಸ್ತೆ ಪಕ್ಕಕ್ಕೆ ನಿಲ್ಲಿಸಿ ನೋಡಲಾಗಿ
ಹಿಂದಿನ ಎರಡು ಡೋರ್, ಗ್ಲಾಸ್,
ಪಸ್ಟ್ ಏಡ್ ಬಾಕ್ಸ್ ನಜ್ಜುಗುಜ್ಜಾಗಿದ್ದು ನನಗೆ ಮತ್ತು ಆಬ್ಯುಂಲೆನ್ಸ
ನಲ್ಲಿ ಇರುವವರಿಗೆ ಯಾವುದೇ ಗಾಯ ವಗೈರಾ ಆಗಿರುವುದಿಲ್ಲಾ. ನಂತರ ನಾನು ಟಕ್ಕರಕೊಟ್ಟ ಲಾರಿ ನೋಡಲಾಗಿ ನಂ ಎಂ.ಹೆಚ್-40/ಎಕೆ-0876
ಅಂತಾ ಇದ್ದು ಅದರ ಚಾಲಕನನ್ನು ವಿಚಾರಿಸಲಾಗಿ ಆತನ ಹೆಸರು ಮುಕೇಶ ತಂದೆ
ಪರಶುರಾಮ ಡೊಂಗರೆ ವಯ: 28 ವರ್ಷ,
ಜಾ: ಪವಾರ,
ಉ: ಲಾರಿ ಚಾಲಕ ಸಾ: ಕಲ್ಪನಾನಗರ
ನಾರಿ ರೋಡ್ ಪೋಸ್ಟ್: ಉಪ್ಪಲವಾಡಿ ತಾ:ಜಿ: ನಾಗಪೂರ ರಾಜ್ಯ ಮಹಾರಾಷ್ಟ್ರ ಅಂತಾ ತಿಳಿಸಿದ್ದು ಇರುತ್ತದೆ.
ಕಾರಣ ಸದರಿ ಲಾರಿ ಚಾಲಕನ ವಿರುದ್ದ ಮುಂದಿನ ಕ್ರಮ ಜರುಗಿಸಲು ವಿನಂತಿ
ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ. 247/2016 ಕಲಂ:447, 324, 504, 506 ರಡ್ ವಿತ್ 34
ಐಪಿಸಿ.
ದಿನಾಂಕ:- 26-08-2016 ರಂದು ರಾತ್ರಿ 10:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಕೃಷ್ಣರಾವ್ ತಂದೆ ಲಚ್ಚಯ್ಯ ವಯಸ್ಸು: 42 ವರ್ಷ ಜಾತಿ: ಕಮ್ಮಾ, ಉ: ಒಕ್ಕಲತನ ಸಾ: ಬರಗೂರ
ಕ್ಯಾಂಪ್, ತಾ: ಗಂಗಾವತಿ. ಇವರು ಠಾಣೆಗೆ ಹಾಜರಾಗಿ ಗಣಕೀಕರಣ
ಮಾಡಿಸಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ.
" ನಿನ್ನೆ ದಿನಾಂಕ: 25-08-2016 ರಂದು ಮುಂಜಾನೆ 10:30 ಗಂಟೆಯ ಸುಮಾರಿಗೆ
ನಾನು ಶ್ರೀರಾಮನಗರದ ಭೂಮಿ ಸರ್ವೆ ನಂ: 129/39/ಅಪಿ5 ವಿಸ್ತ್ರೀರ್ಣ 1 ಎಕರೆ 35 ಗುಂಟೆ ಜಮೀನಿನಲ್ಲಿ
ಸಸಿ ಹಚ್ಚುವ ಕೆಲಸವನ್ನು ಮಾಡುತ್ತಿದ್ದಾಗ ಅಲ್ಲಿಗೆ ಬಂದ 1] ಸತ್ಯನಾರಾಯಣ ತಂದೆ ವೆಂಕಟರತ್ನಂ ವಯಸ್ಸು: 50 ವರ್ಷ 2] ಶ್ರೀಮತಿ ಮದ್ದಿಕೂರಿ ಮಾಣಿಕ್ಯಂ
ಗಂಡ ಈರಣ್ಣ ವಯಸ್ಸು: 50 ವರ್ಷ 3] ಚುಂಡ್ರು ಗೋಪಿ ತಂದೆ ಸತ್ಯಂ 35 ವರ್ಷ ಸಾ: ಎಲ್ಲರೂ ಶ್ರೀರಾಮನಗರ
ಇವರು ಎಕೊದ್ದೇಶದದಿಂದ ಆಕ್ರಮ ಕೂಟ ರಚಿಸಿಕೊಂಡು ಅತೀಕ್ರಮ ಪ್ರವೇಶ ಮಾಡಿ ದುರುದ್ದೇಶ ಪೂರಿತವಾಗಿ
ಕೈಯಲ್ಲಿ ಬಡಿಗೆ ಖಾರದ ಪುಡಿ ಮತ್ತು ಕಲ್ಲುಗಳನ್ನು ಹಿಡಿದುಕೊಂಡು ಬಂದು “ ಏನಲೇ ಸೂಳೆ ಮಗನೇ ಕೋರ್ಟ
ನಲ್ಲಿ ಆದ ಕೇಸಿನ ವಿರುದ್ದ ಅಪೀಲು ಹಾಕುತ್ತೀಯಾ ನಿನ್ನದು ಎಷ್ಟಲೇ ತಿಂಡಿ ಬೊಸುಡಿ ಸೂಳೆ ಮಗನೇ ”
ಅಂತಾ ತೆಲಗು ಭಾಷೆಯಲ್ಲಿ ಬೈಯುತ್ತಾ ನನ್ನನ್ನು ಕೆಸರಿನಲ್ಲಿ ದೂಕಿದರು. ನಂತರ ಚುಂಡ್ರು ಗೋಪಿ ಈತನು
ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ನನ್ನ ಬೆನ್ನಿಗೆ ಜೋರಾಗಿ ಬಡಿದನು. ಆಗ ಮದ್ದಿಕೋರಿ ಮಾಣಿಕ್ಯಂ ಈಕೆಯು
ತನ್ನ ಸೆರಗಿನಲ್ಲಿ ಕಟ್ಟಿಕೊಂಡಿದ್ದ ಖಾರದ ಪುಡಿಯನ್ನು ನನ್ನ ಕಣ್ಣಿನಲ್ಲಿ ತೂರಿದಳು, ನನಗೆ ಕಣ್ಣು
ಕಾಣದಂತಾಗಿ ಉರಿ ತಾಳಲಾರದೇ ಜೋರಾಗಿ ಚೀರತೊಡಗಿದೆ. ಅಷ್ಟರಲ್ಲಿ ಸತ್ಯನಾರಾಯಣ ಈತನು ತನ್ನ ಕೈಯಲ್ಲಿ
ಹಿಡಿ ಗಾತ್ರದ ಕಲ್ಲಿನಿಂದ ನನ್ನ ಎದೆ ಹೊಟ್ಟೆ ಮತ್ತು ಬೆನ್ನಿಗ ಜೋರಾಗಿ ಗುದ್ದತೊಡಗಿದನು. ಇದರಿಂದಾಗಿ
ನನಗೆ ಸಾಧಾ ಸ್ವರೂಪದ ಗಾಯವಾಗಿ ಮೈಕೈ ನೊಯುತ್ತಿದ್ದವು. ಆಗ ಅಲ್ಲಿಯೇ ನನ್ನ ಪಕ್ಕದ ಭೂಮಿಯಲ್ಲಿ ಕೆಲಸ
ಮಾಡುತ್ತಿದ್ದ ಎನ್. ಶ್ರೀನಿವಾಸ ತಂದೆ ಸುಬ್ಬರಾವ್ ಸಾ: ಬರಗೂರ ಕ್ಯಾಂಪ್ ಈತನು ಓಡುತ್ತಾ ಬಂದು ನನ್ನನ್ನು
ಬಿಡಿಸಿಕೊಂಡನು. ಆಗ ಸದರಿ ಎಲ್ಲರೂ ಇಂದು ನೀನು ಉಳಿದುಕೊಂಡಲೇ ಮಗನೇ ಇಂದಿಲ್ಲಾ ನಾಳೆ ನಿನ್ನನ್ನು
ಇದೇ ಭೂಮಿಯಲ್ಲಿ ಹೂತು ಹಾಕಿ ಹುಟ್ಟಿಲ್ಲಾ ಎನಿಸಿಬಿಡುತ್ತೇವೆ ಎನ್ನುತ್ತಾ ಹೊರಟು ಹೋದರು. ಈಗ್ಗೆ
ಸುಮಾರು 4 ವರ್ಷಗಳಿಂದ ಸದರಿ ಭೂಮಿಯನ್ನು ನಾನೇ ಸಾಗುವಳಿ ಮಾಡುತ್ತಿದ್ದು ಮಾಲಿಕನೂ ಮತ್ತು ಉಳುಮೆದಾರನು
ಇರುತ್ತೇನೆ. ಈ ಜಮೀನಿನ ಸಂಭಂದವಾಗಿ ಮಾನ್ಯ ಹಿ. ಶ್ರೇ ನ್ಯಾಯಲಯದಲ್ಲಿ ಸಿವಿಲ್ ದಾವೆ ಹೂಡಿದ್ದೆನು.
ಅವುಗಳ ಓ.ಎಸ್. ಸಂ: 132/13 ಮತ್ತು 133/2013 ಇರುತ್ತವೆ. ಹಿರಿಯ ಸಹೋದರ ಮತ್ತು ಹಿರಿಯವರಲ್ಲಿ ವಿಚಾರಿಸಿ ದೂರು ನೀಡಲು ತಡವಾಗಿದೆ. ಕಾರಣ ಮಾನ್ಯರು ಏಕಾಏಕಿ ಹಲ್ಲೆ ಮಾಡಿ ನನ್ನ ಭೂಮಿಯಲ್ಲಿ ಅತೀಕ್ರಮ ಪ್ರವೇಶ ಮಾಡಿ ಕಟ್ಟಿಗೆಯಿಂದ
ಕಲ್ಲಿನಿಂದ ಹೊಡೆಬಡೆ ಮಾಡಿ ಕಣ್ಣಿನಲ್ಲಿ ಖಾರದ ಪುಡಿ ಉಗ್ಗಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ
ಹಾಕಿದವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ " ಅಂತಾ ಇದ್ದ ದೂರಿನ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು
ಇರುತ್ತದೆ.
0 comments:
Post a Comment