Our Commitment For Safe And Secure Society

Our Commitment For Safe And Secure Society

This post is in Kannada language.

To view, you need to download kannada fonts from the link section.
Follow on FACEBOOK
Koppal District Police

Sunday, September 4, 2016

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 185/2016 ಕಲಂ: 279, 338, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿ:03-09-2016 ರಂದು ರಾತ್ರಿ 8-15 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ಸ್ವಂತ ತಮ್ಮ ಸೈಯದ ಫಯಾಜ ಹತ್ತಿಕಟಿಗಿ ಇವರು ಗಂಗಾವತಿಯಲ್ಲಿ ಸಂಬಂಧಿಕರಿಗೆ ಮಾತನಾಡಿಸಿ ವಾಪಾಸ್ ಊರಿಗೆ ಅಂತಾ ತಮ್ಮ ಮೋಟಾರ ಸೈಕಲ್ ನಂ: ಕೆಎ-36/ಇಡಿ-4192 ನೇದ್ದರ ಹಿಂದೆ ತನ್ನ ತಾಯಿ ಜುಬೇದಾಬೇಗಂ ಹಾಗೂ ಮಗಳು ಸಾಬಿಯಾ ಇವರಿಗೆ ಕೂಡ್ರಿಸಿಕೊಂಡು ಗಿಣಿಗೇರಿ ಬೈಪಾಸ್ ರಸ್ತೆಯ ಕರ್ನಾಟಕ ಟ್ರಾನ್ಸಪೋರ್ಟ ಹತ್ತಿರ ಬರುತ್ತಿದ್ದಾಗ ಅದೇವೇಳೆಗೆ ಎದುರುಗಡೆ ಕೊಪ್ಪಳ ಕಡೆಯಿಂದ ಲಾರಿ ನಂ: ಕೆಎ-26/5138 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಬಂದವನೇ ಸೈಯದ ಫಯಾಜ ಇವರ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ ಲಾರಿಯ ಚಾಲಕನು ತನ್ನ ವಾಹನ ನಿಲ್ಲಿಸದೇ ಹೋಗಿದ್ದುರುತ್ತದೆ. ಸದರಿ ಅಪಘಾತದಲ್ಲಿ ತೀವ್ರಗಾಯಗೊಂಡಿದ್ದ ಜುಬೇದಾಬೇಗಂ ಹಾಗೂ ಬಾಲಕಿ ಸಾಬೀಯಾ ಇವರಿಗೆ ಭಾರಿ ರಕ್ತಗಾಯಗಳಾಗಿದ್ದರಿಂದ ಅವರನ್ನು 108 ಅಂಬುಲೆನ್ಸ ದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ರಾತ್ರಿ 9-15 ಕರೆತಂದು ವೈದ್ಯರಲ್ಲಿ ತೋರಿಸಿದಾಗ ಪರೀಕ್ಷಿಸಿದ ವೈದ್ಯರು ಬ್ರಾಟಡೆಡ್ ಆಗಿರುವ ಬಗ್ಗೆ ತಿಳಿಸಿದ್ದು ಇರುತ್ತದೆ. ಫಿರ್ಯಾದಿಯ ತಮ್ಮ ಸೈಯದ ಫಯಾಜನಿಗೆ ಸಹ ಭಾರಿ ರಕ್ತಗಾಯಗಳಾಗಿರುತ್ತವೆ. ಕಾರಣ ಅಪಘಾತ ಮಾಡಿ ನಿಲ್ಲಿಸದೇ ಹೋಗಿರುವ ಲಾರಿ ನಂ: ಕೆಎ-26/5138 ನೇದ್ದರ ಚಾಲಕನನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008