Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, September 27, 2016

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 197/2016 ಕಲಂ: 143, 147, 148, 323, 324, 504, 506 ಸಹಿತ 149 ಐ.ಪಿ.ಸಿ:
ದಿನಾಂಕ 26-09-2016 ರಂದು ಬೆಳಿಗ್ಗೆ 9-00 ಗಂಟೆ ಸುಮಾರಿಗೆ ಪಿರ್ಯಾಧಿದಾರರು ತಮ್ಮೊಂದಿಗೆ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಬಸವರಾಜ ಹಳ್ಳಿ ಹಾಗೂ ಇತರೆ ಕಾರ್ಯಕರ್ತರೊಂದಿಗೆ ಕಲ್ಯಾಣಿ ಸ್ಟೀಲ್ ಪ್ಯಾಕ್ಟರಿಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಕುರಿತು ಪ್ಯಾಕ್ಟರಿಯ 1ನೇ ಗೇಟ್ ಮುಂದುಗಡೆ ಧರಣಿ ಕುಳಿತುಕೊಂಡಿದ್ದಾಗ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ಬಂದು ಪಿರ್ಯಾಧಿ ಹಾಗೂ ಅವರ ಸಂಘಟನೆಯವರೊಂದಿಗೆ  ಜಗಳ ತೆಗೆದು ಕೈಯಿಂದ, ಕಟ್ಟಿಗೆಯಿಂದ ಹೊಡಿ ಬಡಿ ಮಾಡಿ ಜೀವದ ಬೆದರಿಕೆ ಹಾಕಿದ್ದು ಇದರಿಂದ ಪಿರ್ಯಾಧಿ ವಿಜಯಕುಮಾರ ಹಾಗೂ ಬಸವರಾಜ ಹಳ್ಳಿ ಇವರು ಧುಖಾಃಪಾತಗೊಂಡಿದ್ದು ಇರುತ್ತದೆ.  ಪ್ರಕರಣವನ್ನು ದಾಖಲಿಸಿ ತಪಾಸಣೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 198/2016 ಕಲಂ: 143, 341, 323, 504, 506 ಸಹಿತ 149 ಐ.ಪಿ.ಸಿ:
ದಿನಾಂಕ-26.09.2016 ರಂದು ಬೆಳೆಗ್ಗೆ 10.00 ಗಂಟೆಯ ಸುಮಾರಿಗೆ ರಕ್ಷಣ ವೇದಿಕೆ ಅಧ್ಯಕ್ಷರಾದ ವಿಜಯಕುಮಾರ ಮತ್ತು ಸಂಗಡಿಗರು ಪ್ರತಿದಿನ ಕಲ್ಯಾಣಿ ಕಂಪನಿಗೆ ಹೋಗುವ ಕೂಲಿ ಕಾರ್ಮಿಕರನ್ನು ಕಲ್ಯಾಣಿ ಸ್ಟೀಲ್  ಫ್ಯಾಕ್ಟರಿಯ 1 ನೇ ಗೇಟ್ ಹತ್ತಿರ ತಡೆದು ಒಳಗಡೆ ಕೆಲಸಕ್ಕೆ ಬಿಡದೇ ನಿಲ್ಲಿಸಿದಾಗ ಫಿರ್ಯಾದಿದಾರರು ಮತ್ತು ಇತರರು ರಕ್ಷಣಾ ವೇದಿಕೆಯ ಅಧ್ಯಕ್ಷ ವಿಜಯ ಕುಮಾರ ಈತನನ್ನು ಕರೆದು ಸಮಸ್ಯೆ ಬಗ್ಗೆ ಮಾತನಾಡೋಣ ಅಂತಾ ಕರೆದಾಗ ವಿಜಯಕಮಾರ ಈತನು ಕೇಳದಿದ್ದಾಗ  ಫಿರ್ಯಾದಿದಾರರು ಲೇಬರಗಳನ್ನು ಕಂಪನಿಯ ಒಳಗಡೆ ಬಿಡಿಸಲು ಹೋದಾಗ ರಕ್ಷಣ ವೇದಿಕೆ ಅಧ್ಯಕ್ಷರಾದ ವಿಜಯಕುಮಾರ ಮತ್ತು ಆತನ ಸಂಘಟೆಯ ಕಾರ್ಯಕರ್ತರು ಗುಂಪುಕಟ್ಟಿಕೊಂಡ ಪಿರ್ಯಾದಿದಾರರಿಗೆ ಮತ್ತು ಇತರರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡಿಬಡಿ ಮಾಡಿ ಜೀವದ ಬೆದರಿಕೆ  ಹಾಕಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 199/2016 ಕಲಂ: 143, 341, 323, 504, 506 ಸಹಿತ 149 ಐ.ಪಿ.ಸಿ:
ದಿ:26-09-2016 ರಂದು ಮಧ್ಯಾನ್ಹ 1-45 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ಆರೋಪಿತರಾದ ವಿಜಯಕುಮಾರ ಹಾಗೂ ಇತರೆ 25-30 ಜನ ಕರವೇ ಕಾರ್ಯಕರ್ತರು ಕೂಡಿಕೊಂಡು ಕಲ್ಯಾಣಿ ಪ್ಯಾಕ್ಟರಿಯ ಮೊದಲನೇ ಗೇಟ್ ಮುಂದೆ ಪ್ಯಾಕ್ಟರಿಯವರಿಗೆ ಯಾವದೇ ಮಾಹಿತಿಯನ್ನು ನೀಡದೇ ಪ್ಯಾಕ್ಟರಿಯ ಧ್ವಾರ ಬಾಗಿಲನ್ನು ಬಂದ್ ಮಾಡಿ ಕಾರ್ಮಿಕರನ್ನು ತಡೆದು ನಿಲ್ಲಿಸಿ  ಪಿರ್ಯಾಧಿ ಹಾಗೂ ಕಂಪನಿಯವರ ಮೇಲೆ ಅವಾಚ್ಯವಾಗಿ ಬೈದಾಡುತ್ತಾ ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
4] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 252/2016 ಕಲಂ: 379 ಐ.ಪಿ.ಸಿ:
ಮಾನಪ್ಪ ತಂದೆ ಭೀಮಪ್ಪ ಫಿರ್ಯಾದಿದಾರರು ತಮ್ಮ ವ್ಯಯಕ್ತಿಕ ಕೆಲಸದ ನಿಮಿತ್ಯ ಒಂದು ಹಿರೋ ಹೆಚ್.ಎಫ್.ಡಿಲಕ್ಸ ಮೋ.ಸೈ ನಂ: ಕೆ.ಎ-29/ಡಬ್ಲೂ-2189 ನೇದ್ದನ್ನು ತೆಗೆದುಕೊಂಡಿದ್ದು ಸದರಿ ಮೋ.ಸೈ ನೇದ್ದನ್ನು ತಮ್ಮ ಸಂಬಂಧಿಕರಾದ ಬಸವರಾಜ  ದಿನಾಂಕ: 12-09-2016 ರಂದು ಕೊರ್ಟನಲ್ಲಿ ತನ್ನ ವ್ಯಯಕ್ತಿಕ ಕೆಲಸದ ನಿಮಿತ್ಯ ಕುಷ್ಟಗಿಗೆ ಬಂದು ಸದರಿ ಮೋ.ಸೈ ನ್ನು ಬಸವೇಶ್ವರ ಸರ್ಕಲ್ ಹತ್ತಿರ ಇರುವ ವಿನಾಯಕ ರಾಧಾ ಜ್ಯೂವೆಲರ್ ಅಂಗಡಿಯ ಮುಂದೆ ನಿಲ್ಲಿಸಿ ವಾಪಾಸ್ ತನ್ನ ಕೆಲಸ ಮುಗಿಸಿಕೊಂಡು ಸಾಯಂಕಾಲ 4-00 ಗಂಟೆಯ ಸುಮಾರಿಗೆ ಬಂದು ನೋಡಲಾಗಿ ನನ್ನ ಮೋ.ಸೈ ಇರುವದಿಲ್ಲ ಅಂತಾ ತಿಳಿಸಿದ್ದು, ನಂತರ ನಾವು ಸದರಿ ಮೋ.ಸೈನ್ನು ಇಲ್ಲಿಯವರೆಗೆ ಎಲ್ಲಾ ಕಡೆಗಳಲ್ಲಿ ಹುಡುಕಾಡಲಾಗಿ ನನ್ನ ಮೋ.ಸೈ ಸಿಕ್ಕಿರುವದಿಲ್ಲ. ಕಾರಣ ನನ್ನ ಮೋ.ಸೈ ನಂ: ಕೆ.ಎ-29/ಡಬ್ಲೂ-2189  ಇಂಜಿನ್ ನಂ: HA11EFC9L16004 ಮತ್ತು ಚೆಸ್ಸಿ ನಂ: MBLHA11EWC9L06681 ನೇದ್ದು ಇದರ ಅಂದಾಜು 25,000=00 ರೂ. ಕಿಮ್ಮತ್ತಿನ ಮೋ.ಸೈ ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.
5] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 253/2016 ಕಲಂ: 279, 337, 338 ಐ.ಪಿ.ಸಿ:
ದಿನಾಂಕ: 26-09-2016 ರಂದು ನಾನು ಮನೆಯಲ್ಲಿದ್ದಾಗ ನಮ್ಮ ಸಂಬಂಧಿಕರಾದ ಶರಣಪ್ಪ ತಂದೆ ರುದ್ರಪ್ಪ ತುಮ್ಮರಗುದ್ದಿ ಇವರು ಪೋನ್ ಮಾಡಿ ತಿಳಿಸಿದ್ದೇನೆಂದರೆ ನಿಮ್ಮ ಅಣ್ಣನಾದ ಬಸವರಾಜನು ಕುಷ್ಟಗಿಯಿಂದ ಕುರುಬನಾಳಗೆ ಬರುತ್ತಿರುವಾಗ ನಮ್ಮೂರ ಕ್ರಾಸ್ ಹತ್ತಿರ ರಾತ್ರಿ 7-00 ಗಂಟೆಯ ಸುಮಾರಿಗೆ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಆತನಿಗೆ ಟಕ್ಕರ ಕೊಟ್ಟು ನಿಲ್ಲಿಸದೇ ಹೋಗಿರುತ್ತಾನೆ ಅಂತಾ ತಿಳಿಸಿದ್ದರಿಂದ ನಾನು ಕೂಡಲೇ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಅಣ್ಣನಾದ ಬಸವರಾಜ ಇತನಿಗೆ ಅಪಘಾತವಾಗಿದ್ದು ನಿಜವಿದ್ದು ಆತನಿಗೆ ಬಲಗೈ ರಟ್ಟೆಯ ಹತ್ತಿರ ಮುರಿದಂತಾಗಿದ್ದು, ಹಣೆಯ ಎಡಗಡೆ ಭಾಗದಲ್ಲಿ ತೆರಚಿದ ಗಾಯ, ಮೂಗಿಗೆ ತೆರಚಿದ ಗಾಯ, ಎಡಗೈ ಮುಂಗೈಗೆ ತೆರಚಿದ ಗಾಯ, ಎಡಗಾಲು ಹೆಬ್ಬೆರಳಿಗೆ, ಬಲಗೈ ಮುಂಗೈಗೆ ತೆರಚಿದ ಗಾಯವಾಗಿದ್ದು  ಆತನು ನಡೆಸುತ್ತಿದ್ದ ಮೋ.ಸೈ ಹಿರೋ ಸ್ಪ್ಲೇಂಡರ್ ಪ್ಲಸ್ ನಂ: ಕೆ.ಎ-37/ವಿ-2184 ಅಂತಾ ಇದ್ದು ನಂತರ ನಾನು ಮತ್ತು ಶರಣಪ್ಪ ಇಬ್ಬರೂ ಕೂಡಿ 108 ಅಂಬುಲೇನ್ಸಗೆ ಕರೆಯಿಸಿ ಕುಷ್ಟಗಿಯ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.

0 comments:

 
Will Smith Visitors
Since 01/02/2008