Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, September 29, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 283/2016 ಕಲಂ: 290 ಐ.ಪಿ.ಸಿ ಮತ್ತು 92(ಐ), 37 ಸಹಿತ 109 Karnataka Police Act.:
ದಿನಾಂಕ: 26-09-2016 ರಂದು ರಾತ್ರಿ 9:00 ಗಂಟೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಇವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ದೂರನ್ನು ಸಲ್ಲಿಸಿದ್ದು, ಗೌರಿ ಗಣೇಶ ಹಬ್ಬದ ನಿಮಿತ್ಯ ದಿನಾಂಕ: 05-09-2016 ರಂದು ಚಿಕ್ಕಜಂತಕಲ್ ಗ್ರಾಮದ ಶ್ರೀ ಬಸವಣ್ಣ ದೇವಸ್ಥಾನದ ಹತ್ತಿರ ಶ್ರೀ ವಿನಾಯಕ ಯುವಕ ಸಂಘ ಇವರು ಪ್ರತಿಷ್ಠಾಪಿಸಿದಂತಹ ಗಣೇಶನನ್ನು ದಿನಾಂಕ: 25-09-2016 ರಂದು 21ನೇ ದಿವಸಕ್ಕೆ ವಿಸರ್ಜನೆ ಮಾಡುವ ಕಾರ್ಯಕ್ರಮ ಇದ್ದು, ಗಣೇಶನನ್ನು ಕೂಡಿಸಿದಂತಹ ಶ್ರೀ ವಿನಾಯಕ ಯುವಕ ಸಂಘ ಚಿಕ್ಕಜಂತಕಲ್ ಇವರು ಸಂಜೆ 6:30 ಗಂಟೆಯಿಂದ ದಿ:- 26-09-2016 ರ 00:30 ಎ.ಎಂ.ವರೆಗೆ ಬಸವಣ್ಣ ದೇವಸ್ಥಾನದಿಂದ ಟ್ರ್ಯಾಕ್ಟರ ನಂ: ಕೆ.ಎ-35/ 721 ರಲ್ಲಿ ಧ್ವನಿವರ್ಧಕಗಳನ್ನು (ಡಿ.ಜೆ.) ಅಳವಡಿಸಿಕೊಂಡು ಹಾಡುಗಳನ್ನು ಹಾಕಿಕೊಂಡು ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆಯ ಮುಖೇನಾ ಚಿಕ್ಕಜಂತಕಲ್ ತುಂಗಭದ್ರ ನದಿಗೆ ತೆಗೆದುಕೊಂಡು ಹೋಗಿ ಗಣೇಶ ವಿಸರ್ಜನೆ ಮಾಡಿರುತ್ತಾರೆ.  ಆದರೆ ಈ ಸಮಯದಲ್ಲಿ ವಿನಾಯಕ ಯುವಕ ಸಂಘದ ಪ್ರಮುಖ ಆಯೋಜಕರಾದ (1) ಶಿವರಾಜ ತಂದೆ ವೆಂಕಟಪ್ಪ ಪೂಜಾರ, ಜಾತಿ: ನೇಕಾರ ವಯಸ್ಸು 28 ವರ್ಷ, ಉ: ಒಕ್ಕಲುತನ ಸಾ: ಚಿಕ್ಕಜಂತಕಲ್ ಹಾಗೂ ಇತರೆ 9 ಜನರು ಧ್ವನಿವರ್ಧಕವನ್ನು ಉಪಯೋಗಿಸಲು ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿಯನ್ನು ಪಡೆದುಕೊಳ್ಳದೇ ಟ್ರ್ಯಾಕ್ಟರನಲ್ಲಿ ಧ್ವನಿವರ್ಧಕಗಳನ್ನು (ಡಿ.ಜೆ) ಅಳವಡಿಸಿಕೊಂಡು ರಾತ್ರಿ 10:00 ಗಂಟೆಯ ನಂತರವೂ ಸಹ ಸಾರ್ವಜನಿಕರಿಗೆ ಕಿರುಕುಳ ಉಂಟಾಗುವ ರೀತಿಯಲ್ಲಿ ಹೆಚ್ಚಿನ ಶಬ್ದದಲ್ಲಿ ಹಾಡುಗಳನ್ನು ಹಾಕಿಕೊಂಡು ಮೆರವಣಿಗೆ ಮಾಡಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿರುತ್ತಾರೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 255/2016 ಕಲಂ: 435 ಐ.ಪಿ.ಸಿ:

ದಿನಾಂಕ: 28-09-2016 ರಂದು ಮದ್ಯಾಹ್ನ 12-30  ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಮಲ್ಲಮ್ಮ ಗಂಡ ಘನವಂತಪ್ಪ ತೋಟದ ವಯಾ: 36 ವರ್ಷ ಸಾ: ಹಿರೇಮನ್ನಾಪೂರ ರವರು ಫಿರ್ಯಾಧಿಯನ್ನು ನೀಡಿದ್ದು ಹಿರೇಮನ್ನಾಪೂರ ಗ್ರಾಮದ ತನ್ನ ಮಾಲಿಕತ್ವದ ಜಮೀನು ಸರ್ವೆ ನಂ: 283/1 ರಲ್ಲಿ ಸಜ್ಜೆ ಬೆಳೆಯನ್ನು ಬೆಳೆದು ನಂತರ ಕಟಾವು ಮಾಡಿ ಒಂದು ಗೂಡನ್ನು ಹಾಕಲಾಗಿತ್ತು. ದಿನಾಂಕ: 27-09-2016 ರಂದು ರಾತ್ರಿ 11-00 ಗಂಟೆಯ ಸುಮಾರಿಗೆ ಆರೋಪಿತರು ದುರುದ್ದೇಶದಿಂದ ಸದರಿ ಸಜ್ಜೆ ಗೂಡನ್ನು ಬೆಂಕಿ ಹಚ್ಚಿ ಸುಟ್ಟಿರುತ್ತಾರೆ. ಸದರಿ ಗೂಡಿನ  ಅಂದಾಜು ಕಿಮ್ಮತ್ತು 50,000=00 ರೂ ಗಳಾಗಬಹುದು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

0 comments:

 
Will Smith Visitors
Since 01/02/2008