ದಿನಾಂಕ 23-09-2016 ರಂದು ಸಾಯಂಕಾಲ 5:00 ಗಂಟೆ ಸುಮಾರಿಗೆ ಹಿರೇವಂಕಲಕುಂಟಾ ಗ್ರಾಮದಲ್ಲಿ ಸ್ಮಶಾನದ ಹತ್ತಿರ ಇರುವ ಖಾಲಿ ಜಾಗೆಯಲ್ಲಿ ಆರೋಪಿತರೆಲ್ಲರೂ ಇಸ್ಪಟ್ ಜೂಜಾಟ ಆಡುತ್ತಿರುವ ಕಾಲಕ್ಕೆ ಪಿಎಸ್ಐ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ಮುತ್ತಿಗೆ ಹಾಕಿ ದಾಳಿ ಮಾಡಿದಾಗ ಒಬ್ಬನು ಸಿಕ್ಕಿಬಿದ್ದಿದ್ದು ಇನ್ನೂಳಿದ 3 ಜನರು ಓಡಿ ಹೋಗಿದ್ದು ಇರುತ್ತದೆ ಸಿಕ್ಕಿ ಬಿದ್ದ ಆರೋಪಿತನಿಂದ ಹಾಗೂ ಪಣಕ್ಕೆ ಅಂತಾ ಹಚ್ಚಿದ ಕಣದಲ್ಲಿದ್ದ ಹಣ ಸೇರಿ ಇಸ್ಪೇಟ್ ಜೂಜಾಟದ ಒಟ್ಟು ನಗದು ಹಣ 500/-ರೂ ಹಾಗೂ ಇಸ್ಪೇಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಬಂದು ಆರೋಪಿತರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ಜಪ್ತಿ ಪಂಚನಾಮೆಯೊಂದಿಗೆ ಪಿಎಸ್ಐ ರವರು ತಮ್ಮ ವರದಿ ಸಲ್ಲಿಸಿದ್ದರಿಂದ ಈ ಬಗ್ಗೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಇಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 162/2016 ಕಲಂ: 78(3) Karnataka
Police Act:.
ದಿನಾಂಕ: 23-09-2016 ರಂದು 7-00 ಪಿ.ಎಂ. ಕ್ಕೆ ಹೊಸಳ್ಳಿ ಗ್ರಾಮದ ಗ್ರಾಮ ಪಂಚಾಯತ ಮುಂದೆ ಸಾರ್ವಜನಿಕ
ಸ್ಥಳದಲ್ಲಿ ಮೂರು ಜನರು ನಿಂತುಕೊಂಡು ಸಾವರ್ಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇವೆಂದು
ವಂಚನೆ ಮಾಡಿ ಅವರನ್ನು ಮೋಸಗೊಳಿಸಿ ಅವರಿಂದ ಹಣ ಪಡೆದುಕೊಂಡು ಮಟ್ಕಾ ಜೂಜಾಟದಲ್ಲಿ ತೊಡಗಿರುವಾಗ
ದಾಳಿ ಮಾಡಿ ಹಿಡಿದಿದ್ದು, ದಾಳಿ ಕಾಲಕ್ಕೆ
ಇಬ್ಬರು ಆರೋಪಿತರು ಸಿಕ್ಕಿ ಬಿದ್ದಿದ್ದು, ಒಬ್ಬ ಆರೋಪಿತನು ಓಡಿ ಹೋಗಿರುತ್ತಾನೆ. ಸಿಕ್ಕಿ ಬಿದ್ದವರ ಹತ್ತಿರ 5130 ರೂ. ನಗದು ಹಣ ಮತ್ತು 2 ಬಾಲ್ ಪೆನ್ ಹಾಗೂ 2 ಮಟ್ಕಾ ಚೀಟಿಗಳು
ಸಿಕ್ಕಿರುತ್ತವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment