ದಿನಾಂಕ: 23-09-2016 ರಂದು 7-00 ಪಿ.ಎಂ. ಕ್ಕೆ ಹೊಸಳ್ಳಿ
ಗ್ರಾಮದ ಗ್ರಾಮ ಪಂಚಾಯತ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮೂರು ಜನರು ನಿಂತುಕೊಂಡು
ಸಾವರ್ಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇವೆಂದು ವಂಚನೆ ಮಾಡಿ ಅವರನ್ನು ಮೋಸಗೊಳಿಸಿ ಅವರಿಂದ
ಹಣ ಪಡೆದುಕೊಂಡು ಮಟ್ಕಾ ಜೂಜಾಟದಲ್ಲಿ ತೊಡಗಿರುವಾಗ ದಾಳಿ ಮಾಡಿ ಹಿಡಿದಿದ್ದು, ದಾಳಿ ಕಾಲಕ್ಕೆ ಇಬ್ಬರು ಆರೋಪಿತರು ಸಿಕ್ಕಿ ಬಿದ್ದಿದ್ದು, ಒಬ್ಬ ಆರೋಪಿತನು ಓಡಿ ಹೋಗಿರುತ್ತಾನೆ. ಸಿಕ್ಕಿ ಬಿದ್ದವರ
ಹತ್ತಿರ 5130 ರೂ. ನಗದು ಹಣ ಮತ್ತು 2 ಬಾಲ್ ಪೆನ್ ಹಾಗೂ 2 ಮಟ್ಕಾ ಚೀಟಿಗಳು ಸಿಕ್ಕಿರುತ್ತವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 87/2016 ಕಲಂ: 87 Karnataka
Police Act:.
ದಿನಾಂಕ: 23-09-2016 ರಂದು ಸಾಯಂಕಾಲ 16-15 ಗಂಟೆಗೆ ಠಾಣೆಯಲ್ಲಿದ್ದಾಗ ವೆಂಕಟಾಪೂರ ಗ್ರಾಮದಲ್ಲಿ ಸೇವಾಲಾಲ
ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತ
ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ.
ಹನುಮಸಾಗರ ಠಾಣೆಯಲ್ಲಿದ್ದ ಸಿಬ್ಬಂದಿ ಹೆಚ್.ಸಿ-11, 83, ಪಿ.ಸಿ-126, 162, 223, 208, 244 ರವರೊಂದಿಗೆ ಹೊರಟು ಗೊರೇಬಿಹಾಳ ಕ್ರಾಸ್ ಹತ್ತಿರ ನಿಂತ ಇಬ್ಬರು ಪಂಚರನ್ನು ಕರೆದುಕೊಂಡು ವೆಂಕಟಾಪೂರ
ಗ್ರಾಮ ತಲುಪಿ ಸೇವಾಲಾಲ ಗುಡಿಯ ಹತ್ತಿರ ಸ್ವಲ್ಪದೂರ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಸೇವಾಲಾಲ
ಗುಡಿಯ ಹಿಂದೆ ಮರೆಗೆ ನಿಂತು ನೋಡಲಾಗಿ ಜನರು ದುಂಡಾಗಿ ಕುಳಿತುಕೊಂಡು, ಅಂದರ್ ಬಾಹರ್
ಇಸ್ಪೀಟ್ ಜೂಜಾಟ ಆಡುತ್ತಿರುವರರನ್ನು ಪಂಚರ ಸಮಕ್ಷಮ
ದಾಳಿ ಮಾಡಲು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ 11 ಜನ ಆರೋಪಿತರು ಸಿಕ್ಕಿ ಬಿದಿದ್ದು.
ಸದರಿ ಆರೋಪಿತರು ಜೂಜಾಟಕ್ಕೆ ಉಪಯೋಗಿಸಿದ್ದ 52 ಸ್ಪೇಟ್ ಎಲೆಗಳು ಹಾಗೂ 2160/- ರೂಪಾಯಿಗಳು ನಗದು
ಹಣ ಹಾಗೂ ಒಂದು ಪ್ಲಾಸ್ಟಿಕ್ ಬರ್ಕಾ ಸಿಕ್ಕಿಬಿದಿದ್ದು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment