ತಾವರಗೇರಾ ಪಟ್ಟಣದ
ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟವನ್ನು ಆಡುತ್ತಿದ್ದು, ಆ ಕಾಲಕ್ಕೆ ಪಿ.ಎಸ್.ಐ. ತಾವರಗೇರಾ ಮತ್ತು
ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ. 440-00, ಜಪ್ತ ಮಾಡಿಕೊಂಡಿದ್ದು, ಸಿಕ್ಕಿಬಿದ್ದ
ಒಬ್ಬ ಆರೋಪಿ ಹಾಗೂ ಮಟ್ಕಾ ಪಟ್ಟಿಯನ್ನು ತೆಗೆದುಕೊಳ್ಳುವ ದಶರಥಸಿಂಗ್ ದೇವದುಗರ್ಾ ಸಾ: ತಾವರಗೇರಾ
ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿಯನ್ನು ನೀಡಿದ್ದು ಸದರಿ ಅಪರಾಧವು ಅಸಂಜ್ಞೆಯವಾಗಿದ್ದರಿಂದ
ಮಾನ್ಯ ನ್ಯಾಯಾಲಯದ ಪಾರವಾನಿಗೆಯನ್ನು ಪಡೆದುಕೊಂಡು ಗುನ್ನೆ ದಾಖಲಿಸಿಕೊಂಡು ತಪಾಸಣೆಯನ್ನು ಕೈ ಕೊಂಡಿದ್ದು
ಇರುತ್ತದೆ.
2] ಕಾರಟಗಿ ಪೊಲೀಸ್
ಠಾಣೆ ಗುನ್ನೆ ನಂ: 251/2016
ಕಲಂ: 279, 337 ಐ.ಪಿ.ಸಿ ಮತ್ತು
187 ಐ.ಎಂ.ವಿ. ಕಾಯ್ದೆ:
ಫಿರ್ಯಾದಿದಾರರಾದ ಶ್ರೀ ರವಿಕುಮಾರ ತಂದೆ ಕಿಷ್ಟಪ್ಪ ರವರು ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ, ಈ ದಿವ ದಿನಾಂಕ
: 25-10-2016 ರಂದು ಬೆಳಿಗ್ಗೆ 9-15 ಗಂಟೆಗೆ ನಾನು ಮತ್ತು ನಮ್ಮ ಸಂಬಂಧಿ ಅಣ್ಣ ವಿಜಯಪ್ಪ
ಕೂಡಿಕೊಂಡು ನಮ್ಮೂರಿನ ಶ್ರೀ ವೆಂಟಕೇಶ್ವರ ದೇವಸ್ಥಾನದ ಹತ್ತಿತರ ಮಾತನಾಡುತ್ತಾ ನಿಂತುಕೊಂಡಿದ್ದಾಗ
ನನ್ನ ಕೊನೆಯ ಮಗ ರಘುವೀರ ತನು ತಮ್ಮುರಿನ ಶ್ರೀ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ತಮ್ಮ ಓಣಿಯ
ಕೆಲವು ಹುಡುಗರ ಜೊತೆ ಒಂದು ಟ್ರ್ಯಾಕ್ಟರ್ ಟ್ರಾಲಿಯ ಹತ್ತಿರ ಆಟವಾಡುತ್ತಿದ್ದು ಈ ವೇಳೆಗೆ ಒಬ್ಬ ಟ್ರ್ಯಾಕ್ಟರ್
ಚಾಲಕ ತಾನು ನಿಲ್ಲಿಸಿದ್ದ ಟ್ರ್ಯಾಲಿಯನ್ನು ಇಂಜೀನ್ನಿಗೆ ಜೋಡಿಸಿಕೊಳ್ಳಲು ವಾಹನವನ್ನು ಹಿಂದಕ್ಕೆ
ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಟ್ರ್ಯಾಲಿ ಹತ್ತಿರ ಆಟವಾಡುತ್ತಿದ್ದ ಹುಡುಗರನ್ನು
ಗಮನಿಸದೇ ಟ್ರ್ಯಾಕ್ಟರ್ ಇಂಜೀನ್ ನನ್ನು ರಿವಸ್ಸ್ ಆಗಿ ಜೋರಾಗಿ ತಗೆದುಕೊಂಡು ಹೋಗಿದ್ದರಿಂದ ಅಲ್ಲಿಯೇ
ಆಟವಾಡುತ್ತಿದ್ದ ನನ್ನ ಮಗ ರಘೂವೀರ ಈತನಿಗೆ ಇಂಜೀನಿನ್ನ ದೊಡ್ಡ ಗಾಲಿಗೆ ಟಚ್ ಆಗಿ ಆತನು ಗಾಲಿಯ
ಕೆಳಗೆ ಸಿಕ್ಕಿಹಾಕಿಕೊಂಡಿದ್ದು ಕೂಡಲೇ ನಾನು ಮತ್ತ ನನ್ನ ಅಣ್ಣ ವಿಜಯಪ್ಪ ಗಾಭರಿಯಿಂದ ಓಡಿ ಹೋಗಿ ನನ್ನ
ಮಗನಿಗೆ ಎತ್ತಿಕೊಂಡು ನೋಡಲಾಗಿ ಆತನ ಎಡಗಾಲಿನ ತೊಡೆಯಿಂದ ಪಾದವವರೆಗೆ ತೀವ್ರ ಸ್ವರೂಪದ ಗಾಯವಾಗಿತ್ತು.
ಟ್ರ್ಯಾಕ್ಟರ್ ಚಾಲಕನಿಗೆ ನೋಡಲಾಗಿ ಆತನು ವಾಹನ ಬಿಟ್ಟು ಒಡಿ ಹೋಗಿದ್ದನು. ಟ್ರ್ಯಾಕ್ಟರ್ ಇಂಜೀನ್
ನಂಬರ್ ನೋಡಲಾಗಿ ಅದು ಕೆಎ-37ಟಿಬಿ-0466 ನೇದ್ದು ಇದ್ದಿತು. ನಂತರ ಗಾಯಗೊಂಡ ನನ್ನ ಮಗನನ್ನು ನಾನು
ಮತ್ತು ನನ್ನ ಅಣ್ಣ ವಿಜಯಪ್ಪ ಹಾಗೂ ನಮ್ಮ ಓಣಿಯ ಇತರರು ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ
ಕುರಿತು ಗಂಗಾವತಿಯ ಚಿನವಾಲರ ಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು, ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment