ದಿನಾಂಕ
26-10-2016 ರಂದು ಸಂಜೆ 7-30 ಗಂಟೆಯ ಸುಮಾರಿಗೆ ಜೀರಾಳ ಗ್ರಾಮದ ವಾಲ್ಮೀಕಿ ಸರ್ಕಲ್ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಆರೋಪಿ ಮಹಾಂತೇಶ ತಂದೆ ವಿರುಪಾಕ್ಷಪ್ಪ ಭಾವಿ ಸಾ: ಜೀರಾಳ ಇತನು ಸಾರ್ವಜನಿಕರಿಂದ ಹಣ ಪಡೆದು
ಅವರಿಗೆ ನಸೀಬದ ಓ.ಸಿ. ನಂಬರಗಳನ್ನು ಬರೆದು ಕೊಡುತ್ತಿದ್ದಾಗ ಶ್ರೀ ಬಿ. ತಿಪ್ಪೆಸ್ವಾಮಿ, ಪಿ.ಎಸ್.ಐ.
ಹಾಗೂ ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ದಾಳಿ ಮಾಡಿ ಹಿಡಿದು ಅವನಿಂದ ನಗದು ಹಣ ರೂ.660=00 ಹಾಗೂ
ಅದಕ್ಕೆ ಸಂಬಂದಿಸಿದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮ ಪಂಚನಾಮೆಯನ್ನು ಮಾಡಿ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಕೊಂಡೆನು.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 217/2016
ಕಲಂ: 279, 337, 338 ಐ.ಪಿ.ಸಿ:.
ದಿ:26-10-16 ರಂದು ಸಂಜೆ 7-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತಮ್ಮ ಗ್ರಾಮದ ಮಹಿಬೂಬಪಾಷ ಕಾರ್
ಮೇಸ್ತ್ರಿ ಇವರ ಸ್ಕೂಟಿ ನಂ: ಕೆಎ-37/ಇಬಿ-6665 ನೇದ್ದರ ಹಿಂದೆ ಕುಳಿತುಕೊಂಡು
ಹುಲಿಗಿಗೆ ಅಂತಾ ಹೋಗುವಾಗ ಕೊಪ್ಪಳ-ಹೊಸಪೇಟೆ ಎನ್,ಹೆಚ್-63 ರಸ್ತೆಯ ಆರ್.ಟಿ.ಓ ಕ್ರಾಸ್
ಹತ್ತಿರ ಸದರಿ ಸ್ಕೂಟಿ ಚಾಲಕನು ತನ್ನ ಗಾಡಿಯನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ
ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಹೋಗುವಾಗ ರಸ್ತೆಯ ಬಾಜು ನಡೆದುಕೊಂಡು ಹೊರಟಿದ್ದ
ರಿಹಾನ್ ಖಾನ್ ಸಾ: ಕೊಪ್ಪಳ ಎಂಬುವವರಿಗೆ ಹಿಂದೆ ಹೋಗಿ ಅವರಿಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದು
ಇರುತ್ತದೆ. ಸದರಿ ಅಪಘಾತದಲ್ಲಿ ಸ್ಕೂಟಿ ಚಾಲಕ ಮತ್ತು ಪಾದಚಾರಿ ರಿಹಾನ್ ಖಾನ್ ಇತನಿಗೆ ಭಾರಿ
ರಕ್ತಗಾಯಗಳಾಗಿದ್ದು ಇರುತ್ತದೆ. ಹಿಂಬದಿ ಸವಾರ ಫಿರ್ಯಾದಿಗೆ ಸಾದಾ ಗಾಯಗಳಾಗಿದ್ದು ಇರುತ್ತದೆ.
ಕಾರಣ ಸ್ಕೂಟಿ ನಂ: ಕೆಎ-37/ಇಬಿ-6665 ನೇದ್ದರ ಚಾಲಕನ ಮೇಲೆ ಸೂಕ್ತ
ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ಫಿರ್ಯಾದಿಯ ಮೆಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3] ಮುನಿರಾಬಾದ ಪೊಲೀಸ್
ಠಾಣೆ ಗುನ್ನೆ ನಂ: 173/2016
ಕಲಂ: 447, 379, 307 ಸಹಿತ 34 ಐ.ಪಿ.ಸಿ:.
ಈ ದಿವಸ ದಿನಾಂಕ:
26-10-2016 ರಂದು ಮುಂಜಾನೆ 6-00 ಗಂಟೆ ಸುಮಾರಿಗೆ ಸುಲ್ತಾನಪೂರ ಸೀಮಾದಲ್ಲಿರುವ ಪಿರ್ಯಾದಿದಾರರ
ಹೊಲ ಸವರ್ೆ ನಂ. 14/01, 14/03, 14/04 ರಲ್ಲಿ ಆರೋಪಿತರು ಅತೀ ಕ್ರಮಣ ಪ್ರವೇಶ ಮಾಡಿ 6 ಲಾರಿಗಳನ್ನು
ತೆಗೆದುಕೊಂಡು ಬಂದು ಅಲ್ಲಿರುವಂತಹ ಜಲ್ಲಿ ಕಲ್ಲುಗಳನ್ನು ಮತ್ತು ಪುಡಿಯನ್ನು ಕಳ್ಳತನ ಮಾಡುತ್ತಿದ್ದು,
ಆ ಕಾಲಕ್ಕೆ ಪಿರ್ಯಾದಿದಾರರ ಅಣ್ಣನಾದ ವೆಂಕಟರತ್ನಂ ಮತ್ತು ಕಾಂತ ಇವರು ತಡೆಯಲು ಹೋಗಿದ್ದು, ಆಗ ಆರೋಪಿತರೆಲ್ಲರೂ
ಸೇರಿಕೊಂಡು ವೆಂಕಟರತ್ನಂ ಇವರ ಕುತ್ತಿಗೆ ಹಿಚುಕಿ, ಮರ್ಮಾಂಗವನ್ನು ಹಿಚುಕಿ ಒದ್ದು ಪ್ರಾಣಾಂತಿಕ ಹಲ್ಲೆ
ಮಾಡಿರುತ್ತಾರೆಂದು ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಕೊಂಡಿರುತ್ತದೆ.
0 comments:
Post a Comment