ದಿನಾಂಕ 18-10-2016 ರಂದು ಸಂಜೆ 6-30 ಗಂಟೆಯ ಸುಮಾರಿಗೆ ಆದಾಪೂರ ಗ್ರಾಮದ ಶ್ರೀ ಹುಲಿಗೆಮ್ಮ
ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ಮೋಸ ಮಾಡುವ ಉದ್ದೇಶದಿಂದ ಓ.ಸಿ.ಮಟಕಾ ನಡೆಸಿದ್ದಾರೆ
ಅಂತಾ ಭಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಇಂದು ದಿನಾಂಕ
18-10-2016 ರಂದು ಸಂಜೆ 7-30 ಗಂಟೆಗೆ ಆದಾಪೂರ ಗ್ರಾಮದ ಶ್ರೀ ಹುಲಿಗೆಮ್ಮ ದೇವರ ಗುಡಿಯ ಮುಂದೆ ಸಾರ್ವಜನಿಕ
ಸ್ಥಳದಲ್ಲಿ ಆರೋಪಿತನು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಅವರನ್ನು ಬರ ಮಾಡಿಕೊಂಡು ಅವರಿಗೆ
1 ರೂಪಾಯಿಗೆ 80 ರೂಪಾಯಿ ಬರುತ್ತದೇ ಬನ್ನೀ ಎಂಬ ನಸೀಬದ ಜೂಜಾಟ ಅಂತಾ ಕೂಗುತ್ತಾ ಅವರಿಂದ ಹಣ ಪಡೆದು
ಅವರಿಗೆ ಓ.ಸಿ. ನಂಬರಗಳನ್ನು ಬರೆದು ಕೊಡುತ್ತಾ ಮೋಸ ಮಾಡುತ್ತಿರುವದನ್ನು ಖಾತ್ರಿ ಪಡೆಸಿಕೊಂಡು ಒಮ್ಮೆಲೆ
ಪಂಚರೊಂದಿಗೆ ದಾಳಿ ಮಾಡಲು ಆರೋಪಿತನಿಂದ 01 ಮಟಕಾ ಬರೆದ ಪಟ್ಟಿ, 1 ಬಾಲ್ ಪೆನ್ನು ನಗದು ಹಣ ರೂ.
2650=00 ಸಿಕ್ಕಿದ್ದು, ಮಟಕಾ ಸಾಮಾಗ್ರಿಗಳನ್ನು ಮತ್ತು ನಗದು ಹಣವನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡೆನು.
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 244/2016 ಕಲಂ: 279, 338 ಐ.ಪಿ.ಸಿ:.
ದಿನಾಂಕ:-18-10-2016 ರಂದು ರಾತ್ರಿ 8-25 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀ ಮಾರುತಿ ತಂದಿ
ಲಕ್ಷಮಣ ಹುರಕಡ್ಲಿ ವಯಾ- 23 ವರ್ಷ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ,ನಾನು ಜಿ.ಕೆ.ಸಿ. ಕನ್ಸಟ್ರಕ್ಸನ್ನಿಗೆ
ಸಂಭಂದಿಸಿದಂತೆ ಗಂಗಾವತಿ- ಸಿಂಧನೂರ ಟೋಲ್ ಪ್ರವೇಟ ಲಿಮಿಟೆಡ್ಡಿಗೆ ಸಂಬಂದಿಸಿದ
ರಸ್ತೆಯಲ್ಲಿ ವಾಹನ ಚಾಲಕುರಗಳಿಗೆ ಯಾವುದೇ ರೀತಿಯ ತೊಂದರೆಯಾಗಬಾರದೆಂಬ ಉದ್ದೇಶದಿಂದ
ನಮ್ಮ ಕಂಪನಿಯ ವತಿಯಿಂದ ಲೇಬರುಗಳನ್ನು ಕರೆದುಕೊಂಡು ರಸ್ತೆಯ ಮೇಲೆ ಯಾವುದೇ ಕಸ ಕಡ್ಡಿ ಮಣ್ಣು
ಬಿಳ್ಳದಂತೆ ಸ್ವಚ್ಚಗೊಳಿಸುವ ಸಲುವಾಗಿ ನಮ್ಮೂರಿನ ಹನಮಮ್ಮ @ ಲಕ್ಷ್ಮಮ್ಮ ಗಂಡ ಮಹೇಶಪ್ಪ ಬೋವಿ
ವಯಾ- 33 ವರ್ಷ ಸಾ- ಚಿಕ್ಕಬೆಣಕಲ್ಲ ಹಾಗೂ ಇತರೆ ಲೇಬರುಗಳೊಂದಿಗೆ ಕಾರಟಗಿಗೆ ಬಂದು ಇಂದು ದಿನಾಂಕ
: 18-10-2016 ರಂದು ಮದ್ಯಾಹ್ನ 13-10 ಗಂಟೆಯ ಸುಮಾರಿಗೆ ಕಾರಟಗಿಯಲ್ಲಿ ಗಂಗಾವತಿ – ಸಿಂಧನೂರ
ಹೈವೆ ರಸ್ತೆಯ ಪಕ್ಕದಲ್ಲಿ ಸ್ವಾಮಿ ಝರಾಕ್ಸ ಅಂಗಡಿಯ ಮುಂದೆ ರಸ್ತೆಯ ಬಲಬದಿಯಲ್ಲಿ ಕೆಲಸ ಮಾಡುತ್ತಿದ್ದ
ಹನಮಮ್ಮ @ ಲಕ್ಷ್ಮಮ್ಮ ಇಕೆಯನ್ನು ಗಮನಿಸದೆ ಗಂಗಾವತಿ ಕಡೆಯಿಂದ ಬಂದ ಒಬ್ಬ ಕಾರ್ ಚಾಲಕ ತನ್ನ
ಕಾರನ್ನು ಅತೀ ವೇಗವಾಗಿ, ಅಜಾಗರೂಕತೆಯಿಂದ ಓಡಿಸಿಕೊಂಡು ನಡೆಸಿಕೊಂಡು ಬಂದುಒಮ್ಮೆಲೆ ಟರ್ನ
ಮಾಡಲು ಹೊಗಿ ಹನಮಮ್ಮ ಈಕೆಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ ಹನಮಮ್ಮ ಈಕೆಗೆ ಎಡಗಾಲು ಚಪ್ಪೆಗೆ
ಹಾಗೂ ಬಲಮೊಣಕಾಲು ಹಾಗೂ ಕುತ್ತಿಗೆಯ ಎಡಬಾಗದಲ್ಲಿ ತೀವ್ರ ಹಾಗೂ ಸಾದಾ ಸ್ವರೂಪದ ಗಾಯಗಳಾಗಿರುತ್ತವೆ.
ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment