ಫಿರ್ಯಾಧಿ ಪಂಪಾಪತಿ ಮತ್ತು ನಮ್ಮ ಗ್ರಾಮದ ಸುಮಾರು 19 ಜನರು ಕೂಡಿಕೊಂಡು ಈಗ್ಗೆ ಸುಮಾರು 15
ದಿವಸಗಳ ಹಿಂದೆ ವಿಜಯಪುರ ಹತ್ತಿರ ಬಬಲೇಶ್ವರ ಗ್ರಾಮಕ್ಕೆ ಸೋಲಾರ ಕರೆಂಟ್ ವೈರ ಎಳೆಯುವ ಸಲುವಾಗಿ ಕೂಲಿಕೆಲಸಕ್ಕೆ
ಹೋಗಿದ್ದೇವು, ಅಲ್ಲಿ ನಾವೆಲ್ಲರೂ ಕೂಲಿಕೆಲಸ ಮುಗಿಸಿಕೊಂಡು ವಾಪಸ್ ನಮ್ಮೂರಿಗೆ ದೀಪಾವಳಿ ಹಬ್ಬದ ಸಲುವಾಗಿ
ನಾನು ಮತ್ತು ನನ್ನ ಸಂಗಡ ಕೂಲಿಕೆಲಸಕ್ಕೆ ಬಂದಿದ್ದ ಇನ್ನೂ 19 ಜನರು ಕೂಡಿಕೊಂಡು ನಾವು ತಂದಿದ್ದ ನಮ್ಮೂರ
ಸ್ವರಾಜ ಟ್ರಾಕ್ಟರಿ ನಂ.ಕೆಎ-36/ಟಿಎ-9628, ಟ್ರಾಲಿಗೆ ನಂಬರ ಇರುವದಿಲ್ಲ ಅದರಲ್ಲಿ ನಿನ್ನೆ ದಿನಾಂಕ
29-10-2016 ರಂದು ಮದ್ಯಾಹ್ನ 2-00 ಗಂಟೆಗೆ ಬಬಲೇಶ್ವರ್ ಹಳ್ಳಿಯನ್ನು ಬಿಟ್ಟು ತಾವರಗೇರಾ ಮಾರ್ಗವಾಗಿ
ಸೂಳೇಕಲ್ಗೆ ಕನಕಗಿರಿ-ಗಂಗಾವತಿ ರಸ್ತೆಯ ಮೇಲೆ ಹೋಗುತ್ತಿದ್ದೇವು. ಸದ್ರಿ ಟ್ರಾಕ್ಟರಿಯನ್ನು ನಮ್ಮೂರ
ಬಸವರಾಜ ತಂದೆ ಯಮನಪ್ಪ ಅಡವಿಭಾವಿ ಈತನು ನಡೆಸುತ್ತಿದ್ದು, ನಾವೆಲ್ಲರೂ ಟ್ರಾಲಿಯಲ್ಲಿ ಕುಳಿತುಕೊಂಡಿದ್ದೆವು.
ನಾವು ರಾತ್ರಿ 11-30 ಗಂಟೆಯ ಸುಮಾರಿಗೆ ಕನಕಗಿರಿ ದಾಟಿ ಸೂಳೇಕಲ್ ಸೀಮಾದ ಮರಿಯಪ್ಪ ಹರಿಜನ ರವರ ಹೊಲದ
ತಿರುವಿನಲ್ಲಿ ಹೋಗುತ್ತಿದ್ದಾಗ ಟ್ರಾಕ್ಟರಿಯ ಡಿಜೈಲ್ ಖಾಲಿಯಾಗಿದ್ದರಿಂದ ಚಾಲಕ ಬಸವರಾಜನು ಎಡಗಡೆ
ರಸ್ತೆಯ ಪಕ್ಕದಲ್ಲಿ ಟ್ರಾಕ್ಟರಿಯನ್ನು ನಿಲ್ಲಿಸಿ ಡೀಜೈಲ್ ತರಲು ಸೂಳೇಕಲ್ ಗ್ರಾಮಕ್ಕೆ ಹೋದನು. ಸ್ವಲ್ಪ
ಹೊತ್ತಿನಲ್ಲಿ ಅಂದಾಜ ರಾತ್ರಿ 11-45 ಗಂಟೆಯ ಸುಮಾರಿಗೆ ಕನಕಗಿರಿ ಕಡೆಯಿಂದ ಒಂದು ಶಿವುಕುಮಾರ ಈತನು
ಹೊಸಪೇಟ್ ಡೀಫೋದ ಹೊಸ ಬಸ್ (ನಂಬರ ಬಂದಿರುವದಿಲ್ಲ) ನೇದ್ದನ್ನು ಅತೀವೇಗವಾಗಿ ಹಾಗೂ ಅಲಕ್ಷತನದಿಂದ
ನಡೆಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ನಿಂತಿದ್ದ ನಮ್ಮ ಟ್ರಾಕ್ಟರಿಯ ಟ್ರಾಲಿಗೆ ಜೋರಾಗಿ ಹಿಂದಿನಿಂದ
ಟಕ್ಕರ್ ಕೊಟ್ಟನು. ಇದರಿಂದ ನನಗೆ ಎಡಗೈ ರಟ್ಟೆಗೆ, ಎಡಗಾಲ ಮೊಣಕಾಲಿಗೆ ಒಳ ಪೆಟ್ಟಾಗಿದ್ದು, ದೊಡ್ಡನಗೌಡನಿಗೆ
ತಲೆಗೆ ಭಾರಿ ಪೆಟ್ಟಾಗಿ ರಕ್ತ ಬಂದಿದ್ದು, ಎಡಗಾಲಿಗೆ, ಎದೆಗೆ ಒಳ ಪೆಟ್ಟಾಗಿರುತ್ತದೆ. ಸೋಮರಾಜನಿಗೆ
ತಲೆಗೆ ಭಾರಿ ಪೆಟ್ಟಾಗಿ ರಕ್ತ ಗಾಯ, ಬಲಗಾಲ ಪಾದದ ಹತ್ತಿರ ರಕ್ತ ಗಾಯ ಹಾಗೂ ಉಳಿದ 10 ಜನರಿಗೆ ಸಾಧಾ
ಹಾಗೂ ಭಾರಿ ಸ್ವರೂಪದ ಗಾಯವಾಗಿರುತ್ತದೆ, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2] ಅಳವಂಡಿ ಪೊಲೀಸ್ ಠಾಣೆ
ಗುನ್ನೆ ನಂ: 101/2016
ಕಲಂ: 143, 147, 323, 324,
504, 506 ಸಹಿತ 149 ಐ.ಪಿ.ಸಿ:
ಫಿರ್ಯಾದಿ ಮತ್ತು ಆತನ ಅಣ್ಣನ ಮಗನಾದ ಕರಿಯಪ್ಪ ಬಳ್ಳಾರಿ ಇಬ್ಬರೂ ಸೇರಿ ಕವಲೂರು ಸೀಮಾದಲ್ಲಿ
ಬರುವ ತಮ್ಮ ಜಮೀನಿಗೆ ನೀರು ಬಿಡಲು ಕಾಲುವೆಗೆ ಪೈಪ್ ಹಾಕಲು ಹೋದಾಗ ಕರಿಯಪ್ಪನು ಬೈಕ್
ತಗೆದುಕೊಂಡು ಆರೋಪಿ ಭರಮಪ್ಪನು ಸಹ ಹಾಕಿದ್ದ ಪೈಪ್ ಮೇಲೆ ಹೋಗಿದ್ದರಿಂದ ಕರಿಯಪ್ಪನೊಂದಿಗೆ ಜಗಳ
ಮಾಡಿದ್ದರಿಂದ ಬುದ್ದಿವಾದ ಹೇಳಿ ಕಳುಹಿಸಿದಾಗ ಸಂಜೆ 6:30 ಘಂಟೆಯ ಸುಮಾರಿಗೆ ಆರೋಪಿ ಭರಮಪ್ಪ
ಹಾಗೂ ಇತರೆ 4 ಜನರು ಆಕ್ರಮ ಕೂಟ ರಚಿಸಿಕೊಂಡು ಬಂದು ಫಿರ್ಯಾದಿಗೆ ಮತ್ತು ಆತನ ಅಣ್ಣನ ಮಗನಿಗೆ
ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಮತ್ತು ಕಟ್ಟಿಗೆಯಿಂದ ಹೊಡೆಬಡೆ ಮಾಡಿ ಗಾಯಗೊಳಿಸಿ ನಂತರ
ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಆಗ ಅಲ್ಲಿಯೇ ಇದ್ದ ಸುರೇಶ ಎಂಬುವರು ಜಗಳ
ಬಿಡಿಸಿರುತ್ತಾರೆ. ನಂತರ ಮನೆಗೆ ಬಂದು ಮನೆಯಲ್ಲಿ ಚೆರ್ಚಿಸಿ ಗಾಯಗೊಂಡ ಇಬ್ಬರೂ ಯಾವುದೋ ಒಂದು
ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು
ಈ ದಿವಸ ತಡವಾಗಿ ಈ ನುಡಿ ಹೇಳಿಕೆ ದೂರನ್ನು ಸಲ್ಲಿಸಿದ್ದು ಇರುತ್ತದೆ.
0 comments:
Post a Comment