ದಿನಾಂಕ: 28-10-2016 ರಂದು ರಾತ್ರಿ ತಾವರಗೇರಾ
ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟವನ್ನು ಆಡುತ್ತಿದ್ದಾಗ ಪಿ.ಎಸ್.ಐ. ತಾವರಗೇರಾ ಹಾಗೂ
ಸಿಬ್ಬಂದಿಯವರು ದಾಳಿ ಮಾಡಿ ಆರೋಪಿ ತಳುಜಣ್ಣ @ ತಳುಜಪ್ಪ ತಂದೆ ದೊಡ್ಡಾಸಾ ಮಿಸ್ಕಿನ್ ವಯ: 40 ವರ್ಷ
ಸಾ: ಟೆಂಗುಂಟಿ ಹಿಡಿದಿದ್ದು ಹಾಗೂ ಜೂಜಾಟದ ಒಟ್ಟು
ನಗದು ಹಣ ರೂ. 1130-00, ಜಪ್ತ ಮಾಡಿಕೊಂಡಿದ್ದು, ಹಾಗೂ ಮಟ್ಕಾ ಪಟ್ಟಿಯನ್ನು ತೆಗೆದುಕೊಳ್ಳುವ ಜಾಲಿಹಾಳ
ಸಾಹೇಬ ಇವರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೊಂಡಿದ್ದು ಇರುತ್ತದೆ.
2] ಮುನಿರಾಬಾದ್ ಪೊಲೀಸ್
ಠಾಣೆ ಗುನ್ನೆ ನಂ: 174/2016
ಕಲಂ: 279, 304(ಎ) ಐ.ಪಿ.ಸಿ. ಹಾಗೂ 187 ಐ.ಎಂ.ವಿ. ಕಾಯ್ದೆ.
ದಿನಾಂಕ 28-10-2016 ರಂದು 11-30 ಪಿ.ಎಂ.ಕ್ಕೆ ಪಿರ್ಯಾದು ಲಕ್ಷ್ಮಪ್ಪ ತಂದೆ ಹನಮಂತಪ್ಪ ಮ್ಯಾಗಳಮನಿ
ಸಾ: ಅಗಳಕೇರಿ ಇವರು ಠಾಣೆಗೆ ಹಾಜರಾಗಿ ನೀಡಿದ
ಹೇಳಿಕೆ ಪಿರ್ಯಾದಿ ಸಾರಾಂಶವೆನೆಂದರೆ, ಮೃತ ರಾಮಪ್ಪ
ತಂದೆ ಶಂಕ್ರಪ್ಪ ಮ್ಯಾಗಳಮನಿ ವಯ: 24 ವರ್ಷ ಜಾ: ಕುರುಬರ ಉ: ಕಿರ್ಲೋಸ್ಕರ ಕಂಪನಿಯಲ್ಲಿ ಲೇಬರ ಸಾ:
ಅಗಳಕೇರಿ ಇತನು ಪಿರ್ಯಾದಿದಾರರ ಅಣ್ಣನ ಮಗನಿರುತ್ತಾನೆ, ಸದರಿ ಮೃತ ರಾಮಪ್ಪನು ಕಿರ್ಲೋಸ್ಕರ ಕಂಪನಿಯಿಂದ
ಕೆಲಸ ಮುಗಿಸಿಕೊಂಡು ಆರ್.ಟಿ.ಓ. ಪಾಯಿಂಟ ಮುಖಾಂತರ ಅಗಳಕೇರಿ-ಕೆರಳ್ಳಿ ರಸ್ತೆಯಲ್ಲಿ ಕರ್ನಾಟಕ ಕೋಳಿ
ಫಾರಂ ಹತ್ತಿರ ದಿನಾಂಕ: 28-10-2016 ರಂದು ರಾತ್ರಿ 8-30 ಗಂಟೆಯಿಂದ 8-45 ಗಂಟೆ ಅವಧಿಯಲ್ಲಿ ಯಾವುದೋ
ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅಗಳಕೇರಿ ಕಡೆಯಿಂದ ಕೆರಳ್ಳಿ ಕಡೆಗೆ ಅತೀ ವೇಗ ಹಾಗೂ ಅಲಕ್ಷತನದಿಂದ
ಓಡಿಸಿಕೊಂಡು ಹೋಗಿ ಬಜಾಜ ಡಿಸ್ಕವರಿ ಮೋಟರ ಸೈಕಲ ನಂ. ಕೆಎ-36/ಇಬಿ-9465 ನೇದ್ದರಲ್ಲಿ ಅಗಳಕೇರಿ ಕಡೆಗೆ
ಬರುತ್ತಿದ್ದ ಮೃತ ರಾಮಪ್ಪನಿಗೆ ಡಿಕ್ಕಿ ಕೊಟ್ಟು ಅಪಘಾತ ಪಡಿಸಿ ಲಾರಿ ಸಮೇತವಾಗಿ ಓಡಿ ಹೋಗಿರುತ್ತಾನೆ.
ರಾಮಪ್ಪನಿಗೆ ತೆಲೆಗೆ, ಹಣೆಗೆ ಭಾರಿ ಸ್ವರೂಪದ ರಕ್ತಗಾಯಗಳಾಗಿ, ಬಲಗೈ ಮುರಿದು, ಬಲಗಾಲ ಮೊಣಕಾಲಿಗೆ
ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ನೀಡಿದ ಫಿರ್ಯಾಧಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕಾರಟಗಿ ಪೊಲೀಸ್
ಠಾಣೆ ಗುನ್ನೆ ನಂ: 256/2016
ಕಲಂ: 143, 147,448, 341, 323, 354, 504, 506 R/w 149 IPC.
ದಿನಾಂಕ : 28-10-20116 ರಂದು ರಾತ್ರಿ 10-45 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀಮತಿ
ಗಂಗಮಾಳಮ್ಮ ತಂದೆ
ಭೀಮಪ್ಪ ಮತ್ತೂರ ವಯಾ- 50 ವರ್ಷ ಜಾ- ಚಲವಾದಿ ಸಾ- ಸಿದ್ದಾಪೂರ ತಾ- ಗಂಗಾವತಿ.
ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ,
ದಿನಾಂಕ : 27-10-2016 ರಂದು ರಾತ್ರಿ
9-00 ಗಂಟೆಯ ಸಮಯದ ಸುಮಾರಿಗೆ ತಿಮ್ಮಣ್ಣ ತಾಯಿ ಕೆಂಚಮ್ಮ 2)
ಹನಮಪ್ಪ ತಾಯಿ ಕೆಂಚಮ್ಮ 3) ಸ್ವಾರೇಮ್ಮ
ತಾಯಿ ಕೆಂಚಮ್ಮ 4) ಹುಚ್ಚಮ್ಮ ತಾಯಿ ಹುಲಿಗೇಮ್ಮ 5) ಪರಸಪ್ಪ ತಾವರಗೇರಿ 6) ಬಸವರಾಜ ಬಳಿಗೇರ 7) ಬಸವರಾಜ ರಾಜೂರ 8) ಲಚಮಪ್ಪ ವಣಗೇರಿ ಸಾ-
ಎಲ್ಲರೂ ಸಿದ್ದಾಪೂರ ತಾ- ಗಂಗಾವತಿ
ಇವರುಗಳು ನಮ್ಮ ಮನೆಗೆ ಬಂದು ನನ್ನ ಮಗನನ್ನು ಕೇಳಿದರು ಆಗ ನನ್ನ ಮಗನು ಹಾಗೂ ನಾನು ನನ್ನ ಹೆಣ್ಣು ಮಕ್ಕಳು ಊಟ ಮಾಡುತ್ತಿದ್ದೇವು. ಅವರುಗಳು ಏಕಾಏಕಿ ಮನೆಯೊಳಗೆ ನುಗ್ಗಿ ನನ್ನ ಮಗಳನ್ನು ಬಡಿದು ಆಗ ನಾನು ನನ್ನ ಮಗಳು ಅಂದರೆ ಸುಮಿತ್ರಾ
ಬಿಡಿಸಲು ಹೊದೇವು. ಅವರುಗಳು ನನ್ನ ಮತ್ತು ನನ್ನ
ಮಗಳನ್ನು ಬಡಿದರು. ಮತ್ತು ಮೈಮೇಲಿನ ಬಟ್ಟೆಗಳನ್ನು ಹರಿದು ಅವಾಚ್ಯ ಶಬ್ದಗಳಿಂದ ಬೈಯ್ಯುವದು ನನ್ನ ಮಗನನ್ನು
ಕೊಲೆ ಮಾಡುತ್ತೇನೆಂದು ಹೇಳಿದರು. ಅವರುಗಳಿಂದ ನನಗೆ
ಜೀವ ಬೆದರಿಕೆ ಇರುತ್ತದೆ. ಆಗ ನಾವು ಕಂಪ್ಲೆಂಟ್
ಕೊಡಲು ಸ್ಷೇಷನ್ನಿಗೆ ಬರುತ್ತಿದ್ದೇವು. ಆಗ ಸಮಾಜದ ಹಿರಿಯರು ಗಂಗಪ್ಪ,
ಕೆಂಚಪ್ಪ, ಮೈಲಪ್ಪ, ಮರಿಯಪ್ಪ, ಹಾಗೂ ಪರಸಪ್ಪ ಇತರರು ಬೆಳಗಿನ ಜಾವಾ ರಾಜಿ ಮಾಡುವದಾಗಿ
ಹೇಳಿದರು. ಅದಕ್ಕೆ ಪೀರ್ಯಾದಿ ಕೊಡಲು
ವಿಳಂಬವಾಗಿದ್ದು ಆದಕಾರಣ ಅವರುಗಳ ವಿರುದ್ದ ಕಠಿಣ ಕ್ರಮ ಜರುಗಿಸಿ ನನಗೆ ರಕ್ಷಣೆ ಕೊಡಬೇಕೆಂದು ತಮ್ಮಲ್ಲಿ
ವಿನಂತಿ ಅಂತಾ ಮುಂತಾಗಿ ಫಿರ್ಯಾಧಿ ಕೊಟ್ಟ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ
ಕೈಗೊಂಡಿದ್ದು ಇರುತ್ತದೆ.
0 comments:
Post a Comment