Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, October 24, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 304/2016 ಕಲಂ: 87 Karnataka Police Act.
ದಿನಾಂಕ:- 23-10-2016 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಆರಾಳ ಸೀಮಾದಲ್ಲಿ ಮೇನ ಕೆನಾಲ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಾಹರ್ ಎಂಬ ಅದೃಷ್ಟದ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಬಂದ ಮೇರೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ.  ಮತ್ತು  ಸಿಬ್ಬಂದಿಯವರಾದ ಸಿ.ಹೆಚ್.ಸಿ. 32, ಸಿಪಿಸಿ- 363, 180, 429, 277, 118 ಎ.ಪಿ.ಸಿ. 77 ಇವರನ್ನು ಮತ್ತು ಇಬ್ಬರು ಪಂಚರನ್ನು ಕರೆದುಕೊಂಡು ಹೋಗಿ ನಮಗೆ ಮಾಹಿತಿ ಇದ್ದ ಒಳದಾರಿಯಿಂದ ಮೇನ್ ಕೆನಾಲ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಕೆನಾಲ ಮುಂದೆ ಒಂದು ಬೇನಿವ ಗಿಡದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 10 ಜನರು ಸಿಕ್ಕಿಬಿದ್ದಿದ್ದು. ವಿಚಾರಿಸಲು ಅವರು ತಮ್ಮ ಹೆಸರುಗಳು  ಮಲ್ಲಿಕಾರ್ಜುನ ತಂ/ ವಿರುಪಾಕ್ಷಿ ಹಾಗೂ ಇತರೆ 09 ಜನರು ಸಿಕ್ಕಿದ್ದು, ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 5,850-00 ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಚೀಲ ಸಿಕ್ಕಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 214/2016 ಕಲಂ: 87 Karnataka Police Act.
ಇಂದು ದಿ:23.10.2016 ರಂದು 5-10 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಬಸಾಪೂರ ಗ್ರಾಮದ ಬಸ್ಟ್ಯಾಂಡ್ ಹಿಂಭಾಗದ ಹಾಗೂ ಕುಟುಗನಹಳ್ಳಿ ರಸ್ತೆಯ ಸಮೀಪದ ಸಾರ್ವಜನಿಕ ಸ್ಥಳದಲ್ಲಿ 17 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಮಾನ್ಯ ಸಿಪಿಐ ಕೊಪ್ಪಳ ಗ್ರಾಮೀಣ ವೃತ್ತರವರ ನೇತೃತ್ವದಲ್ಲಿ ಪಿ.ಎಸ್,ಐ ರವರು ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ 4630=00 ರೂ, ಮತ್ತು 52 ಇಸ್ಪೇಟ್ ಎಲೆಗಳನ್ನು ಹಾಗೂ ಒಂದು ಹಾಳೆಯ ಚೀಲ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು 08 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ. 09 ಜನ ಆರೋಪಿತರ ಓಡಿ ಹೋಗಿದ್ದು ಇರುತ್ತದೆ. ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 271/2016 ಕಲಂ: 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ: 23-10-2016 ರಂದು ಮುಂಜಾನೆ 07-30  ಗಂಟೆಗೆ  ಹನುಮಗೌಡ ತಂದೆ ಬಾಪುಗೌಡ ಗೌಡ್ರು ಸಾ: ಬಿಸನಾಳ ರವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸದರಿ ಪಿರ್ಯಾದಿಯ ಸಾರಾಂಶವೆನೆಂದರೆ, ನಿನ್ನೆ ದಿನಾಂಕ:22-10-2016 ರಂದು ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ಮಾಸಕಟ್ಟಿ ಗ್ರಾಮದ ಭೀಮಪ್ಪ ತಂದೆ ಹನುಮಪ್ಪ ವಾಲಿಕಾರ ಸಾ:ಮಾಸಕಟ್ಟಿ ರವರ ಸೋನಾಲಿಕಾ ಕಂಪನಿಯ ಟ್ರ್ಯಾಕ್ಟರನ್ನು ಅದರ ಚಾಲಕ ಸಿಂಗಪ್ಪ ತಂದೆ ಭೀಮಪ್ಪ ವಾಲಿಕಾರ ಸಾ: ಮಾಸಕಟ್ಟಿ  ಈತನು ಬಿಸನಾಳ ಸೀಮಾದಲ್ಲಿರುವ ನಮ್ಮ ಹೊಲ ಸರ್ವೇ ನಂ.10 ರಲ್ಲಿ 2 ಎಕರೆ ಜಮೀನು ರೂಟರ್ ಹೊಡಿಸಲು ಹೇಳಿದ್ದು. ಸದರಿ ಟ್ರ್ಯಾಕ್ಟರ ಚಾಲಕನು ಹೊಲಕ್ಕೆ ಬಂದು ಸಂಗಡ ನನ್ನ ಮಗನಾದ ಪ್ರವೀಣಗೌಡನನ್ನು ಸಹ ಟ್ರ್ಯಾಕ್ಟರ ಜೊತೆಗೆ ಕರೆದುಕೊಂಡು ಬಂದು ಹೊಲದಲ್ಲಿ ರೂಟರನ್ನು ಹೊಡೆಯುತ್ತಿದ್ದನು. ಸಂಜೆ-05-30 ಗಂಟೆಯ ಸುಮಾರಿಗೆ ಭೂಮಿಯು ಹಸಿ ಇದೆ ಹಾಗೂ ಕಸ, ಕಲ್ಲು ಇವೆ ಅದನ್ನು ನೀನು ತೆಗೆ ಅಂತಾ ಸಿಂಗಪ್ಪ ಈತನು ಹೇಳಿದ್ದರಿಂದ ನನ್ನ ಮಗನಾದ ಪ್ರವೀಣಗೌಡ ಈತನು ಕಸ ತೆಗೆಯುತ್ತಿದ್ದಾಗ ಸದರಿ ಟ್ರಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಎಡಗಡೆಯ ರೂಟರದಿಂದ ಪ್ರವೀಣಗೌಡನಿಗೆ ಟಕ್ಕರಕೊಟ್ಟಿದ್ದರಿಂದ ಸದರಿ ರೂಟರ ಕೆಳಗೆ ಬಿದ್ದು ರೂಟರದಲ್ಲಿ ಸಿಕ್ಕಿಹಾಕಿಕೊಂಡಿದ್ದು, ಸದರಿ ಅಪಘಾತದಲ್ಲಿ ನನ್ನ ಮಗನಿಗೆ ತಲೆಯ ಭಾಗ, ಮುಖ ಬಾರಿ ರಕ್ತಗಾಯವಾಗಿ ಅಪ್ಪಚ್ಚಿಯಾಗಿರುತ್ತದೆ. ಬಲಗಾಲು ಪಾದದ ಹತ್ತಿರ ಮುರಿದಂತಾಗಿ ಚರ್ಮ ಕಿತ್ತಿದ್ದು, ಎಡಗಾಲು ಮೊಣಕಾಲು ಕೆಳಗೆ ರಕ್ತಗಾಯವಾಗಿದ್ದು ಸ್ವಲ್ಪ ಹೊತ್ತಿನ ನಂತರ ಅಂದರೆ ಸಂಜೆ  05-45 ಗಂಟೆಯ ಸುಮಾರಿಗೆ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  


0 comments:

 
Will Smith Visitors
Since 01/02/2008