ಶ್ರೀ ಶಂಕರಪ್ಪ ನಾಯ್ಕ್ ಪಿ.ಎಸ್.ಐ. ರವರಿಗೆ ದಿನಾಂಕ:
21-10-2016 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ಬಸರಳ್ಳಿ ಗ್ರಾಮದ ಶ್ರೀ ಕನಕದಾಸ ಸರ್ಕಲ್ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಬಂದ ಮಾಹಿತಿ ಮೇರೆಗೆ ಹೋಗಿ ದಾಳಿ ಮಾಡಿದ್ದು
ಅಲ್ಲಿ ಜೂಜಾಟದಲ್ಲಿ ನಿರತನಾಗಿದ್ದ ಸಿದ್ದಪ್ಪ ತಂದೆ ಯಲ್ಲಪ್ಪ ಬನ್ನಿಕೊಪ್ಪ ಸಾ: ಬಿಸರಳ್ಳಿ ಸಿಕ್ಕಿದ್ದು
ಇತನಿಂದ ಮಟಕಾ ಜೂಜಾಟದ ಸಾಮಗ್ರಿಗಳನ್ನು ಹಾಗೂ ನಗದು ಹಣ 550=00 ರೂ.ಗಳನ್ನು ಜಪ್ತ ಮಾಡಿಕೊಂಡಿದ್ದು,
ಹಾಗೂ ಆರೋಪಿತನು ತಾನು ಮಟಕಾ ನಂಬರ ಬರೆದ ಪಟ್ಟಿಯನ್ನು ರಾಮಣ್ಣ ಗುಡಿ ಸಾ: ಕವಲೂರು ಈತನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಈ ಬಗ್ಗೆ
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:
302/2016 ಕಲಂ: 78 (3) Karnataka Police Act.
ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಗಂಗಾವತಿ
ಗ್ರಾಮೀಣ ಠಾಣೆ ರವರಿಗೆ ಶ್ರೀರಾಮನಗರ ಗ್ರಾಮದ ಸರಸ್ವತಿ ಲಾಡ್ಜ ಮುಂದೆ ಸಾರ್ವಜನಿಕ ಸ್ಥಳದಲ್ಲಿ
ಜನರಿಗೆ ಮೋಸ ಮಾಡವ ಉದ್ದೇಶದಿಂದ ಮಟಕಾ ಜೂಜಾಟ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ
ಬಂದ ಮೇರೆಗೆ ದಾಳಿ ಮಾಡಲಾಗಿ ಆರೋಪಿ ಮೌಲಾಸಾಬ ತಂದೆ ಇಮಾಮಸಾಬ ಮುಲ್ಲಾ, ವಯಸ್ಸು 35 ವರ್ಷ,
ಜಾತಿ: ಮುಸ್ಲೀಂ ಉ: ಪಂಚರ್ ಶಾಪ್ ಸಾ: ಕುಂಟೋಜಿ ತಾ. ಗಂಗಾವತಿ. ಅಂತಾ ತಿಳಿಸಿದ್ದು, ಅವನ
ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 1,650/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ ಪೆನ್ನು
ಮತ್ತು ಒಂದು ನೋಕಿಯ ಮೊಬೈಲ್ ದೊರೆತಿರುತ್ತದೆ. ಈ ಬಗ್ಗೆ ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕುಷ್ಠಗಿ ಪೊಲೀಸ್
ಠಾಣೆ ಗುನ್ನೆ ನಂ: 270/2016
ಕಲಂ: 87 Karnataka Police
Act.
ಶ್ರೀ ರಾಮಪ್ಪ ಜಲಗೇರಿ ಪಿ.ಎಸ್.ಐ ಕುಷ್ಠಗಿ ಠಾಣೆ ರವರಿಗೆ
ಕ್ಯಾದಗುಪ್ಪಾ ಸೀಮಾದಲ್ಲಿಯ ರಾಘವೇಂದ್ರ ದೇಸಾಯಿ ರವರ ಹೊಲದಲ್ಲಿರುವ ಟಾವರ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಅಂದರ ಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು
ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿದಾಗ 05 ಜನ ಆರೋಪಿತರು ಸಿಕ್ಕಿದ್ದು ಇರುತ್ತದೆ. ಸಿಕ್ಕ
ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ಹಣ 4500=00 ರೂ, 52 ಇಸ್ಪೆಟ್ ಎಲೆಗಳು, ಹಾಗೂ ಒಂದು
ಹಳೆಯ ನ್ಯೂಸ್ ಪೇಪರ ಇವುಗಳನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ
ತೆಗೆದುಕೊಂಡು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment