Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, November 3, 2016

1] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 122/2016 ಕಲಂ: 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ: 01-11-2016 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಫಿರ್ಯಾದಿ ಶ್ರೀ ಕನಕಪ್ಪ ತಂದೆ ಹನುಮಂತಪ್ಪ ಹುಣಸಿಹಾಳ  ತಮ್ಮ ಯಮನೂರ ವಯ: 25 ವರ್ಷ ಈತನು ಕೂಲಿ ಕೆಲಸ ಮುಗಿಸಿಕೊಂಡು ತಮ್ಮ ಮಾಲೀಕರ ನಂಬರ್ ಇಲ್ಲದ ಹಿರೋ ಸ್ಲೆಂಡರ್ ಮೋಟಾರು ಸೈಕಲ್ ತೆಗೆದುಕೊಂಡು ವಿರುಪಾಪುರಕ್ಕೆ ಹೋಗುತ್ತಿರುವಾಗ ವಿರುಪಾಪುರ ಕ್ರಾಸ್ ದಾಟಿ ವಿರುಪಾಪುರ ಕಡೆ ಸ್ವಲ್ಪ ದೂರದಲ್ಲಿ ಹೋಗುತ್ತಿರುವಾಗ ವಿರುಪಾಪುರ ಕಡೆಯಿಂದ ಯಾವುದೋ ಒಂದು ದ್ವಿಚಕ್ರ ವಾಹನ ಚಾಲಕನು ತನ್ನ ಮೋಟಾರೂ ಸೈಕಲ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಫಿಯರ್ಾದಿದಾರರ ತಮ್ಮ ಯಮನೂರನ ಮೋಟಾರು ಸೈಕಲ್ಗೆ ಎದುರುಗಡೆಯಿಂದ ಡಿಕ್ಕಿ ಹೊಡೆದು ಆತನನ್ನು ಕಡೆವಿ ಮೋಟಾರು ಸೈಕಲ್ ನಿಲ್ಲಿಸದೇ ಹಾಗಯೇ ಓಡಿಸಿಕೊಂಡು ಹೋಗಿದ್ದು, ಇದರಿಂದ ಫಿರ್ಯಾದಿದಾರರ ತಮ್ಮ ಯಮನೂರನಿಗೆ ಹಣೆಗೆ, ಮೂಗಿನ ಹತ್ತಿರ. ಎಡಗೈ ಮುಂಗೈ ಹತ್ತಿರ, ಬಲಗಾಲ ಪಾದದ ಹತ್ತಿರ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು, ನಂತರ ಗಾಯಾಳುವನ್ನು 108 ಅಂಬ್ಯುಲೆನ್ಸ್ ವಾಹನದಲ್ಲಿ ಇಲಾಜು ಕುರಿತು ತಾವರಗೇರಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದ್ದು, ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದ್ದು ಇರುತ್ತದೆ. 
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 186/2016 ಕಲಂ: 419, 420, 504 ಸಹಿತ 34 ಐ.ಪಿ.ಸಿ:.

ಆರೋಪಿತರು ತಮ್ಮ ಹೆಸರಿನಲ್ಲಿರುವ ಯಲಬುರ್ಗಾ ತಾಲೂಕಿನ ಕುದರಿಮೋತಿ ಸೀಮಾದ ಜಮೀನು ಸರ್ವೆ ನಂ: 273/1 ಕ್ಷೇತ್ರ 04 ಎಕರೆ 127 ಗುಂಟೆ ಹಾಗೂ 273/4 ಕ್ಷೇತ್ರ 04 ಎಕರೆ 29 ಗುಂಟೆ ಜಮೀನನ್ನು ಮಾರಾಟ ಮಾಡುತ್ತೇವೆ ಅಂತಾ ಫಿರ್ಯಾದಿದಾರರಿಗೆ ನಂಬಿಸಿ ಅವರಿಂದ ಹಂತಹಂತವಾಗಿ ದಿನಾಂಕ: 22.07.2013 ರಿಂದ 24.08.2014 ರ ವರೆಗೆ 9,01,000=00 ರೂಪಾಯಿಗಳನ್ನು ಪಡೆದುಕೊಂಡು ಸದರಿ ಜಮೀನನ್ನು ಆರೋಪಿತರು  ಫಿರ್ಯಾದಿದಾರರ ಹೆಸರಿಗೆ ವರ್ಗಾವಣೆ ಮಾಡಿಕೊಡದೇ ಮತ್ತು ಹಣವನ್ನು ಸಹ ವಾಪಾಸ ಕೊಡದೇ ಮೋಸ ಮಾಡಿರುತ್ತಾರೆ ಅಂತಾ ಮುಂತಾಗಿದ್ದ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008