Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, November 29, 2016

1] ಯಲಬರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 123/2016 ಕಲಂ: 302 ಐ.ಪಿ.ಸಿ ಮತ್ತು 3 (2)(5) ಎಸ್.ಸಿ/ಎಸ್.ಟಿ. ಕಾಯ್ದೆ:
ಆರೋಪಿತನಾದ ಗುರುಬಸಪ್ಪ ಕಂಬಳಿ ಸಾ:ಎಮ್. ಗುಡದೂರ ಈತನು ಮೃತಳಾದ ನೀಲವ್ವ ಚಲುವಾದಿ ಸಾ:ಮುದೋಳ ಇವಳೊಂದಿಗೆ ಅನೈತಿಕ ಸಂಬಂಧವನ್ನಿಟ್ಟುಕೊಂಡು, ದಿನಾಂಕ. 27-11-2016 ರಂದು ಸಾಯಾಂಕಾಲ 05-30 ಗಂಟೆ ಸುಮಾರಿಗೆ ಫಿರ್ಯಾದಿದಾರರ ಹೊಲಕ್ಕೆ ಕರೆದುಕೊಂಡು ಬಂದು ನಂತರ ಫಿರ್ಯಾದಿದಾರರಿಗೆ ಮೃತಳನ್ನು ಪರಿಚಯಿಸಿ ನಾವು ರಾತ್ರಿ ಇಲ್ಲಿಯೇ ಮಲಗಿಕೊಳ್ಳುತ್ತೇವೆ ಬುತ್ತಿ ತೆಗೆದುಕಕೊಂಡು ಬರುವಂತೆ ತಿಳಿಸಿ, ನಂತರ ಫಿರ್ಯಾದಿದಾರರು ಬುತ್ತಿಯನ್ನು ತೆಗೆದುಕೊಂಡು ಬರುವಷ್ಟರಲ್ಲಿ ರಾತ್ರಿ 07-00 ಗಂಟೆಯಿಂದ ರಾತ್ರಿ 09-30 ಅವದಿಯೊಳಗೆ ಮೃತಳು ಪರಿಶಿಷ್ಟ ಜಾತಿಯವಳು ಅಂತಾ ಗೋತ್ತಿದ್ದರೂ ಕೂಡಾ ಯಾವುದೋ ದುರುದ್ದೇಶದಿಂದ ಅವಳೊಂದಿಗೆ ಜಗಳ ಮಾಡಿಕೊಂಡು ಅವಳ ಮುಖಕ್ಕೆ ಹಾಗೂ ತಲೆಗೆ ಕಲ್ಲಿನಿಂದ ಜಜ್ಜಿ ಭಾರಿ ಗಾಯಗೊಳಿಸಿ ಕೊಲೆ ಮಾಡಿ ಓಡಿ ಹೋಗಿರುತ್ತಾನೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 237/2016 ಕಲಂ: 504, 307, 506 ಸಹಿತ 34 ಐ.ಪಿ.ಸಿ ಮತ್ತು 3(1)(10) ಹಾಗೂ 3(2)(5) ಎಸ್.ಸಿ/ಎಸ್.ಟಿ. ಕಾಯ್ದೆ:
ಫಿರ್ಯಾದಿದಾರರು ತಮ್ಮ ಗಳೇವು ಸಾಮಾನುಗಳನ್ನು ದದೇಗಲ್ ಗ್ರಾಮದ ತಮ್ಮ ಮನೆಯ ಸಮೀಪದ ಆರೋಪಿತರ ಸಂಬಂಧಿ ಮಲ್ಲಮ್ಮ ಇವರ ಮನೆಯ ಹತ್ತಿರ ಇಟ್ಟಿದ್ದು ಸದರಿ ಗಳೇವು ಸಾಮಾನುಗಳನ್ನು ಫಿರ್ಯಾದಿದಾರರು ತೆಗೆದುಕೊಳ್ಳದೇ ಇದ್ದುದರಿಂದ ಫಿರ್ಯಾದಿಗೆ ನಿಮ್ಮ ದೌರ್ಜನ್ಯದಿಂದಾ ಅಲ್ಲಿಯೇ ಬಿಟ್ಟಿದ್ದಿರೆಂದು ಮತ್ತು ನಿನ್ನೆ ಸಂಜೆ 7-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ಕೊಪ್ಪಳದ ಲೇಬರ ಕ್ರಾಸ್ ಹತ್ತಿರ ಕೋಳೂರ ಗೌಡ ಇದ್ದಾಗ ಅಲ್ಲಿಯೇ ಇದ್ದ ಆರೋಪಿ ಹನುಮಂತಪ್ಪನು ತನಗೆ ಸೂಳೇಮಕ್ಕಳು ಎಲ್ಲಾ ಮಾಂಸ ತಿಂದು ನಮಗೆ ರೇಟ್ ಜಾಸ್ತಿ ಆಗಿದೆ ಅಂತಾ ನೆಪ ಮಾಡಿ ಬೈಯ್ದಿಯಲ್ಲಲೇ ಎಂದು ಸಿಟ್ಟು ಇಟ್ಟುಕೊಂಡು, ಅದೇ ಸಿಟ್ಟಿನಿಂದ ಆರೋಪಿ ಭೀಮನಗೌಡನಿಗೆ ಗೊತ್ತಾಗಿ, ದಿ:28-11-16 ರಂದು ರಾತ್ರಿ 10-00 ಗಂಟೆಗೆ ಫಿರ್ಯಾದಿತರ ಮನೆಯ ಮುಂದೆ ಬಂದು ಫಿರ್ಯಾದಿಗೆ ಲೇ ಬ್ಯಾಡ ಸೂಳೆಮಗನೇ ಎಂದು ಜಾತಿ ನಿಂದನೆ ಮಾಡಿ ತನ್ನ ಮಗನಿಗೆ ಕೊಪ್ಪಳದಲ್ಲಿ ಅಸಹ್ಯ ಮಾಡಿಯಲಲೇ ಎಂದು ಜಗಳ ತೆಗೆದಾಗ, ಅದೇ ಸಮಯಕ್ಕೆ ಆರೋಪಿ ಹನುಮಂತಪ್ಪನು ಸಮೀಪದ ತಮ್ಮ ಕಕ್ಕಿ ಮಲ್ಲಮ್ಮಳ ಮನೆಯಿಂದ ಚಾಕು ತೆಗೆದುಕೊಂಡು ಬಂದು ಫಿರ್ಯಾದಿತನಿಗೆ ಸಾಯಿಸುವ ಉದ್ದೇಶದಿಂದಾ ಲೇ ಬ್ಯಾಡ ಸೂಳೇ ಮಗನೇ ಗಳೇವು ಸಾಮಾನು ತೆಗೆದುಕೊಳ್ಳಿರೆಂದು ಬಹಳ ಸಕಲ ಹೇಳಿದರು ಕೇಳದೇ ದೌರ್ಜನ್ಯದಿಂದಾ ಅಲ್ಲೇ ಬಿಟ್ಟು ಮತ್ತೆ ಇವತ್ತು ಸಂಜೆ 7-00 ಗಂಟೆಗೆ ಕೊಪ್ಪಳದಲ್ಲಿ ನೆಪ ಮಾಡಿ ನನಗೆ ಬೈಯ್ದು ಅಸಹ್ಯ ಮಾಡಿಯಲ್ಲಲೇ ಅಂದವನೇ ಸಿಟ್ಟಿನಿಂದ ತನ್ನ ಕೈಯಲ್ಲಿದ್ದ ಚಾಕುವಿನಿಂದ ಫಿರ್ಯಾದಿಗೆ ತಿವಿದಾಗ ಫಿರ್ಯಾದಿತನು ತಪ್ಪಿಸಿಕೊಳ್ಳಲು ಹೊರಳಿದಾಗ ಚಾಕು ಹೊಟ್ಟೆಯ ಎಡಭಾಗದಲ್ಲಿ ಚುಚ್ಚಿಕೊಂಡು ರಕ್ತಗಾಯವಾಗಿ ಕೆಳಗಡೆ ಕುಸಿದು ಕುಳಿತಿದ್ದು, ಆಗ ಆರೋಪಿ ಭೀಮನಗೌಡನು ಸಹ ಫಿರ್ಯಾದಿಗೆ ಅಲ್ಲಿಯೇ ಇದ್ದ ಸರ್ಕಾರಿ ಜಾಲಿ ಕಟ್ಟಿಗೆ ತೆಗೆದುಕೊಂಡು ಈ ಸೂಳೇಮಗನಿಗೆ ಹೊಡೆದು ಸಾಯಿಸಬೇಕು ಎಂದು ಹೊಡೆಯಲು ಬಂದಾಗ ಜನರು ಬಿಡಿಸಿಕೊಂಡಿದ್ದು ಇರುತ್ತದೆ. ಆಗ ಆರೋಪಿತರು ಫಿರ್ಯಾದಿಗೆ ಲೇ ಸೂಳೆಮಗನೇ ಜನರು ಬಂದು ಬಿಡಿಸಿಕೊಂಡಿದ್ದಕ್ಕೆ ಉಳಿದಿಯಲೇ ಇಲ್ಲದಿದ್ದರೆ ನಿನಗೆ ಹೊಡೆದು ಸಾಯಿಸುತ್ತಿದ್ದೆವು, ಎಂದು ಪ್ರಾಣದ ಬೆದರಿಕೆ ಹಾಕಿ ಹೋಗಿರುತ್ತಾರೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 173/2016 ಕಲಂ: 279, 304(ಎ) ಐ.ಪಿ.ಸಿ:.  
ದಿನಾಂಕ 28-11-2016 ರಂದು ಸಂಜೆ 6-00 ಗಂಟೆಯ ಸುಮಾರಿಗೆ ನನ್ನ ಅಣ್ಣ ವಾಸು ತಂದೆ ಶರಣಪ ಆಗೋಲಿ ಈತನು ನಮ್ಮ  ಹಿರೋ ಹೊಂಡಾ ಪ್ಯಾಶನ್ ಪ್ರೊ ಮೋ.ಸೈ. ನಂ.ಕೆ-37/ಎಸ್-6441 ತೆಗೆದುಕೊಂಡು ಕನಕಗಿರಿ ಯಾವುದೋ ಕೆಲಸಕ್ಕೆ ಹೋಗುತ್ತೆನೆ ಅಂತಾ ಹೇಳಿ ಹೋಗಿದ್ದು ರಾತ್ರಿ 8-15 ಗಂಟೆಯ ಸುಮಾರಿಗೆ ನನ್ನ ಅಣ್ಣ ವಾಸು ಈತನು ತಾನು ತೆಗೆದುಕೊಂಡು ಹೋಗಿದ್ದ ಮೋ.ಸೈ ನಡೆಸಿಕೊಂಡು ಕನಕಗಿರಿ ಕಡೆಯಿಂದ ಅತೀ ವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಗಂಗಾವತಿ ರಸ್ತೆಯ ಮೇಲೆ ನಮ್ಮೂರ ಕಡೆ ಬರುತ್ತಾ ತಿಪ್ಪನಾಳ ಸೀಮಾದ ಶಿವಪ್ಪ ದಂಡಿನ ರವರ ಹೊಲದ ಹತ್ತಿರ ತಾನು ನಡೆಸುತ್ತಿದ್ದ ಮೊ.ಸೈ. ನಿಯಂತ್ರಣ ಮಾಡಲಾಗದೇ ಸ್ಕೀಡ್ ಆಗಿ ನೆಲಕ್ಕೆ ಬಿದ್ದು ಅಪಘಾತವಾಗಿದ್ದು ಅಪಘಾತದಿಂದ ಅವನ ಎಡಗಡೆ ಪಕ್ಕಡಿಗೆ ಮುಖಕ್ಕೆ ತಲೆಗೆ, ಮಲಕಿಗೆ, ಎಡಗಡೆ ಕಾಲಿಗೆ ಭಾರಿ ರಕ್ತ ಗಾಯವಾಗಿದ್ದು 2 ಕಿವಿಯಲ್ಲಿ ರಕ್ತ ಬಂದು ಸ್ಥಳದಲ್ಲಿ ಮೃತಪಟ್ಟಿರುತಾನೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ  ಕೈಕೊಂಡೆನು.
4] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 215/2016 ಕಲಂ: 323, 504, 506, 498(ಎ) 34 ಐ.ಪಿ.ಸಿ ಸಹಿತ ಕಲಂ. 3 ಮತ್ತು 4 ವರದಕ್ಷಿಣೆ ಕಾಯ್ದೆ:.

ದಿನಾಂಕ: 28.11.2016 ರಂದು ಸಾಯಂಕಾಲ 7:30 ಗಂಟೆಗೆ ಫಿರ್ಯಾದಿ ಶ್ರೀಮತಿ ಆಫ್ರೀನ್ ಬೇಗಂ ಸೈಲಾನಪೂರ ಓಣಿ ಕೊಪ್ಪಳ ದೂರನ್ನು ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ: 19.10.2013 ರಂದು ಗದಗ ನಗರದ ಜಾವೇದ್ ಮಕಾನ್ದಾರ ಇತನಿಗೆ ಕೊಪ್ಪಳದಲ್ಲಿ ಮದುವೆ ಮಾಡಿಕೊಟ್ಟಿದ್ದರು.  ಮದುವೆ ಕಾಲಕ್ಕೆ ನನ್ನ ಗಂಡನಿಗೆ ವರದಕ್ಷಿಣೆಯಾಗಿ 51 ಸಾವಿರ ನಗದು ಹಣ, 1 1/2 ತೊಲೆ ಬಂಗಾರ, ಬಾಂಡೆ ಸಾಮಾನುಗಳನ್ನು ಕೊಟ್ಟಿದ್ದು ಇರುತ್ತದೆ. ಮದುವೆ ಮಾಡಿ ಕೊಂಡು ಗಂಡನ ಮನೆಗೆ ನೆಡೆಯಲು ಹೋಗಿದ್ದು ಅಲ್ಲಿ ನನ್ನ ಗಂಡ ಜಾವೇದ್ ಮಕಾನ್ದಾರ, ಅತ್ತೆ ಮಹಿಮೂದಾ ಗಂಡ ಮಾಸೂಮ್ ಮಕಾನ್ದಾರ, ಮೈದುನ ರಿಯಾಜ್ ಮಕಾನ್ದಾರ, ನಾದಿನಿ ರಿಹಾನ್ ಮಕಾನ್ದಾರ ಇವರು 03 ತಿಂಗಳ ವರೆಗೆ ಸರಿಯಾಗಿ ನೋಡಿಕೊಂಡು ನಂತರ ಬರ ಬರುತ್ತಾ ಇವರೇಲ್ಲರೂ ಕೂಡಿಕೊಂಡು ನನಗೆ ನಿನ್ನ ತವರು ಮನೆಯವರು ನಮಗೆ ವರದಕ್ಷಿಣೆ ಹಣ ಹಾಗೂ ಬಂಗಾರ ಕಡಿಮೆ ಕೊಟ್ಟಿರುತ್ತಾರೆ, ನಮಗೆ ಇನ್ನೂ ಹೆಚ್ಚಿಗೆ 1 ಲಕ್ಷ ರೂಪಾಯಿ ವರದಕ್ಷಿಣೆ ಹಣವನ್ನು ನಿನ್ನ ತವರು ಮನೆಯಿಂದ ತೆಗೆದುಕೊಂಡು ಬಾ ಅಂತಾ ಹೇಳುತ್ತಾ ಮತ್ತು ಅದೇ ನೆಪ ಮಾಡಿಕೊಂಡು ದಿನಾನು ನನಗೆ ನೀನು ಸರಿಯಾಗಿ ಮನೆಯಲ್ಲಿ ಕೆಲಸ ಮಾಡುವುದಿಲ್ಲಾ ಅಂತಾ ಮಾನಸೀಕ ಮತ್ತು ದೈಹಿಕ ಕಿರುಕುಳು ನೀಡುತ್ತಿದ್ದರು. ನಾನು ಅವರಿಗೆ ನಾವು ಬಡವರಿದ್ದೇವೆ ಅಷ್ಟೋಂದು ಹಣವನ್ನು ನಾವು ಎಲ್ಲಿಂದ ತರೋದು ಅಂತಾ ಅವರಿಗೆ ಸಮಾಧಾನವಾಗಿ ತಿಳಿಸಿ ಹೇಳಿದ್ದೇನು. ಅದರೂ ಸಹ ಅವರು ನನಗೆ ತವರು ಮನೆಯಿಂದ ಹಣವನ್ನು ತರುವಂತೆ ಒತ್ತಾಯ ಮಾಡಿ ಮಾನಸೀಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು. ಈಗ್ಗೆ 10 ತಿಂಗಳ ಹಿಂದೆ ಗಂಡ ಜಾವೇದ್ ಅತ್ತೆ ಮಹಿಮೂದಾ , ಮೈದುನ ರಿಯಾಜ್ , ನಾದಿನಿ ರಿಹಾನ್ ಇವರು 1 ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡು ಬಂದರೆ ಮಾತ್ರ ನೀನು ನಮ್ಮ ಮನಯಲ್ಲಿ ಇರು ಇಲ್ಲವಾದರೆ ನೀನು ನಿನ್ನ ತವರು ಮನೆಗೆ ಹೋಗು ಅಂತಾ ಗಂಡನ ಮನೆಯಿಂದ ಹೊರಗೆ ಹಾಕಿರುತ್ತಾರೆ. ಅವಾಗಿನಿಂದ ನಾನು ನನ್ನ ತವರುಮನೆಯಲ್ಲಿಯೇ ಇರುತ್ತೇನೆ.ಮೊನ್ನೆ ದಿನಾಂಕ: 25.11.2016 ರಂದು ಬೆಳಿಗ್ಗೆ 11:00 ಗಂಟೆಯ ಸುಮಾರಿಗೆ ನನ್ನ ಗಂಡ ಜಾವೇದ್ , ಅತ್ತೆ ಮಹಿಮೂದಾ , ಮೈದುನ ರಿಯಾಜ್ , ನಾದಿನಿ ರಿಹಾನ್ ಇವರೇಲ್ಲರೂ ನಮ್ಮ ಮನೆಗೆ ಬಂದು ನನ್ನ ತಂದೆ-ತಾಯಿಗೆ ನಿಮ್ಮ ಮಗಳು ಗಂಡನ ಮನೆ ಬಿಟ್ಟು ಬಂದಿರುತ್ತಾಳೆ ಅವಳಿಗೆ 1 ಲಕ್ಷ ರೂಪಾಯಿ ವರದಕ್ಷಿಣೆ ಹಣವನ್ನು ತೆಗೆದುಕೊಂಡು ಬಾ ಅಂತಾ ಹೇಳಿದ್ದೇವು ಅವಳು ಇನ್ನೂ ನಿಮ್ಮ ಮನೆಯಲ್ಲಿಯೇ ಇದ್ದಾಳೆ ಅವಳನ್ನು ನಮ್ಮ ಮನಗೆ ಕಳುಹಿಸಿರಿ ಅಂತಾ ಹೇಳಿದರು. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008