ದಿನಾಂಕ:27-11-2016 ರಂದು 9.30 ಪಿಎಂಕ್ಕೆ ಗಾವರಾಳ ಗ್ರಾಮದ ಮಾರುತೇಶ್ವರ ಗುಡಿ ಮುಂದಿನ
ಬಯಲು ಜಾಗೆಯಲ್ಲಿ ಇಸ್ಪೀಟ್ ಜೂಜಾಟದ ನಡೆದ ಮಾಹಿತಿ ಬಂದ ಪ್ರಕಾರ ಪಿ.ಎಸ್.ಐ. ಕುಕನೂರ ರವರು ಸಿಬ್ಬಂದಿ ಸಮೇತ ಇಬ್ಬರೂ
ಪಂಚರ ಸಮಕ್ಷಮ ಗಾವರಾಳ ಗ್ರಾಮದ ಮಾರುತೇಶ್ವರ ಗುಡಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ
ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಕ್ಕಿಬಿದ್ದ ಆರೋಪಿತರಿಂದ ಹಾಗೂ ಜೂಜಾಟದ ಕಣದಿಂದ ಒಂದು ಟಾವೆಲ್, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 2500=00 ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕುಕನೂರ ಪೊಲೀಸ್
ಠಾಣೆ ಗುನ್ನೆ ನಂ: 132/2016 ಕಲಂ: 87 Karnataka Police Act.
ದಿನಾಂಕ:27-11-2016 ರಂದು 11.30 ಪಿಎಂಕ್ಕೆ ಗಾವರಾಳ ಗ್ರಾಮದ ಮಸೀದಿ ಮುಂದಿನ ಬಯಲು ಜಾಗೆಯಲ್ಲಿ
ಇಸ್ಪೀಟ್ ಜೂಜಾಟ ನಡೆದ ಮಾಹಿತಿ ಬಂದ ಪ್ರಕಾರ ಪಿ.ಎಸ್.ಐ. ಕುಕನೂರ ರವರು ಸಿಬ್ಬಂದಿ ಸಮೇತ ಇಬ್ಬರೂ ಪಂಚರ ಸಮಕ್ಷಮ
ಸಿಬ್ಬಂದಿಯೊಂದಿಗೆ ದಿನಾಂಕ:28-11-2016 ರಂದು 00-30 ಪಿಎಂಕ್ಕೆ ಗಾವರಾಳ ಗ್ರಾಮದ ಮಸೀದಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟದಲ್ಲಿ
ತೊಡಗಿದ್ದವರ ಮೇಲೆ ದಾಳಿ ಮಾಡಿ, ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಕ್ಕಿಬಿದ್ದ ಆರೋಪಿತರಿಂದ ಹಾಗೂ ಜೂಜಾಟದ ಕಣದಿಂದ ಒಂದು ಟಾವೆಲ್, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 2300=00 ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 327/2016
ಕಲಂ: 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ. 27-11-2016 ರಂದು 05-00 ಪಿ.ಎಂ.ಕ್ಕೆ ಫಿರ್ಯಾದಿದಾರ ಅಂಬರೇಶ ತಂ/ ಸಾಬಯ್ಯ ಸಂದೇರ
ವಯಾ 33, ಉ. ಹೇಮಗುಡ್ಡ ಟೊಲಗೇಟದಲ್ಲಿ ಸೆಕ್ಯೂರಿಟಿ ಕೆಲಸ ಸಾ. ಸೌಳಅರವಿ ಕ್ಯಾಂಪ ಹಾ.ವ. ಹೇಮಗುಡ್ಡ
ಇವರು ಫಿರ್ಯಾದಿ ನೀಡಿದ್ದು ಸಾರಾಂಶ ಈ ರೀತಿ ಇರುತ್ತದೆ. ದಿನಾಂಕ. 27-11-2016 ರಂದು ಮದ್ಯಾನ್ಹ
02-30 ಗಂಟೆ ಸುಮಾರಿಗೆ ಹೇಮಗುಡ್ಡ ಗ್ರಾಮದ ಮಂಜುನಾಥ ಭೊವಿ ಮತ್ತು ತಿರುಮಲ ಇರಬಗೇರಾ ಇವರು ಗಂಗಾವತಿಗೆ
ಸಂತೆಗೆ ತಮ್ಮ ಮೋಟಾರ ಸೈಕಲ್ ನಂ. ಕೆ.ಎ.37/ಡಬ್ಲು.7333 ನೇದ್ದರಲ್ಲಿ ಹೋಗಿದ್ದು ಸಂತೆ ಮಾಡಿಕೊಂಡು
ವಾಪಸ ಹೇಮಗುಡ್ಡಕ್ಕೆ ಬರುತ್ತಿರುವಾಗ ಗುಡ್ಡದ ಕ್ಯಾಂಪ ಹತ್ತಿರ ಹೇಮಗುಡ್ಡ ಗ್ರಾಮದ ಬಸವರಾಜ ಇರಬಗೇರಾ
ಇವನು ಮೋಟಾರ ಸೈಕಲ್ ಕೆಟ್ಟು ನಿಂತಿದ್ದರಿಂದ ಮಂಜುನಾಥ ಮತ್ತು ತಿರುಮಲ ಇಬ್ಬರು ಬಸವರಾಜನಿಗೆ ನೋಡಿ
ಗಂಗಾವತಿಯಿಂದ ಕೊಪ್ಪಳಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಮೋಟಾರ ಸೈಕಲ್ ನಿಲ್ಲಿಸಿ ಮಂಜುನಾಥ ಮತ್ತು
ತಿರುಮಲ ಇವರು ಮೋಟಾರ ಸೈಕಲ್ ಮೇಲೆ ಕುಳಿತಿದ್ದು, ಬಸವರಾಜನಿಗೆ ಕರೆದು ಏನಾಯಿತು ಅಂತಾ ಮಾತನಾಡುತ್ತಾ
ನಿಂತಿರುವಾಗ ಕೊಪ್ಪಳ ಕಡೆಯಿಂದ ಲಾರಿ ನಂ. ಕೆ.ಎ.35/ಬಿ.1113 ನೇದ್ದರ ಚಾಲಕನು ಲಾರಿಯನ್ನು ಅತಿವೇಗವಾಗಿ
ಮತ್ತು ತೀವ್ರ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ತನ್ನ ಮುಂದೆ ಬರುತ್ತಿದ್ದ ಒಂದು ಗಾಡಿಗೆ ಓವರಟೇಕ್
ಮಾಡಿಕೊಂಡು ರಾಂಗ್ ಸೈಡಿಗೆ ಬಂದು ಮೂರು ಜನರಿಗೆ ಹಾಗೂ ಮೋಟಾರ ಸೈಕಲ್ ಗೆ ಡಿಕ್ಕಿ ಕೊಟ್ಟು ಅಪಘಾತ
ಮಾಡಿದ್ದರಿಂದ ಮೂರು ಜನರಿಗೆ ತೀವ್ರ ಸ್ವರೂಪದ ರಕ್ತಗಾಯ ಒಳಪೆಟ್ಟುಗಳಾಗಿದ್ದು ಇರುತ್ತದೆ. ಪ್ರಕರಣ
ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
4] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 264/2016
ಕಲಂ: 143, 147, 148, 323, 324, 307, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ 27-11-2016 ರಂದು ರಾತ್ರಿ 8-15 ಗಂಟೆಗೆ ಸೈಯದ್ ಗಫೂರ್ ತಂದೆ ಮೆಹಬೂಬ ಸಾಬ ಬಳ್ಳಾರಿ, ವಯಾ: 22 ವರ್ಷ, ಜಾ: ಮುಸ್ಲಿಂ, ಉ:ಮೇಷನ್ ಕೆಲಸ,
ಸಾ: ಹಮಾಲರ ಕಾಲೋನಿ ಗಂಗಾವತಿ ಇವರು ಗಾಯಗೊಂಡು ಠಾಣೆಗೆ ಬಂದಿದ್ದು
ಸದರಿಯವನಿಗೆ ಇಲಾಜು ಕುರಿತು ಸರಕಾರಿ ಆಸ್ಪತ್ರೆ ಗಂಗಾವತಿಗೆ ಕಳುಹಿಸಿಕೊಟ್ಟಿದ್ದು, ದಿನಾಂಕ: 27-11-2016 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಆರೋಪಿ ವೀರೇಶ ಈತನು ತನ್ನ
ಮೋಟರ್ ಸೈಕಲ್ ನ್ನು ಫಿರ್ಯಾದಿಯ ಓಣಿಯಲ್ಲಿ ಜೋರಾಗಿ ಓಡಾಡಿಸಿದ್ದರಿಂದ ಅದಕ್ಕೆ ಫಿರ್ಯಾದಿಯು ಈರೀತಿ
ಓಣಿಯಲ್ಲಿ ಜೋರಾಗಿ ಗಾಡಿಯನ್ನು ಓಡಿಸಿದರೆ ಹೇಗೆ ಸಣ್ಣ ಮಕ್ಕಳು ಆಟ ಅಡುತ್ತಿರಿತ್ತಾರೆ ಅಂತಾ ಹೇಳಿದ್ದಕ್ಕೆ
ಆರೋಪಿ ವೀರೇಶನು ಫಿರ್ಯಾದಿಯ ಜೋತೆ ಬಾಯಿ ಮಾಡಿಕೊಂಡು ಹೋಗಿದ್ದು ಸದರಿ ಈ ವಿಷಯವನ್ನು ಆರೋಪಿತನ ಅಣ್ಣನಿಗೆ
ತಿಳಿಸಲು ರಾತ್ರಿ 7-00 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಅವನ ಸ್ನೇಹಿತ ಲಾಲಸಾಬ ಇಬ್ಬರೂ ಹೋದಾಗ
ಅರೋಪಿ ವೀರೇಶನು ಲೇ ಲಂಗಾ ಸುಳೇಮಗನೆ ನಮ್ಮ ಕ್ಯಾಂಪಗೆ ಯಾಕ ಬಂದೀಯಾ ಅಂತಾ ಅನ್ನುತ್ತಾ ತನ್ನ ಕೈಯಲ್ಲಿದ್ದ
ಕಲ್ಲಿನಿಂದ ಫಿರ್ಯಾದಿಯ ಬಲಗಣ್ಣಿನ ಹತ್ತಿರ ಹಾಗೂ ಮೂಗಿಗೆ ಜೋರಾಗಿ ಹೊಡಿದ್ದು ಅಲ್ಲದೆ ಮಲ್ಲಿಕಾರ್ಜುನನು
ಸಹ ಹಾಕ್ರಿ ಈ ಸೂಳೇಮಗನ್ನ ಬಾಳಾ ಆಗೈತಿ ಅನ್ನುತ್ತಾ ಕೊಲೆ ಮಾಡುವ ಉದ್ದೇಶದಿಂದ ತನ್ನ ಹತ್ತಿರ
ಇದ್ದ ಚಾಕುವಿನಿಂದ ಬಲಗಣ್ಣ ಹತ್ತಿರ ತಿವಿದನು ಹಾಗೂ ಸದರಿ ಜಗಳವನ್ನು ಬಿಡಿಸಲು ಬಂದು ಲಾಲಾ ಸಾಬ ನಿಗೆ
ಎರಡೂ ಕೈಗೆ ಚಾಕುವಿನಿಂದ ಎಳೆದುದನು ಆಗ ಅಲ್ಲಿಯೇ ಇದ್ದ ಉಳಿದ ಆರೋಪಿತರಾದ ರವಿ, ಪ್ರಕಾಶ, ನವೀನ ಎಲ್ಲರೂ
ಸೇರಿ ಫಿರ್ಯಾದಿಗೆ ಕೈಯಿಂದ ಮೈ ಕೈಗೆ, ಹೊಡೆ ಬಡೆ ಮಾಡಿ ಜೀವ ಬೆರಿಕೆ ಹಾಕಿದ್ದು ಇರುತ್ತದೆ. ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment