ದಿನಾಂಕ 25-11-2016 ರಂದು ಸಾಯಂಕಾಲ 06-30 ಗಂಟೆ ಸುಮಾರಿಗೆ ಕೆರೆಹಳ್ಳಿ ಸೀಮಾದಲ್ಲಿರುವ ಎಸ.ಎನ್.ಜಿ.ಪೆಟ್ರೊಲ್
ಬಂಕ್ ಹತ್ತಿರ ಕುಷ್ಟಗಿ-ಹೊಸಪೆಟೆ ಎನ್.ಹೆಚ್.50 ಏಕಮುಕ ರಸ್ತೆಯ ಪೂರ್ವದ ಭಾಗದಲ್ಲಿ ಕೆಟ್ಟು ನಿಂತ ಕ್ರೇನ್ ನಂ.ಕೆ.ಎ.37ಎ3635 ನೇದ್ದನ್ನು ಪಿರ್ಯಾದಿದಾರ ಮತ್ತು ಅದರ ಮಾಲಿಕರಾದ ಅಜೀಮ,ಆಪರೇಟರುಗಳಾದ ಅಬ್ದುಲ್ ಅನ್ಸಾರಿ,ವಿಜಯ ತಂ/ ಹರೆರಾಮ ಮತ್ತು ಹೆಲ್ಪರ್ ಸಾದಿಕ ಎಲ್ಲರು ಕ್ರೆನ ರಿಪೇರಿ ಮಾಡುತ್ತಿದ್ದಾಗ ಅದೇ
ವೇಳೆಗೆ ಕುಷ್ಟಗಿ ಕಡೆಯಿಂದ ಒಂದು ಲಾರಿ ನಂ.ಕೆ.ಎ.29
/ ಬಿ.1113 ನೇದ್ದರ ಚಾಲಕನು ಸದರ ಲಾರಿಯನ್ನು ಅತೀ ವೇಗದಿಂದ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು
ಬಂದವನೇ ನಮ್ಮ ಕ್ರೇನಿನ ಹಿಂಬದಿಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ್ದರಿಂದ ಕ್ರೇನ್ ಆಪರೇಟರ್
ಅಬ್ದುಲ್ ಮತ್ತು ವಿಜಯ ಹಾಗೂ ಮಾಲಿಕ ಅಜೀಮ ಇವರಿಗೆ ತಲೆಗೆ ,ಮತ್ತು ಮೈ.ಕೈಗಳಿಗೆ ರಕ್ತಗಾಯಗಳಾಗಿದ್ದು ಇರುತ್ತದೆ,ಅಪಘಾತ ಪಡಿಸಿದ ಲಾರಿ ಚಾಲಕನು ಓಡಿ ಹೋಗಿದ್ದು ಅವನ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ
ಅವನಿಗೆ ನೋಡಿದಲ್ಲಿ ಗುರುತಿಸುತ್ತೇನೆ ಕಾರಣ ಲಾರಿ ಚಾಲಕನ ಮೇಲೆ ಕ್ರಮ ಜರುಗಿಸಲು ವಿನಂತಿ ಅಂತಾ
ಮುಂತಾಗಿದ್ದ ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಂಡಿರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 235/2016
ಕಲಂ: 279, 338 ಐ.ಪಿ.ಸಿ.
ದಿ:25-11-16 ರಂದು ಸಂಜೆ 6-30 ಗಂಟೆಗೆ ಫಿರ್ಯಾದಿದಾರರು ತಮ್ಮ ಕುಲಸ್ಥರೊಂದಿಗೆ ಶ್ರೀನಿಧಿ ಖಾನಾವಳಿ
ಮುಂದೆ ಮಾತನಾಡುತ್ತಾ ನಿಂತುಕೊಂಡಿದ್ದಾಗ, ಕೊಪ್ಪಳದ ಕಡೆಯಿಂದ ಲಾರಿ ನಂ: ಎಪಿ-21/ಟಿ.ವಾಯ್-2260 ನೇದ್ದರ ಚಾಲಕನು ತನ್ನ
ಲಾರಿಯನ್ನು ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ
ಓಡಿಸುತ್ತಾ ಬಂದವನೇ ತನ್ನ ಮುಂದೆ ಬರುತ್ತಿದ್ದ ಮೋಟಾರ ಸೈಕಲ್ ನಂ:ಕೆಎ-35/ಆರ್-4681 ನೇದ್ದನ್ನು ಗಮನಿಸದೇ ಮತ್ತು ಅಂತರ ಕಾಯ್ದುಕೊಳ್ಳದೇ ಬಂದು ಮೋಟರ ಸೈಕಲ್ ಗೆ ಟಕ್ಕರ ಕೊಟ್ಟು
ಅಪಘಾತ ಮಾಡಿದ್ದರಿಂದ ಮೋಟಾರ ಸೈಕಲ್ ಸವಾರ ಪ್ರಭಾಕರ ಎಂಬುವವರ ಬಲಗೈ ಮೊಣಕೈಯಿಂದ ಬೆರಳುಗಳವರೆಗೆ
ಭಾರಿ ರಕ್ತಗಾಯಗ, ಮತ್ತು ಬೆನ್ನಿಗೆ, ಸೊಂಟಕ್ಕೆ ಪೆಟ್ಟಾಗಿದ್ದು, ಮತ್ತು ಗುದದ್ವಾರಕ್ಕೆ ಭಾರಿ ರಕ್ತಗಾಯವಾಗಿದೆ. ಕಾರಣ ಅಪಘಾತ ಮಾಡಿದ
ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ನೀಡಿದ ದೂರನ್ನು ಪಡೆದುಕೊಂಡು, ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment