Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, November 25, 2016

1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 208/2016 ಕಲಂ: 143, 147, 341, 323, 324, 504, 506 ಸಹಿತ 149  ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ:.
ದಿನಾಂಕ: 24.11.2016 ರಂದು ರಾತ್ರಿ 11:30 ಗಂಟೆಗೆ ಫಿರ್ಯಾದಿ  ವೆಂಕಟೇಶ ಇಟಂಗಿ ಸಾ: ಭಾಗ್ಯನಗರ ಕೊಪ್ಪಳ. ಇವರು ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಸಾಯಂಕಾಲ 7:00 ಗಂಟೆಯ ಸುಮಾರಿಗೆ ನನ್ನ ಅಣ್ಣನ ಮಗ ಸಾಂಕೇತ ವಯಾ: 16 ವರ್ಷ ಹಾಗೂ ಪ್ರಕಾಶ ಜೋಶಿ ಇವರ ಮಗನಾದ ಪ್ರವೀಣ ಜೋಶಿ ಇವರ ನಡುವೆ ಭಾಗ್ಯನಗರದ ಟ್ಯೂಷನ್ ಕ್ಲಾಸನಲ್ಲಿ ಸಣ್ಣಪುಟ್ಟ ವಿಷಯಕ್ಕೆ ಜಗಳವಾಗಿತ್ತು. ಅದನ್ನೆ ನೆಪ ಮಾಡಿಕೊಂಡು ರಾತ್ರಿ 8:00 ಗಂಟೆಗೆ ಪ್ರವೀಣ ಜೋಶಿ ಇತನು 10 ರಿಂದ 15 ಜನರನ್ನು ತನ್ನ ಸಂಗಡ ನಮ್ಮ ಮನೆಗೆ ಕರೆದುಕೊಂಡು ಬಂದು ನಿಮ್ಮ ಅಣ್ಣನ  ಸಾಂಕೇತ ಇತನು ನನ್ನೊಂದಿಗೆ ಟ್ಯೂಷನ್ ಕ್ಲಾಸನಲ್ಲಿ ಜಗಳ ಮಾಡಿದ್ದಾನೆ ಅವನನ್ನು ಮನೆಯಿಂದ ಹೊರಗೆ ಕಳುಹಿಸಿರಿ ನೋಡಿಕೊಳ್ಳುತ್ತೇವೆ ಅಂತಾ ಹೇಳಿದ್ದರಿಂದ ನಮ್ಮ ಮನೆಯಲ್ಲಿದ್ದ ನಾನು ಹಾಗೂ ಓಣಿಯ ಜನರು ಅವರಿಗೆ ಬೈದು ಬುದ್ದಿವಾದ ಹೇಳಿ ಕಳುಹಿಸಿದ್ದೇವು. ನಂತರ ಇಂದು ದಿನಾಂಕ: 24.11.2016 ರಂದು ಸಾಯಂಕಾಲ 7:00 ಗಂಟೆಗೆ  ಮಂಜುನಾಥ ಮಸ್ಕಿ ಸಾ: ಬಿ.ಟಿ ಪಾಟೀಲ್ ನಗರ ಕೊಪ್ಪಳ ಇತನು ತನ್ನೊಂದಿಗೆ 10-15 ಜನರನ್ನು ಕರೆದುಕೊಂಡು ಭಾಗ್ಯನಗರದ ನಮ್ಮ ಮನೆಗೆ ಬಂದು ನೀವು ಗಂಡಸರಾಗಿದ್ದರೆ ನೀವು ನಮ್ಮ ಬಿ.ಟಿ ಪಾಟೀಲ್ ನಗರಕ್ಕೆ ಬನ್ನಿರಿ ಅಂತಾ ಬೆದರಿಕೆ ಹಾಕಿ ಹೋಗಿದ್ದರು. ನಂತರ 8:30 ಗಂಟೆಗೆ ನಾನು ಹಾಗೂ ನಮ್ಮ ಓಣಿಯ ಜನರಾದ ಮುದಿಯಪ್ಪ ಹರಿಜನ, ನಿಂಗಪ್ಪ ಹರಿಜನ, ಆನಂದ ಮೇಗರಾಜ, ಶರಣಪ್ಪ ಸಜ್ಜನ್, ಪೀರಸಾಬ ಹಿರೇಮಸೂತಿ, ಇವರೊಂದಿಗೆ ಬಿ.ಟಿ.ಪಾಟೀಲ್ ನಗರದ ಹರಿಹಂತ ಕಂಪ್ಯೂಟರ್ಸ ಹತ್ತಿರ ಇರುವ ವಾಟರ್ ಪೀಲ್ಟರ್ ಹತ್ತಿರ ನಿಂತುಕೊಂಡಿದ್ದಾಗ ಏಕಾಏಕೀ ಮಂಜುನಾಥ ಮಸ್ಕಿ ಇತನು ತನ್ನೊಂದಿಗೆ 10-15 ಜನರನ್ನು ಕರೆದುಕೊಂಡು  ಬಂದು ನನಗೆ ತಡೆದು ನಿಲ್ಲಿಸಿ ಎನಲೇ ಚಲುವಾದಿ ಸೂಳೆ ಮಗನೆ ನಿನ್ನದು ಬಹಳ ಆಗೈತಿ ಅಂತಾ ಜಾತಿ ಎತ್ತಿ ಬೈದು ಏಕಾಏಕೀ ಮಂಜುನಾಥ ಮಸ್ಕಿ ಇತನು ತನ್ನ ಕೈಯನ್ನು ಗಟ್ಟಿಯಾಗಿ ಮುಷ್ಟಿಮಾಡಿ ನನ್ನ ಮುಖಕ್ಕೆ ಜೋರಾಗಿ ಗುದ್ದಿದನು ಆಗ ನೋವಿನಿಂದ ಜೋರಾಗಿ ಕೂಗಾಡಲು ನಮ್ಮೊಡನೆ ಬಂದ ಇತರೆ ಜನರು ಅವರಿಗೆ ಯಾಕೆ ಸುಮ್ಮನೆ ನಮಗೆ ಹೊಡೆಯುತ್ತೀರಿ ನಮಗೂ ನಿಮಗೂ ಯವುದೇ ಸಂಭಂದ ಇರುವುದಿಲ್ಲಾ ಅಂತಾ ಎಷ್ಟು ಹೇಳಿದರೂ ಕೇಳದೆ ಎನಲೇ ಸೂಳೆ ಮಕ್ಕಳಾ ನಮಗೆ ಬುದ್ದಿ ಹೇಳುತ್ತೀರೆನಲೇ ಅಂತಾ ಅಂದವರೆ ನಮಗೂ ಹಾಗೂ ನನ್ನ ಜೊತೆ ಬಂದವರಿಗೆ ಮಂಜುನಾಥ ಮಸ್ಕಿ ಇತನು ಹಾಗೂ ಆತನ ಸಂಗಡ ಇದ್ದ 10-15 ಜನರು ತಮ್ಮ ಕೈಗಳಿಂದ  ಹೊಡೆಯ ಹತ್ತಿದರು ಆಗ ನಾವು ಕೂಗಾಡಲು ಆಗ ದಾರಿಯಲ್ಲಿ ಹೋಗುತ್ತಿದ್ದ ಜನರು ಸೇರಲು ಮಂಜುನಾಥ ಮಸ್ಕಿ ಹಾಗೂ ಆತನೊಂದಿಗೆ ಬಂದ ಜನರು ಅಲ್ಲಿಂದ ಹೋದರು. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 129/2016 ಕಲಂ: 306 ಸಹಿತ 34 .ಪಿ.ಸಿ.
ದಿನಾಂಕ:24-11-2016 ರಂದು 1.30 ಪಿಎಂಕ್ಕೆ ಫಿರ್ಯಾದಿದಾರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ತನ್ನ ಅಣ್ಣನು ಈ ಮೊದಲು ಎರಡು ಮದುವೆಯಾಗಿದ್ದು, ತನ್ನ ಇಬ್ಬರೂ ಅತ್ತಿಗೆಯವರು ನಿಧನವಾಗಿದ್ದು, ನಂತರ ನಿಟ್ಟಾಲಿಯಲ್ಲಿ ಉಮಾ ಎಂದುವವಳನ್ನು ಮದುವೆಯಾಗಿದ್ದು, ನಂತರದಲ್ಲಿ ಒಂದು ಮಗು ಜನಿಸಿದ ಮೇಲೆ ಮತ್ತೆ ತನ್ನ ಅಣ್ಣನಿಗೆ ಮತ್ತು ಅತ್ತಿಗೆ ಉಮಾಳಿಗೆ ಸಂಸಾರ ಸರಿಯಾಗಿ ನಡೆಯದೇ ಇದ್ದುದರಿಂದ ತನ್ನ ಅಣ್ಣನ ಹೆಂಡತಿ ಉಮಾಳು ನ್ಯಾಯಾಲಯದಲ್ಲಿ ಆಸ್ತಿ ಮತ್ತು ಜೀವನಾಂಶ ಪಡೆಯುವ ಕುರಿತು ನ್ಯಾಯಾಲಯದಲ್ಲಿ ದಾವೆ ಹೂಡಿಕೊಂಡಿದ್ದರಿಂದ ಮತ್ತು ಆಗಾಗ ತನ್ನ ಅಣ್ಣನು ಮನೆಗೆ ಹೋದಾಗ ತನ್ನ ಮಾವ, ಅತ್ತೆ, ಅಳಿಯ ಹಾಗೂ ತನ್ನ ಹೆಂಡತಿ ಸೇರಿ ಅವನಿಗೆ ಮಾನಸಿಕ, ದೈಹಿಕ ಹಿಂಸೆ ನೀಡಿ ಹೊಡೆಬಡೆ ಮಾಡಿದ್ದರಿಂದ ಮಾನಸಿಕವಾಗಿ ನೊಂದು ನನ್ನ ಅಣ್ಣನಿಗೆ ಅವಮಾನ ಮಾಡಿದ್ದರಿಂದ ತನ್ನ ಅಣ್ಣನು ದಿನಾಂಕ:23-11-2016 ರಂದು ರಾತ್ರಿ 9.00 ಗಂಟೆಗೆ ನಿಟ್ಟಾಲಿ ಸೀಮಾದಲ್ಲಿಯ ತನ್ನ ಮಾವನ ತೋಟದಲ್ಲಿ ವಿಷ ಸೇವನೆ ಮಾಡಿದಾಗ 108 ವಾಹನದಲ್ಲಿ ಕರೆದುಕೊಂಡು ಬಂದು ಕುಕನೂರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಇದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  

3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 288/2016 ಕಲಂ: 279, 337, 338 ಐ.ಪಿ.ಸಿ.ದಿನಾಂಕ: 24-11-2016 ರಂದು ಮದ್ಯಾಹ್ನ 02-15 ಗಂಟೆಗೆ ಎಸ್.ಮಲ್ಲಿಕಾರ್ಜುನ ತಂದೆ ಮಲ್ಲಿನಾಥಪ್ಪ ಶೆಟ್ಟಿ ವಯಾ: 59 ಪಿರ್ಯಾದಿಯನ್ನು ನೀಡಿದ್ದು ಮುಂಜಾನೆ 5-00 ಗಂಟೆಯ ಸುಮಾರಿಗೆ ಪಿರ್ಯಾದಿದಾರರು ತಮ್ಮ ಬುಲೆರೋ ವಾಹನ ನಂ: ಕೆ.ಎ-37/ಎಂ-5347 ನೇದ್ದರಲ್ಲಿ ತಮ್ಮ ಚಾಲಕ ಪ್ರಕಾಶ ಹಾವರಗಿ ಇವರೊಂದಿಗೆ ಅನಧಿಕೃತವಾಗಿ ಕೃಷಿ ಉತ್ಪನ್ನಗಳ ಸಾಗಾಣಿಕೆ ಮಾಡುವ ವಾಹನಗಳನ್ನು ತಪಾಷಣೆ ಕುರಿತು ಹೋದವರು ವಣಗೇರಿ ಟೋಲ ನಾಕಾದ ಕಡೆಯಿಂದ ವಾಪಾಸ್ ಕುಷ್ಟಗಿ ಕಡೆಗೆ ಬರುತ್ತಿರುವಾಗ ಟೋಲ್ ಗೇಟ್ ದಾಟಿ ಸುಮಾರು 1 ಕಿ.ಮೀ. ಅಂತರದಲ್ಲಿ ರಸ್ತೆಯ ಎಡಗಡೆ ರಸ್ತೆಯಲ್ಲಿ ಬರುತ್ತಿರುವಾಗ ನಮ್ಮ ಹಿಂದೆ ಒಂದು ಲಾರಿ ನಂ: ಎಂ.ಹೆಚ್.-25/ಯು-130 ನೇದ್ದರ ಚಾಲಕನಾದ ಸೈಫನ್ ತಂದೆ ಉಸ್ಮಾನ ಹಂದೇವಾಡಿ ವಯಾ: 49 ಜಾ: ಮುಸ್ಲಿಂ ಸಾ: ನೈಜಿಂದಿಗಿ ತಾ: ಜಿ: ಸೊಲ್ಲಾಪೂರ ಇತನು ಬರುತ್ತಿದ್ದು ಸದರಿ ಲಾರಿಯ ಹಿಂದೆ ಇನ್ನೊಂದು ಲಾರಿ  ನಂ: ಆರ್.ಜೆ-11/ಜಿ.ಎ-7279 ನೇದ್ದು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ವಾಹನದ ಅಂತರವನ್ನು ಕಾಪಾಡದೇ ಮುಂದಿನ ಲಾರಿಗೆ ಕಟ್ಟರ ಕೊಟ್ಟಿದ್ದು ಸದರಿ ಲಾರಿ ಚಾಲಕ ವಿಕ್ರಮಸಿಂಗ್ ತಂದೆ ಅಶೋಕಕುಮಾರ ಉಘಾರಪೂರ ವ: 24 ವರ್ಷ ಜಾತಿ: ರಜಪೂತ ಉ: ಚಾಲಕ ಸಾ: ಬಾಡಿ ತಾ: ವಿಶಾರಪೂರ ಜಿ: ವಿಶಾರಪೂರ ಪಂಜಾಬ ರಾಜ್ಯ ಅಂತಾ ಇದ್ದು ಸದರಿ ಲಾರಿಯಲ್ಲಿದ್ದ ಇನ್ನೊಬ್ಬ ರಾಜೇಂದ್ರಸಿಂಗ್ ತಂದೆ ಶ್ರೀಪಥ ವಯಾ: 31 ವರ್ಷ ಇತನಿಗೆ ಬಲಗಾಲ ತೊಡೆಗೆ ಒಳಪೆಟ್ಟು, ಬಲಗಾಲ ಮೊಣಕಾಲ ಕೆಳಗೆ ಒಳಪೆಟ್ಟು ಹಾಗೂ ತಲೆಗೆ ಭಾರಿ ಒಳಪೆಟ್ಟಾಗಿದ್ದು ಇತ್ತು. ಸದರಿ ಎರಡು ಲಾರಿಯ ಹಿಂದೆ ಮತ್ತು ಮುಂದಿನ ಭಾಗ ಜಖಂಗೊಂಡಿದ್ದು ಮತ್ತು ನಮ್ಮ ಬುಲೆರೋ ನಂ: ಕೆ.ಎ-37/ಎಂ-5347 ನೇದ್ದರ ಬಲಗಡೆ ಮದ್ಯದ ಡೋರ್ ಬೆಂಡಾಗಿದ್ದು ಹಾಗೂ ಬಲಗಡೆ ಹಿಂದಿನ ಇಂಡಿಕೆಟರ್ ಹೊಡೆದಿದ್ದು ಇರುತ್ತದೆ. ನಮಗೆ ಹಾಗೂ ಇನ್ನೂಳಿದ ಲಾರಿ ಚಾಲಕರಿಗೆ ಯಾವುದೇ ಗಾಯವಾಗಿರಲಿಲ್ಲ ಗಾಯವಾದ ರಾಜೇಂದ್ರಸಿಂಗ್ ಇವರನ್ನು ಇಲಕಲ್ ನ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಅಂಬುಲೆನ್ಸ ನಲ್ಲಿ ಕಳುಹಿಸಿಕೊಟ್ಟಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಳ್ಳಲಾಯಿತು.

0 comments:

 
Will Smith Visitors
Since 01/02/2008