ದಿ:23-11-2016 ರಂದು ಮದ್ಯಾನ್ಹ 1-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಜಗದೀಶ ಎಲಿಗಾರ. ಸಾ:ಕಿನ್ನಾಳ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಫಿರ್ಯಾದಿ
ಸಾರಾಂಶವೇನೆಂದರೇ, ದಿ:23-11-16 ರಂದು ಮದ್ಯಾನ್ಹ 12-30 ಗಂಟೆಗೆ
ಫಿರ್ಯಾದಿದಾರರು ಕಿನ್ನಾಳ ಗ್ರಾಮದ ಬಸವೇಶ್ವರ ಸರ್ಕಲ್ ಹತ್ತಿದ ಮಧು ಎಂಬ ಹೆಸರಿನ ತಮ್ಮ
ಮೆಡಿಕಲ್ ಶಾಪ್ ಮುಂದೆ ಇದ್ದಾಗ, ಆರೋಪಿ ಆರೋಪಿ ಕರಿಯಪ್ಪ ಸಾ: ಚಿಕ್ಕಬೀಡನಾಳ ಇತನು ಮದ್ಯಸೇವನೆ ಮಾಡಿಕೊಂಡು
ಬಂದು ಬಾಯಿ ಮಾಡಿದ್ದು ಆಗ ಫಿರ್ಯಾದಿದಾರರು ಆತನಿಗೆ ಕುಡಿದು ಬಂದು ಯಾಕೆ ಬಾಯಿ ಮಾಡುತ್ತಿಯಾ ಸುಮ್ಮನೇ
ಮನೆಗೆ ಹೋಗು ಅಂದಿದ್ದಕ್ಕೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು, ಅಂಗಡಿಯ ಪಾವಟಿಗೆ ಸಾರಾಯಿ
ಬಾಟಲಿ ಒಗೆದು ಒಡೆದ ಖಾಜಿನ ಬಾಟಲಿಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಲೇ ಸೂಳೇಮಕ್ಕಳೇ ನನ್ನ ತಂಟೆಗೆ
ಬಂದರೆ ಬಾಟಲಿಯಿಂದ ತಿವಿದು ನಿಮ್ಮನ್ನು ಸಾಯಿಸುತ್ತೇನೆ. ಎಂದು ಪ್ರಾಣದ ಬೆದರಿಕೆ ಹಾಕಿ ಫಿರ್ಯಾದಿಗೆ
ಮುಂದೆ ಹೋಗದಂತೆ ತಡೆದಿದ್ದು ಇರುತ್ತದೆ. ಮತ್ತು ಫಿರ್ಯಾದಿದಾರರಿಗೆ ಕೈಯಿಂದ ಹೊಡೆದು ಕಾಲಿನಿಂದ ಒದ್ದು
ದುಖಾಃಪಾತಗೊಳಿಸಿದ್ದು ಇರುತ್ತದೆ ಅಂತಾ ಇದ್ದ ಫಿರ್ಯಾಧಿ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಯಲಬುರ್ಗಾ ಪೊಲೀಸ್
ಠಾಣೆ ಗುನ್ನೆ ನಂ: 121/2016
ಕಲಂ: 279, 337, 338 ಐ.ಪಿ.ಸಿ.
ದಿನಾಂಕ: 20-11-2016
ರಂದು ಸಂಜೆ 7-30 ಗಂಟೆಯ ಸುಮಾರಿಗೆ ಆರೋಪಿ ಮಂಜುನಾಥ ತಂದೆ ರೇವಪ್ಪ
ಹರಿಜನ ಮೋಟಾರ ಸೈಕಲ ನಂ: ಕೆ.ಎ-37/ಈ.ಎ-9566 ನೇದ್ದರ ಸವಾರ ಸಾ: ತುಮ್ಮರಗುದ್ದಿ ಇತನು ತನ್ನ ಮೋಟಾರ ಸೈಕಲ ನಂ: ಕೆ.ಎ-37/ಈ.ಎ-9566 ನೇದ್ದರ ಹಿಂದುಗಡೆ ಜ್ಯೋತಿ ಮತ್ತು ಅವಳ
ತಂಗಿ ಶ್ವೇತಾ ಇವರನ್ನು ಯಲಬುರ್ಗಾ-ಬಂಡಿ ರಸ್ತೆಯ ಮೇಲೆ ಯಲಬುರ್ಗಾ ಕಡೆಯಿಂದ ತುಮ್ಮರಗುದ್ದಿ
ಗ್ರಾಮದ ಕಡೆಗೆ ಅತೀಜೋರಾಗಿ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಯಲಬುರ್ಗಾ
ಪಟ್ಟಣದ ಟಿಪ್ಪು ಸುಲ್ತಾನ ವೃತ್ತದ ಹತ್ತಿರ ಶ್ವೇತಾ ಈಕೆಯು ಮೋಟಾರ ಸೈಕಲ ಮೇಲಿಂದ ರಸ್ತೆಯ ಮೇಲೆ
ಬಿದ್ದಿದ್ದರಿಂದ ಸದ್ರಿಯವಳ ತಲೆಯ ಬಲಗಡೆ ಭಾಗದಲ್ಲಿ ಭಾರಿ ಸ್ವರೂಪದ ಒಳಪೆಟ್ಟಾಗಿ ಕಿವಿಯಿಂದ
ರಕ್ತ ಬರುತ್ತಿದ್ದು, ಹೊಟ್ಟೆಗೆ ಒಳಪೆಟ್ಟಾಗಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಹನಮಸಾಗರ ಪೊಲೀಸ್
ಠಾಣೆ ಗುನ್ನೆ ನಂ: 102/2016 ಕಲಂ: 279, 337, 338 ಐ.ಪಿ.ಸಿ.
ಫಿರ್ಯಾದಿ ಯಮನೂರಸಾಬ ತಂದೆ ಫೀರಸಾಬ ಮಕಂದರ ವಯಾ:
52 ವರ್ಷ ಜಾ: ಮುಸ್ಲಿಂ ಉ: ಗೌಂಡಿಕೆಲಸ ಸಾ: ತುಗ್ಗಲದೋಣಿ, ತಾ: ಕುಷ್ಟಗಿ ಹಾಗೂ ಆರೋಪಿ ಶರಣಪ್ಪ ತಂದೆ
ಹನಮಪ್ಪ ಸೂಡಿ ವಯಾ: 45 ವರ್ಷ, ಉ: ಮೋಟಾರ್ ಸೈಕಲ್ ನಂ:ಕೆ.ಎ-30/ಎಲ್-3834 ನೇದ್ದರ ಸವಾರ/ಗೌಂಡಿಕೆಲಸ
ಜಾತಿ: ಉಪ್ಪಾರ, ಸಾ: ತುಗ್ಗಲದೋಣಿ ಇಬ್ಬರೂ ಕೂಡಿ
ಮೋಟಾರ್ ಸೈಕಲ್ ಕೆ.ಎ-30/ಎಲ್-3834 ನೇದ್ದರ ಮೇಲೆ ಹೋಗುತ್ತಿದ್ದಾಗ ಹನಮನಾಳ ಐ.ಬಿ ಹತ್ತಿರ ಶರಣಪ್ಪನು
ತನ್ನ ಮೋಟಾರ್ ಸೈಕಲ್ಲನ್ನು ಅತೀವೇಗ ಹಾಗೂ ಆಲಕ್ಷತನದಿಂದ ನಡೆಸಿ ರೋಡಿನ ಎಡಗಡೆ ಅಂಚಿನಲ್ಲಿ ಸ್ಕಿಡ್
ಮಾಡಿದ್ದು ಇಬ್ಬರಿಗೂ ಸಾದಾ ಹಾಗೂ ಭಾರಿ ಒಳಪೆಟ್ಟುಗಳಾಗಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ
ಕೈಗೊಂಡಿದ್ದು ಇರುತ್ತದೆ.
4] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 326/2016 ಕಲಂ 279, 337, 338 ಐ.ಪಿ.ಸಿ. & 187 ಐ.ಎಂ.ವಿ ಯ್ಯಾಕ್ಟ.
ದಿನಾಂಕ.
23-11-2016 ರಂದು 08-15 ಪಿ.ಎಂ.ಕ್ಕೆ ಗಂಗಾವತಿ ಉಪವಿಭಾಗ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ
ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಭೀಮಮ್ಮ ತಂ/ ಪಾಮಪ್ಪ ವಯಾ 16, ಜಾ. ಮಾದಿಗ ಉ. ವಿದ್ಯಾರ್ಥಿ
ಸಾ. ಸಂಗಾಪುರ ಇವರು ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಶವೆನಂದರೆ. ದಿನಾಂಕ. 23-11-2016 ರಂದು ಸಾಯಂಕಾಲ
05-00 ಗಂಟೆಗೆ ಫಿರ್ಯಾದಿದಾರಳು ಮತ್ತು ಫಿರ್ಯಾದಿ ತಂದೆ ಪಾಮಪ್ಪ ಇಬ್ಬರು ಕೂಡಿಕೊಂಡು ತಮ್ಮ ಟಿ.ವಿ.ಎಸ್.
ಎಕ್ಸ.ಎಲ್ ಮೋ.ಸೈ. ನೇದ್ದರಲ್ಲಿ ಹೋಗುತ್ತಿರುವಾಗ ಸಂಗಾಪುರ ಹತ್ತಿರ ಗಂಗಾವತಿ ಸಂಗಾಪುರ ರಸ್ತೆಯ ಮೇಲೆ
ಫಿರ್ಯಾದಿದಾರರ ಮೋ.ಸೈ. ಎದುರಿಗೆ ಸಂಗಾಪುರ ಕಡೆಯಿಂದ ಯಾವುದೋ ಒಂದು ಮೋ.ಸೈ. ಚಾಲಕ ಮೋ. ಸೈ.ನ್ನು
ಅತಿವೇಗವಾಗಿ ತೀವ್ರ ನಿರ್ಲಕ್ಷತನದಿಂದ ಚಲಾಯಸಿಕೊಂಡು ಫಿರ್ಯಾದಿದಾರರ ಮೋಟಾರ ಸೈಕಲ್ ಎದುರಿಗೆ ಬಂದು
ಡಿಕ್ಕಿ ಕೊಟ್ಟು ಅಪಘಾತ ಮಾಡಿ ಮೋಟಾರ ಸೈಕಲ್ ನಿಲ್ಲಿಸದೆ ಹೋಗಿರುತ್ತಾನೆ. ಈ ಅಪಘಾತದಿಂದ ಫಿರ್ಯಾದಿಗೆ
ತಲೆಗೆ ಗಾಯವಾಗಿದ್ದು, ಫಿರ್ಯಾದಿ ತಂದೆಗೆ ಬಲಗಣ್ಣಿಗೆ, ಬಾಯಿಗೆ ಬಲಕಾಲ ಮೊಣಕಾಲಿಗೆ ಗಾಯವಾಗಿರುತ್ತದೆ
ಅಂತಾ ಫಿರ್ಯಾಧಿ ನೀಡಿದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ
0 comments:
Post a Comment