Our Commitment For Safe And Secure Society

Our Commitment For Safe And Secure Society

This post is in Kannada language.

To view, you need to download kannada fonts from the link section.
Follow on FACEBOOK
Koppal District Police
As per SO 1017 New beat system is introduced in Koppal District. Click on Links to know your area in charge officers ASI/HC/PC

Wednesday, December 28, 2016

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 215/2016 ಕಲಂ 287, 304(ಎ) ಐ.ಪಿ.ಸಿ:
ದಿನಾಂಕ: 27-12-2016 ರಂದು 2-00 ಪಿ.ಎಂ.ಕ್ಕೆ. ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾಧಿಯನ್ನು ಹಾಜರ್ ಪಡಿಸಿದ್ದು ಅದರ ಸಾರಾಂಶವೇನೆಂದರೆ ಪಿರ್ಯಾಧಿದಾರರ ಮಗನಾದ ಮೃತ ಹನುಮನಾಯಕ ವಯಾ 28 ವರ್ಷ ಇವನು ಹಿರೇಕಾಸನಕಂಡಿ ಸೀಮಾದಲ್ಲಿರುವ ಹೆಚ್.ಆರ್.ಜಿ.ಆಲಾಯಸ್ ಫ್ಯಾಕ್ಟರಿಯಲ್ಲಿಯ ಬಿ.ಸಿ.ಪ್ಲಾಂಟ್ ದಲ್ಲಿ  ಸಬ್ ಕಂಟ್ರಾಕ್ಟರ ಎಲ್.ವಿ.ಮುರಳೀಧರನ್ ನಿರ್ಧೇಶಕರು ಇ.ಓ.ಎಂ. ಸರ್ವೀಸ್ ಪ್ರವೇಟ್ ಲಿಮಿಟೆಡ್ ಇವರಲ್ಲಿ ಬಿ.ಎಸ್.ಪಿ.ಅಪರೇಟರ್ ಅಂತಾ ಮೂರು ವರ್ವದಿಂದ ಕೆಲಸ ಮಾಡುತ್ತಿದ್ದು ಸದರಿಯವನು ದಿನಾಂಕ 27-12-2016 ರಂದು 07-15 ಎ.ಎಂ.ಕ್ಕೆ ಸದರ ಪ್ಲಾಂಟ್ ದಲ್ಲಿರುವ ಕನ್ವರಬೆಲ್ಟ ಮಷಿನ್ ದಲ್ಲಿ  ಅಪರೇಟರ ಕೆಲಸ ಮಾಡುತ್ತಿರುವಾಗ ಆರೋಪಿತರು ಮೃತನಿಗೆ ಮಷಿನದಲ್ಲಿ ಕೆಲಸ ಮಾಡುವ ಬಗ್ಗೆ ತಿಳುವಳಿಕೆ ಮಾಹಿತಿ ನೀಡದೆ ಮತ್ತು ಅವನ ಜೀವ ರಕ್ಷಣೆಗೆ ಹೆಲ್ಮೆಟ್ ಇತರೆ ವಸ್ತು ನೀಡದೆ ನಿಷ್ಕಾಳಜಿಯಿಂದ ಕೆಲಸ ಮಾಡಿಸಿದ್ದರಿಂದ ಮೃತನು ಸದರಿ ಬೆಲ್ಟ ಮಷಿನ್ ದಲ್ಲಿ ಬಿದ್ದು ಭಾರಿ ಗಾಯಗೊಂಡು ಅಂಬುಲೆನ್ಸದಲ್ಲಿ ಚಿಕಿತ್ಸೆಗಾಗಿ  ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸದರಿ ಫ್ಯಾಕ್ಟರಿಯ ಅವರಣದಲ್ಲಿ ಅಂಬುಲೆನ್ಸನಲ್ಲಿ 07-30 ಎ.ಎಂ.ಕ್ಕೆ ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 151/2016 ಕಲಂ: 279, 337, 338 ಐಪಿಸಿ
ದಿನಾಂಕ:27-12-2016 ರಂದು 7.30 ಪಿಎಂಕ್ಕೆ ಫಿರ್ಯಾದಿದಾರು ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ತಾನು ಹಾಗೂ ತಮ್ಮೂರ ಜನರೊಂದಿಗೆ ಹುಲಿಗಿ ಹತ್ತಿರ ದನಕರುಗಳಿಗೆ ನೆಲ್ಲು(ಭತ್ತದ)ಹುಲ್ಲು ತರಲು ತಮ್ಮೂರ ಟ್ರ್ಯಾಕ್ಟರ್ ನಂ.ಕೆ.ಎ.26 ಟಿ.ಎ.9852 ನೇದ್ದನ್ನು ಬಾಡಿಗೆ ಮಾಡಿಕೊಂಡು ತಮ್ಮೂರಿನಿಂದ ಇಂದು ಬೆಳಿಗ್ಗೆ 6.00 ಗಂಟೆಗೆ ಹುಲಿಗಿಗೆ ಹೋಗಿ ಅಲ್ಲಿ ಭತ್ತದ ಹುಲ್ಲನ್ನು ಖರೀದಿಮಾಡಿಕೊಂಡು ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಲೋಡ್ ಮಾಡಿಕೊಂಡು ಹುಲಿಗಿಯಿಂದ ಮದ್ಯಾಹ್ನ 12.00 ಗಂಟೆಗೆ ಹೊರಟು ತಳಕಲ್ ದಾಟಿ ಮದ್ಯಾಹ್ನ 2.40 ಗಂಟೆ ಸುಮಾರಿಗೆ ಪೆಟ್ರೋಲ್ ಬಂಕ್ ಸಮೀಪ ಬನ್ನಿಕೊಪ್ಪ ಕಡೆಗೆ ಹೊರಟಾಗ ತಮ್ಮ ಟ್ರ್ಯಾಕ್ಟರ್ ಹಿಂದುಗಡೆಯಿಂದ ಲಾರಿಯನ್ನು ಅದರ ಚಾಲಕ ಅತೀವೇಗವಾಗಿ ನಡೆಸಿಕೊಂಡು ಬಂದು ತನ್ನ ವಾಹನದ ಮುಂದೆ ಹೊರಟ ಟ್ರ್ಯಾಕ್ಟರ್ ನ್ನು ಗಮನಿಸದೇ ಅಲಕ್ಷ್ಯತನದಿಂದ ಟ್ರ್ಯಾಕ್ಟರ್ ಟ್ರ್ಯಾಲಿಗೆ ಟಕ್ಕರುಕೊಟ್ಟು ಅಪಘಾತ ಮಾಡಿದ್ದು, ಘಟನೆಯಿಂದ ಟ್ರ್ಯಾಕ್ಟರ್ ಟ್ರ್ಯಾಲಿಯ ಹುಲ್ಲಿನ ಮೇಲಿದ್ದವರಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 339/2016 ಕಲಂ 143, 147, 148, 323, 324, 354, 504, 506 ಸಹಿತ 149 ಐ.ಪಿ.ಸಿ:.

ದಿನಾಂಕ:- 27-12-2016 ರಂದು ಮಧ್ಯಾಹ್ನ ನಮ್ಮ ಹೊಲದ ಹತ್ತಿರ ಇರುವ ಮದ್ದಾನಮ್ಮ ಎಂಬುವವರ ಜಮೀನಿನಲ್ಲಿರುವ ಟ್ರಾನ್ಸಫರ್ಮರನ ಫ್ಯೂಜ್ ಹೋಗಿದ್ದರಿಂದ ನಾನು ಫ್ಯೂಜ್ ಹಾಕಲು ನಾಲಾ ರಸ್ತೆಯಲ್ಲಿ ಹೋಗುತ್ತಿರುವಾಗ ಬೆಟದಪ್ಪನ  ಮಗ ಶಿವಲಿಂಗಪ್ಪನು ಇಲ್ಲಿಂದ ಯಾಕೆ ತಿರುಗಾಡುತ್ತಿಯಾ ಅಂತಾ ನನ್ನೊಂದಿಗೆ ಜಗಳ ಮಾಡಿದನು.  ಇದರಿಂದ ನಾನು ವಾಪಸ್ ಬಂದೆನು.  ಸಂಜೆ 6:00 ಗಂಟೆಯ ಸುಮಾರಿಗೆ ನಾನು ಮನೆಯ ಹತ್ತಿರ ಇರುವಾಗ (1) ಬೆಟದಪ್ಪ ತಂದೆ  ಉಲ್ತೆಪ್ಪ ಜಲ್ಲಿ,- 55 ವರ್ಷ (2) ಶರಣಪ್ಪ ತಂದೆ ಬೆಟದಪ್ಪ ಜಲ್ಲಿ-30 ವರ್ಷ (3) ಮದ್ದಾನೆಪ್ಪ ತಂದೆ ರುದ್ರಪ್ಪ ಜಲ್ಲಿ-40 ವರ್ಷ (4) ಯಲ್ಲಮ್ಮ ಗಂಡ ಮದ್ದಾನಪ್ಪ-32 ವರ್ಷ, (5) ದೇವಮ್ಮ ಗಂಡ ಯಮನೂರಪ್ಪ-40 ವರ್ಷ (6) ಸೂರ್ಯಪ್ಪ ತಂದೆ ಕರಿಯಪ್ಪ ಜಲ್ಲಿ-25 ವರ್ಷ (7) ಕರಿಯಪ್ಪ ತಂದೆ ಚಂದ್ರಪ್ಪ ಜಲ್ಲಿ-50 ವರ್ಷ (8) ದುರಗಮ್ಮ ಗಂಡ ಶಿವಲಿಂಗಪ್ಪ-30 ವರ್ಷ (9) ಶಿವಲಿಂಗಪ್ಪ ತಂದೆ ಬೆಟದಪ್ಪ-35 ವರ್ಷ ಎಲ್ಲರೂ ಜಾತಿ: ಕುರುಬರು ಸಾ: ಮುಕ್ಕುಂಪಿ ಇವರುಗಳು ಅಕ್ರಮಕೂಟ ರಚಿಸಿಕೊಂಡು ಸಮಾನ ಉದ್ದೇಶದಿಂದ ಕೂಡಿಕೊಂಡು ಬಂದು ನನಗೆ “ ಲೇ ಸೂಳೇ ಮಗನೇ ನಿನಗೆ ಎಷ್ಟು ತಿಂಡಿಲೇ, ನಮ್ಮ ಹೊಲದ ದಾರಿಯಲ್ಲಿ ತಿರುಗಾಡಬೇಡಾ ಅಂದರೆ ಅಲ್ಲಿಯೇ ತಿರುಗಾಡುತ್ತೀಯೇನಲೇ” ಅಂತಾ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದಾಡಿ ನನಗೆ ಕೈಗಳಿಂದ ಹೊಡಿ-ಬಡಿ ಮಾಡಿದರು. ದೇವಮ್ಮಳು ಕಟ್ಟಿಗೆಯಿಂದ ನನ್ನ ತಲೆಗೆ ಹೊಡೆದಿದ್ದು, ಇದರಿಂದ ಒಳಪೆಟ್ಟಾಯಿತು.  ಆಗ ಇದನ್ನು ನೋಡಿ ಬಿಡಿಸಲು ಬಂದ ನನ್ನ ತಮ್ಮನಾದ (1) ನಿಂಗಪ್ಪ ತಂದೆ ಚಂದ್ರಪ್ಪ-38 ವರ್ಷ, (2) ಶ್ರೀಮತಿ ಸುನೀತಾ ಗಂಡ ಶರಣಪ್ಪ ಜಮಾಪೂರು, ವಯಸ್ಸು 19 ವರ್ಷ,   (3) ಹನುಮಮ್ಮ ಗಂಡ ಚಂದ್ರಪ್ಪ-60 ವರ್ಷ,  (4) ಶರಣಮ್ಮ ಗಂಡ ಮರಿಯಪ್ಪ-32 ವರ್ಷ,   (5) ಗಾದೆಮ್ಮ ಗಂಡ ನಿಂಗಪ್ಪ, 35 ವರ್ಷ ಇವರುಗಳಿಗೂ ಸಹ ಎಲ್ಲರೂ ಕೂಡಿಕೊಂಡು ಕೈಗಳಿಂದ ಹಾಗೂ  ಕಟ್ಟಿಗೆಯಿಂದ ಹೊಡಿ-ಬಡಿ ಮಾಡಿ   ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ. ಕಾರಣ  ಮೇಲ್ಕಂಡ 9 ಜನರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ” ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008