Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, December 27, 2016

1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 299/2016 ಕಲಂ ಮನುಷ್ಯ ಕಾಣೆ.   
ದಿನಾಂಕ 26-12-2016 ರಂದು ರಾತ್ರಿ 2000 ಗಂಟೆಗೆ ಫಿರ್ಯಾದಿ  ಧಶರತಕುಮಾರ ತಂದೆ ಭವರಲಾಲ್ ಜೀ ವಯಸ್ಸು 34 ವರ್ಷ ಜಾ:ರಾಜ ಪುರೋಹಿತ ಉ: ವ್ಯಾಪಾರ ಸಾ: ಬಂಬು ಬಜಾರ ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಫಿರ್ಯಾದಿದಾರರ ಅಣ್ಣನ ಮಗನಾದ ಮನೀಷ್ ಕುಮಾರ ವಯಾ 19 ವರ್ಷ ಇತನು. ದಿನಾಂಕ: 22-12-2016 ರಂದು ಸಂಜೆ 7-00 ಗಂಟೆಯ ಸುಮಾರಿಗೆ ಸಿನಿಮಾವನ್ನು ನೋಡಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೋದವನು ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾನೆ.  ಕಾರಣ ಕಾಣೆಯಾದ ಮನೀಷಕುಮಾರ ಎತ್ತರ 5-9 ಅಡಿ, ತೆಳ್ಳನೆಯ ಮೈಕಟ್ಟು, ಕೆಂಪು ಮೈಬಣ್ಣ, ಉದ್ದನೆಯ ಮುಖ ಮುಖ, ಕನ್ನಡ, , ಹಿಂದಿ, ಇಗ್ಲೀಷ ಭಾಷೆಗಳನ್ನು ಮಾತನಾಡುತ್ತಾನೆ, ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಟೀ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು ಇರುತ್ತದೆ, ಸದರಿಯವನಿಗೆ ಎಡ ಕುತ್ತಿಗೆಯ ಹತ್ತಿರ  ಮನೀಷ ಅಂತಾ ಅಚ್ಚೆ ಹಾಕಿಸಿಕೊಂಡಿರುತ್ತಾನೆ ಇತನನ್ನು ಪತ್ತೆ ಹಚ್ಚಿಕೊಡಬೇಕೆಂದು ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 337/2016 ಕಲಂ: 279, 338, 304(ಎ) ಐಪಿಸಿ
ದಿನಾಂಕ: 26-12-2016 ರಂದು ಬೆಳಗಿನ ಜಾವ 3:30 ಗಂಟೆಯ ಸುಮಾರಿಗೆ ಗಂಗಾವತಿಯ ಮಲ್ಲಿಕಾರ್ಜುನ ನರ್ಸಿಂಗ್ ಹೋಮದಿಂದ ಆರ್.ಟಿ.ಎ. ಬಗ್ಗೆ ಪೋನ್ ಮುಖಾಂತರ ಎಂ.ಎಲ್.ಸಿ. ಸ್ವೀಕೃತವಾಗಿದ್ದು ಆಸ್ಪತ್ರೆಗೆ ಬೇಟಿ ಕೊಟ್ಟು ಗಾಯಾಳು ಶ್ರೀ ತಾಯಪ್ಪ ತಂದೆ ದೇವಪ್ಪ ಹೂಗಾರ, ವಯಸ್ಸು: 38 ವರ್ಷ ಜಾತಿ: ಹೂಗಾರ, ಉ: ಪರ್ಟಿಲೈಸರ್ ಕೆಲಸ ಸಾ: ಮರಳಿ ತಾ: ಗಂಗಾವತಿ ಇವರ ನುಡಿ ಹೇಳಿಕೆ ದೂರನ್ನು ಪಡೆದುಕೊಂಡಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ನಿನ್ನೆ ದಿನಾಂಕ: 25-12-2016 ರಂದು ರಾತ್ರಿ 11:30 ಗಂಟೆಯ ಸುಮಾರಿಗೆ ಫಿರ್ಯಾದಿ ಹಾಗೂ ಫಿರ್ಯಾದಿ ಸಂಭಂದಿ ದೇವಪ್ಪ ತಂದೆ ಕಂತೆಪ್ಪ ಹೂಗಾರ ಅವರ ದೊಡ್ಡಮ್ಮಳಾದ ಶ್ರೀಮತಿ ಹನುಮಂತಮ್ಮ ಗಂಡ ಅಯ್ಯಪ್ಪ ಹೂಗಾರ 65 ವರ್ಷ ಮೂರು ಜನರು ಕೂಡಿಕೊಂಡು ತಮ್ಮ ಕಾರ್ ನಂ: ಕೆ.ಎ-28/ಎಂ-4031 ನೇದ್ದರಲ್ಲಿ ಬೆಲ್ಲದಮಡಿ ಗ್ರಾಮದಿಂದ ವಾಪಸ್ಸು ಮರಳಿ ಗ್ರಾಮಕ್ಕೆ ಸಿಂಧನೂರ - ಗಂಗಾವತಿ ಮುಖ್ಯ ರಸ್ತೆಯಲ್ಲಿ ಬರುತ್ತಿರುವಾಗ ಪ್ರಗತಿನಗರ ಗ್ರಾಮ ಸೀಮಾದಲ್ಲಿ ಪೆಟ್ರೊಲ್ ಬಂಕ ಹತ್ತಿರ ಕಾರ್ ನಡೆಸುತ್ತಿದ್ದ ದೇವಪ್ಪ ಈತನು ಕಾರ್ ನ್ನು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದಿದ್ದರಿಂದ ಎದುರುಗಡೆಯಿಂದ ಬರುತ್ತಿದ್ದ ವಾಹನಗಳ ಲೈಟಿನ ಬೆಳಕಿಗೆ ರಸ್ತೆ ಕಾಣದೇ ವೇಗವನ್ನು ನಿಯಂತ್ರಿಸಲು ಆಗದೇ ರಸ್ತೆಯ ಪಕ್ಕ ತೆಗ್ಗಿನಲ್ಲಿ ಪಲ್ಟಿಯಾಗಿ ಬಿದ್ದಿದ್ದು ಇದರಿಂದಾಗಿ ಫಿರ್ಯಾದಿಗೆ ಹಾಗೂ ಹನುಮಂತಮ್ಮ ಮತ್ತು ಕಾರ ಚಾಲಕ ದೇವಪ್ಪನಿಗೆ ತೀವ್ರ ಸ್ವರೂಪದ ಗಾಯ ಹಾಗೂ ಒಳಪೆಟ್ಟಾಗಿದ್ದು ಚಿಕಿತ್ಸೆ ಕುರಿತು ಟೋಲ್ ಗೇಟ ಅಂಬ್ಯುಲೆನ್ಸ್ ವಾಹನದಲ್ಲಿ ಗಂಗಾವತಿಯ ಮಲ್ಲಿಕಾರ್ಜುನ ನರ್ಸಿಂಗ್ ಹೋಮಗೆ ಬಂದು ದಾಖಲಾಗಿದ್ದು ಇರುತ್ತದೆ. ನಂತರ ಗಾಯಾಳು ಹನುಮಂತಮ್ಮಳು ಚಿಕಿತ್ಸೆ ಪಡೆಯುತ್ತಿರುವಾಗ ಇಂದು ದಿನಾಂಕ: 26-12-2016 ರಂದು ಬೆಳಗಿನ ಜಾವ 2:30 ಗಂಟೆಗೆ ಮೃತಪಟ್ಟಿರುತ್ತಾಳೆ ಅಂತಾ ಮುಂತಾಗಿ ನೀಡಿದ ಫಿರ್ಯಾಧಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಬೇವೂರು ಪೊಲೀಸ್ ಠಾಣೆ ಗುನ್ನೆ ನಂ: 86/2016 ಕಲಂ 20 (b) (II) (B)  NDPS Act 1985
ಆರೋಪಿ ದುರುಗಪ್ಪ ಹರಿಜನ ಇವನು ಮರಕಟ್ ಗ್ರಾಮದಲ್ಲಿ ತನ್ನ ಮನೆಯ ಮುಂದೆ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡಲು ಗಾಂಜಾ ಗಿಡಗಳನ್ನು ಬೆಳಸಿದ್ದು ದಿನಾಂಕ: 25.12.2016 ರಂದು ಪಿಎಸ್ಐ ಯಲಬುರ್ಗಾ ರವರಿಗೆ ಈ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಮತ್ತು ಬೇವೂರ ಠಾಣೆಯ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ಬಾತ್ಮಿ ಪ್ರಕಾರ ಮರಕಟ್ ಗ್ರಾಮದಲ್ಲಿ ಆರೋಫಿತನು ತನ್ನ ಮನೆಯ ಮುಂದೆ ಬೇಳೆಸಿದ ಗಾಂಜಾ ಗಿಡಿಗಳು ಪಂಚರ ಸಮಕ್ಷಮ ಕಿತ್ತಿದ್ದು ಅವುಗಳು ತೂಕ 2 ಕೆ.ಜಿ 10 ಗ್ರಾಂ, ಇದ್ದು  ಅ.ಕಿ. 5000/- ರೂ, ಕಿಮ್ಮತ್ತಿನ ಗಾಂಜಾ ಗಿಡಗಳನ್ನು ಜಪ್ತ ಮಾಡಿಕೊಂಡು ಠಾಣೆಗೆ ಬಂದು ಪಂಚನಾಮೆಯೊಂದಿಗೆ ಪಿರ್ಯಾಧಿ ನೀಡಿದ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008