ದಿನಾಂಕ 30-11-2016 ರಂದು 2100 ಗಂಟೆಗೆ ಫಿರ್ಯಾಧಿ ಲಕ್ಷ್ಮಣ ತಂದೆ ಹನುಮಂತಪ್ಪ ಶಾಖಾಪುರ, ವಯಸ್ಸು
32 ವರ್ಷ, ಜಾ: ನಾಯಕ, ಉ: ಗೌಂಡಿ ಕೆಲಸ, ಸಾ: ಸಿದ್ದಿಕೇರಿ, ತಾ: ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ನನ್ನ ಮಕ್ಕಳಾದ
ನಾಗರಾಜ, 12 ವರ್ಷ, ತಿಪ್ಪಣ್ಣ @ ಚಿನ್ನು 10 ವರ್ಷ ಹಾಗೂ ನಮ್ಮ ಮನೆ ಪಕ್ಕದಲ್ಲಿ ವಾಸವಾಗಿರುವ ಗೋವಿಂದಪ್ಪ
ತಂದೆ ರಾಮಣ್ಣ ವಡ್ಡರ ಇವರ ಮೊಮ್ಮಗನಾದ ತಿಮ್ಮಪ್ಪ ತಂದೆ ಯಲ್ಲಪ್ಪ, 11 ವರ್ಷ ಇವರೆಲ್ಲರೂ ಬೆಳಿಗ್ಗೆ
11-30 ರಿಂದ ಮಧ್ಯಾಹ್ನ 12-00 ಗಂಟೆಯ ಮಧ್ಯದ ಅವಧಿಯಲ್ಲಿ ಗಂಗಾವತಿ ನಗರದ ಈದ್ಗಾ ಕಾಲೋನಿಯಲ್ಲಿರುವ
ಪ್ರತಿಭಾ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರದಿಂದ ಕಾಣೆಯಾಗಿದ್ದು, ಇಲ್ಲಿಯವರೆಗೆ ಸಿದ್ದಿಕೇರಿಯಲ್ಲಿ
ಎಲ್ಲಾ ಕಡೆಗೆ ಹಾಗೂ ಸಂಬಂಧಿಕರ ಊರುಗಳಲ್ಲಿ ವಿಚಾರಿಸಲಾಗಿ ಯಾರೂ ಸಹ ತಮಗೆ ಗೊತ್ತಿರುವುದಿಲ್ಲಾ ಅಂತಾ
ತಿಳಿಸಿರುತ್ತಾರೆ. ನಂತರ ನಮ್ಮ ದೂರದ ಸಂಬಂಧಿಕರಿಗೂ ಸಹಾ ಫೋನ್ ಮಾಡಿ ವಿಚಾರಿಸಲಾಗಿ
ಅವರೂ ಸಹಾ ತಮಗೇನೂ ಗೊತ್ತಿಲ್ಲವೆಂದು ತಿಳಿಸಿದರು. ಕಾರಣ ಮೂವರು ಮಕ್ಕಳನ್ನು ಇಲ್ಲಿಯವರೆಗೆ ಹುಡುಕಾಡಲಾಗಿ
ಸಿಕ್ಕಿರುವುದಿಲ್ಲಾ. ಅಪ್ರಾಪ್ತರಾಗಿರುವ ಅವರನ್ನು ಯಾರೋ ಯಾವುದೋ ಉದ್ದೇಶಕ್ಕೆ ಅಪಹರಣ
ಮಾಡಿಕೊಂಡು ಹೋಗಿರುವ ಸಂಭವವಿದ್ದು, ಕಾರಣ ಅವರನ್ನು ಪತ್ತೆ ಮಾಡಿ ಕೊಡಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 216/2016
ಕಲಂ: 454, 457, 380 ಐ.ಪಿ.ಸಿ:.
ದಿನಾಂಕ: 30-11-2016 ರಂದು ಸಂಜೆ 6-30 ಗಂಟೆಗೆ ಫಿರ್ಯಾದಿದಾರರಾದ ಹನಮಂತ ತಂದೆ ಗೌಡಪ್ಪ
ಬಿರಾದಾರ ಸಾ: ಕಿರ್ತಿ ಕಾಲೋನಿ ಭಾಗ್ಯನಗರ ಕೊಪ್ಪಳರವರು ಫಿರ್ಯಾದಿಯ ನೀಡಿದ್ದು, ಫಿರ್ಯಾದಿದಾರರು ದಿನಾಂಕ:
23-11-2016 ರಂದು ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ತಾನು ತನ್ನ ಕುಟುಂಬದೊಂದಿಗೆ ತನ್ನ
ಹೆಂಡತಿಯ ಊರಿಗೆ ಹೋಗಿದ್ದು ಹೋಗುವಾಗ ತನ್ನ ಮನೆಯ ಬೀಗವನ್ನು ಹಾಕಿಕೊಂಡು ಹೋಗಿದ್ದು ನಂತರ
ದಿನಾಂಕ: 28-11-2016 ರಂದು ಮದ್ಯಾಹ್ನ 2-00 ಗಂಟೆಗೆ ತಾನೊಬ್ಬನೆ ಊರಿಂದ ಬಂದು ಕೆಲಸಕ್ಕೆ ಹೋಗಿ
ತನ್ನ ಕೆಲಸ ಮುಗಿಸಿಕೊಂಡು ಸಂಜೆ 7-00 ಗಂಟೆಗೆ ಮನೆಗೆ ಬಂದಾಗ ತನ್ನ ಮನೆಯ ಬೀಗದ ಚಿಲಕದ
ಕೊಂಡಿ ಮುರಿದಿದ್ದು ಮತ್ತು ಸೆಂಟರ್ ಲಾಕ್ ಮುರಿದಿದ್ದು ಕಂಡು ಬಂದು ಬಾಗಿಲು ತೆಗೆದು ಒಳ ಹೋಗಿ
ನೋಡಿದಾಗ ಮನೆಯ ಬೆಡ್ ರೂಮ್ ನಲ್ಲಿದ್ದ ಅಲಮಾರವನ್ನು ಮೀಟಿ ತೆರೆದು ಅದರ ಸೇಫ್ ಲಾಕರ್ ನ್ನು ಕೂಡಾ
ಮೀಟಿ ತೆರೆದು ಅದರಲ್ಲಿದ್ದ ಒಟ್ಟು 19 ಗ್ರಾಂ ಬಂಗಾರದ ಆಭರಣಗಳು ಮತ್ತು 5 ತೋಲೆ ಬೆಳ್ಳಿಯ
ಲಕ್ಷ್ಮೀಯ ಮುಖವಾಡ ಎಲ್ಲಾ ಸೇರಿ ಒಟ್ಟು ಅಂ.ಕಿ.ರೂ: 23,800=00 ಬೆಲೆ ಬಾಳುವುಗಳು ಕಾಣಲಿಲ್ಲಾ ಯಾರೋ ಕಳ್ಳರು ಕಳ್ಳತನ ಮಾಢಿಕೊಂಡು ಹೋಗಿದ್ದು
ಇರುತ್ತದೆ. ಪ್ರಕರಣ ದಾಖಾಲು ಮಾಢಿಕೊಂಡು ತನಿಖೆ ಕೈಗೊಂಡೇನು.
0 comments:
Post a Comment