ದಿನಾಂಕ: 01-12-2016 ರಂದು ಸಂಜೆ 17: 30 ಗಂಟೆಗೆ ಶ್ರೀ ಈರಣ್ಣ ಮಾಳವಾಡ ಎ.ಎಸ್.ಐ. ತಾವರಗೇರಾ
ಪೊಲೀಸ್ ಠಾಣೆರವರು ಗಣಕೀಕೃತ ವರದಿ, ದಾಳಿ ಪಂಚನಾಮೆ, ಮುದ್ದೇಮಾಲು ಸಿಕ್ಕಿಬಿದ್ದ 09 ಜನ ಆರೋಪಿತರನ್ನು
ಹಾಜರಪಡಿಸಿದ್ದು, ವರದಿಯಲ್ಲಿ ತಾವರಗೇರಾ ಠಾಣಾ ವ್ಯಾಪ್ತಿಯ ನವಲಹಳ್ಳಿ ಗ್ರಾಮದ ಶರಣಪ್ಪ ಕಾಗಿರವರ
ಮನೆಯ ಹಿಂದಿನ ಸಾರ್ವಜನಿಕ ರಸ್ತೆಯ ಮೇಲೆ ಅಂದರ್ ಬಾಹರ್ ಎಂಬ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದು,
ಆ ಕಾಲಕ್ಕೆ ಅಧಿಕಾರಿರವರು ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ.
8340-00, ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತ ಮಾಡಿಕೊಂಡಿದ್ದು, ಸಿಕ್ಕಿಬಿದ್ದ 09 ಜನ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿಯನ್ನು
ನೀಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್
ಠಾಣೆ ಗುನ್ನೆ ನಂ: 290/2016 ಕಲಂ: 379 ಐ.ಪಿ.ಸಿ:.
ದಿನಾಂಕ: 01-12-2016 ರಂದು
ರಾತ್ರಿ 8-15 ಗಂಟೆಗೆ ಪಿರ್ಯಾದಿದಾರರಾದ ಬಸವರಾಜ ತಂದೆ ಸಿದ್ದಪ್ಪ ಬಾಗಲಿ ಇವರು ಠಾಣೆಗೆ ಹಾಜರಾಗಿ
ಲಿಖಿತ ದೂರನ್ನು ಸಲ್ಲಿಸಿದ್ದು ಸಾರಾಂಶವೆನೆಂದರೆ ಫಿರ್ಯಾದಿದಾರರು ಒಂದು ಹೊಂಡಾ ಸೈನ್ ಮೋ.ಸೈ ನಂ:
ಕೆ.ಎ-37/ಡಬ್ಲೂ-7516 ನೇದ್ದನ್ನು ತೆಗೆದುಕೊಂಡಿದ್ದು ಸದರಿ ಮೋ.ಸೈ ನೇದ್ದನ್ನು ದಿನಾಂಕ:
30-11-2016 ರಂದು ರಾತ್ರಿ 9-00 ಗಂಟೆಗೆ ತಮ್ಮ ಮನೆಯ ಮುಂದೆ ನಿಲ್ಲಿಸಿ ತಮ್ಮ ವ್ಯಯಕ್ತಿಕ ಕೆಲಸದ
ನಿಮಿತ್ಯ ಕೊರಡಕೇರಾಕ್ಕೆ ಹೋಗಿ ವಾಪಾಸ್ ರಾತ್ರಿ 11-00 ಗಂಟೆಯ ಸುಮಾರಿಗೆ ಬಂದು ನೋಡಲಾಗಿ ಸದರಿ ಮೋ.ಸೈ.
ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ನಂತರ ಇಲ್ಲಿಯವರೆಗೆ ಕುಷ್ಟಗಿಯ ಬಸ್ ನಿಲ್ದಾಣ,
ಮಲ್ಲಯ್ಯ ಸರ್ಕಲ್, ಮಾರುತಿ ಟಾಕೀಜ್, ಬಸವರಾಜ ಟಾಕೀಜ್ ಎಲ್ಲಾ ಕಡೆಗಳಲ್ಲಿ ಹುಡುಕಾಡಲಾಗಿ ನನ್ನ ಮೋ.ಸೈ
ಸಿಕ್ಕಿರುವದಿಲ್ಲ. ಕಾರಣ ನನ್ನ ಮೋ.ಸೈ ನಂ: ಕೆ.ಎ-37/ಡಬ್ಲೂ-7516 ಇಂಜಿನ್ ನಂ: JC36E73184744
ಮತ್ತು ಚೆಸ್ಸಿ ನಂ: ME4JC36KMD7357730 ನೇದ್ದು ಇದರ ಅಂದಾಜು 40,000=00 ರೂ. ಕಿಮ್ಮತ್ತಿನ ಮೋ.ಸೈ
ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ
ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment