ದಿನಾಂಕ 02-12-2016 ರಂದು ಮದ್ಯಾಹ್ನ 01-30 ಗಂಟೆಯ ಸುಮಾರಿಗೆ ನಾಗನಕಲ್
ಗ್ರಾಮದಲ್ಲಿ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕರ ಸ್ಥಳದಲ್ಲಿ ಮಟಕಾ ಜೂಜಾಟ ತೊಡಗಿದ್ದ ಆರೋಪಿತರ
ಮೇಲೆ ಪಿ.ಎಸ್.ಐ ಕಾರಟಗಿ ರವರು ಮತ್ತು ಸಿಬ್ಬಂದಿವರು ಪಂಚರ
ಸಮಕ್ಷದಲ್ಲಿ ದಾಳಿ ಮಾಡಿದಾಗ ಆರೋಪಿ 1 ಸುರೇಶ ತಂದಿ ವೆಂಕಟೇಶ
ಈಡಿಗೇರ ವಯಾ-30 ವರ್ಷ ಜಾ.
ಈಡಿಗೇರ ಉ-ಒಕ್ಕಲುತನ ಸಾ.ನಾಗನಕಲ್ ಇತನು ಸಿಕ್ಕಿಬಿದ್ದಿದ್ದು
ಸಿಕ್ಕಿಬಿದ್ದವನ ಕಡೆಯಿಂದ ರೂ. 3350=00 ಗಳನ್ನು ಮತ್ತು ಸಾಮಾಗ್ರಿಗಳನ್ನು
ಜಪ್ತ ಮಾಡಿಕೊಂಡಿದ್ದು ಆರೋಪಿ ನಂ 1 ಈತನು ತಾನು ಬರೆದ ಪಟ್ಟಿ ಮತ್ತು
ಹಣವನ್ನು ಆರೋಪಿ ನಂ 2 ಏಸುಬಾಬು ತಂದಿ ಸತ್ಯನಾರಾಯಣ ಸಾ.ಚಳ್ಳೂರು ಕ್ಯಾಂಪ್ ಈತನಿಗೆ ಕೊಡುವುದಾಗಿ
ಒಪ್ಪಿಕೊಂಡಿದ್ದು ಇರುತ್ತದೆ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ನೀಡಿದ ವರದಿಯ ಸಾರಾಂಶದ
ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗಕೊಂಡೆನು.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 217/2016
ಕಲಂ: 78(3) Karnataka
Police Act.
ದಿನಾಂಕ: 02-12-2016 ರಂದು ಮದ್ಯಾಹ್ನ 3-00 ಗಂಟೆಗೆ ಎಸ್.ಎಸ್.ಪಾಟೀಲ್
ಪಿಐ ಕೊಪ್ಪಳ ನಗರ ಪೊಲೀಸ್ ಠಾಣೆರವರು ಫಿರ್ಯಾದಿಯೊಂದಿಗೆ ಆರೋಪಿ ಸಮೇತ ಮುದ್ದೆಮಾಲು, ಪಂಚನಾಮೆಯೊಂದಿಗೆ
ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು, ಸದರಿ ಫಿರ್ಯಾದಿಯು ಅಸಂಜ್ಞೆ ಅಪರಾಧವಾಗುತ್ತಿದ್ದರಿಂದ ಮದ್ಯಾಹ್ನ
3-30 ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಕೊಂಡಿದ್ದು, ಸದರ ಫಿರ್ಯಾದಿಯ ಸಾರಾಂಶ ಏನೆಂದರೆ,
ಇಂದು ದಿ: 02-12-2016 ರಂದು ಮದ್ಯಾಹ್ನ 1-45 ಗಂಟೆಗೆ ಕೊಪ್ಪಳ ನಗರದ ದೇವರಾಜ ಅರಸ ಕಾಲೋನಿಯಲ್ಲಿ
ಎಣ್ಣಿ ಅಂಗಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಅಶೋಕ ತಂದೆ ಹನುಮಂತಪ್ಪ ಕುಲ್ಡೇಕರ್
ವಯಾ: 38 ವರ್ಷ ಜಾ: ಅಕ್ಕಸಾಲಿಗ ಉ: ಹೋಟೆಲ್ ಕೆಲಸ ಸಾ: ದೇವರಾಜ ಅರಸ ಕಾಲೋನೀ ಕೊಪ್ಪಳ. ಇತನು ಜನರ
ಗುಂಪಿನಲ್ಲಿ ನಿಂತುಕೊಂಡು ಜನರಿಗೆ ಯಾರ ಅದೃಷ್ಟ ನಸೀಬದ ಜೂಜಾಟ 1-00 ರೂಪಾಯಿಗೆ 80-00 ರೂಪಾಯಿ ಬರುತ್ತದೆ
ಅಂತಾ ಕೂಗುತ್ತಾ ಹಣ ಪಡೆದುಕೊಳ್ಳುತ್ತಿದ್ದು, ಮಟಕಾ ನಂಬರಗಳ ಚೀಟಿ ಬರೆದುಕೊಡುತ್ತಿರುವ ಕಾಲಕ್ಕೆ
ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದಾಗ ಆರೋಪಿ ಅಶೋಕ ತಂದೆ ಹನುಮಂತಪ್ಪ ಕುಲ್ಡೇಕರ್ ಇತನು
ಸಿಕ್ಕಿದ್ದು ಇತನಿಂದ 1] 850=00 ರೂ. ನಗದು ಹಣ. 2] ಒಂದು ಬಾಲ್ಪೆನ್. ಅಂಕಿ ಇಲ್ಲಾ. 3] ಒಂದು ಮಟಕಾ
ಅಂಕಿ ಸಂಖ್ಯೆ ಬರೆದ ಮಟಕಾ ಪಟ್ಟಿ ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು, ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.
0 comments:
Post a Comment