ಫಿರ್ಯಾದಿದಾರರಾದ ಸುಬ್ಬಣ್ಣಸಾ ತಂದೆ ತಿಪ್ಪಣ್ಣಸಾ ಮಗಜಿ ಇವರು ಲಿಖಿತ ಫಿರ್ಯಾದಿಯನ್ನು
ಹಾಜರಪಡಿಸಿದ್ದು,
ದಿನಾಂಕ. 05-12-2016 ರಂದು ಮದ್ಯಾಹ್ನ 1-10 ಗಂಟೆ ಸುಮಾರು
ಪಿರ್ಯಾದಿಯ ಖಾಸಾ ಅಣ್ಣನ ಮಗನಾದ ವಿನಾಯಕ ತಂದೆ ದೇವೇಂದ್ರಸಾ ಮಗಜಿ ವಯ: 20 ವರ್ಷ, ಉ:ವ್ಯಾಪಾರ,
ಸಾ: ಕಲ್ಯಾಣನಗರ, ಕಿನ್ನಾಳ ರಸ್ತೆ, ಕೊಪ್ಪಳ ಈತನು ಕೊಪ್ಪಳದ
ಟ್ರಿನೀಟಿ ಶಾಲೆಯಿಂದ ತನ್ನ ತಮ್ಮ ವಿವೇಕ ವಯ:11 ವರ್ಷ ಈತನನ್ನು ಕರೆದುಕೊಂಡು ಪಲ್ಸರ್ ಸ್ಕೂಟಿ
ನಂ. ಕೆ.ಎ-37/ಇಎ-1206 ನೇದ್ದರಲ್ಲಿ ಕರೆದುಕೊಂಡು ಎನ್.ಹೆಚ್.-63 ರಸ್ತೆಯ ತ್ರಿಕೋಟಿಕರ
ಪೆಟ್ರೋಲ್ ಬಂಕ್ ಮುಂದೆ ಪೆಟ್ರೋಲ್ ಹಾಕಿಸಲು ಸದರಿ ವಾಹನ ದಬ್ಬಿಕೊಂಡು ನಡೆದುಕೊಂಡು ಬಂಕ್
ಹತ್ತಿರ ಹೋಗುವಾಗ ಗದಗ ರಸ್ತೆಯಿಂದ ಲಾರಿ ನಂ. MH-26/H-8972 ನೆದ್ದರ ಚಾಲಕನು ಅತೀ ವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ತನ್ನ ಲಾರಿಯನ್ನು ನಡೆಸಿ
ಫಿರ್ಯಾದಿಯ ಅಣ್ಣನ ಮಗ ವಿನಾಯಕ ಮತ್ತು ವಿವೇಕ ಇವರಿಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದ್ದರಿಂದ
ವಿನಾಯಕನಿಗೆ ತಲೆಗೆ ಭಾರಿ ಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು ಮತ್ತು ವಿವೇಕನಿಗೆ ಎಡಗಾಲ
ಮೊಣಕಾಲ ಮೇಲೆ ಭಾರಿ ಗಾಯವಾಗಿದ್ದು ಇರುತ್ತದೆ. ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 329/2016
ಕಲಂ: 279, 338, 304(ಎ) ಐ.ಪಿ.ಸಿ:.
ಗಾಯಾಳು ದೇವಣ್ಣ ತಂದೆ ವಿರುಪಣ್ಣ ಚಲವಾದಿ, ವಯಸ್ಸು 29 ವರ್ಷ
ಉ: ಮಟನ್ ಶಾಪ್ ಸಾ: 8ನೇ ವಾರ್ಡ, ಕನಕಗಿರಿ ತಾ: ಗಂಗಾವತಿ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು,
ದಿನಾಂಕ: 05-12-2016 ರಂದು ಬೆಳಿಗ್ಗೆ 09:30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಅಕ್ಕಳಾದ ಶ್ರೀಮತಿ
ಶಾಂತಮ್ಮ ಗಂಡ ನಾಗಪ್ಪ ಪೂಜಾರ ಸಾ: ಈಳಿಗನೂರು ಮತ್ತು ಅವಳ ಗಂಡನಾದ ನಾಗಪ್ಪ ತಾಯಿ ಭೀಮಮ್ಮ ಪೂಜಾರ
ಸಾ: ಈಳಿಗನೂರು ಮೂವರು ಕೂಡಿಕೊಂಡು ನನ್ನ ಮೋಟಾರ ಸೈಕಲ್ ನಂಬರ್: ಕೆ.ಎ-37/ ಆರ್-8377 ನೇದ್ದರಲ್ಲಿ
ಈಳಿಗನೂರಿನಿಂದ ಎಮ್ಮಿಗನೂರಿಗೆ ಹೋಗುತ್ತಿರುವಾಗ ನಾನು ಮೋಟಾರ ಸೈಕಲ್ ನಡೆಯಿಸುತ್ತಿದ್ದೆನು.
ಸಿಂಧನೂರು-ಗಂಗಾವತಿ ಮುಖ್ಯ ರಸ್ತೆಯ ಶ್ರೀರಾಮನಗರ ಪೆಟ್ರೋಲ್ ಬಂಕ್ ಹತ್ತಿರ ಕಾರ್ ನಂಬರ್: ಕೆ.ಎ-36/
ಎನ್-2414 ನೇದ್ದರ ಚಾಲಕ ನೂತಿ ವಿನಿತ್ ಕುಮಾರ ತಂದೆ ವೆಂಕಟೇಶ್ವರಲು ಸಾ: ಎಸ್.ಬಿ.ಕಾಲೊನಿ, ಸಿಂಧನೂರು
ಈತನು ಕಾರನ್ನು ನಮ್ಮ ಹಿಂಭಾಗ ಸಿಂಧನೂರು ಕಡೆಯಿಂದ ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ
ಚಲಾಯಿಸಿಕೊಂಡು ಬಂದು ನಮಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದ್ದು, ಇದರಿಂದ ಶಾಂತಮ್ಮಳು ತೀವ್ರವಾಗಿ
ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು, ತನಗೆ ಮತ್ತು ನಾಗಪ್ಪನಿಗೆ ಸಹ ತೀವ್ರ ಗಾಯಗಳಾಗಿರುತ್ತವೆ.
ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಮುನಿರಾಬಾದ ಪೊಲೀಸ್
ಠಾಣೆ ಗುನ್ನೆ ನಂ: 200/2016 ಕಲಂ: 143, 147, 148, 448, 323, 324, 355, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ: 05-12-2016 ರಂದು 5-45 ಪಿ.ಎಂ.ಕ್ಕೆ ಪಿರ್ಯಾಧಿದಾರರಾದ
ನಿಂಗವ್ವ ಗಂಡ ಹುಲಗಪ್ಪ ಬಾರಕೇರ ವಯ: 60 ವರ್ಷ, ಪಿರ್ಯಾದಿದಾರರ
ಹೊಲಗಳು ತುಂಗಭದ್ರಾ ನದಿಗೆ ಹೋಗಿದ್ದು, ಆ ಹೊಲದಲ್ಲಿ ಹಿನ್ನೀರು ಕಡಿಮೆಯಾದಾಗ ಪಿರ್ಯಾದಿದಾರರು ಸಾಗುವಳಿ
ಮಾಡುತ್ತಾ ಬಂದಿದ್ದು, ಈಗ್ಗೆ 1 ವರ್ಷದ ಹಿಂದೆ ಆರೋಪಿ ನಂ. 1 ನೇದವನು ಹೊಲದಲ್ಲಿ ಬೋರವೆಲ್ ಹಾಕಿಸಿಕೊಳ್ಳಲು
ಕೇಳಿ ಬೋರವೆಲ್ ಹಾಕಿಸಿದ್ದು, ಅದೇ ಹೊದಲ್ಲಿ ದಿನಾಂಕ: 03-12-2016 ರಂದು ಸಂಜೆ 4-00 ಗಂಟೆ ಸುಮಾರಿಗೆ
ಆರೋಪಿ ನಂ. 1 ನೇಗಿಲು ಹೊಡೆಯುತ್ತಿದ್ದಾಗ ಪಿರ್ಯಾದಿಯ ಮಗ ಶರಣಪ್ಪನು ಕೇಳಲು ಹೋದಾಗ ಅವಾಚ್ಯ ಶಬ್ದಗಳಿಂದ
ಬೈದಾಡಿ ಚಪ್ಪಲಿಯಿಂದ ಹೊಡೆದು ನಿನ್ನನ್ನು ಇಲ್ಲಿಯೇ ಕಲಾಸ ಮಡುತ್ತೇನೆಂದು ಜೀವ ಬೆದರಿಕೆ ಹಾಕಿ ಮತ್ತೆ
ಸಂಜೆ 4-30 ಗಂಟೆಗೆ ಆರೋಪಿತರೆಲ್ಲರೂ ಗುಂಪು ಕಟ್ಟಿಕೊಂಡು ಪಿರ್ಯಾದಿದಾರರ ಮನೆಯ ಒಳಗೆ ಹೋಗಿ ಅವಾಚ್ಯ
ಶಬ್ದಗಳಿಂದ ಬೈದಾಡಿ ಕಟ್ಟಿಗೆಯಿಂದ ಹೊಡಿ-ಬಡಿ ಮಾಡಿ ದುಖಾಃಪಾತಗೊಳಿಸಿರುತ್ತಾರೆಂದು ಮುಂತಾಗಿ ಇದ್ದ
ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತದೆ.
0 comments:
Post a Comment